For Quick Alerts
ALLOW NOTIFICATIONS  
For Daily Alerts

ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳು...

By Manu
|

ಮಕ್ಕಳು ಶಾಲೆಗೆ ಹೋಗತೊಡಗಿದ ಬಳಿಕ ಇವರಿಗೆ ವಿವಿಧ ರೋಗಗಳು ಅಂಟಿಕೊಳ್ಳುವ ಸಾಧ್ಯತೆ ಹೆಚ್ಚುತ್ತದೆ. ಏಕೆಂದರೆ ಶಾಲೆಗೆ ಆಗಮಿಸುವ ಇತರ ಮಕ್ಕಳ ಮೂಲಕ ಗಾಳಿಯಲ್ಲಿ ಹಬ್ಬಬಹುದಾದ ರೋಗಾಣುಗಳಿಗೆ ಈ ಮಕ್ಕಳ ದೇಹ ತಕ್ಕ ಪ್ರತಿರೋಧ ವ್ಯವಸ್ಥೆಯನ್ನು ಹೊಂದಿರುವುದಿಲ್ಲ. ಆದರೆ ಇದಕ್ಕೂ ಮುನ್ನ ಮಗುವಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿದ್ದರೆ ಈ ಅಲರ್ಜಿ ಮತ್ತು ಸೋಂಕಿನಿಂದ ರಕ್ಷಣೆ ಪಡೆಯಬಹುದು.

ಈ ಶಕ್ತಿಯನ್ನು ಹೆಚ್ಚಿಸಲು ಮಕ್ಕಳಿಗೂ ಸಂತುಲಿತ ಆಹಾರ ನೀದುವುದು ಅಗತ್ಯ. ಮಕ್ಕಳ ದೇಹ ಎಲ್ಲಾ ಅಗತ್ಯ ಪೋಷಕಾಂಶಗಳನ್ನು ಪಡೆಯುವಂತಾಗಲು ಸರಿಯಾದ ಆಹಾರಗಳನ್ನು ನೀಡಬೇಕು. ಇದರಿಂದ ಮಕ್ಕಳು ಆರೋಗ್ಯವಾಗಿದ್ದು ಪಾಲಕರ ಆತಂಕ ತಪ್ಪುತ್ತದೆ. ಮಕ್ಕಳ ಬೆಳವಣಿಗೆಗೆ ಪೂರಕವಾದ 12 ಆಹಾರಗಳು

ಆದರೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಯಾವ ಆಹಾರಗಳನ್ನು ನೀಡಬೇಕು? ಇದಕ್ಕಾಗಿ ಯಾವುದಾದರೂ ವಿಶೇಷವಾದ ಆಹಾರ ನೀಡಬೇಕೇ? ಅದೂ ನಿಯಮಿತವಾಗಿ ನೀಡಬೇಕೇ, ಆಗಾಗ ನೀಡಿದರೆ ಸಾಕೇ? ಈ ಪ್ರಶ್ನೆಗಳಿಗೆ ಕೆಳಗಿನ ಮಾಹಿತಿ ಉತ್ತರ ನೀಡಲಿದೆ, ಮುಂದೆ ಓದಿ.... ಮಕ್ಕಳ ಮೆದುಳಿಗೆ ಬೇಕು ಈ ಏಳು ಬಗೆಯ ಆಹಾರಗಳು

ಮೊಸರು

ಮೊಸರು

ಮೊಸರಿನಲ್ಲಿ ಜೀರ್ಣಶಕ್ತಿಯನ್ನು ಹೆಚ್ಚಿಸುವ ಬ್ಯಾಕ್ಟೀರಿಯಾಗಳಿವೆ. ವಾಸ್ತವವಾಗಿ ನಮ್ಮ ಹೊಟ್ಟೆ ಮಾಡಬೇಕಿದ್ದ ಕೆಲಸವನ್ನು ಮೊಸರಿನಲ್ಲಿರುವ ಈ ಸ್ನೇಹಿ ಬ್ಯಾಕ್ಟೀರಿಯಾಗಳೇ ಮಾಡಿಬಿಟ್ಟಿರುವ ಕಾರಣ ಸುಲಭವಾಗಿ ಜೀರ್ಣವಾಗುತ್ತದೆ. ಕೆಲವು ಸಂಶೋಧನೆಗಳ ಪ್ರಕಾರ ನಿತ್ಯವೂ ಮೊಸರನ್ನು ಸೇವಿಸುವ ಮಕ್ಕಳು ಇತರ ಮಕ್ಕಳಿಗಿಂತ ಹೆಚ್ಚು ಆರೋಗ್ಯಕರವಾಗಿರುತ್ತಾರೆ. ಆಹಾರ ತಜ್ಞರ ಪ್ರಕಾರ ಪ್ರತಿದಿನ ಮಧ್ಯಾಹ್ನದ ಊಟದಲ್ಲಿ ಮೊಸರು ಕಡ್ಡಾಯವಾಗಿರಲಿ, ರಾತ್ರಿ ಹೊತ್ತಿನಲ್ಲಿ ಆಗಾಗ ಇದ್ದರೆ ಸಾಕು. ಪ್ರತಿ ದಿನ ಮೊಸರು ಸೇವಿಸಿದರೆ ಖಂಡಿತ ಮೋಸವಿಲ್ಲ

ಹಸಿರು ತರಕಾರಿಗಳು

ಹಸಿರು ತರಕಾರಿಗಳು

ಬಣ್ಣಬಣ್ಣದ, ಅದರಲ್ಲೂ ಹಸಿರು ಬಣ್ಣದ ತರಕಾರಿಗಳಲ್ಲಿ ಹೆಚ್ಚಿನ ಕ್ಯಾರೋಟಿನಾಯ್ಡುಗಳು, ಆಂಟಿ ಆಕ್ಸಿಡೆಂಟುಗಳು ಮತ್ತು ವಿವಿಧ ಪೋಷಕಾಂಶಗಳಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಈ ತರಕಾರಿಗಳನ್ನು ವಾರದಲ್ಲಿ ಕನಿಷ್ಟ ಐದು ಹೊತ್ತಾದರೂ ಮಕ್ಕಳಿಗೆ ತಿನ್ನಿಸಬೇಕು.

ಬೆಳ್ಳುಳ್ಳಿ

ಬೆಳ್ಳುಳ್ಳಿ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬೆಳ್ಳುಳ್ಳಿ ಅತ್ಯುತ್ತಮವಾಗಿದೆ. ಅಲ್ಲದೇ ರಕ್ತದಲ್ಲಿನ ಬಿಳಿ ರಕ್ತಕಣಗಳನ್ನು ಹೆಚ್ಚಿಸುವಲ್ಲಿಯೂ, ಜೀರ್ಣಕ್ರಿಯೆ ಚುರುಕುಗೊಳಿಸುವಲ್ಲಿಯೂ ನೆರವಾಗುತ್ತದೆ. ಆದ್ದರಿಂದ ಬೆಳ್ಳುಳ್ಳಿಯನ್ನು ಅಡುಗೆಯಲಿ ಬಳಸಿ ಮಕ್ಕಳಿಗೆ ತಿನ್ನಿಸಬೇಕು. ವಾರದಲ್ಲಿ ಕನಿಷ್ಟ ಎರಡು ಹೊತ್ತಾದರೂ ಬೆಳ್ಳುಳ್ಳಿ ಇರುವ ಆಹಾರ ತಿನ್ನಿಸುವುದು ಉತ್ತಮ.

ಹೂಕೋಸು

ಹೂಕೋಸು

ಹೂಕೋಸಿನಲ್ಲಿ ಹೆಚ್ಚಿನ ಪ್ರಮಾಣದ ಕರಗದ ನಾರು, ಫೈಟೋ ಕೆಮಿಕಲ್ ಮತ್ತು ಇತರ ಪೋಷಕಾಂಶಗಳಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ತರಕಾರಿಯ ಖಾದ್ಯವನ್ನು ವಾರಕ್ಕೊಮ್ಮೆಯಾದರೂ ತಿನ್ನಿಸಬೇಕು. ಹೂಕೋಸು ಎಂದಾಕ್ಷಣ ಮುಖ ಸಿಂಡರಿಸಬೇಡಿ ಪ್ಲೀಸ್!

ಮೊಟ್ಟೆಗಳು

ಮೊಟ್ಟೆಗಳು

ಬೆಳಗ್ಗಿನ ಉಪಾಹಾರಕ್ಕೆ ಮೊಟ್ಟೆಗಳು ಅತ್ಯುತ್ತಮ ಆಯ್ಕೆಯಾಗಿದ್ದು ಮಕ್ಕಳಿಗೆ ಹೇಳಿ ಮಾಡಿಸಿದ ಆಹಾರವಾಗಿದೆ. ಇದರಲ್ಲಿರುವ ಪ್ರೋಟೀನುಗಳು ಮತ್ತು ವಿಟಮಿನ್ನುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೇ ಶಾರೀರಿಕ ಬೆಳವಣಿಗೆಯಲ್ಲಿಯೂ ನೆರವು ನೀಡುತ್ತದೆ. ದಿನಕ್ಕೊಂದು ಮೊಟ್ಟೆಯಂತೆ ವಾರಕ್ಕೆ ಏಳು ಮೊಟ್ಟೆ ಸೇವಿಸುವುದು ಉತ್ತಮ. ಅತ್ಯಂತ ಆರೋಗ್ಯಕರವಾದ 8 ಬಗೆಯ ಮೊಟ್ಟೆಗಳು

ಚಿಕನ್ ಸೂಪ್

ಚಿಕನ್ ಸೂಪ್

ಮನೆಯಲ್ಲಿಯೇ ತಯಾರಿಸಿದ ಚಿಕನ್ ಸೂಪ್‌ನಲ್ಲಿ ಉತ್ತಮ ಪೋಷಕಾಂಶಗಳಿದ್ದು ಚಿಕ್ಕಪುಟ್ಟ ಶೀತ ಕೆಮ್ಮುಗಳಿಗೆ ತಕ್ಷಣದ ಔಷಧಿಯಂತೆಯೂ ಕೆಲಸ ಮಾಡುತ್ತದೆ. ಒಂದು ವೇಳೆ ಮಕ್ಕಳಿಗೆ ಆಮಶಂಕೆಯಾಗಿದ್ದರೆ ಕಳೆದುಕೊಂಡಿದ್ದ ನೀರನ್ನು ಮರುತುಂಬಿಸಲು ಈ ಸೂಪ್ ಅತ್ಯುತ್ತಮವಾಗಿದೆ.

ಚಿಕನ್ ಸೂಪ್

ಚಿಕನ್ ಸೂಪ್

ಶೀತ ಕೆಮ್ಮು ಇದ್ದಾಗ ಎರಡು ದಿನಕ್ಕೊಮ್ಮೆಯಾದರೂ ನೀಡಬೇಕು. ಉಳಿದ ಸಮಯದಲ್ಲಿ ವಾರಕ್ಕೊಮ್ಮೆ ಅಥವಾ ಎರಡು ವಾರಕ್ಕೊಮ್ಮೆಯಾದರೂ ಸಾಕು. ಮಾರುಕಟ್ಟೆಯಲ್ಲಿ ಸಿಗುವ ಸಿದ್ಧರೂಪದ ಚಿಕನ್ ಸೂಪ್ ಮಕ್ಕಳಿಗೆ ಕೇವಲ ರುಚಿ ನೀಡಬಹುದು, ಆದರೆ ಇದರಲ್ಲಿರುವ ಸಂರಕ್ಷಕಗಳು ಮಕ್ಕಳ ಆರೋಗ್ಯವನ್ನು ಕೆಡಿಸುವುದೇ ಹೆಚ್ಚು ಆದ್ದರಿಂದ ಮನೆಯಲ್ಲಿಯೇ ತಯಾರಿಸಿದ ಚಿಕನ್ ಸೂಪ್ ಮಾತ್ರ ಕುಡಿಸಿ.

ದ್ವಿದಳ ಧಾನ್ಯಗಳು

ದ್ವಿದಳ ಧಾನ್ಯಗಳು

ಮಕ್ಕಳಿಗೆ ವಾರಕ್ಕೆ ಮೂರು ದಿನವಾದರೂ (ಆರು ಹೊತ್ತು) ವಿವಿಧ ದ್ವಿದಳ ಧಾನ್ಯಗಳ ಖಾದ್ಯಗಳನ್ನು ತಿನ್ನಿಸಬೇಕು. ಇದರಿಂದ ಆರೋಗ್ಯವೂ ಉತ್ತಮಗೊಳ್ಳುವ ಜೊತೆಗೇ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ತೊಗರಿ, ಕಡಲೆ, ಹೆಸರು, ಹುರುಳಿ, ಬೀನ್ಸ್ ಮೊದಲಾದ ದ್ವಿದಳ ಧಾನ್ಯ ಪ್ರಧಾನವಾದ ಖಾದ್ಯಗಳು ರುಚಿಕರವೂ ಆರೋಗ್ಯಕರವೂ ಹೌದು.

ಬೆರ್ರಿ ಹಣ್ಣುಗಳು

ಬೆರ್ರಿ ಹಣ್ಣುಗಳು

ಯಾವುದೇ ಹುಳಿ ಸಿಹಿ ರುಚಿ ಇರುವ ಬೆರ್ರಿಹಣ್ಣುಗಳಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ನುಗಳು ಮತ್ತು ಆಂಟಿ ಆಕ್ಸಿಡೆಂಟುಗಳಿರುವ ಕಾರಣ ಮಾರುಕಟ್ಟೆಯಲ್ಲಿ ಲಭ್ಯವಿರುವ ಹಣ್ಣನ್ನು ತಂದು ಆಗಾಗ ಮಕ್ಕಳಿಗೆ ತಿನ್ನಿಸಬೇಕು. ವಿಶೇಷವಾಗಿ ಸಂಜೆಯ ಆಟದ ಬಳಿಕ ತಿನ್ನಲು ನೀಡಿದರೆ ಉತ್ತಮ.

ಬಾದಾಮಿ

ಬಾದಾಮಿ

ಬಾದಾಮಿಯಲ್ಲಿ ಒಮೆಗಾ 3 ಕೊಬ್ಬಿನ ಆಮ್ಲ ಇರುವ ಕಾರಣ ಮಕ್ಕಳಲ್ಲಿ ವಿಶೇಷವಾಗಿ ಶ್ವಾಸಸಂಬಂಧಿ ತೊಂದರೆಗಳಿಂದ ರಕ್ಷಣೆ ಪಡೆಯಲು ಸಾಧ್ಯವಾಗುತ್ತದೆ. ಕೆಲವು ಮಕ್ಕಳಿಗೆ ಬಾದಾಮಿ ಅಲರ್ಜಿಕಾರಕವಾಗಿರುತ್ತದೆ. ಇವರನ್ನು ಹೊರತುಪಡಿಸಿ ಉಳಿದೆಲ್ಲಾ ಮಕ್ಕಳಿಗೆ ನಿತ್ಯವೂ ತಿಂಡಿಯ ಜೊತೆ ಒಂದೆರಡಾದರೂ ಬಾದಾಮಿಗಳನ್ನು ತಿನ್ನಲು ನೀಡಬೇಕು.ನೆನೆಸಿಟ್ಟ ಬಾದಾಮಿ ಬೀಜದ ಚಮತ್ಕಾರಕ್ಕೆ ಬೆರಗಾಗಲೇಬೇಕು!

English summary

Foods That Boost Immunity In Kids

A balanced diet is the key for a healthy body. When you ensure that all kinds of nutrients are offered through the diet of your kid, you can rest assured. But what are the foods that can boost the kid's immunity? Are there any specific foods to be offered regularly? Well, read on to know about such foods.
X
Desktop Bottom Promotion