ಮಕ್ಕಳಿಗೆ ಕಾಡುವ 'ಹೊಟ್ಟೆ ನೋವಿಗೆ' ಗ್ಯಾರಂಟಿ ಚಿಕಿತ್ಸೆ..

ಸಾಮಾನ್ಯವಾಗಿ ಮಕ್ಕಳು ಕೈಗೆ ಸಿಕ್ಕಿದ ಆಹಾರ ಮತ್ತು ನೀರು ಕುಡಿಯುವುದರಿಂದ ಹೊಟ್ಟೆನೋವು ಸಾಮಾನ್ಯವಾಗಿ ಆವರಿಸಿಬಿಡುತ್ತದೆ... ಅದಕ್ಕೆಂದೇ ಕೆಲವೊಂದು ಮನೆಮದ್ದನ್ನು ನೀಡಿದ್ದೇವೆ, ಮುಂದೆ ಓದಿ....

By: Jaya Subramanya
Subscribe to Boldsky

ಮಕ್ಕಳು ಹೆಚ್ಚು ಸಮಯ ಹೊರಗಡೆ ಓಡಾಡಿಕೊಂಡಿರುವುದರಿಂದ ಅವರ ಆರೋಗ್ಯದಲ್ಲಿ ಒಂದಿಲ್ಲೊಂದು ಸಮಸ್ಯೆಗಳು ತಲೆದೋರುತ್ತಿರುತ್ತದೆ. ಹೊರಗಿನ ತಿಂಡಿಗಳ ಸೇವನೆ, ಸಿಕ್ಕಿದ ನೀರು ಕುಡಿಯುವುದು, ಮಣ್ಣಿನಲ್ಲಿ ಆಟವಾಡುವುದು ಹೀಗೆ ತಮಗೆ ಸಂತಸ ನೀಡುವ ಚಟುವಟಿಕೆಗಳಲ್ಲಿಯೇ ತಲ್ಲೀನಗೊಂಡಿರುವಾಗ ನಿಧಾನವಾಗಿ ಕಾಯಿಲೆಗಳು ಅವರನ್ನು ಕಾಡುತ್ತಿರುತ್ತದೆ. ಸತಾಯಿಸುವ 'ಹೊಟ್ಟೆ ನೋವಿಗೆ', ಇಲ್ಲಿದೆ ಸಿಂಪಲ್ ಮನೆಮದ್ದು

ಕೈಗೆ ಸಿಕ್ಕಿದ ಆಹಾರ ಮತ್ತು ನೀರು ಕುಡಿಯುವುದರಿಂದ ಅವರಲ್ಲಿ ಹೊಟ್ಟೆನೋವು ಸಾಮಾನ್ಯವಾಗಿರುತ್ತದೆ. ಬರಿಯ ಆಹಾರ ಮಾತ್ರವೇ ಕಾರಣವಾಗಿರದೆ ಮಲಬದ್ಧತೆ, ಹೊಟ್ಟೆಯ ಸೋಂಕಿನಿಂದ ಕೂಡ ಈ ನೋವು ಕಾಣುತ್ತದೆ. ಹಾಗಿದ್ದರೆ ಮಕ್ಕಳಲ್ಲಿ ಕಾಡುವ ಹೊಟ್ಟೆನೋವನ್ನು ನಿವಾರಿಸಲು ಮನೆಮದ್ದುಗಳಿದ್ದು ಇಂದಿನ ಲೇಖನದಲ್ಲಿ ನಾವು ಅದನ್ನು ಹಂಚಿಕೊಳ್ಳುತ್ತಿದ್ದೇವೆ....  


ಶುಂಠಿ

ಇದರಲ್ಲಿ ಹೆಚ್ಚು ಶಕ್ತಿಯುತವಾದ ಉತ್ಕರ್ಷಣ ನಿರೋಧಿ "ಜಿಂಜರಾಲ್" ಇದ್ದು ಮುಕ್ತ ರಾಡಿಕಲ್‌ಗಳ ಬೆಳವಣಿಗೆಯನ್ನು ತಡೆಯುತ್ತದೆ. ವಾಂತಿಯಾಗುವಿಕೆಯ ಲಕ್ಷಣವನ್ನು ಇದು ದೂರಮಾಡುತ್ತದೆ. ಜೀರ್ಣಕ್ರಿಯೆಯನ್ನು ಇದು ಸರಾಗಗೊಳಿಸಿ ಹೊಟ್ಟೆಯ ಆಮ್ಲಗಳನ್ನು ಪ್ರತಿರೋಧಿಸುತ್ತದೆ. ನಿಮ್ಮ ಮಗು ಹೊಟ್ಟೆನೋವಿನಿಂದ ಬಳಲುತ್ತಿದೆ ಎಂದಾದಲ್ಲಿ ಸಣ್ಣ ಶುಂಠಿಯ ತುಂಡನ್ನು ಜಜ್ಜಿ ಒಂದು ಲೋಟದಷ್ಟು ಕುದಿಸಿದ ನೀರಿಗೆ ಹಾಕಿ ಮುಚ್ಚಳ ಮುಚ್ಚಿ ಹತ್ತರಿಂದ ಹದಿನೈದು ನಿಮಿಷ ಹಾಗೇ ಬಿಡಿ (ಮತ್ತೆ ಕುದಿಸಬಾರದು) ಈ ನೀರು ನಿಧಾನವಾಗಿ ತಣ್ಣಗಾಗಲು ಬಿಡಿ. ಬಳಿಕ ಈ ನೀರನ್ನು ನೋಸಿ ಬಳಿಕ ಮಗುವಿಗೆ ಕುಡಿಯಲು ನೀಡಿ.... ಶುಂಠಿ, ಅಜೀರ್ಣ ಪರಿಹಾರಕ್ಕೆ ಒಂದು ಒಳ್ಳೆಯ ಮನೆ ಮದ್ದು.

ಶಾಖವನ್ನು ನೀಡಿ

ನಿಮ್ಮ ಮಗುವಿನ ನೋಯುತ್ತಿರುವ ಹೊಟ್ಟೆಯ ಮೇಲೆ ಬಿಸಿ ವಾಟರ್ ಬ್ಯಾಗ್ ಅನ್ನು ಇರಿಸಿ. ಇದು ನೋವನ್ನು ಸ್ವಲ್ಪವಾದರೂ ಕಡಿಮೆ ಮಾಡುತ್ತದೆ. ನೀವು ಶಾಖ ನೀಡಿದಾಗ, ತ್ವಚೆಯ ಮೇಲ್ಮೈಯಲ್ಲಿ ರಕ್ತಪ್ರವಾಹ ಹೆಚ್ಚಾಗಿ ಕಿಬ್ಬೊಟ್ಟೆಯಲ್ಲಿ ಉಂಟಾಗುವ ನೋವನ್ನು ತಗ್ಗಿಸುತ್ತದೆ.

ಸಪ್ಪೆ ಆಹಾರವನ್ನು ನೀಡಿ

ನಿಮ್ಮ ಮಗುವಿಗೆ ಹೊಟ್ಟೆನೋವಿನಿಂದ ಹಸಿವಾಗುತ್ತಿದೆ ಎಂದಾದಲ್ಲಿ ಸೇವಿಸಲು ಸಪ್ಪೆ ಆಹಾರವನ್ನು ನೀಡಿ. ಮೊಸರು, ಟೋಸ್ಟ್, ಅನ್ನ, ಓಟ್‌ಮೀಲ್ ಮೊದಲಾದ ಆಹಾರಗಳನ್ನು ಮಗುವಿಗೆ ಸೇವಿಸಲು ನೀಡಿ. ಹೆಚ್ಚು ಖಾರವುಳ್ಳ ಮತ್ತು ಎಣ್ಣೆಯುಕ್ತ ತಿಂಡಿಯನ್ನು ನೀಡದಿರಿ. ಇದರಿಂದ ಹೊಟ್ಟೆ ನೋವು ಹೆಚ್ಚಾಗುವ ಸಾಧ್ಯತೆ ಇದೆ. ಈ ಸಪ್ಪೆ ಆಹಾರಗಳು ನಿಮ್ಮ ಹೊಟ್ಟೆಗೆ ಹೆಚ್ಚು ಕಿರಿಕಿರಿಯನ್ನುಂಟು ಮಾಡುವುದಿಲ್ಲ. ಈ ಆಹಾರಗಳು ಮಗುವಿನ ಜೀರ್ಣಾಂಗವ್ಯೂಹವನ್ನು ಸ್ಥಿಮಿತಕ್ಕೆ ತರಲು ಸಹಕಾರಿಯಾಗಿದ್ದು ಸಾಮಾನ್ಯ ಹಂತಕ್ಕೆ ಬರಲು ಸಹಕಾರಿಯಾಗಿದೆ.

ದೈಹಿಕ ಚಟುವಟಿಕೆಗಳು ಆವಶ್ಯಕ

ಮಗು ಹೊಟ್ಟೆನೋವಿನಿಂದ ಬಳಲಿರುವಾಗ ಅವರುಗಳಲ್ಲಿ ಆಟವನ್ನು ನೆನಪಿಸಿ. ಇದರಿಂದ ನೋವು ಸ್ವಲ್ಪ ತಗ್ಗಬಹುದು. ಜೀರ್ಣಾಂಗವ್ಯೂಹವನ್ನು ಸ್ಥಿಮಿತಕ್ಕೆ ತರಲು ಈ ಚಟುವಟಿಕೆಗಳು ಸಹಾಯಕವಾಗಿವೆ. ಹಾಸಿಗೆಯಲ್ಲಿ ಮಲಗಿಯೇ ಇರುವುದು ಮಲಬದ್ಧತೆಯನ್ನು ಉಂಟುಮಾಡಬಹುದು. ಹೊರಗಡೆ ಆಟವಾಡುವುದು, ಓಟ, ನಡಿಗೆ ಮೊದಲಾದವುಗಳಿಂದ ಹೊಟ್ಟೆನೋವನ್ನು ನಿವಾರಿಸಿಕೊಳ್ಳಬಹುದಾಗಿದೆ. ಹೊಟ್ಟೆಯನ್ನು ತಿರುಗಿಸುವ ಆಟಗಳನ್ನು ಮಕ್ಕಳಿಗೆ ಆಡಿಸಿ.

ಕ್ಯಾಮೊಮೈಲ್ ಚಹಾ

ಕೊಬ್ಬೊಟ್ಟೆಯ ಅನಾನುಕೂಲತೆಯನ್ನು ನಿವಾರಿಸಲು ಕ್ಯಾಮೊಮೈಲ್ ಚಹಾದಲ್ಲಿರುವ ಉತ್ಕರ್ಷಣ ನಿರೋಧಿ ಅಂಶಗಳು ಸಹಕಾರಿಯಾಗಿವೆ. ಒಂದು ಕಪ್‌ನಷ್ಟು ಈ ಚಹಾವನ್ನು ತಯಾರಿಸಿ ಮಗುವಿಗೆ ಕುಡಿಯಲು ನೀಡಿ. ಮೇಲ್ಭಾಗದ ಜೀರ್ಣಕ್ರಿಯೆ ಪ್ರಕ್ರಿಯೆಯ ಸ್ನಾಯುಗಳನ್ನು ಶಾಂತಗೊಳಿಸಿ ಕುಗ್ಗುವಿಕೆಗಳು ಆಹಾರವನ್ನು ತಳ್ಳಿ ಸಣ್ಣ ಕರುಳಿನ ಮೂಲಕ ಹಾದುಹೋಗಲು ಅನುಕೂಲ ಮಾಡಿಕೊಡುತ್ತದೆ. ಇದರಿಂದ ಹೊಟ್ಟೆಯ ಸೆಳೆತ ನಿವಾರಣೆಯಾಗುತ್ತದೆ.   ಕ್ಯಾಮೊಮೈಲ್ ಚಹಾದ ಸೇವನೆಯಿಂದ ಹತ್ತಾರು ಲಾಭ

ಮೊಸರು

ಅಜೀರ್ಣಕ್ಕೆ ಒಂದು ಉತ್ತಮ ಮನೆಮದ್ದಾಗಿದೆ. ನಿತ್ಯವೂ ನಿಮ್ಮ ಮಗುವಿಗೆ ಮೊಸರು ನೀಡಿ. ಜೀರ್ಣಕ್ರಿಯೆಗೆ ಅನುಕೂಲ ಮಾಡುವ ಒಳ್ಳೆಯ ಬ್ಯಾಕ್ಟೀರಿಯಾವನ್ನು ನಿಮ್ಮ ಕರುಳಿಗೆ ನೀಡುತ್ತದೆ. ದಿನವೂ ಮೊಸರನ್ನು ಸೇವಿಸುವುದು ಮಗುವನ್ನು ತನ್ನ ಹಿಂದಿನ ಸ್ಥಿತಿಗೆ ತರಲು ಸಹಕಾರಿಯಾಗಿದೆ.  ಪ್ರತಿ ದಿನ ಮೊಸರು ಸೇವಿಸಿದರೆ ಖಂಡಿತ ಮೋಸವಿಲ್ಲ

ಪುದೀನಾ ಚಹಾ

ನಿಮ್ಮ ಮಗುವಿನ ಹೊಟ್ಟೆಯಲ್ಲಿ ಉಂಟಾಗಿರುವ ನೋವು ನಿವಾರಿಸಲು ಪುದೀನಾ ಚಹಾ ಸಹಕಾರಿಯಾಗಿದೆ. ಕಿಬ್ಬೊಟ್ಟೆಯ ಸ್ನಾಯುಗಳನ್ನು ಶಮನಗೊಳಿಸುವ ಗುಣಗಳನ್ನು ಪುದೀನಾ ಪಡೆದುಕೊಂಡಿದೆ. ದೇಹದಲ್ಲಿ ಆಹಾರವನ್ನು ಜೀರ್ಣಿಸಲು ಬಳಸಲಾಗುವ ಪಿತ್ತರಸವನ್ನು ವರ್ಧಿಸುವ ಸಾಮರ್ಥ್ಯವನ್ನು ಪುದೀನಾ ಚಹಾ ಹೊಂದಿದೆ.   ಪುದೀನಾ ಸೊಪ್ಪಿನ ಚಹಾ: ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ!

 

Story first published: Monday, November 28, 2016, 11:12 [IST]
English summary

Remedies For Stomach Pain In Kids

A stomach pain can be caused by several reasons like food poisoning, constipation, stomach infection, etc. Whatever be the reason of your kid's stomach pain, the first thing you should reach out for are natural remedies that are easily available at home.
Please Wait while comments are loading...
Subscribe Newsletter