For Quick Alerts
ALLOW NOTIFICATIONS  
For Daily Alerts

ಶಾಲೆ ಬಿಟ್ಟ ಮಕ್ಕಳ ಭವಿಷ್ಯದ ಕಡೆಯೂ ಸ್ವಲ್ಪ ಕಾಳಜಿ ವಹಿಸಿ

By Arshad
|

ಭಾರತದಲ್ಲಿ ಕೆಲವು ರಾಜ್ಯಗಳು ಮಾತ್ರ ಸಂಪೂರ್ಣ ಸಾಕ್ಷರತೆ ಸಾಧಿಸಿದ ರಾಜ್ಯಗಳಾದರೆ ಕರ್ನಾಟಕ ಸೇರಿದಂತೆ ಇನ್ನೂ ಎಷ್ಟೋ ರಾಜ್ಯಗಳಲ್ಲಿ ಇಂದಿಗೂ ಪೂರ್ಣ ಸಾಕ್ಷರತೆ ಸಾಧಿಸಲು ಸಾಧ್ಯವಾಗಿಲ್ಲ. ಇದಕ್ಕೆ ಕಾರಣಗಳು ಹಲವಾರಿವೆ. ಆರ್ಥಿಕ ಕಾರಣಗಳಿಂದ ಮಕ್ಕಳನ್ನು ಶಾಲೆಗೆ ಸೇರಿಸಲು ಸಾಧ್ಯವಾಗದಿರುವುದು ಒಂದು ಕಾರಣವಾದರೆ ಯಾವುದೋ ಕಾರಣಕ್ಕೆ ಕೋಪಗೊಂಡು ಶಾಲೆ ಬಿಡುವುದು ಇನ್ನೊಂದು ಮುಖ್ಯ ಕಾರಣವಾಗಿದೆ.

How Treatment Can Help School Dropouts

ಎಷ್ಟೋ ಸಂದರ್ಭಗಳಲ್ಲಿ ಕೆಲಸಕ್ಕೆ ಹೋಗಿ ಕುಟುಂಬಕ್ಕೆ ನೆರವಾಗಲು ಪಾಲಕರೇ ಮಕ್ಕಳನ್ನು ಬಲವಂತವಾಗಿ ಶಾಲೆಯನ್ನು ಬಿಡಿಸುವುದೂ ಇದೆ. ಎಲ್ಲಿಯವರೆಗೆ ಮಕ್ಕಳು ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ತೋರುತ್ತಿರುತ್ತಾರೋ, ಅಲ್ಲಿಯವರೆಗೆ ಪೋಷಕರು ಹೆಚ್ಚು ಚಿಂತೆ ಮಾಡುವುದಿಲ್ಲ. ಆದರೆ ಸತತ ನಾಪಾಸಾಗುವ ಅಥವಾ ಶಾಲೆಯ ಬಗ್ಗೆ ಒಲವು ಬೆಳಸದೇ ಇರುವ ಮಕ್ಕಳು ಪಾಲಕರ ಚಿಂತೆಯನ್ನು ಹೆಚ್ಚಿಸುತ್ತಾರೆ.

ಶಾಲೆ ಬಿಟ್ಟ ಮಕ್ಕಳನ್ನು ಸರಿಯಾದ ಮಾರ್ಗದರ್ಶನ, ಸಾಂತ್ವಾನ, ಮನವೊಲಿಕೆಯಿಂದ ಮತ್ತೆ ಶಾಲೆಗೆ ಸೇರಿಸಲು ಸಾಧ್ಯ. ಇಲ್ಲದಿದ್ದರೆ ಯಾವ ಕಾರಣಕ್ಕೆ ಅವರು ಶಾಲೆಯನ್ನು ದ್ವೇಶಿಸುತ್ತಿದ್ದರೋ, ಆ ದ್ವೇಶವನ್ನು ಇತರ ವಿಷಯಗಳಿಗೂ ಅನ್ವಯಿಸಿ ಸಮಾಜಕಂಟಕರಾಗಲೂ ಸಾಧ್ಯವಿದೆ. ಇದಕ್ಕೆ ಜ್ವಲಂತ ಉದಾಹರಣೆ ಎಂದರೆ ದಂತಗಳ್ಳ ವೀರಪ್ಪನ್. ಚಿಕ್ಕವನಿದ್ದಾಗ ತನ್ನ ಮನೆಯಲ್ಲಿ ಇಲ್ಲದ ಮೇಣದ ಬತ್ತಿಯೊಂದನ್ನು ಕದ್ದಿದ್ದಕ್ಕೆ ನೀಡಿದ ಶಿಕ್ಷೆಯ ಪರಿಣಾಮವನ್ನು ವಿಪರೀತವಾಗಿ ಪರಿಗಣಿಸಿ ಇದನ್ನೇ ತಲೆಯಲ್ಲಿ ತುಂಬಿಕೊಂಡ ಆತ ದೊಡ್ಡವನಾದ ಬಳಿಕ ಏನಾದ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಶಾಲೆಗಳಲ್ಲಿ ಆಟ, ಪಾಠದ ಜೊತೆ ಧ್ಯಾನಕ್ಕೂ ಪ್ರಾಮುಖ್ಯತೆ ಇರಲಿ

ಶಾಲೆ ಬಿಟ್ಟ ಮಕ್ಕಳಲ್ಲಿ ಹೆಚ್ಚಿನ ಉದ್ವೇಗ, ಆತ್ಮವಿಶ್ವಾಸದ ಕೊರತೆ, ಕೀಳರಿಮೆ, ಸಮಾಜದಲ್ಲಿ ಬೆರೆಯಲು ಸಾಧ್ಯವಾಗದಿರುವುದು, ಮಾನಸಿಕರಾಗಿ ಕುಬ್ಜರಾಗಿರುವುದು ಮೊದಲಾದ ತೊಂದರೆಗಳು ಎದುರಾಗುತ್ತವೆ. ಒಂದು ವೇಳೆ ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ನೀಡದೇ ಇದ್ದರೆ ಈ ಗುಣಗಳೆಲ್ಲಾ ಹೆಮ್ಮರಗಳಾಗಿ ಅವರ ಮುಂದಿನ ಜೀವನ ಸಾಮಾನ್ಯವಾಗದೇ ಇರಲು ಕಾರಣವಾಗಬಹುದು. ಇದೇ ವೇಳೆ ಸರಿಯಾದ ಮಾರ್ಗದರ್ಶನ ನೀಡಿ ಮತ್ತೆ ಶಾಲೆಗೆ ಬರುವಂತೆ ಮಾಡಿದರೆ ಅಥವಾ ಜೀವನದಲ್ಲಿ ಸರಿಯಾದ ಹೆಜ್ಜೆಗಳನ್ನಿಡಲು ನೆರವಾದರೆ ಮುಂದಿನ ದಿನಗಳಲ್ಲಿ ಇವರನ್ನೂ ಸಮಾಜದ ಉತ್ತಮ ಪ್ರಜೆಗಳನ್ನಾಗಿ ರೂಪಿಸಬಹುದು.

ಇದಕ್ಕೆ ಮುಖ್ಯವಾಗಿ ಬೇಕಾಗಿರುವುದು ಆತ್ಮವಿಶ್ವಾಸವನ್ನು ಹೆಚ್ಚಿಸುವ ಮತ್ತು ಸ್ವಪ್ರತಿಷ್ಠೆಯನ್ನು ಮೂಡಿಸುವ ಕಾರ್ಯಗಳು. ಇಂದು ಪರೀಕ್ಷೆಯಲ್ಲಿ ಪಡೆಯುವ ಅಂಕಗಳನ್ನೇ ಮಾನದಂಡವನ್ನಾಗಿ ಪರಿಗಣಿಸಿ ವಿದ್ಯಾರ್ಥಿಗಳನ್ನು ಅಳೆಯುವ ಪದ್ಧತಿ ಇದೆ. ಬ್ರಿಟಿಷರು ಬಿಟ್ಟು ಹೋದ ಈ ವಿಧಾನ ಅವೈಜ್ಞಾನಿಕ ಎಂದು ಸಾಬೀತಾಗಿದ್ದರೂ ಇದೇ ಮುಂದುವರೆಯುತ್ತಾ ಬಂದಿದೆ.

ಅಲ್ಲದೇ ಯಾರು ಅತಿ ಹೆಚ್ಚಿನ ಅಂಕಗಳನ್ನು ಪಡೆಯುತ್ತಾರೋ ಅವರಿಗೇ ಉತ್ತಮ ಅವಕಾಶಗಳೂ ಸಿಗುತ್ತಿರುವುದು ಮಾತ್ರ ವಿಪರ್ಯಾಸವಾಗಿದೆ. ಇದೇ ಕಾರಣಕ್ಕೆ ಅತಿಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಲ್ಲಿ ಕೀಳರಿಮೆ ಮನೆಮಾಡಿದೆ. ಆದರೆ ಅಂಕಗಳೇ ಜೀವನ ಮಾನದಂಡವಲ್ಲ ಎಂಬುದನ್ನು ಮನದಟ್ಟು ಮಾಡಿಕೊಡುವುದು ಮುಖ್ಯವಾಗಿದೆ. ಇದಕ್ಕೆ ಉದಾಹರಣೆಯಾಗಿ ಸಚಿನ್ ತೆಂಡೂಲ್ಕರ್ ರವರನ್ನೇ ಉದಾಹರಿಸಬಹುದು. ನಿಮ್ಮ ಮಗು ಸುರಕ್ಷಿತವಾಗಿ ಶಾಲೆಗೆ ಹೋಗುತ್ತಿದೆಯೇ?

ರ್‍ಯಾಂಕ್ ಬಂದವರೇ ಸಕಲ ಶ್ಲಾಘನೆಗೆ ಅರ್ಹರು ಎಂದು ಮಾಧ್ಯಮಗಳ ಸಹಿತ ಎಲ್ಲರೂ ಡಂಗುರ ಬಾರಿಸುತ್ತಿರುತ್ತಾರೆ. ಆದರೆ ಇಂದು ಸಮಾಜಲ್ಲಿ ನಿಜವಾಗಿಯೂ ಉತ್ತಮ ಸಾಧನೆ ತೋರಿ ಗಣ್ಯಸ್ಥಾನಗಳನ್ನು ಪಡೆದಿರುವವರೆಲ್ಲಾ ರ್‍ಯಾಂಕ್ ಪಡೆದಿರುವವರಲ್ಲ ಎಂದು ಮನದಟ್ಟು ಮಾಡಿಸಿಕೊಡಬೇಕು.

ಅಷ್ಟೇ ಅಲ್ಲ, ನಿಜವಾಗಿಯೂ ರ್‍ಯಾಂಕ್ ಬಂದವರು ದೇಶಗಳನ್ನೇ ತೊರೆದು ಹೋಗಿ ವಿದೇಶಗಳಲ್ಲಿ ದುಡಿಯುತ್ತಾ ಆ ದೇಶಗಳ ಪ್ರಗತಿಗೆ ನೆರವಾಗುತ್ತಿರುವುದನ್ನು ತೋರಿಸಿ ಪ್ರತಿಭಾ ಪಲಾಯನದ ಬಗ್ಗೆಯೂ ತಿಳಿಸುವುದು ಒಂದು ಉತ್ತಮ ವಿಧಾನವಾಗಿದೆ. ಇದಕ್ಕಾಗಿ ಮನೆಯವರು ಸಾಕಷ್ಟು ಸಾವಧಾನದಿಂದ ತಮ್ಮ ಮಕ್ಕಳನ್ನು ಮನವೋಲೈಸುವುದು ಅಗತ್ಯ. ಒಂದು ವೇಳೆ ಇದನ್ನು ಹೇಗೆ ಮಾಡುವುದು ಎಂದು ಗೊತ್ತಾಗದಿದ್ದರೆ ಸಲಹಾಕಾರರ ನೆರವು ಪಡೆಯಬಹುದು. ನಿಮ್ಮ ಕುಟುಂಬ ವೈದ್ಯರೂ ನಿಮಗೆ ಸಾಕಷ್ಟು ನೆರವು ನೀಡಬಲ್ಲರು.

English summary

How Treatment Can Help School Dropouts

A new study found that treatment and guidance can make the life of school dropouts better. When children do well academically, parents tend to be happy but for some reason, if a kid turns into a dropout, parents go through sleepless nights worrying about the kid's future.
X
Desktop Bottom Promotion