For Quick Alerts
ALLOW NOTIFICATIONS  
For Daily Alerts

ಬೆಳೆಯುವ ಮಕ್ಕಳಿಗೆ ಕ್ಯಾಲ್ಸಿಯಂಯುಕ್ತ ಆಹಾರ ಅತ್ಯಗತ್ಯ

By Hemanth
|

ಬೆಳೆಯುತ್ತಿರುವ ಮಕ್ಕಳಿಗೆ ಪ್ರತಿಯೊಂದು ಪೋಷಕಾಂಶಗಳು ಅಗತ್ಯವಾಗಿ ಬೇಕೇಬೇಕು. ಅದರಲ್ಲೂ ಮಕ್ಕಳ ಮೂಳೆಯ ಬೆಳವಣಿಗೆಯಲ್ಲಿ ಕ್ಯಾಲ್ಸಿಯಂ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಕ್ಯಾಲ್ಸಿಯಂ ಮೂಳೆಗಳ ಮತ್ತು ಹಲ್ಲಿನ ಬೆಳೆವಣಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಸ್ನಾಯುಗಳು ಮತ್ತು ನರಗಳ ಚಟುವಟಿಕೆ, ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕೆಲವೊಂದು ಕಿಣ್ವಗಳನ್ನು ಸ್ರವಿಸುವಂತೆ ಕ್ಯಾಲ್ಸಿಯಂ ಮಾಡುತ್ತದೆ.

ಮಕ್ಕಳ ಮೂಳೆಗಳ ಬೆಳವಣಿಗೆ ನಿರಂತರವಾಗಿ ನಡೆಯುತ್ತಲೇ ಇರುವ ಕಾರಣದಿಂದಾಗಿ ಅಗತ್ಯವಾಗಿ ಸಾಕಷ್ಟು ಪ್ರಮಾಣದಲ್ಲಿ ಕ್ಯಾಲ್ಸಿಯಂ ಬೇಕು. 1ರಿಂದ 3 ವರ್ಷದೊಳಗಿನ ಮಕ್ಕಳಿಗೆ ದಿನಕ್ಕೆ ಸರಾಸರಿ 700 ಮಿಲಿಗ್ರಾಂ ಕ್ಯಾಲ್ಸಿಯಂ ಬೇಕು ಮತ್ತು 4ರಿಂದ 8ವರ್ಷದೊಳಗಿನ ಮಕ್ಕಳಿಗೆ ದಿನಕ್ಕೆ ಸರಾಸರಿ 1000 ಮಿಲಿಗ್ರಾಂನಷ್ಟು ಕ್ಯಾಲ್ಸಿಯಂ ಬೇಕೇಬೇಕು.

Is Your Kid Getting Enough Calcium?

ಕ್ಯಾಲ್ಸಿಯಂ ಹೆಚ್ಚಿರುವ ಆಹಾರಗಳನ್ನು ನೀಡುತ್ತಲಿದ್ದರೆ ಇದರ ಬಗ್ಗೆ ಹೆಚ್ಚಿಗೆ ಚಿಂತಿಸಬೇಕಿಲ್ಲ. ಹಾಲು, ಗಿಣ್ಣು ಮತ್ತು ಮೊಸರು ಕ್ಯಾಲ್ಸಿಯಂ ಇರುವಂತಹ ಪ್ರಮುಖ ಆಹಾರಗಳು. ಮಕ್ಕಳಿಗೆ ಕ್ಯಾಲ್ಸಿಯಂ ಯಾಕೆ ಬೇಕು ಮತ್ತು ಅದಕ್ಕಾಗಿ ಏನು ಮಾಡಬೇಕೆಂದು ತಿಳಿದುಕೊಳ್ಳಿ

*ಕೆಲವೊಂದು ಅಧ್ಯಯನಗಳ ಪ್ರಕಾರ ಮಕ್ಕಳು ಅತಿಯಾಗಿ ತಂಪು ಪಾನೀಯಗಳನ್ನು ಸೇವಿಸುತ್ತಾರೆ. ಆದರೆ ಹಾಲು ಕುಡಿಯುವುದು ಕಡಿಮೆ. ಮಕ್ಕಳಿಂದ ತಂಪುಪಾನೀಯಗಳನ್ನು ಆದಷ್ಟು ದೂರವಿಡಿ.

*ಮಕ್ಕಳಿಗೆ ಫ್ರೂಟ್ ಸಲಾಡ್ ಇಷ್ಟವೆಂದಾದರೆ ಅದಕ್ಕೆ ಮೊಸರನ್ನು ಸೇರಿಸಿ. ಇದರಿಂದ ರುಚಿ ಹೆಚ್ಚಾಗಿ ಕ್ಯಾಲ್ಸಿಯಂ ಸಾಕಷ್ಟು ಪ್ರಮಾಣದಲ್ಲಿ ಸಿಗುವುದು. ಕ್ಯಾಲ್ಸಿಯಂ ಆಹಾರ ತಿನ್ನುವಾಗ ಎಚ್ಚರ!

*ಮಕ್ಕಳನ್ನು ಸ್ವಲ್ಪ ಹೊತ್ತು ಬಿಸಿಲಿಗೆ ಆಡಲು ಬಿಡಿ. ಸೂರ್ಯನ ಕಿರಣದಲ್ಲಿರುವ ವಿಟಮಿನ್ ಡಿ ದೇಹದಲ್ಲಿನ ಕ್ಯಾಲ್ಸಿಯಂನ ಹೀರುವಿಕೆಯನ್ನು ಹೆಚ್ಚಿಸುವುದು.

*ಆಹಾರ ಕ್ರಮದಲ್ಲಿ ನೀರಿನ ಬದಲಿಗೆ ಹಾಲನ್ನು ಬಳಸಿ. ಸೂಪ್ ಅಥವಾ ಇತರ ಉಪಹಾರಗಳಲ್ಲಿ ಹಾಲನ್ನು ಸೇರಿಸಿಕೊಳ್ಳಿ. ಇದರಿಂದ ಮಕ್ಕಳ ದೇಹದೊಳಗೆ ಹೆಚ್ಚಿನ ಹಾಲು ಸೇರಿಕೊಳ್ಳುವುದು.

*ಮಾರುಕಟ್ಟೆಗೆ ಹೋದಾಗ ಕ್ಯಾಲ್ಸಿಯಂ ಹೆಚ್ಚಿರುವ ಬ್ರೆಡ್ ಗೆ ಪ್ರಾಮುಖ್ಯತೆ ನೀಡಿ. ಇದರಿಂದ ಕ್ಯಾಲ್ಸಿಯಂ ಸೇವನೆ ಹೆಚ್ಚಾಗುತ್ತದೆ.

*ಮಕ್ಕಳು ಸ್ಮೂಥಿಯನ್ನು ಇಷ್ಟಪಡುತ್ತಿದ್ದರೆ ಅದಕ್ಕೆ ಸ್ವಲ್ಪ ಹಾಲಿನ ಹುಡಿಯನ್ನು ಸೇರಿಸಿಕೊಳ್ಳಿ. ಇದರಿಂದ ಪೋಷಕಾಂಶಗಳು ಸೇರಿಕೊಳ್ಳುತ್ತದೆ. ದೇಹದಲ್ಲಿ ಕ್ಯಾಲ್ಸಿಯಂ ಅಧಿಕವಾದರೂ ಅಪಾಯ!

*ಕ್ಯಾಲ್ಸಿಯಂ ಸಪ್ಲಿಮೆಂಟ್ ತೆಗೆದುಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ. ಅತಿಯಾದ ಕ್ಯಾಲ್ಸಿಯಂ ಕಿಡ್ನಿ ಕಲ್ಲಿಗೆ ಕಾರಣ ವಾಗಬಹುದು.

English summary

Is Your Kid Getting Enough Calcium?

Why do children need calcium? Well, their bones keep growing at that phase and they need enough of calcium supply. When a kid is between 1 and 3 years, at least 700mg of calcium is required per day and when the kid is between 4 and 8 years, nearly 1000 mg is the daily recommended calcium intake.
Story first published: Thursday, August 18, 2016, 19:20 [IST]
X
Desktop Bottom Promotion