For Quick Alerts
ALLOW NOTIFICATIONS  
For Daily Alerts

ಮಕ್ಕಳಿಗೂ ವ್ಯಾಯಮ ಅಗತ್ಯ - ಏಕೆ ಮತ್ತು ಹೇಗೆ?

By Manu
|

ಮಕ್ಕಳಿಗೂ ವ್ಯಾಯಮ ಅಗತ್ಯವೇ ಎಂದು ಹಿರಿಯರು ಕೇಳಿದರೆ ತಜ್ಞರು ನೀಡುವ ಉತ್ತರ 'ಹೌದು', ಆದರೆ ಮಕ್ಕಳ ವ್ಯಾಯಾಮ ಹಿರಿಯರಷ್ಟು ಕಠಿಣವಾಗಬೇಕಿಲ್ಲ, ಬದಲಿಗೆ ನಿಯಮಿತ ಮತ್ತು ಕ್ರಮ ಬದ್ಧವಾಗಿರುವುದು ಮಾತ್ರ ಅಗತ್ಯ, ಹಾಗಂತ ಮಕ್ಕಳಿಗೆ ಕಠಿಣ ವ್ಯಾಯಮದ ಅಭ್ಯಾಸ, ಜಿಮ್ ಮೊದಲಾದವುಗಳ ಅಗತ್ಯ ಇಲ್ಲ, ಏಕೆಂದರೆ ಮಕ್ಕಳ ದೇಹ ಬೆಳವಣಿಗೆ ಪಡೆಯುತ್ತಿರುವ ದೇಹವಾದುದರಿಂದ ಹೆಚ್ಚಿನ ಒತ್ತಡ ಬೆಳವಣಿಗೆ ಮತ್ತು ಮಾನಸಿಕ ಕ್ಷಮತೆಯನ್ನು ಏರುಪೇರುಗೊಳಿಸಬಹುದು. ಅಲ್ಲದೇ ಇದು ಪ್ರತಿ ಮಗುವಿನ ವಯಸ್ಸು ಮತ್ತು ದೈಹಿಕ ಸಾಮರ್ಥಕ್ಕೆ ಅನುಗುಣವಾಗಿ ಬೇರೆಬೇರೆಯಾಗಿರುತ್ತದೆ.

ಆದರೆ ಮಕ್ಕಳಿಗೆ ನಿತ್ಯವೂ ವ್ಯಾಯಮ ಮಾಡಲು ಹಿರಿಯರು ಪ್ರೇರಣೆ ನೀಡುವ ಮೂಲಕ ಆಯಾ ವಯಸ್ಸಿಗೆ ತಕ್ಕ ವ್ಯಾಯಮಗಳನ್ನು ಮಾಡಿ ಉತ್ತಮ ಆರೋಗ್ಯ, ದೈಹಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ಪಡೆಯಬಹುದು. ಅಲ್ಲದೇ ಈ ಅಭ್ಯಾಸಗಳು ಚಿಕ್ಕಂದಿನಿಂದಲೇ ಪ್ರಾರಂಭವಾದರೆ ಅವರ ಮುಂದಿನ ಜೀವನ ಆರೋಗ್ಯಕರ ಮತ್ತು ಉತ್ತಮ ಶಾರೀರ ಹೊಂದಲು ಸಾಧ್ಯವಾಗುತ್ತದೆ. ಇಂದು ಮಕ್ಕಳಿಗೆ ವ್ಯಾಯಮ ಮಾಡಲು ಪ್ರೇರಣೆ ನೀಡುವ ಅಗತ್ಯ ಹಿಂದಿಗಿಂತಲೂ ಹೆಚ್ಚು ಅವಶ್ಯವಾಗಿದೆ.

ಏಕೆಂದರೆ ಹಿಂದಿನ ದಿನಗಳಲ್ಲಿ ನಡೆದು ಶಾಲೆಗೆ ಹೋಗುತ್ತಿದ್ದು ಆಟಗಳನ್ನೂ ಆಡುತ್ತಿದ್ದು ಸ್ವಾಭಾವಿಕವಾಗಿಯೇ ವ್ಯಾಯಾಮ ಸಿಗುತ್ತಿತ್ತು. ಆದರೆ ಇಂದಿನ ಕಂಪ್ಯೂಟರ್ ಯುಗದಲ್ಲಿ ಇವೆಲ್ಲಾ ಮೂಲೆಗುಂಪಾಗಿ ವ್ಯಾಯಮವಿಲ್ಲದಂತಾಗಿಬಿಟ್ಟಿದೆ. ಆದ್ದರಿಂದ ಮಕ್ಕಳಿಗೆ ವ್ಯಾಯಾಮ ಯಾವುದೇ ರೂಪದಲ್ಲಾದರೂ ದೊರಕುವಂತೆ ಮಾಡುವುದು ಪಾಲಕರ ಮತ್ತು ಪೋಷಕರ ಜವಾಬ್ದಾರಿಯೂ ಆಗಿದೆ. ಬನ್ನಿ ನಿಮ್ಮ ಮಕ್ಕಳಿಗೆ ವ್ಯಾಯಮದ ಬಗ್ಗೆ ತಿಳಿವಳಿಕೆ ನೀಡಲು ಕೆಳಗೆ ನೀಡಿರುವ ಮಾಹಿತಿಗಳು ನೆರವಾಗಲಿದೆ, ಮುಂದೆ ಓದಿ...

Here’s why children need to exercise too!

ಹನ್ನೆರಡು ವಯಸ್ಸಿಗಿಂತಲೂ ಚಿಕ್ಕ ಮಕ್ಕಳಿಗೆ
ಎರಡು ವರ್ಷದ ಮಕ್ಕಳು ನಡೆಯಲು ಕಲಿತುಕೊಂಡ ಬಳಿಕ ನಿಧಾನಗತಿಯಲ್ಲಿ ಓಡಲು, ಕೈಕಾಲುಗಳನ್ನು ಸುಲಭವಾಗಿ ಆಡಿಸಲು, ಏರೋಬಿಕ್ಸ್ ಮತ್ತು ಚಿಕ್ಕ ಪುಟ್ಟ ಆಟಗಳನ್ನು ಆಡುವಂತೆ ಪ್ರೇರೇಪಿಸಿ. ಚೆಂಡನ್ನು ದೂರ ಎಸೆದು ಹಿಡಿಯುವಂತೆ ಮಾಡುವುದು, ಗೋಲಿಗಳನ್ನು ಎತ್ತಿಕೊಳ್ಳುವುದು ಮೊದಲಾದವು ಮಕ್ಕಳ ರಕ್ತಸಂಚಾರವನ್ನು ಹೆಚ್ಚಿಸಿ ಮೂಳೆಗಳ ದೃಢತೆಯನ್ನು ಹೆಚ್ಚಿಸುತ್ತವೆ. ಸ್ನಾಯುಗಳ ಸಾಂದ್ರತೆ ಹೆಚ್ಚಿಸಿ ಹೆಚ್ಚಿನ ಕ್ಯಾಲೋರಿಗಳು ಬಳಕೆಯಾಗುವ ಮೂಲಕ ಸ್ಥೂಲಕಾಯ ಆವರಿಸದಂತೆ ತಡೆಯುತ್ತವೆ. ಅಲ್ಲದೇ ನರವ್ಯವಸ್ಥೆ ಚುರುಕುಗೊಳ್ಳುವ ಮೂಲಕ ನಿತ್ಯದ ಚಟುವಟಿಕೆ ಮತ್ತು ಕೌಶಲ್ಯವೂ ಹೆಚ್ಚುತ್ತದೆ.

ಹನ್ನೆರಡು ವರ್ಷದ ನಂತರದ ಮಕ್ಕಳಿಗೆ
ಈ ವಯಸ್ಸಿನ ಮಕ್ಕಳು ಹೆಚ್ಚಿನ ಕೌಶಲ್ಯಾಧರಿತ ಆಟಗಳನ್ನು ಆಡಬೇಕು. ಕೊಂಚ ಶಕ್ತಿ ವ್ಯಯಿಸುವ, ಶರೀರವನ್ನು ಬಾಗಿಸುವ, ಚುರುಕಾಗಿ ಕಾರ್ಯನಿರ್ವಹಿಸುವ ಮತ್ತು ಸಂತುಲತೆಯನ್ನು ಕಾಪಾಡುವಂತಹ ಆಟಗಳು ಮತ್ತು ವ್ಯಾಯಮಗಳನ್ನು ಅನುಸರಿಸಬೇಕು. ಈ ವ್ಯಾಯಮಗಳಲ್ಲಿ ಕೆಲವು ಘಟ್ಟಗಳನ್ನು ಏರ್ಪಡಿಸಿ ಒಂದೊಂದಾಗಿ ಮೇಲೇರಲು ಪ್ರೇರಣೆ ಮತ್ತು ಸೂಕ್ತ ಮಾಹಿತಿ, ಸೂಚನೆಗಳನ್ನು ನೀಡಬೇಕು. ಸಾಧ್ಯವಾದಷ್ಟು ಹೆಚ್ಚಿನ ಶ್ರಮದಾಯಕ ವ್ಯಾಯಮಗಳು ಅಂದರೆ ಸೈಕ್ಲಿಂಗ್, ಈಜು, ಟೆನ್ನಿಸ್, ಸ್ಕೇಟಿಂಗ್ ಮೊದಲಾದವುಗಳನ್ನು ಅನುಸರಿಸುವಂತೆ ಪ್ರೇರೇಪಿಸಬೇಕು. ಅಲ್ಲದೇ ಜೀವನದಲ್ಲಿ ಕ್ರೀಡಾ ಮನೋಭಾವ ಮೂಡಲು ಇದು ಸೂಕ್ತವಾದ ವಯಸ್ಸಾಗಿದೆ. ಸಾಧ್ಯವಾದಷ್ಟು ತಂಡದಲ್ಲಿ ಆಡುವ ಕಬಡ್ಡಿ, ಕ್ರಿಕೆಟ್, ಫುಟ್ಬಾಲ್ ಮೊದಲಾದ ಕ್ರೀಡೆಗಳನ್ನು ಆಡುವಂತೆಯೂ ಪ್ರೋತ್ಸಾಹಿಸಿ.

ಈ ವಿಷಯಗಳು ನೆನಪಿರಲಿ
1) ಮಕ್ಕಳನ್ನು ಅವರ ಇಚ್ಛೆಗೆ ವಿರುದ್ಧವಾಗಿ ಎಂದಿಗೂ ಯಾವುದೇ ಕ್ರೀಡೆಗೆ ಬಲವಂತವಾಗಿ ಸೇರಿಸಬೇಡಿ
2) ಮಕ್ಕಳನ್ನು ಎಂದಿಗೂ ಭಾರ ಎತ್ತುವ ಕ್ರೀಡೆಗೆ ಸೇರಿಸಬೇಡಿ. ಒಂದು ವೇಳೆ ಮಗುವೇ ಈ ಬಗ್ಗೆ ಆಸಕ್ತಿ ತೋರಿದರೆ ನುರಿತ ಮತ್ತು ವೃತ್ತಿಪರರ ನಿಗಾ ಇವರ ಮೇಲಿರುವಂತೆ ಕ್ರಮ ಕೈಗೊಳ್ಳಿ
3) ಹೊರಗಿನ ಆಟಗಳನ್ನು ಕನಿಷ್ಠ ಒಂದು ಗಂಟೆಯಾದರೂ ಆಡುವಂತೆ ಮಕ್ಕಳಿಗೆ ತಿಳಿಹೇಳಿ.

English summary

Here’s why children need to exercise too!

kids should be encouraged to exercise on a daily basis as that is one of the good habits you should cultivate in your child early to curb the incidence of lifestyle-related ailments later. So as a parent it becomes your duty to see that your child is physically active and fit to lead a healthy life in future.
Story first published: Wednesday, March 2, 2016, 10:15 [IST]
X
Desktop Bottom Promotion