For Quick Alerts
ALLOW NOTIFICATIONS  
For Daily Alerts

ಕೇಳಿ ಇಲ್ಲಿ, ಮಕ್ಕಳೆದುರು ಧೂಮಪಾನ ಮಾಡಬೇಡಿ

By Arshad
|

ಎಪ್ಪತ್ತರ ದಶಕದಲ್ಲಿ ಪ್ರತಿಷ್ಠೆಯ ಸಂಕೇತವಾಗಿದ್ದ ಧೂಮಪಾನ ಇಂದು ವ್ಯಸನದ ಸಂಕೇತವಾಗಿದೆ. ಮಾಧ್ಯಮ ಮತ್ತು ಹಿತೈಷಿಗಳ ಹಿತವಚನಗಳಿಂದ ಪ್ರಭಾವಿತರಾಗಿ ಎಷ್ಟೋ ಜನರು ಧೂಮಪಾನವನ್ನು ಬಿಟ್ಟಿದ್ದಾರೆ ಅಥವಾ ಬಿಡುವ ಬಗ್ಗೆ ಯೋಚಿಸುತ್ತಿದ್ದಾರೆ. ಆದರೆ ಇಂದಿಗೂ ಧೂಮಪಾನಿಗಳಲ್ಲಿ ತಮ್ಮ ಧೂಮಪಾನದ ಪ್ರತಿ ಒಂದು ತರಹದ ಉದ್ದಟತನವನ್ನು ಕಾಣಬಹುದು. ಸಾರ್ವಜನಿಕ ಸ್ಥಳದಲ್ಲಿರಲಿ, ಮನೆಯ ಶೌಚಾಲಯದಲ್ಲಿರಲಿ, ಇವರಿಗೆ ಧೂಮ ಬಿಡುವುದೆಂದರೆ ಯಾವುದೇ ಅಳುಕು ಅಂಜಿಕೆಯಿಲ್ಲ.

ಸಾರ್ವಜನಿಕ ಸ್ಥಳದಲ್ಲಿಯೂ ನಾಲ್ಕಾರು ಜನ ಬೈದು ಇನ್ನೇನು ತದುಕಬೇಕು ಎನ್ನುವಾಗಲೇ ಇವರ ಸಿಗರೇಟು ನೆಲ ಕಾಣುವುದು. ಇಂತಹವರ ನಡವಳಿಕೆಯಿಂದ ಪರೋಕ್ಷವಾಗಿ ಧೂಮವನ್ನು ಸೇವಿಸಿದ ಕಾರಣ ಸಾಮಾನ್ಯವಾಗಿ ವರ್ಷಕ್ಕೆ ಸುಮಾರು ಸಾವಿರ ಜನರು ಸಾಯುತ್ತಿದ್ದಾರೆಂದು ಒಂದು ಸಮೀಕ್ಷೆ ಧೃಢೀಕರಿಸಿದೆ. ಪರೋಕ್ಷ ಧೂಮಪಾನ ಅಥವಾ passive smoking ಎಂದು ಕರೆಯಲಾಗುವ ಈ ಉಪಟಳದ ಪರಿಣಾಮಗಳು ಹಿರಿಯರಿಗಿಂತ ಹೆಚ್ಚಾಗಿ ಮಕ್ಕಳನ್ನೇ ಕಾಡುತ್ತವೆ. ಸರಣಿ ಧೂಮಪಾನಿಗಳ ಕೆಲವೊಂದು ಪ್ರಮುಖ ಲಕ್ಷಣಗಳು

ಸಾಮಾನ್ಯವಾಗಿ ಧೂಮಪಾನಿಗಳು ತಮ್ಮಿಂದ ಹೊರ ಹೊರಟ ಹೊಗೆ ಕಣ್ಣಿಗೆ ಕಾಣಿಸುವಷ್ಟು ದೂರದಲ್ಲಿ ಯಾರಿಗಾದರೂ ತೊಂದರೆ ಕೊಡುತ್ತಿದೆಯೇ ಎಂದು ಗಮನಿಸುತ್ತಾರೆ. ಒಮ್ಮೆ ಅದು ಗಾಳಿಯಲ್ಲಿ ಕರಗಿ ಹೋಯಿತೋ, ಇನ್ನೇನೋ ತೊಂದರೆ ಇಲ್ಲ ಎನ್ನುವಂತೆ ವರ್ತಿಸುತ್ತಾರೆ. ಆದರೆ ಧೂಮಪಾನದ ಹೊಗೆ ಒಂದು ಲಕ್ಷಕ್ಕೆ ಒಂದು ಕಣದಷ್ಟಿದ್ದರೂ ಆರೋಗ್ಯಕ್ಕೆ ಅಪಾಯಕರವಾಗಿದೆ. ಅಂದರೆ ಒಂದು ಸಿಗರೇಟಿನಿಂದ ಹೊರಹೊಮ್ಮಿದ ಹೊಗೆ ಸುಮಾರು ಐವತ್ತು ಮೀಟರ್ ವ್ಯಾಸದ ವೃತ್ತಾಕಾರದಲ್ಲಿರುವಷ್ಟೂ ಗಾಳಿಯನ್ನು ಮಲಿನಗೊಳಿಸುತ್ತದೆ.

ಇನ್ನೊಂದು ಅಪಾಯಕರ ಮಾಹಿತಿ ಎಂದರೆ ಈ ಹೊಗೆ ಅತಿ ಭಾರವೂ ಅಲ್ಲದೆ, ಅತಿ ಹಗುರವೂ ಇಲ್ಲದೇ ಇರುವುದರಿಂದ ನೆಲಮಟ್ಟದಲ್ಲಿಯೇ ಇರುವುದರಿಂದ ಸಾಮಾನ್ಯವಾಗಿ ಉಸಿರಾಡುವ ಎಲ್ಲರ ಆರೋಗ್ಯಕ್ಕೂ ಅಪಾಯಕರವಾಗಿದೆ. ಈ ಹೊಗೆ ಮಕ್ಕಳಿಗೆ ಯಾವ ರೀತಿಯಲ್ಲಿ ಅಪಾಯಕಾರಿಯಾಗಿದೆ ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡಿಯಾದರೂ ಧೂಮಪಾನಿಗಳೇ, ನಿಮ್ಮ ಮಕ್ಕಳಿಗಾಗಿ, ಧೂಮಪಾನವನ್ನು ಬಿಡುವತ್ತ ದೃಢಸಂಕಲ್ಪ ಮಾಡಿ...

ಮಕ್ಕಳಲ್ಲಿ ಥಟ್ಟನೇ ಸಾವಿನ ಸಂಭವವನ್ನು ಹೆಚ್ಚಿಸುತ್ತದೆ!

ಮಕ್ಕಳಲ್ಲಿ ಥಟ್ಟನೇ ಸಾವಿನ ಸಂಭವವನ್ನು ಹೆಚ್ಚಿಸುತ್ತದೆ!

ಮಕ್ಕಳ ಆರೋಗ್ಯ ಬಹಳ ಸೂಕ್ಷ್ಮವಾಗಿದ್ದು ಕೆಲವು ರಾಸಾಯನಿಕಗಳು ಅವರ ಮೆದುಳಿಗೆ ತಲುಪಿದರೆ ವಿಚಿತ್ರ ರೀತಿಯಲ್ಲಿ ಥಟ್ಟನೇ ಸಾವು ಎದುರಾಗುತ್ತದೆ. ಮೆದುಳನ್ನು ಹಾನಿಗೊಳಿಸುವ sudden-infant-death syndrome ಎಂಬ ಸ್ಥಿತಿಗೆ ಒಳಗಾಗಿ ಮಕ್ಕಳು, ಅದರಲ್ಲೂ ಒಂದು ವರ್ಷದ ಆಸುಪಾಸಿನಲ್ಲಿರುವ ಮಕ್ಕಳು ರಾತ್ರಿ ಮಲಗಿದ್ದಲ್ಲಿಯೇ ಭಗವಂತನ ಪಾದ ಸೇರುತ್ತಾರೆ. ಇದಕ್ಕೆ ಕಾರಣವಾಗುವ ರಾಸಾಯನಿಕವಾದ staphylococcal toxin ಎಂಬ ಕಣ ಸಿಗರೇಟಿನಿಂದ ಹೊರಹೊಮ್ಮುವ ಧೂಮದಲ್ಲಿದ್ದು ನಿದ್ದೆಯಲ್ಲಿ ಈ ಕಣವನ್ನು ಮಗು ಉಸಿರಾಡಿದಾಗ ಮಗುವಿನ ಶ್ವಾಸಕೋಶದ ಮೂಲಕ ನೇರ ಮೆದುಳು ತಲುಪುತ್ತದೆ. ಮುಂದೆ ಓದಿ

ಮಕ್ಕಳಲ್ಲಿ ಥಟ್ಟನೇ ಸಾವಿನ ಸಂಭವವನ್ನು ಹೆಚ್ಚಿಸುತ್ತದೆ!

ಮಕ್ಕಳಲ್ಲಿ ಥಟ್ಟನೇ ಸಾವಿನ ಸಂಭವವನ್ನು ಹೆಚ್ಚಿಸುತ್ತದೆ!

ಮಕ್ಕಳ ಮೆದುಳು ಈ ರಾಸಾಯನಿಕದ ವಿಷಪರಿಣಾಮವನ್ನು ಎದುರಿಸಲು ಬೆಳೆದಿರದ ಕಾರಣ ಮೆದುಳು ಸ್ಥಗಿತಗೊಳ್ಳುತ್ತದೆ. ಈ ಸ್ಥಿತಿ ತಾಯಿ ಧೂಮಪಾನಿಯಾಗಿದ್ದು ಗರ್ಭದಲ್ಲಿರುವ ಮಗುವಿಗೂ ಬರಬಹುದು!

ಮಕ್ಕಳಲ್ಲಿ ಜ್ವರ ಮತ್ತು ಶ್ವಾಸಸಂಬಂಧಿ ಕಾಯಿಲೆ ತರಿಸುತ್ತದೆ

ಮಕ್ಕಳಲ್ಲಿ ಜ್ವರ ಮತ್ತು ಶ್ವಾಸಸಂಬಂಧಿ ಕಾಯಿಲೆ ತರಿಸುತ್ತದೆ

ಮಕ್ಕಳ ಅಂಗಗಳು ತೀರಾ ಎಳೆಯದಾಗಿರುವುದರಿಂದ ಅವರಿಗೆ ಪರೋಕ್ಷ ಧೂಮಪಾನದ ಮೂಲಕ ನ್ಯೂಮೋನಿಯಾ ಜ್ವರ ಮತ್ತು ಬ್ರಾಂಕೈಟಿಸ್ ಎಂಬ ಶ್ವಾಸ ಸಂಬಂಧಿ ತೊಂದರೆಗಳು ತಗಲುವ ಸಂಭವ ತೀರಾ ಹೆಚ್ಚಾಗುತ್ತದೆ.

ಮಕ್ಕಳ ಶ್ವಾಸಕೋಶದ ಬೆಳವಣಿಗೆ ಕುಂಠಿತಗೊಳ್ಳುತ್ತದೆ

ಮಕ್ಕಳ ಶ್ವಾಸಕೋಶದ ಬೆಳವಣಿಗೆ ಕುಂಠಿತಗೊಳ್ಳುತ್ತದೆ

ಪರೋಕ್ಷ ಧೂಮಪಾನದ ಹವೆ ಸೇವಿಸುವ ಮಕ್ಕಳಲ್ಲಿ, ಅದರಲ್ಲೂ ಮನೆಯಲ್ಲಿ ಧೂಮಪಾನಿ ತಂದೆ ತಾಯಿ, ಬಂಧುಗಳಿರುವಲ್ಲಿ ಮಕ್ಕಳ ಶ್ವಾಸಕೋಶದ ಬೆಳವಣಿಗೆ ವಯಸ್ಸಿಗೆ ತಕ್ಕಂತೆ ಆಗದೇ ಇರುವುದು ಆತಂಕಕಾರಿಯಾಗಿದೆ.

ಕಿವಿಯ ಸೋಂಕು ಹೆಚ್ಚಿಸುತ್ತದೆ

ಕಿವಿಯ ಸೋಂಕು ಹೆಚ್ಚಿಸುತ್ತದೆ

ಗಾಳಿಯಲ್ಲಿರುವ ಧೂಮದ ಕಣಗಳು ಕಿವಿಯ ಒಳಭಾಗದ ಸಂಪರ್ಕಕ್ಕೆ ಬಂದಾಗ ಒಳಗಿವಿಯಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚಲು ಸೂಕ್ತ ವಾತಾವರಣ ಏರ್‍ಪಾಡಾಗುವುದರಿಂದ ಶೀಘ್ರವೇ ಸೋಂಕು ಉಂಟಾಗಲು ಕಾರಣವಾಗುತ್ತದೆ.

ಮಕ್ಕಳಲ್ಲಿ ಕೆಮ್ಮು, ಉಸಿರಾಟದ ತೊಂದರೆ ಆರಂಭವಾಗುತ್ತದೆ

ಮಕ್ಕಳಲ್ಲಿ ಕೆಮ್ಮು, ಉಸಿರಾಟದ ತೊಂದರೆ ಆರಂಭವಾಗುತ್ತದೆ

ಯಾವುದೇ ಪರಕೀಯ ವಸ್ತು ಗಂಟಲ ಒಳಭಾಗದ ಲೋಳೆಯನ್ನು ಅಂಟಿಕೊಂಡಾಗ ದೇಹದ ರೋಗ ನಿರೋಧಕ ವ್ಯವಸ್ಥೆ ಇದನ್ನು ಹೊರಹಾಕಲು ಕೆಮ್ಮಿನ ನೆರವು ಪಡೆದುಕೊಳ್ಳುತ್ತದೆ. ಧೂಮಪಾನದ ಹೊಗೆಯಿರುವ ಗಾಳಿಯನ್ನು ಸೇವಿಸಿದರೆ ಧೂಮದ ಕಣಗಳು ಗಂಟಲ ಒಳಭಾಗವನ್ನು ಅಂಟಿಕೊಳ್ಳುತ್ತವೆ. ಮುಂದೆ ಓದಿ

ಮಕ್ಕಳಲ್ಲಿ ಕೆಮ್ಮು, ಉಸಿರಾಟದ ತೊಂದರೆ ಆರಂಭವಾಗುತ್ತದೆ

ಮಕ್ಕಳಲ್ಲಿ ಕೆಮ್ಮು, ಉಸಿರಾಟದ ತೊಂದರೆ ಆರಂಭವಾಗುತ್ತದೆ

ಕೆಮ್ಮಿನಿಂದ ಇದು ಹೊರಹೋಗಬಹುದಾದರೂ, ಉಸಿರಾಟದ ಮೂಲಕ ಸೇವಿಸುವ ಗಾಳಿ ಸದಾ ಧೂಮದಿಂದಿ ಕೂಡಿದ್ದರೆ ಈ ಕೆಮ್ಮು ನಿಲ್ಲುವುದೇ ಇಲ್ಲ. ಇನ್ನೂ ಹೆಚ್ಚಾದರೆ ಉಸಿರಾಟದ ತೊಂದರೆಯೂ ಎದುರಾಗಬಹುದು.

ನಿಮ್ಮ ಮಕ್ಕಳಿಗಾಗಿ ಹೀಗೆ ಮಾಡಿ

ನಿಮ್ಮ ಮಕ್ಕಳಿಗಾಗಿ ಹೀಗೆ ಮಾಡಿ

ಧೂಮಪಾನವನ್ನು ಬಿಟ್ಟು ಬಿಡಿ. ಸಾಧ್ಯವಿಲ್ಲ, ಬಹಳಷ್ಟು ಪ್ರಯತ್ನಿಸಿದ್ದೇನೆ, ಆಗುತ್ತಿಲ್ಲ ಎಂಬ ಸಬೂಬಿನವರು ನಿಮ್ಮ ಕುಟುಂಬ ವೈದ್ಯರ ಸಲಹೆ ಕೇಳಿ. ಇಂದು ನಿಮ್ಮ ನೆರವಿಗೆ ಹತ್ತಾರು ಸುಲಭ ಮತ್ತು ಫಲಪ್ರದ ವಿಧಾನಗಳು ಲಭ್ಯವಿವೆ.

*ಧೂಮಪಾನ ನೀವು ಮಾಡದೇ ಇದ್ದರೂ, ಅಕ್ಕಪಕ್ಕದಲ್ಲಿ ಮಕ್ಕಳಿದ್ದಾಗ ಯಾರೇ ಧೂಮಪಾನ ಮಾಡುತ್ತಿದ್ದರೂ ಅವರಿಗೆ ನಯವಾಗಿ ತಿಳಿಹೇಳಿ. ಕೇಳದೇ ಇದ್ದರೆ ಅಕ್ಕಪಕ್ಕದವರ ಸಹಾಯ ಯಾಚಿಸಿ.

*ಯಾರೂ ಇಲ್ಲದೇ ಇದ್ದರೆ ನಿಮ್ಮ ಮೊಬೈಲಿನಿಂದ ವೀಡೀಯೋ ತೆಗೆದು ಸಾರ್ವಜನಿಕ ಪುಟದಲ್ಲಿ ಪ್ರಕಟಿಸಿ.

*ಮನೆ, ಶಾಲೆ, ಕ್ರೀಡಾಂಗಣ ಮೊದಲಾದ ಸ್ಥಳಗಳಲ್ಲಿ ಮಕ್ಕಳಿದ್ದರೆ, ಕಿಟಕಿ ಬಾಗಿಲುಗಳನ್ನು ತೆರೆದು ಸಾಕಷ್ಟು ತಾಜಾ ಹವೆ ಒಳಬರುವಂತೆ ನೋಡಿಕೊಳ್ಳಿ.

ನಿಮ್ಮ ಮಕ್ಕಳಿಗಾಗಿ ಹೀಗೆ ಮಾಡಿ

ನಿಮ್ಮ ಮಕ್ಕಳಿಗಾಗಿ ಹೀಗೆ ಮಾಡಿ

*ಧೂಮಪಾನಿಗಳಿಗೆ ನಯವಾಗಿ ತಮ್ಮ ಬೀಡಿ ಸಿಗರೇಟುಗಳನ್ನು ನಂದಿಸಲು ಮಕ್ಕಳೇ ಕೇಳುವಂತಾಗಲು ಅವರಿಗೆ ತರಬೇತಿ ನೀಡಿ.

*ಇದು ಮಕ್ಕಳಲ್ಲಿ ಅತೀವವಾಗಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ, ಮತ್ತು ದೊಡ್ಡವರಾದಾಗ ಇದರಿಂದ ದೂರವಿರಲು ಪ್ರೇರಣೆ ನೀಡುತ್ತದೆ.

*ಬಸ್ಸು, ರೈಲು ಮೊದಲಾದ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ದಂಡನಾರ್ಹವಾಗಿದೆ. ಇಲ್ಲಿ ಧೂಮಪಾನ ಮಾಡಿದವರನ್ನು ಸಿಬ್ಬಂದಿಗೆ ತಿಳಿಸಿ ದಂಡ ವಿಧಿಸುವಂತೆ ಕೇಳಿಕೊಳ್ಳಿ.

English summary

Why You Shouldn't Smoke Near Kids

Smokers seldom care about non smokers around. But non smokers should be aware of the dangers of second hand smoke. A recent survey claims that more than nearly a thousand non-smokers die every year due to the smoke they inhaled from their surroundings. This fact explains the effects of passive smoking. Today, the saddest part is: many parents smoke in front of their kids though they know well that it can affect the health of their kids.
X
Desktop Bottom Promotion