For Quick Alerts
ALLOW NOTIFICATIONS  
For Daily Alerts

ಬೊಜ್ಜುಳ್ಳ ಅವಳಿ ಮಕ್ಕಳಿಗೆ, ಮಧುಮೇಹದ ಆತಂಕ!

By Manorama Hejmadi
|

ತಮ್ಮ ಶರೀರದ ತೂಕ ಇಳಿಸುವುದಕ್ಕಾಗಿ ಹೆಣಗಾಡುವವರಿಗೆ ಸಂತಸದ ಸುದ್ದಿ ಇದಾಗಬಹುದೇನೋ! ಓಮಿನೋ ವಿಶ್ವವಿದ್ಯಾಲಯದ ಪೀಟರ್ ನಾರ್ಡ್ ಸ್ಟ್ರಾಮ್ ಎಂಬ ಸಂಶೋಧಕರ ಅಭಿಪ್ರಾಯದಂತೆ, ದಪ್ಪಗಿನ ಶರೀರದ ಅವಳಿಗಳಿಗೆ ಹೃದಯಾಘಾತದ ಭಯವಿಲ್ಲ! ಈ ಸಂಶೋಧನೆಗಾಗಿ ನಾಲ್ಕು ಸಾವಿರಕ್ಕಿಂತಲೂ ಹೆಚ್ಚು ಅವಳಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇವರಲ್ಲಿ ದಪ್ಪ, ಅತಿ ದಪ್ಪ, ಸಾಮಾನ್ಯ ಮತ್ತು ತೆಳ್ಳಗಿನ ಅವಳಿಗಳಿದ್ದರು.

Overweight Twins May Up Diabetes Risk

ಸುಮಾರು ಹನ್ನೆರಡು ವರ್ಷಗಳ ಕಾಲ ಗಮನಿಸಲಾಗುತ್ತಿತ್ತು. ಇವರ ಪೈಕಿ, ತೆಳ್ಳಗಿನ ಅವಳಿಗಳಲ್ಲಿ (ಬಾಡಿಮಾಸ್ ಇಂಡೆಕ್ಸ್ ಕಡಿಮೆ ಇದ್ದ) ಈ ಅವಧಿಯಲ್ಲಿ ಹೆಚ್ಚು ಹೃದಯಾಘಾತ ಮತ್ತು ಸಾವು ಸಂಭವಿಸಿದ್ದು ಕಂಡು ಬಂದಿತು.

ಈ ಗುಂಪಿನಲ್ಲಿ ಒಂದೇ ಥರ ಕಾಣಿಸುವ ಅವಳಿಗಳಿದ್ದು, ಅವರಲ್ಲಿ ಒಬ್ಬ ತೆಳ್ಳಗೂ, ಮತ್ತೊಬ್ಬ ದಪ್ಪಗೂ ಇದ್ದವರಿದ್ದರು. ತೆಳ್ಳಗಿದ್ದವನ ಹೃದಯ ದಪ್ಪಗಿದ್ದವನದಕ್ಕಿಂತ ದುರ್ಬಲವಾಗಿರುವುದು ಕಂಡು ಬಂದಿತು ಎನ್ನುತ್ತಾರೆ ಸಂಶೋಧಕ ಪೀಟರ್. ಅವಳಿ ಮಕ್ಕಳ ಕುರಿತ ರಹಸ್ಯಗಳು ನಿಮಗೆ ತಿಳಿದಿದೆಯೇ?

ದಪ್ಪನೆಯ ಅವಳಿಗಳಲ್ಲಿ 203 ಹೃದಯಾಘಾತ ಉಂಟಾಗಿ ಉಳಿದುಕೊಂಡವರು ಮತ್ತು ೫೫೦ ಮಂದಿ ಮರಣ ಹೊಂದಿದ್ದರು. ತೆಳ್ಳಗಿದ್ದವರ ಪೈಕಿ 209 ಮಂದಿ ಹೃದಯಾಘಾತ ಉಂಟಾಗಿ ಉಳಿದುಕೊಂಡವರು ಮತ್ತು 633 ಮಂದಿ ಮರಣ ಹೊಂದಿದ್ದರು.

" ಬೊಜ್ಜಿನಿಂದ ಬರುವ ಇತರ ಕಾಯಿಲೆಗಳ ಪಟ್ಟಿ ಮಾಡುವಾಗ , ಹೃದಯಾಘಾತವೆಂಬುದು ಸೇರಿ ಕೊಂಡಿದೆಯೇ ಹೊರತು, ಬೊಜ್ಜನ್ನು ಕರಗಿಸಿದ ಕೂಡಲೇ ಹೃದಯಾಘಾತದ ಕುರಿತು ನಿರ್ಭಯರಾಗಿ ಇರಲು ಸಲ್ಲದು " ಎನ್ನುತ್ತರಿವರು. ಹೆಚ್ಚಿನ ಬಾಡಿ ಮಾಸ್ ಇಂಡೆಕ್ಸ್ ಇರುವ ದಪ್ಪದವರಿಗೆ ಟೈಪ್ 2 ಡಯಾಬಿಟಿಸ್ ಕಟ್ಟಿಟ್ಟ ಬುತ್ತಿ ಎನ್ನಲು ಮರೆಯುವುದಿಲ್ಲ, ಪೀಟರ್. ಬೊಜ್ಜು ಮತ್ತು ಮಧುಮೇಹ ಹತ್ತಿರದ ನೆಂಟರು! ಆದ್ದರಿಂದ ಬೊಜ್ಜಿನ ಚಿಕಿತ್ಸೆಗೆ ತೊಡಗುವಾಗ ಮಧುಮೇಹವನ್ನು ತೊಡೆಯುವಂತಹ ರೀತಿಯಲ್ಲಿ ಚಿಕಿತ್ಸೆ

English summary

Overweight Twins May Up Diabetes Risk

Twins with a higher body mass index (BMI) do not have an increased risk of heart attack or mortality, however, there is an increased risk of developing type 2 diabetes, according to a study. For the study, the researchers compared health data from 4,046 monozygotic twin pairs with different levels of body fat, as measured in BMI.
X
Desktop Bottom Promotion