ಮಕ್ಕಳ ಅಲರ್ಜಿ ಸಮಸ್ಯೆಗೆ, ಮೀನು ಬಹಳ ಒಳ್ಳೆಯದು...

ಮೀನು ತಿನ್ನುವ ಕುಟುಂಬದ ಮಕ್ಕಳಲ್ಲಿ ಅಲರ್ಜಿ ಕಂಡುಬರುವ ಸಾಧ್ಯತೆ ಕಡಿಮೆ" ಎಂದು ಸ್ವೀಡನ್ನಿನ Chalmers University of Technology ವಿಶ್ವವಿದ್ಯಾಲಯದ ಸಂಶೋಧಕ ಕ್ಯಾರಿನ್ ಜಾನ್ಸರ್ ರವರು ತಿಳಿಸಿದ್ದಾರೆ.

By: Arshad
Subscribe to Boldsky

ಗರ್ಭಾವಸ್ಥೆಯಲ್ಲಿ ಅಥವಾ ಬಾಣಂತಿತನದ ಅವಧಿಯಲ್ಲಿ ತಾಯಿ ಮೀನಿನ ಎಣ್ಣೆ ಹೆಚ್ಚಿರುವ ಖಾದ್ಯಗಳನ್ನು ಸೇವಿಸಿದರೆ ಇದು ಮಕ್ಕಳಲ್ಲಿ ವಿವಿಧ ಅಲರ್ಜಿಗಳನ್ನು ಉಂಟುಮಾಡದಿರಲು ನೆರವಾಗುತ್ತದೆ. ವಿಶೇಷವಾಗಿ ಅಸ್ತಮಾ, ಎಕ್ಸಿಮಾ, ಜ್ವರ ಮೊದಲಾದವು ಬರದಿರಲು ಸಾಧ್ಯವಾಗುತ್ತದೆ ಎಂದು ಇತ್ತೀಚಿನ ಸಂಶೋಧನೆಗಳು ತಿಳಿಸಿವೆ.

fish
 

ಅಷ್ಟೇ ಅಲ್ಲ, ಮಗುವಿನ ಹನ್ನೊಂದು ತಿಂಗಳು ತುಂಬುವುದಕ್ಕೂ ಮುನ್ನ ಕೊಂಚವೇ ಮೀನು ಮತ್ತು ಮೊಟ್ಟೆಗಳನ್ನು ತಿನ್ನಿಸುವ ಮೂಲಕ ಮಕ್ಕಳ ದೇಹಕ್ಕೆ ಉತ್ತಮ ಪ್ರಮಾಣದ ಒಮೆಗಾ 3 ಕೊಬ್ಬಿನ ಆಮ್ಲಗಳು ಲಭ್ಯವಾಗುತ್ತವೆ. ಇದರಿಂದ ವಿವಿಧ ಬಗೆಯ ಅಲರ್ಜಿಯುಂಟಾಗದಂತಿರಲು ಸಾಧ್ಯವಾಗುತ್ತದೆ ಎಂದು ಕಂಡುಕೊಳ್ಳಲಾಗಿದೆ.

"ಮೀನು ತಿನ್ನುವ ಕುಟುಂಬದ ಮಕ್ಕಳಲ್ಲಿ ಅಲರ್ಜಿ ಕಂಡುಬರುವ ಸಾಧ್ಯತೆ ಕಡಿಮೆ" ಎಂದು ಸ್ವೀಡನ್ನಿನ Chalmers University of Technology ವಿಶ್ವವಿದ್ಯಾಲಯದ ಸಂಶೋಧಕ ಕ್ಯಾರಿನ್ ಜಾನ್ಸರ್ ರವರು ತಿಳಿಸಿದ್ದಾರೆ.

Egg
 

ಇಡಿಯ ಗೋಧಿ ಹಿಟ್ಟಿನ ಖಾದ್ಯ ಮತ್ತು ಮೀನನ್ನು ಸೇವಿಸುವ ಮಕ್ಕಳು ತಮ್ಮ ಜೀವಿತಾವಧಿಯಲ್ಲಿ ಅತಿ ಕಡಿಮೆ ಅಲರ್ಜಿಯಾಗುವ ಸಾಮರ್ಥ ಪಡೆಯುತ್ತಾರೆ. ಇವರ ರಕ್ತದಲ್ಲಿರುವ ಹೆಚ್ಚಿನ ಪ್ರಮಾಣದಲ್ಲಿರುವ ಒಮೆಗಾ 3 ಕೊಬ್ಬಿನ ಆಮ್ಲ ಈ ಸಾಮರ್ಥ್ಯಕ್ಕೆ ಕಾರಣವಾಗಿದೆ.

ಉತ್ತಮ ಆರೋಗ್ಯ ಹೊಂದಿರುವ ನಾಲ್ಕು ತಿಂಗಳ ಮಕ್ಕಳ ರಕ್ತವನ್ನು ಪರಿಶೀಲಿಸಿದಾಗ ಇತರ ಮಕ್ಕಳಿಗಿಂತಲೂ ಈ ಮಕ್ಕಳ ರಕ್ತದಲ್ಲಿ ಹೆಚ್ಚಿನ ಪ್ರಮಾಣದ eicosapentaenoic acid ಅಥವಾ EPA ಎಂಬ ಒಮೆಗಾ 3 ಕೊಬ್ಬಿನ ಆಮ್ಲವಿರುವುದು ಕಂಡುಬಂದಿದೆ.

fish
 

"ಈ ಮಟ್ಟದ ಕೊಬ್ಬಿನ ಆಮ್ಲ ಮಗುವಿನ ರಕ್ತದಲ್ಲಿ ಕಂಡುಬರಲು ಗರ್ಭಾವಸ್ಥೆಯಲ್ಲಿ ತಾಯಿ ಸೇವಿಸಿರುವ ಮೀನೇ ಕಾರಣವಾಗಿದೆ. ಅಷ್ಟೇ ಅಲ್ಲ ಬಾಣಂತಿತನದಲ್ಲಿಯೂ ಮೀನು ಸೇವಿಸುವ ಮೂಲಕ ಮಗು ಉತ್ತಮ ಪ್ರಮಾಣದ ಒಮೆಗಾ 3 ಕೊಬ್ಬಿನ ಆಮ್ಲವನ್ನು ತಾಯಿ ಹಾಲಿನ ಮೂಲಕ ಪಡೆಯುತ್ತದೆ" ಎಂದು ಜಾನ್ಸರ್‌ರವರು ತಿಳಿಸುತ್ತಾರೆ. 

pregnant womem
 

ಮಾಹಿತಿ ಕೃಪೆ: IANS

Story first published: Friday, November 4, 2016, 12:01 [IST]
English summary

Eating Fish May Ward Off Allergies In Kids

Women who consume oily fish while pregnant or during breast-feeding may decrease the risk of their children developing food allergies, asthma, eczemas or hay fever, researchers have found.
Please Wait while comments are loading...
Subscribe Newsletter