ಶಾಲೆಗೆ ಹೋಗುವ ಮಕ್ಕಳಿಗೆ ಇಷ್ಟವಾಗುವ ಬ್ರೇಕ್ ಫಾಸ್ಟ್!

ಇಂದಿನ ಮಕ್ಕಳಿಗೆ ಅಮ್ಮನ ಅಡುಗೆಗಿಂತಲೂ ಟೀವಿ ಜಾಹೀರಾತುಗಳ ಮೂಲಕ ಲಭ್ಯವಾಗುವ ಸಿದ್ಧ ಆಹಾರಗಳೇ ಹೆಚ್ಚು ಇಷ್ಟ. ಹಾಗಾಗಿ ಮಕ್ಕಳಿಗೆ ಆರೋಗ್ಯಕರ ಊಟತಿನ್ನಿಸಲು,ತಾಯಿಯಂದಿರು ಹೆಣಗಾಡಬೇಕಾಗುತ್ತದೆ....

By: manu
Subscribe to Boldsky

ಇಂದಿನ ಮಕ್ಕಳಿಗೆ ಹಿಂದಿನವರಿಗೆ ಇಲ್ಲದ ಹಲವಾರು ಸೌಲಭ್ಯಗಳಿವೆ. ಇದರಲ್ಲಿ ಪ್ರಮುಖವಾದುದು ಶಾಲಾ ಬಸ್. ಹಿಂದೆಲ್ಲಾ ಮಕ್ಕಳು ನಡೆದೇ ಶಾಲೆಗೆ ಹೋಗುತ್ತಿದ್ದರು. ಸ್ವಾಭಾವಿಕವಾಗಿ ದಿನದ ಅಗತ್ಯದ ವ್ಯಾಯಾಮವೂ ಇದರಿಂದ ದೊರಕಿದಂತಾಗುತ್ತಿತ್ತು. ಅಲ್ಲದೇ ಊಟವನ್ನೂ ಮನೆಯಿಂದಲೇ ಕೊಂಡೊಯ್ಯಬೇಕಾದ ಅಥವಾ ಮಧ್ಯಾಹ್ನದ ಊಟಕ್ಕೆ ಮನೆಗೆ ಬರಬೇಕಾದ ಕಾರಣ ಅಮ್ಮನ ಅಡುಗೆಯೇ ಸದಾ ಸಿಗುತ್ತಿತ್ತು.

Breakfast Recipes
 

ಆದರೆ ಇಂದಿನ ಮಕ್ಕಳಿಗೆ ಅಮ್ಮನ ಅಡುಗೆಗಿಂತಲೂ ಟೀವಿ ಜಾಹೀರಾತುಗಳ ಮೂಲಕ ಲಭ್ಯವಾಗುವ ಸಿದ್ಧ ಆಹಾರಗಳೇ ಹೆಚ್ಚು ಇಷ್ಟ. ಹಾಗಾಗಿ ಮಕ್ಕಳಿಗೆ ಆರೋಗ್ಯಕರ ಊಟ ತಿನ್ನಿಸಲು, ಅದರಲ್ಲಿಯೂ ವಿಶೇಷವಾಗಿ ಶಾಲಾ ಬಸ್ ಬರುವ ಧಾವಂತದ ಅವಧಿಯಲ್ಲಿ ಉಪಾಹಾರ ತಿನ್ನಿಸಲು ತಾಯಿಯಂದಿರು ಹೆಣಗಾಡಬೇಕಾಗುತ್ತದೆ. ಕೊನೆಗೆ ಸೋಲೊಪ್ಪಿಕೊಂಡು ಮಗು ಬಯಸುವ ಜಾಮ್, ಬ್ರೆಡ್, ನ್ಯೂಡಲ್ಸ್ ಮೊದಲಾದವುಗಳಿಗೆ ಶರಣಾಗುತ್ತಾರೆ.   ಮಕ್ಕಳ ಬುದ್ಧಿ ಶಕ್ತಿ ಹೆಚ್ಚಲು ನೀಡಬೇಕಾದ ಆಹಾರಗಳು

ಆದರೆ ಮಕ್ಕಳಿಗೂ ಇಷ್ಟವಾಗುವ, ಆರೋಗ್ಯಕರ ಮತ್ತು ಪೌಷ್ಟಿಕವಾದ ಉಪಾಹಾರವನ್ನು ನಿಮ್ಮ ಕೈಯಾರೆ ತಯಾರಿಸಿದರೆ? ಕೆಲವು ತಾಯಂದಿರು ಈಗಾಗಲೇ ಇಂಟರ್ನೆಟ್ ಜಾಲಾಡಿ ಕೆಲವು ಉಪಾಹಾರಗಳನ್ನು ಪ್ರಯತ್ನಿಸಿ ಸೋತಿರಬಹುದು. ಈ ನಿಟ್ಟಿನಲ್ಲಿ ಕೆಲವು ಉಪಾಹಾರಗಳು ನಿಮ್ಮ ನೆರವಿಗೆ ಬರುತ್ತಿವೆ.

ಇಂದು ನೀಡುತ್ತಿರುವ ಈ ಸ್ವಾದಿಷ್ಟ ಉಪಾಹಾರಗಳು ಪ್ರತಿ ಮನೆಯ ಮಕ್ಕಳೂ ಇಷ್ಟಪಡುವುದರಲ್ಲಿ ಸಂದೇಹವೇ ಇಲ್ಲ. ಅಲ್ಲದೇ ಅಲ್ಪವೇ ಸಮಯದಲ್ಲಿ ತಯಾರಾಗಬಹುದಾದುದರಿಂದ ಬೆಳಗ್ಗಿನ ಧಾವಂತದಲ್ಲಿಯೂ ತಯಾರಿಸಬಹುದು. ಬನ್ನಿ, ನಿಮ್ಮ ಮಕ್ಕಳನ್ನು ಆರೋಗ್ಯವಂತರಾಗಿಸುವ ಈ ಉಪಾಹಾರಗಳ ಬಗ್ಗೆ ತಿಳಿಯೋಣ:

veg sandwich
 

ಮೊಟ್ಟೆಯ ಮಿನಿ ಪಿಜ್ಜಾ
ಪಿಜ್ಜಾ ಎಂದರೆ ಮಕ್ಕಳಿಗೆ ತುಂಬಾ ಇಷ್ಟ. ಇದಕ್ಕೆ ಹೆಚ್ಚು ಸಮಯ ತಗಲುವ ಸಾಮಾಗ್ರಿ ಎಂದರೆ ಬೇಯಿಸಿದ ಮೊಟ್ಟೆ. ಈ ಸಮಯವನ್ನುಳಿಸಲು ಮೊದಲು ಕೆಲವು ಮೊಟ್ಟೆಗಳನ್ನು ಒಳಗಿನ ಹಳದಿ ಭಾಗ ಕಪ್ಪಾದಗಷ್ಟು ಬೇಯಿಸಿ (ಹೀಗೆ ಮಾಡಲು ಕುದಿಯುವ ನೀರಿನಲ್ಲಿ ಎರಡು ನಿಮಿಷಕ್ಕೂ ಕಡಿಮೆ ಸಮಯ ಇಟ್ಟರೆ ಸಾಕು) ಸಿಪ್ಪೆ ಸುಲಿಯದೇ ಫ್ರಿಜ್ಜಿನಲ್ಲಿಡಿ.   ಮುದ್ದಿನ ಮಗುವಿಗೆ 'ಪೀನಟ್ ಬಟರ್' ತಿನ್ನಿಸುವ ಮುನ್ನ....

ಹೀಗೆ ಇಟ್ಟ ಮೊಟ್ಟೆಗಳನ್ನು ನಾಲ್ಕೈದು ದಿನಗಳವರೆಗೆ ಇರಿಸಬಹುದು. ಪಿಜ್ಜಾ ತಯಾರಿಸಲು ಎರಡು ಬೇಯಿಸಿದ ಮೊಟ್ಟೆಗಳನ್ನು ಸುಲಿದು ತೆಳುಗಾಗಿ ಅಡ್ಡಬಿಲ್ಲೆಗಳನ್ನಾಗಿಸಿ. ಇದಕ್ಕೂ ಮೊದಲು ಮಿನಿ ಪಿಜ್ಜಾದ ಮಫಿನ್ ಅಥವಾ ನಸುವಾಗಿ ಹುರಿದ ಬನ್ ಒಂದನ್ನು ತಯಾರಿಸಿಟ್ಟುಕೊಳ್ಳಿ. ಈ ಬನ್ ಇಡಿಯ ಗೋಧಿಯ ಹಿಟ್ಟಿನಿಂದ ಮಾಡಿದ್ದಿದ್ದರೆ ಉತ್ತಮ.

Egg
 

ಸಾಧ್ಯವಾದರೆ ಗೋಧಿಹಿಟ್ಟಿನ ರೊಟ್ಟಿಯನ್ನು ಒಂದು ದಿನ ಮೊದಲೇ ದಪ್ಪನಾಗಿ ಲಟ್ಟಿಸಿಟ್ಟುಕೊಳ್ಳಬಹುದು. ಉಪಾಹಾರಕ್ಕೆ ಮುನ್ನ ರೊಟ್ಟಿಯನ್ನು ಬೇಯಿಸಿ ಅಥವಾ ಬನ್ ಅನ್ನು ನಸುವಾಗಿ ಕೆಂಪಗಾಗುವಷ್ಟು ಕಾವಲಿಯ ಮೇಲೆ ಹುರಿದು ಇದರ ಮೇಲೆ ಮೊಟ್ಟೆ, ತೆಳುವಾಗಿ ಕತ್ತರಿಸಿದ ಟೊಮಾಟೋ, ಕೊಂಚ ಆಲಿವ್ ಎಣ್ಣೆ ಮತ್ತು ತುರಿದ ಮೊಜರೆಲ್ಲಾ ಚೀಸ್ ಮೂಲಕ ಅಲಂಕರಿಸಿ ಮತ್ತೊಮ್ಮೆ ಕಾವಲಿಯ ಮೇಲಿಟ್ಟು ಮುಚ್ಚಳ ಮುಚ್ಚಿ ಹುರಿಯಿರಿ. ಟೊಮಾಟೋ ಸಾಸ್ ಜೊತೆಗೆ ಈ ಪಿಜ್ಜಾವನ್ನು ಮಕ್ಕಳು ಬಹಳ ಇಷ್ಟಪಟ್ಟು ತಿನ್ನುತ್ತಾರೆ.

banana smoothie
 

ಹಣ್ಣುಗಳ ಸ್ಮೂಥಿ
ಮಕ್ಕಳು ಚಪ್ಪರಿಸಿ ಸವಿಯುವ ಆಹಾರಗಳಲ್ಲಿ ಹಣ್ಣುಗಳ ಸ್ಮೂಥಿ ಸಹಾ ಒಂದು. ಇದನ್ನು ತಯಾರಿಸಲು ಮಕ್ಕಳು ಇಷ್ಟಪಡುವ ಬಾಳೆಹಣ್ಣು, ಅನಾನಾಸ್, ಹಾಲು, ಮೊಸರು ಮತ್ತು ಕೊಂಚ ಮೊಸರು ಸಾಕು. ಮಕ್ಕಳು ಶಾಲೆಗೆ ತಯಾರಾಗುತ್ತಿದ್ದಂತೆಯೇ ಮಿಕ್ಸಿಯಲ್ಲಿ ಫ್ರಿಜ್ಜಿನಲ್ಲಿಟ್ಟಿದ್ದ ತಾಜಾ ತಣ್ಣನೆಯ ಹಾಲು, ಮೊಸರು, ಕೊಂಚ ಸಕ್ಕರೆ ಅಥವಾ ಬೆಲ್ಲ ಎಲ್ಲವನ್ನೂ ಸೇರಿಸಿ ಗೊಟಾಯಿಸಿ. ಮಗು ತಯಾರಾಗಿ ಬರುತ್ತಿದ್ದಂತೆಯೇ ಸಿದ್ಧವಾಗಿರುವ ಕಲಾತ್ಮಕ ಲೋಟದಲ್ಲಿರುವ ಸ್ಮೂಥಿಯನ್ನು ಮಕ್ಕಳು ಕೇಳದೆಯೇ ಕುಡಿಯಲು ತಯಾರಾಗುತ್ತಾರೆ.

Granola Yogurt Breakfast
 

ಗ್ರಾನೋಲಾ ಮೊಸರು
ಒಂದು ಬೋಗುಣಿಯಲ್ಲಿ ಕೆಲವು ಸೇಬುಗಳ ತುಂಡುಗಳನ್ನು ಮತ್ತು ಅಕ್ರೋಟಿನ ಚಿಕ್ಕ ತುಂಡುಗಳನ್ನು ಸೇರಿಸಿ. ಇದಕ್ಕೆ ಒಂದು ಕಪ್ ಮೊಸರು ಸೇರಿಸಿ ಇದರ ಮೇಲೆ ಮೇಪಲ್ ಸಿರಪ್ ಸೇರಿಸಿ ಮಿಶ್ರಣ ಮಾಡಿ. ಇದರ ಮೇಲೆ ಸಿದ್ಧರೂಪದಲ್ಲಿ ಸಿಗುವ ಗ್ರಾನೋಲಾ ಅಥವಾ ನೀವೇ ಆಯ್ದ ಒಣಫಲಗಳನ್ನು ಚಿಕ್ಕ ಚಿಕ್ಕದಾಗಿ ತುಂಡರಿಸಿದ ಒಣಫಲಗಳನ್ನು ಸೇರಿಸಿ ಮಿಶ್ರಣ ಮಾಡಿ. ಈ ಉಪಾಹರ ಅತ್ಯಂತ ಪೌಷ್ಟಿಕವಾಗಿದ್ದು ಮಕ್ಕಳು ಇಷ್ಟಪಟ್ಟು ತಿನ್ನುವ ಆಯ್ಕೆಯಾಗಿದೆ.     ಏನೇ ಹೇಳಿ, ಉಪಹಾರ ಶಿಸ್ತಿನ ಸಿಪಾಯಿಯಂತೆ ಇರಲಿ!

Story first published: Tuesday, November 15, 2016, 11:12 [IST]
English summary

Easy Kid Friendly Breakfast Recipes

The following are some of the most sought-after breakfast recipes for kids, which will surely help you win your kids' hearts. Take a look at them and do make sure to include them.
Please Wait while comments are loading...
Subscribe Newsletter