For Quick Alerts
ALLOW NOTIFICATIONS  
For Daily Alerts

ಹೆತ್ತವರೇ ಮಕ್ಕಳ ಪಾಲಿಗೆ ಮೊದಲ ರೋಲ್ ಮಾಡೆಲ್...

By Jaya Subramanya
|

ಮಕ್ಕಳು ಹೆತ್ತವರನ್ನು ಹಲವಾರು ರೀತಿಯಲ್ಲಿ ತಮ್ಮ ರೋಲ್ ಮಾಡೆಲ್ ಆಗಿ ಇರಿಸಿಕೊಂಡಿರುತ್ತಾರೆ. ತಾವು ತಮ್ಮ ತಂದೆ ತಾಯಿಗಳಂತೆಯೇ ಜೀವನದಲ್ಲಿ ಅತ್ಯುತ್ತಮವಾದ ಅಂಶಗಳನ್ನು ಅಳವಡಿಸಿ ಕೊಂಡಿರಬೇಕೆನ್ನುವ ಸಿದ್ಧಾಂತಗಳನ್ನು ಅವರುಗಳು ಮೈಗೂಡಿಸಿಕೊಂಡಿರುತ್ತಾರೆ. ತಂದೆಯ ಆದರ್ಶ ಗುಣಗಳೇ, ಮಕ್ಕಳ ಭವಿಷ್ಯಕ್ಕೆ ರಹದಾರಿ

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತಿನಂತೆ ಪೋಷಕರಲ್ಲಿರುವ ಒಳ್ಳೆಯ ಗುಣಗಳು ಮತ್ತು ಕೆಟ್ಟ ಗುಣಗಳನ್ನು ಮಕ್ಕಳು ಅರಿತುಕೊಂಡು ಅದನ್ನು ಜೀವನದಲ್ಲಿ ಪರಿಪಾಲಿಸುವ ತಿಳುವಳಿಕೆ ಅವರಲ್ಲಿ ಅಚ್ಚೊತ್ತಿಕೊಂಡಿರುತ್ತದೆ. ಒಳ್ಳೆಯ ಗುಣಗಳನ್ನು ಮಕ್ಕಳು ಹೇಗೆ ಕಲಿತುಕೊಳ್ಳುತ್ತಾರೋ ಅಂತೆಯೇ ದುರ್ಗುಣಗಳನ್ನು ಅವರು ಮೈಗೂಡಿಸಿಕೊಳ್ಳುವುದು ಬೇಗನೇ ಆಗಿರುತ್ತದೆ. ನಿಮ್ಮ ದುರ್ಗುಣಗಳನ್ನು ಮಕ್ಕಳೆದುರು ತೋರ್ಪಡಿಸಬೇಡಿ!

ತಮ್ಮ ತಂದೆ ಅಥವಾ ತಾಯಿ ಧೂಮಪಾನ ಮದ್ಯಪಾನ ಸೇವಿಸುತ್ತಿದ್ದಲ್ಲಿ, ನಿತ್ಯವೂ ಜಗಳವಾಡುತ್ತಿದ್ದಲ್ಲಿ, ಕೆಟ್ಟ ಪದಗಳನ್ನು ಬಳಕೆ ಮಾಡುತ್ತಿದ್ದಲ್ಲಿ, ಅನ್ಯೋನ್ಯತೆಯ ಕೊರತೆ ಇವೆಲ್ಲವೂ ಮಕ್ಕಳ ಮೇಲೆ ನೇರವಾಗಿ ಪರಿಣಾಮ ಬೀರಬಲ್ಲುದು. ಇಂದಿನ ಲೇಖನದಲ್ಲಿ ನಿಮ್ಮ ಮಕ್ಕಳು ನಿಮ್ಮಿಂದ ಕಲಿತುಕೊಳ್ಳಬಹುದಾದ ದುರ್ಗುಣಗಳ ಪಟ್ಟಿಯನ್ನು ನೀಡುತ್ತಿದ್ದು ಅವುಗಳು ಆದಷ್ಟು ಮಕ್ಕಳ ಎದುರು ಬರದಂತೆ ನೋಡಿಕೊಳ್ಳಿ.

ಕೀಳರಿಮೆ

ಕೀಳರಿಮೆ

ನಮ್ಮ ಸೌಂದರ್ಯ, ವೃತ್ತಿ, ಭವಿಷ್ಯದ ಬಗೆಗೆ ಸದಾ ಕೀಳರಿಮೆಯನ್ನು ಹೊಂದಿಕೊಂಡಿರುತ್ತೇವೆ. ಇದನ್ನು ಮಕ್ಕಳೂ ಮೈಗೂಡಿಸಿಕೊಂಡಲ್ಲಿ ಅವರಲ್ಲಿ ಮಾನಸಿಕ ಸಮಸ್ಯೆಗಳು ಎದುರಾಗಬಹುದಾದ ಸಾಧ್ಯತೆ ಇರುತ್ತದೆ. ಖಿನ್ನತೆ ಅವರಲ್ಲಿ ಬೆಳೆದು ಊಟ ತಿಂಡಿಯನ್ನು ತ್ಯಜಿಸುವ ಸಂಭವವಿರುತ್ತದೆ.

ಗ್ಯಾಜೆಟ್‎ಗಳ ಹೆಚ್ಚುವರಿ ಬಳಕೆ

ಗ್ಯಾಜೆಟ್‎ಗಳ ಹೆಚ್ಚುವರಿ ಬಳಕೆ

ಹೆಚ್ಚಿನ ಮಕ್ಕಳ ಪೋಷಕರು ಸ್ಮಾರ್ಟ್‎ಫೋನ್‎ಗಳಲ್ಲೇ ಕಾಲ ಕಳೆಯುತ್ತಿರುತ್ತಾರೆ. ಸಂದೇಶ ರವಾನೆ, ಇಮೇಲ್, ಫೋನ್‎ನಲ್ಲಿ ಮಾತನಾಡುವುದು ಹೀಗೆ ಮೊಬೈಲ್‎ನಲ್ಲೇ ಹಲವಾರು ಕಾರ್ಯಗಳನ್ನು ನಡೆಸುತ್ತಿರುತ್ತಾರೆ. ಆದರೆ ನಿಮ್ಮ ಈ ಅಪರಿಮಿತ ಫೋನ್ ಬಳಕೆ ಮಕ್ಕಳ ಮೇಲೆ ಹೇಗೆ ದುಷ್ಪರಿಣಾಮವನ್ನು ಬೀರಬಹುದು ಎಂಬುದನ್ನು ನೀವು ಮನಗಂಡಿದ್ದೀರಾ? ನಿಮ್ಮನ್ನು ನೋಡಿ ಅವರುಗಳೂ ಇದೇ ಅಭ್ಯಾಸವನ್ನು ಮೈಗೂಡಿಸಿಕೊಂಡಲ್ಲಿ ಅವರ ಅಧ್ಯಯನದ ಮೇಲೆ ಇದು ಕೆಟ್ಟ ಪ್ರಭಾವವನ್ನು ಉಂಟುಮಾಡಬಹುದು.

ಸ್ತ್ರೀ ಪುರುಷ ಭೇದ ಭಾವ

ಸ್ತ್ರೀ ಪುರುಷ ಭೇದ ಭಾವ

ತಮ್ಮ ಮಕ್ಕಳ ಮೇಲೆ ಕೆಲವು ಹೆತ್ತವರು ಲಿಂಗ ತಾರತಮ್ಯವನ್ನು ಹೇರುತ್ತಾರೆ. ಉದಾಹರಣೆಗೆ ಹೆಣ್ಣು ಮಕ್ಕಳು ಕ್ರೀಡೆಗಳಲ್ಲಿ ಭಾಗವಹಿಸಬಾರದು, ಹುಡುಗರು ಭಾವನೆಗಳನ್ನು ತೋರ್ಪಡಿಸಬಾರದು, ಹೀಗೆ ಮುಂತಾದ ನಿಯಮಗಳು ಅವರುಗಳ ಬೆಳವಣಿಗೆಯನ್ನು ಕುಂಠಿತಗೊಳಿಸಬಹುದಾಗಿದೆ.

ಧೂಮಪಾನ ಮತ್ತು ಮದ್ಯಪಾನ

ಧೂಮಪಾನ ಮತ್ತು ಮದ್ಯಪಾನ

ಹೆಚ್ಚುವರಿ ಕುಡಿತ ಮತ್ತು ಧೂಮಪಾನ ನಿಮ್ಮ ಮಕ್ಕಳಲ್ಲಿ ಅವರುಗಳು ಈ ಚಟವನ್ನು ಅಳವಡಿಸುವಂತೆ ಮಾಡುತ್ತದೆ. ಸಣ್ಣ ಹರೆಯದಲ್ಲೇ ಅವರುಗಳು ಈ ಚಟಗಳ ದಾಸರಾಗಿ ಬಿಡುತ್ತಾರೆ, ನಂತರ ಆರೋಗ್ಯ ಸಮಸ್ಯೆಗಳನ್ನು ಅವರುಗಳು ಅನುಭವಿಸಬೇಕಾಗುತ್ತದೆ.

ಹೆಚ್ಚು ಸ್ಪರ್ಧಾತ್ಮಕವಾಗಿರುವುದು

ಹೆಚ್ಚು ಸ್ಪರ್ಧಾತ್ಮಕವಾಗಿರುವುದು

ಮಕ್ಕಳನ್ನು ಇನ್ನೊಬ್ಬರ ಎದುರಿಗೆ ಕೀಳಾಗಿಸುವುದು ಅವರ ಪಠ್ಯೇತರ ಚಟುವಟಿಕೆಗಳನ್ನು ಲೇವಡಿ ಮಾಡುವುದು ಮುಂತಾದ ಗುಣಗಳಿಂದ ನಿಮ್ಮ ಮಕ್ಕಳು ಕೀಳರಿಮೆಯನ್ನು ಬೆಳೆಸಿಕೊಳ್ಳಬಹುದಾಗಿದೆ. ತಾವು ಮಾಡುತ್ತಿರುವುದೆಲ್ಲಾ ತಪ್ಪೆಂಬ ಭಾವನೆ ಅವರ ಮನದಲ್ಲಿ ಮೂಡಬಹುದು ಅಂತೆಯೇ ಅವರಲ್ಲಿ ಮಾನಸಿಕ ಋಣಾತ್ಮಕತೆಯನ್ನು ಇದು ಉಂಟುಮಾಡಬಹುದಾಗಿದೆ.

ವಾದ ವಿವಾದ

ವಾದ ವಿವಾದ

ನಿಮ್ಮ ಮಕ್ಕಳ ಎದುರಿಗೆ ಕುಟುಂಬ ಸದಸ್ಯರೊಂದಿಗೆ ನೀವು ವಾದ ವಿವಾದಗಳನ್ನು ಮಾಡುತ್ತಿರುವುದು ಮಕ್ಕಳಲ್ಲೂ ಇಂತಹ ಕೆಟ್ಟ ಪ್ರವೃತ್ತಿಯನ್ನು ಬೆಳೆಯುವಂತೆ ಮಾಡುತ್ತದೆ. ತಮ್ಮ ಸ್ನೇಹಿತರೊಂದಿಗೂ ಅವರು ಇಂತಹದ್ದನ್ನೇ ಮಾಡಿ ತಮ್ಮ ವಲಯದಲ್ಲಿ ಕೆಟ್ಟ ಹೆಸರನ್ನು ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ.

ದೈಹಿಕ ಹಿಂಸೆ

ದೈಹಿಕ ಹಿಂಸೆ

ನಿಮ್ಮ ಮಕ್ಕಳನ್ನು ಸಣ್ಣ ಸಣ್ಣ ಕಾರಣಕ್ಕೆ ಹೊಡೆಯುವುದು, ಬೈಯ್ಯುವುದು ಮಾಡುವುದರಿಂದ ಅವರು ನಿಮ್ಮ ಬಗ್ಗೆ ಋಣಾತ್ಮಕವಾಗಿ ಆಲೋಚಿಸಲು ಆರಂಭಿಸುತ್ತಾರೆ. ಇದುವೇ ಅವರು ನಿಮ್ಮ ವಿರುದ್ಧ ತಿರುಗಿ ಬೀಳುವಂತೆ ಮಾಡುವ ಸಾಧ್ಯತೆಯನ್ನೂ ಹುಟ್ಟು ಹಾಕುತ್ತದೆ. ಆದ್ದರಿಂದ ಆದಷ್ಟು ಅವರೊಂದಿಗೆ ಸ್ನೇಹ ಮತ್ತು ಪ್ರೀತಿಯಿಂದ ವರ್ತಿಸಬೇಕಾಗುತ್ತದೆ.

English summary

Bad Habits Of Parents That Affect Their Children

As parents, we may often feel that we know what is best for our children and do not pay much attention to how the kids feel when they look at us behaving in a certain way or following certain habits. So, here is a list of habits that you can avoid, in order to keep your children from being affected negatively.
X
Desktop Bottom Promotion