For Quick Alerts
ALLOW NOTIFICATIONS  
For Daily Alerts

ಮಾನಸಿಕ ದೌರ್ಬಲ್ಯವಿರುವ ಮಕ್ಕಳಿಗೆ ಆದಷ್ಟು ಪ್ರೀತಿ ತೋರಿಸಿ

By Jaya Subramanya
|

ಗರ್ಭಧರಿಸಿ ಮಗುವನ್ನು ಹೆತ್ತು ಆ ಮಗುವಿನ ಕಾಳಜಿ ಪಾಲನೆ ಪೋಷಣೆಯನ್ನು ಮಾಡುವುದು ಸವಾಲಿನ ಕೆಲಸವಾಗಿರುತ್ತದೆ. ನಿಮ್ಮ ಮಗು ಆರೋಗ್ಯವಾಗಿದ್ದರೆ ಈ ಪಾಲನೆ ಪೋಷಣೆ ದೈನಂದಿನ ಜೀವನದ ಒಂದು ಭಾಗವಾಗಿ ಮಾರ್ಪಡುತ್ತದೆ. ಆದರೆ ಆ ಮಗು ದೈಹಿಕ ನ್ಯೂನತೆಗಳಿಂದ ಬಳಲುತ್ತಿದ್ದರೆ, ಇದನ್ನು ನೋಡಿಕೊಳ್ಳುವುದು ಕೊಂಚ ಕಷ್ಟದಾಯಕವಾಗಿರುತ್ತದೆ. ಮಕ್ಕಳ ಮನಸ್ಸು ಹೂವಿನಂತೆ, ನೋವು ಮಾಡಬೇಡಿ...

ಇಂತಹ ಮಾನಸಿಕ ಅಸಮತೋಲನ ಹೊಂದಿರುವ ಮಗುವನ್ನು ನೋಡಿಕೊಳ್ಳುವುದಕ್ಕೆ ನೀವು ವಿಶೇಷ ತರಬೇತಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ಈ ಅಸಮತೋಲತೆ ಹಲವಾರು ಅಂಶಗಳಿಂದ ಹುಟ್ಟಿಕೊಂಡಿರಬಹುದು. ವಂಶಪಾರಂಪರ್ಯ, ಗರ್ಭಾವಸ್ಥೆಯಲ್ಲಿ ಉಂಟಾದ ಸಮಸ್ಯೆಗಳು, ಪೋಷಕಾಂಶದ ಕೊರತೆ ಹೀಗೆ ಹಲವಾರು ಕಾರಣಗಳಿಂದ ಮಾನಸಿಕ ಅಸ್ವಸ್ಥತೆ ಉಂಟಾಗಿರುತ್ತದೆ. ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮ, ನೋವು ಕೊಡಬೇಡಿ...

ಇಂದಿನ ಲೇಖನದಲ್ಲಿ ಇಂತಹ ಮಕ್ಕಳನ್ನು ನೋಡಿಕೊಳ್ಳಲು ತಾಯಂದಿರು ಅನುಸರಿಸಬೇಕಾದ ವಿಧಾನಗಳನ್ನು ನಾವು ನೀಡುತ್ತಿದ್ದು ಈ ಮಕ್ಕಳೊಂದಿಗೆ ನೀವು ಹೇಗೆ ಮಗುವಾಗಿ ಬೆರೆತು ಅವರನ್ನು ನೋಡಿಕೊಳ್ಳಬಹುದು ಎಂಬುದನ್ನು ಅರಿತುಕೊಳ್ಳಿ...

ಸಲಹೆ #1

ಸಲಹೆ #1

ನಿಮ್ಮ ಮಗುವಿಗೆ ವಿಶೇಷ ಕಾಳಜಿಯನ್ನು ನೀಡಬೇಕು ಎಂಬುದಾಗಿ ಮನನ ಮಾಡಿಕೊಳ್ಳಿ. ಅವರಿಗೆ ಸಹಾಯಕವಾಗುವಂತಹ ರೀತಿಯಲ್ಲಿ ಅವರ ಮೇಲೆ ಅಸ್ಥೆಯನ್ನು ವಹಿಸಿ.

ಸಲಹೆ #2

ಸಲಹೆ #2

ಮಂದಬುದ್ಧಿ ಸೂಚನೆಯಾಗಿರುವ ಮಗುವಿನ ಕೋಪೋದ್ರಿಕ್ತ ಸ್ಥಿತಿಯನ್ನು ನಿರ್ವಹಿಸಲು ತಾಯಂದಿರು ಸಿದ್ಧಗೊಳ್ಳುವುದಾಗಿದೆ.

ಸಲಹೆ #3

ಸಲಹೆ #3

ವಿಶೇಷ ಅಗತ್ಯಗಳನ್ನು ಮಾನಸಿಕ ಅಸ್ವಸ್ಥ ಮಗುವಿಗೆ ನೀಡುವ ಶಾಲೆಗಳಲ್ಲಿ ಮಗುವಿಗೆ ದಾಖಲಾತಿ ಮಾಡಿಸಿ. ನಿಯಮಿತ ಶಾಲೆಗಳು ಇಂತಹ ಮಕ್ಕಳಿಗೆ ನೆರವು ನೀಡುವುದಿಲ್ಲ. ಆ ಶಾಲೆಯಲ್ಲಿ ಮಗುವಿಗೆ ಉಚಿತ ರೀತಿಯ ಶಿಕ್ಷಣವನ್ನು ನೀಡುತ್ತಿದ್ದಾರೆ ಎಂಬುದನ್ನು ಗಮನಿಸಿಕೊಳ್ಳಿ.

ಸಲಹೆ #4

ಸಲಹೆ #4

ಇಂತಹ ಸಮಸ್ಯೆಯನ್ನು ಹೊಂದಿರುವ ನಿಮ್ಮ ಮಕ್ಕಳು ಅಪಹಾಸ್ಯಕ್ಕೆ ಒಳಗಾಗುವುದು ಮತ್ತು ಕಿರಿಕಿರಿಯನ್ನು ಹೊಂದುವ ಸಂಭವ ಹೆಚ್ಚಿರುತ್ತದೆ. ಇಂತಹ ಸಂಗತಿಗಳನ್ನು ಅವರುಗಳು ಪ್ರಕಟಪಡಿಸದೇ ಇದ್ದ ಸಂದರ್ಭದಲ್ಲಿ ಅವರನ್ನು ನೀವು ಕುಶಾಲಾಗ್ರವಾಗಿ ಗಮನಿಸಿಕೊಳ್ಳಬೇಕಾಗುತ್ತದೆ.

ಸಲಹೆ #5

ಸಲಹೆ #5

ನಿಮ್ಮ ಮಗು ನಿಯಮಿತವಾಗಿ ಚಿಕಿತ್ಸಕರನ್ನು ಕಾಣುತ್ತಿದೆ ಅವರಿಗೆ ಸೂಕ್ತ ಶುಶ್ರೂಷೆಯನ್ನು ನೀಡಲಾಗುತ್ತಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಅರಿವಿನ ವರ್ತನೆಯ ಅವಧಿಗಳು ಮತ್ತು ಔಷಧಗಳನ್ನು ಅವರಿಗೆ ನೀಡುವುದರ ಮೂಲಕ ಮಾನಸಿಕ ದೌರ್ಬಲ್ಯಗಳನ್ನು ನಿಯಂತ್ರಿಸಬಹುದಾಗಿದೆ.

ಸಲಹೆ #6

ಸಲಹೆ #6

ನೀವು ಇನ್ನೊಂದು ಮಗುವನ್ನು ಹೊಂದುತ್ತೀರಿ ಎಂದಾದಲ್ಲಿ ಇದರ ಬಗ್ಗೆ ಹೆಚ್ಚು ಜಾಗರೂಕರಾಗಿ ಯೋಚಿಸಿ. ವಿಶೇಷ ಮಗುವನ್ನು ಹೊಂದಿರುವ ನೀವು ಆ ಮಗುವಿನೊಂದಿಗೆ ಈ ಮಗುವಿಗೂ ವಿಶೇಷ ಅಸ್ಥೆಯನ್ನು ನೀಡಬೇಕಾಗುತ್ತದೆ.ಹೆಚ್ಚುವರಿ ಸಮಯವನ್ನು ನೀಡಿ.

ಸಲಹೆ #7

ಸಲಹೆ #7

ನಿಮ್ಮ ಮಗುವನ್ನು ನಿಯಮಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿ. ಅವರು ಹೆಚ್ಚು ಒಬ್ಬಂಟಿಗರಾಗದಂತೆ, ಬೇಸರ ಹೊಂದದಂತೆ ನೋಡಿಕೊಳ್ಳುವುದು ಅಗತ್ಯವಾಗಿರುತ್ತದೆ.

English summary

Tips If You Have Children With Intellectual Disability

Parenting is one of the most responsible and difficult jobs of all time; and if you have a child who has some sort of a disorder, it can be even harder. So, there are some tips that can help if you have a child with an intellectual disability. Intellectual disability, previously known as mental retardation, is a neuro-developmental disorder, in which the affected person has impaired learning, cognitive and behavioural functions.
Story first published: Tuesday, September 27, 2016, 18:26 [IST]
X
Desktop Bottom Promotion