For Quick Alerts
ALLOW NOTIFICATIONS  
For Daily Alerts

ಶಿಶುವಿನ ಆರೋಗ್ಯ ವೃದ್ಧಿಗೆ 'ಬೆಣ್ಣೆ ಹಣ್ಣುಗಳೇ' ಸಹಕಾರಿ

By Manu
|

ಮಕ್ಕಳು ಬೆಳೆಯಲು ಆರಂಭಿಸಿದಂತೆ ಅವರಿಗೆ ವಿವಿಧ ರೀತಿಯ ಆಹಾರಗಳನ್ನು ನಾವು ನೀಡುತ್ತೇವೆ. ವಿವಿಧ ರೀತಿಯ ಪೋಷಕಾಂಶಗಳನ್ನು ಒಳಗೊಂಡಿರುವಂತಹ ಆಹಾರಗಳನ್ನು ಮಕ್ಕಳಿಗೆ ನೀಡಿದರೆ ಅದರಿಂದ ಅವರ ಬೆಳವಣಿಗೆಯೂ ಸರಿಯಾಗಿ ಆಗುತ್ತದೆ.
ಸಾಮಾನ್ಯವಾಗಿ ಮಕ್ಕಳ ಆಹಾರದಲ್ಲಿ ಹಣ್ಣುಗಳು ಒಳಗೊಂಡಿದ್ದರೆ ಅದರಿಂದ ಅತ್ಯಧಿಕ ಲಾಭವಿದೆ. ಅದರಲ್ಲೂ ಆವಕಾಡೊ ಹಣ್ಣನ್ನು ಮಕ್ಕಳಿಗೆ ಮೊದಲ ಆಹಾರವಾಗಿ ನೀಡಿದರೆ ಅದು ಮಕ್ಕಳ ಆರೋಗ್ಯವನ್ನು ಚೆನ್ನಾಗಿ ಕಾಪಾಡುತ್ತದೆ. ಅಷ್ಟೇ ಅಲ್ಲದೆ ಆರಂಭದಲ್ಲಿ ಮಕ್ಕಳಿಗೆ ಕಡಿಮೆ ಸಿಹಿ ಮತ್ತು ಉಪ್ಪು ಇರುವಂತಹ ಆಹಾರವನ್ನು ನೀಡಿದರೆ ಮುಂದೆ ಅವರು ಸಿಹಿ ಹೆಚ್ಚು ತಿನ್ನುವುದು ತಪ್ಪುತ್ತದೆ.

Avocados Can Be Best First Foods For Babies: Study

ಹಾಗಾಗಿ ಮಕ್ಕಳ ಬೆಳವಣಿಗೆ ಮತ್ತು ಶಕ್ತಿಗೆ ಬೇಕಾಗುವಂತೆ ಕ್ಯಾಲರಿ ಆವಕಾಡೊ (ಬೆಣ್ಣೆ ಹಣ್ಣು) ನಲ್ಲಿ ಇರುವುದರಿಂದ ಇದು ಶಿಶುಗಳಿಗೆ ಅತ್ಯುತ್ತಮ ಆಹಾರವಾಗಿದೆ ಎಂದು ಅಧ್ಯಯನಗಳು ಹೇಳಿವೆ. ಬೆಣ್ಣೆ ಹಣ್ಣು ತಿನ್ನಿ, ವೈದ್ಯರಿಂದ ದೂರವಿರಿ!

ಶಿಶುಗಳು ತಮ್ಮ ಮೊದಲ ಆಹಾರದಲ್ಲಿ ವಿವಿಧ ರೀತಿಯ ರುಚಿ, ವಿನ್ಯಾಸ, ಬಣ್ಣ ಮತ್ತು ಮಿಶ್ರಣವನ್ನು ಅನುಭವಿಸುವುದು ತುಂಬಾ ಮುಖ್ಯ ಎಂದು ಅಮೆರಿಕಾದ ಒಹಿಯೊ ರಾಜ್ಯ ಯೂನಿವರ್ಸಿಟಿಯ ಉಪನ್ಯಾಸಕ ರಾಬರ್ಟ್ ಮುರ್ರೆ ತಿಳಿಸಿದ್ದಾರೆ.

ಇತರ ಹಣ್ಣುಗಳಿಗೆ ಹೋಲಿಸಿದರೆ, ಆವಕಾಡೊ (ಬೆಣ್ಣೆ ಹಣ್ಣು) ಹಣ್ಣಿನಲ್ಲಿ ಒಂದು ಗ್ರಾಂಗಿಂತಲೂ ಕಡಿಮೆ ಸಕ್ಕರೆ ಅಂಶವಿರುವುದರಿಂದ ಮಕ್ಕಳ ಆರೋಗ್ಯಕ್ಕೆ ಸಹಕಾರಿಯಾಗಲಿದೆ ಎಂದು ಅಧ್ಯಯನ ವರದಿ ಮಾಡಿದೆ.

ಆವಕಾಡೊ ವಿನ್ಯಾಸವು ತುಂಬಾ ಮೃದುವಾಗಿರುವ ಕಾರಣದಿಂದ ಶಿಶುಗಳಿಗೆ ಇದನ್ನು ಸುಲಭವಾಗಿ ಜಗಿಯಲು ಮತ್ತು ನುಂಗಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೆ ಕಡಿಮೆ ಸಕ್ಕರೆ ಅಂಶವನ್ನು ಒಳಗೊಂಡಿರುವ ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರವನ್ನು ಶಿಶುಗಳು ಸೇವನೆ ಮಾಡಬೇಕು ಎಂದು ನ್ಯೂಟ್ರಿಯಂಟ್ಸ್ ಜರ್ನಲ್‌ನಲ್ಲಿ ಪ್ರಕಟವಾಗಿರುವ ವರದಿಗಳು ಹೇಳಿವೆ. ಮೃದು ಮತ್ತು ಹೊಳಪಿನ ತ್ವಚೆಗೆ ಬೆಣ್ಣೆ ಹಣ್ಣಿನ ಪೋಷಣೆ

ಮನೆಯಲ್ಲಿ ಶಿಶುಗಳಿಗೆ ನೀಡುವಂತಹ ಆಹಾರ ಮತ್ತು ಹಣ್ಣುಗಳಿಗೆ ಹೋಲಿಸಿದರೆ ಆವಕಾಡೊ ಹಣ್ಣಿನಲ್ಲಿ ಫೋಲೆಟ್, ವಿಟಮಿನ್ ಇ ಮತ್ತು ಲುಟೆನ್‌ನಂತಹ ಪೋಷಕಾಂಶಗಳು ಸಮೃದ್ಧವಾಗಿರುತ್ತದೆ. ಎಂದು ಕೂಡ ಸಂಶೋಧನೆಗಳು ಹೇಳಿವೆ.
ಐಎಎನ್ಎಸ್ ವರದಿ

English summary

Avocados Can Be Best First Foods For Babies: Study

Feeding babies avocados, which has a neutral flavour, soft consistency and nutrient density, can help in boosting their growth and development, says a study, suggesting that the fruit can be used as a first food for infants. Babies' ideal first foods should have a low-to-moderate sweet and salty flavour profile to avoid early preferences for sweet foods.
X
Desktop Bottom Promotion