ಮಕ್ಕಳ ಓದುವ ಕೌಶಲ್ಯ ಹೆಚ್ಚಿಸಲು ಗುಣಮಟ್ಟದ ಆಹಾರಕ್ರಮ ಅತ್ಯಗತ್ಯ

By: Hemanth
Subscribe to Boldsky

ಮಕ್ಕಳ ಆಹಾರ ಕ್ರಮದ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕೆಂದು ಸಲಹೆಗಳು ಬರುತ್ತಾ ಇರುತ್ತದೆ. ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿ ಸಿಗಬೇಕಾದ ಪೋಷಕಾಂಶಗಳು ಸಿಗದೆ ಇದ್ದರೆ ಅವರ ದೈಹಿಕ ಹಾಗೂ ಬೌದ್ಧಿಕ ಬೆಳವಣಿಗೆಯೂ ಕುಂಠಿತವಾಗುತ್ತದೆ. ಇದರಿಂದಾಗಿ ಮಕ್ಕಳ ಆಹಾರ ಕ್ರಮವು ಸರಿಯಾಗಿರಬೇಕಾಗುತ್ತದೆ.

ಫಿನ್ ಲ್ಯಾಂಡ್ ನಲ್ಲಿ ನಡೆಸಿದ ಅಧ್ಯಯನವೊಂದು ಮಕ್ಕಳ ಆಹಾರ ಕ್ರಮವು ಮಕ್ಕಳ ಮೊದಲ ಮೂರು ವರ್ಷದಲ್ಲಿ ಓದುವ ಕೌಶಲ್ಯವನ್ನು ವೃದ್ಧಿಸುತ್ತದೆ ಎಂದು ಹೇಳಿದೆ. ಈ ಅಧ್ಯಯನಕ್ಕಾಗಿ 6-8 ವರ್ಷದೊಳಗಿನ 161 ಮಂದಿ ಮಕ್ಕಳನ್ನು ಒಳಪಡಿಸಲಾಯಿತು. ಇದರಲ್ಲಿ ಅವರು ಸೇರಿಸುವಂತಹ ಆಹಾರ ಮತ್ತು ಅವರ ಶೈಕ್ಷಣಿಕ ಫಲಿತಾಂಶವನ್ನು ಗಣನೆಗೆ ತೆಗೆದುಕೊಳ್ಳಲಾಯಿತು.

Healthy Diet Develops Better Reading Skills In Children

ತರಕಾರಿ, ಹಣ್ಣುಗಳು, ಬೆರ್ರಿಗಳು, ಧಾನ್ಯಗಳು, ಮೀನು ಮತ್ತು ಕೊಬ್ಬು ಮತ್ತು ಕಡಿಮೆ ಸಕ್ಕರೆ ಇರುವ ಆಹಾರವನ್ನು ಸೇವಿಸುವಂತಹ ಮಕ್ಕಳು ಇತರ ಮಕ್ಕಳಿಗಿಂತ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುತ್ತಾರೆ ಎಂದು ಯುರೋಪಿಯನ್ ಜರ್ನಲ್ ಆಫ್ ನ್ಯೂಟ್ರಿಷನ್ ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಹೇಳಿದೆ.   ತೆಳ್ಳಗಿರುವ ಮಕ್ಕಳ ತೂಕ ಹೆಚ್ಚಾಗಲು ಆಹಾರ ಪಥ್ಯ ಹೀಗಿರಲಿ

ಗುಣಮಟ್ಟದ ಆಹಾರಕ್ರಮವನ್ನು ಸೇವಿಸುವಂತಹ ಮಕ್ಕಳು ಗ್ರೇಡ್ 2 ಮತ್ತು ಗ್ರೇಡ್ 3ರಲ್ಲಿ ಒಳ್ಳೆಯ ಓದುವ ಕೌಶಲ್ಯವನ್ನು ಹೊಂದಿರುತ್ತಾರೆ. ಗುಣಮಟ್ಟದ ಪೋಷಕಾಂಶಗಳುಳ್ಳ ಆಹಾರ ಸೇವಿಸುವಂತಹ ಮಕ್ಕಳು 1ನೇ ಗ್ರೇಡ್ ಗಿಂತ 2 ಮತ್ತು 3ನೇ ಗ್ರೇಡ್ ನಲ್ಲಿ ಓದುವ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುತ್ತಾರೆ ಎಂದು ಅಧ್ಯಯನಗಳು ಕಂಡುಕೊಂಡಿವೆ.

ಗುಣಮಟ್ಟದ ಪೋಷಕಾಂಶಗಳನ್ನು ಒಳಗೊಂಡ ಆಹಾರಕ್ರಮ ಮತ್ತು ಓದುವ ಕೌಶಲ್ಯವು ಹಲವಾರು ಅಂಶಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ಸಾಮಾಜಿಕ-ಆರ್ಥಿಕ ಸ್ಥಿತಿ, ದೈಹಿಕ ಚಟುವಟಿಕೆ, ದೇಹದ ಸ್ಥಿತಿಗತಿ ಮತ್ತು ದೈಹಿಕ ಫಿಟ್ನೆಸ್ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಎಂದು ಫಿನ್ ಲ್ಯಾಂಡ್ ನ ಯೂನಿವರ್ಸಿಟಿಯಲ್ಲಿ ಸಂಶೋಧಕರಾಗಿರುವ ಎರೊ ಹಾಪಲ ಹೇಳಿದರು.

ಬಾಲ್ಟಿಕ್ ಸೀ ಡಯಟ್ ಮತ್ತು ಫಿನ್ನಿಶ್ ನ್ಯೂಟ್ರಿಶನ್ ಗಳು ತರಕಾರಿ, ಹಣ್ಣುಗಳು, ಬೆರ್ರಿಗಳು, ಮೀನು, ಧಾನ್ಯಗಳು, ಸಂಸ್ಕರಿಸದೆ ಇರುವ ಕೊಬ್ಬು, ಸಂಸ್ಕರಿಸಿದ ಕೊಬ್ಬನ್ನು ತುಂಬಾ ಆರೋಗ್ಯಕರವೆಂದು ಪರಿಗಣಿಸಲಾಗಿದೆ.   ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳು...
ಆರೋಗ್ಯಕರವಾಗಿರುವಂತಹ ಆಹಾರ ಕ್ರಮವು ಕಲಿಕೆಯಲ್ಲಿ ಸುಧಾರಣೆ ಮತ್ತು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ. ಮಕ್ಕಳಿಗೆ ಆರೋಗ್ಯಕರವಾದ ಆಹಾರವು ಸಿಗುವಲ್ಲಿ ಪೋಷಕರು ಹಾಗೂ ಶಾಲೆಗಳು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಸರಕಾರ ಹಾಗೂ ಕಂಪನಿಗಳು ಆರೋಗ್ಯಕರವಾದ ಆಹಾರವನ್ನು ತಯಾರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಎಂದು ಅಧ್ಯಯನಗಳು ಗುರುತಿಸಿವೆ.
(IANS ಪ್ರಕಟಿತ) 

Story first published: Thursday, September 15, 2016, 12:02 [IST]
English summary

Healthy Diet Develops Better Reading Skills In Children

A healthy diet may develop better reading skills in the first three school years, shows a recent study from Finland. The study involved 161 children aged 6-8 years old and the quality of their diet was analysed using food diaries and their academic skills with the help of standardised tests.
Please Wait while comments are loading...
Subscribe Newsletter