ಮಕ್ಕಳಿಗೆ ಲೈಂಗಿಕ ದೌರ್ಜನ್ಯದ ಜಾಗೃತಿ ಮೂಡಿಸುವುದು ಅತ್ಯಗತ್ಯ

ಲೈಂಗಿಕ ದೌರ್ಜನ್ಯವು ಈಗ ಸಮಾಜದ ಅತಿ ದೊಡ್ಡ ಪಿಡುಗಾಗಿದೆ. ದುರದೃಷ್ಟವಶಾತ್ ಲೈಂಗಿಕ ದೌರ್ಜನ್ಯಕ್ಕೆ ಮಕ್ಕಳೇ ಇತ್ತೀಚೆಗೆ ಬಲಿಪಶುವಾಗುತ್ತಿದ್ದಾರೆ. ಅದು ಗಂಡು ಅಥವಾ ಹೆಣ್ಣು ಮಕ್ಕಳು ಎಂಬ ಬೇಧ ಭಾವವಿಲ್ಲದೆ ಎಲ್ಲರೂ ಬಲಿಯಾಗುತ್ತಿದ್ದಾರೆ.

By: Jaya subramanya
Subscribe to Boldsky

ಇತ್ತೀಚಿನ ದಿನಗಳಲ್ಲಿ ಲೈಂಗಿಕ ದೌರ್ಜನ್ಯವು ಎಲ್ಲಾ ವಯಸ್ಸಿನವರ ಮೇಲೆ ನಡೆಯುತ್ತಿದೆ. ತಮ್ಮ ಕಾಮ ತೃಷೆಯನ್ನು ತೀರಿಸಲಿಕ್ಕಾಗಿ ದುರುಳರು ಚಿಕ್ಕ ಮಕ್ಕಳ ಮೇಲೆ ದೌರ್ಜನ್ಯವನ್ನು ಎಸಗಿ ಅವರನ್ನು ಮರಣ ಕೂಪಕ್ಕೆ ನೂಕುತ್ತಿದ್ದಾರೆ. ಹೊರ ಜಗತ್ತಿನ ಕರಾಳ ಮುಖವನ್ನು ಅರಿಯದ ಈ ಪುಟ್ಟ ಕಂದಮ್ಮಗಳು ಏನೆಂದು ಅರಿಯುವ ಮುನ್ನವೇ ಪಾತಕಿಗಳ ಕೈಯಲ್ಲಿ ನರಳುತ್ತಾರೆ.   ಲೈಂಗಿಕ ದೌರ್ಜನ್ಯ-ಮಕ್ಕಳನ್ನು ಜಾಗೃತಿಗೊಳಿಸುವುದು ಹೇಗೆ?  

Child About Sexual Abuse
 

ಶಾಲಾ ಕಾಲೇಜುಗಳಲ್ಲಿ ಇತ್ತೀಚೆಗಂತೂ ಇಂತಹ ಪ್ರಕರಣಗಳು ಕೊಂಚ ಹೆಚ್ಚಾಗಿಯೇ ದಾಖಲಾಗುತ್ತಿದ್ದು ಈ ದಿಸೆಯಲ್ಲಿ ಪೋಷಕರು ಮಕ್ಕಳಿಗೆ ಈ ಕುರಿತು ಅರಿವನ್ನು ನೀಡಬೇಕಾಗಿದೆ. ಇಂದಿನ ಲೇಖನದಲ್ಲಿ ಮಕ್ಕಳನ್ನು ಈ ಕುರಿತು ತಿಳುವಳಿಕೆಯನ್ನು ನೀಡುವುದು ಹೇಗೆ ಎಂಬುದನ್ನು ವಿಷದವಾಗಿ ಅರಿತುಕೊಳ್ಳೋಣ.... 

Child About Sexual Abuse
 

ಸಲಹೆ#1
ನಿಮ್ಮ ಮಕ್ಕಳ ವಯಸ್ಸನ್ನು ಆಧರಿಸಿ ಅವರಿಗೆ ಸಂಪೂರ್ಣ ಲೈಂಗಿಕ ಶಿಕ್ಷಣದ ತಿಳುವಳಿಕೆಯನ್ನು ನೀಡಿ. ದೌರ್ಜನ್ಯ ಎಂದರೇನು ಎಂಬುದನ್ನು ಪೂರ್ಣವಾಗಿ ಅವರು ತಿಳಿದುಕೊಳ್ಳುವಂತೆ ಮಾಡಿ.

ಸಲಹೆ #2
ನಿಮ್ಮ ಮಗುವಿನೊಂದಿಗೆ ಸ್ನೇಹಿತರಂತೆ ವರ್ತಿಸುವುದು ಅತೀ ಅಗತ್ಯವಾಗಿದೆ. ಇಂತಹ ದೌರ್ಜನ್ಯಕ್ಕೆ ಒಳಗಾದ ಮಕ್ಕಳಲ್ಲಿ ಪೋಷಕರು ಧೈರ್ಯವನ್ನು ತುಂಬಬೇಕು ಮತ್ತು ಅವರು ಭಯಪಡದಂತೆ ಅವರಿಗೆ ತಿಳಿಸಿ ಹೇಳಬೇಕು.

Child About Sexual Abuse
 

ಸಲಹೆ #3
ಇಂತಹ ಪ್ರಕರಣಗಳ ಕುರಿತು ಅವರಿಗೆ ಸಂಪೂರ್ಣ ಜ್ಞಾನವನ್ನು ನೀಡಬೇಕು. ಅಂತೆಯೇ ಈ ಕೃತ್ಯದಲ್ಲಿ ಅವರುಗಳ ಪಾತ್ರ ಇಲ್ಲ, ಅವರುಗಳು ನಿರ್ದೋಷಿಗಳು ಎಂಬುದಾಗಿ ಅವರಿಗೆ ಮನನ ಮಾಡಿಸಿ.

Child About Sexual Abuse
 

ಸಲಹೆ #4
ಅಪರಿಚತರೊಂದಿಗೆ ಮಾತನಾಡುವುದು, ಅವರು ನೀಡಿದ ವಸ್ತುಗಳನ್ನು ತೆಗೆದುಕೊಳ್ಳದೇ ಇರುವುದು, ಅವರು ಕರೆದಲ್ಲಿಗೆ ಹೋಗುವುದು ಮೊದಲಾದ ಕೃತ್ಯಗಳನ್ನು ಮಾಡಬಾರದು ಎಂಬುದಾಗಿ ಪೋಷಕರು ಮಕ್ಕಳಿಗೆ ತಿಳಿಸಿಕೊಡಬೇಕು. ಮಕ್ಕಳನ್ನು ಆದಷ್ಟು ಒಬ್ಬಂಟಿಗರಾಗಿ ಬಿಡದಿರಿ.

Child About Sexual Abuse
 

ಸಲಹೆ #5
ನಿಮ್ಮ ಮಕ್ಕಳಿಗೆ ಅವರ ದೇಹದ ಸ್ಥಿತಿಗತಿಗಳ ಬಗ್ಗೆ ತಿಳಿಸಿಕೊಡಿ. ಕೆಲವೊಂದು ಗುಪ್ತ ಅಂಗಗಳ ಬಗ್ಗೆ ಮಾಹಿತಿ ನೀಡಿ. ಇದರಿಂದ ಮುಂದೆ ಆಗಲಿರುವ ಅನಾಹುತವನ್ನು ಹೇಗೆ ಎದುರಿಸಬೇಕು ಎಂಬ ಅರಿವು ಅವರಲ್ಲಿ ಜಾಗೃತಗೊಳ್ಳುತ್ತದೆ.

Child About Sexual Abuse
 

ಸಲಹೆ#6
ನಿಮ್ಮ ಮಕ್ಕಳು ನಿಮ್ಮೊಂದಿಗೆ ಮುಕ್ತವಾಗಿ ಮಾತನಾಡುವಂತೆ ನೋಡಿಕೊಳ್ಳಿ. ಮಕ್ಕಳು ಬೇರೆಯವರೊಂದಿಗೆ ತಮಗಾದ ನೋವನ್ನು ಹಂಚಿಕೊಳ್ಳದಂತೆ ತಿಳಿಸಿ. ಇದರಿಂದ ಬೇರೆಯವರು ಮಕ್ಕಳನ್ನು ಕುಕೃತ್ಯಗಳಿಗೆ ಬಳಸಿಕೊಳ್ಳುವಂತ ಸಾಧ್ಯತೆ ಇರುತ್ತದೆ.

Child About Sexual Abuse
 

ಸಲಹೆ#7
ಅಪರಿಚಿತರು ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸುವಾಗ ಅದನ್ನು ನಿರಾಕರಿಸುವುದು, ವಿರೋಧಿಸುವುದು, ಅಲ್ಲಿರುವ ಇತರರ ಸಹಾಯವನ್ನು ಪಡೆದುಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಿಕೊಡಿ.

Story first published: Monday, October 24, 2016, 12:36 [IST]
English summary

Best Tips To Educate Your Child About Sexual Abuse

Whether we like to admit it or not, the world is crueler than we think. Even innocent children are not safe anymore, so it is very important to make your child aware about sexual abuse and teach him/her a few safety tips. Every day, when we watch or read the news, we come across at least one incident in which a young child has been a victim of sexual abuse.
Please Wait while comments are loading...
Subscribe Newsletter