For Quick Alerts
ALLOW NOTIFICATIONS  
For Daily Alerts

ಸಂತಾನ ಭಾಗ್ಯದಿಂದ ದೂರಸರಿಯುವುದು ಎಷ್ಟು ಸರಿ?

By Arshad
|

ವಿವಾಹದ ಬಳಿಕದ ಕೆಲವು ದಿನಗಳಲ್ಲಿ ಶುಭಸುದ್ದಿಯನ್ನು ಆಪ್ತರು ನಿರೀಕ್ಷಿಸುತ್ತಾರೆ. ಸಾಮಾನ್ಯವಾಗಿ ಮದುವೆಯಾದ ಒಂದು ಅಥವಾ ಎರಡು ವರ್ಷಗಳಲ್ಲಿ ಪ್ರಥಮ ಸಂತಾನ ಪಾಪ್ತಿಯಾಗುವುದು ಎಲ್ಲಾ ದೇಶಗಳಲ್ಲಿ ಕಂಡುಬರುತ್ತದೆ. ಆದರೆ ಇತ್ತೀಚೆಗೆ ವಿವಾಹವಾಗಿ ಎರಡಕ್ಕೂ ಹೆಚ್ಚಿನ ವರ್ಷಗಳನ್ನು ಸಂತಾನರಹಿತರಾಗಿ ಕಳೆಯುತ್ತಿರುವ ಜೋಡಿಗಳ ಬಗ್ಗೆ ಹಿರಿಯರು ಆತಂಕ ವ್ಯಕ್ತಪಡಿಸುತ್ತಾರೆ. ಏಕೆಂದರೆ ಸಂತಾನವಾಗದಿರಲು ದೈಹಿಕವಾದ ನ್ಯೂನ್ಯತೆ ಕಾರಣವಾಗಿರಬಹುದು ಎಂದು ತಿಳಿದು ಇದಕ್ಕೆ ಸೂಕ್ತವಾದ ಚಿಕಿತ್ಸೆಗೆ ಅವರು ಸಲಹೆ ನೀಡುತ್ತಾರೆ.

ಆದರೆ ವಾಸ್ತವವಾಗಿ ನವಜೋಡಿಗಳು ಹಿರಿಯರ ಈ ಆಸೆಯನ್ನು ತೀರಿಸಲು ಯಾವುದೇ ಉತ್ಸುಕತೆ ತೋರದೇ ಮಡಿಲು ತುಂಬುವ ಕ್ರಿಯೆಯನ್ನು ಮುಂದೂಡುತ್ತಾ ಹೋಗುತ್ತಾರೆ. ಇದಕ್ಕೆ ತಮ್ಮದೇ ಆದ ಕಾರಣಗಳನ್ನೂ, ಸಮರ್ಥನೆಗಳನ್ನೂ ನೀಡುತ್ತಾರೆ. ಹುಟ್ಟಿದ ಮಗುವಿಗೆ ಪಾಲಕರು ನೀಡಬೇಕಾದ ಗಮನಕ್ಕೆ ತಮ್ಮಿಬ್ಬರಲ್ಲಿಯೂ ಸಮಯವಿಲ್ಲದಿರುವುದು, ಸಾಕಷ್ಟು ಹಣ ಸಂಗ್ರಹವಾಗದಿರುವುದು ಮೊದಲಾದ ಸಬೂಬುಗಳು ಸಿದ್ಧರೂಪದಲ್ಲಿ ಸಿಗುತ್ತವೆ ಇನ್ನೂ ಕೆಲವರು ತಮ್ಮ ವೃತ್ತಿಜೀವನಕ್ಕೆ ಮಗುವಿನ ಲಾಲನೆ ಪಾಲನೆ ಅಡ್ಡಿಯಾಗುತ್ತದೆ ಎಂದು ಹೇಳುತ್ತಾರೆ.

ಆದರೂ ಸಬೂಬುಗಳೇನೇ ಇರಲಿ, ನಿಸರ್ಗ ಯಾವುದೇ ಕಾರ್ಯಕ್ಕೆ ಒಂದು ವಯಸ್ಸಿನ ಮಿತಿಯನ್ನಿರಿಸಿದೆ. ಸೂಕ್ತ ಸಮಯದಲ್ಲಿ ಬೇಡ ಎಂದು ಕೈತೋರಿದವರಿಗೆ ನಿಸರ್ಗ ಮುನಿದು ಮುಂದೆ ಬೇಕಾದಾಗ ಸಂತಾನವನ್ನು ನೀಡದೇ ತನಗೆ ಮಾಡಿದ ಅಪಮಾನಕ್ಕೆ ತಕ್ಕ ಪಾಠ ಕಲಿಸುತ್ತದೆ. ಈ ನಿದರ್ಶನವನ್ನು ಲಕ್ಷಗಟ್ಟಲೆ ಸಂಖ್ಯೆಯಲ್ಲಿ ನಮ್ಮ ದೇಶದಲ್ಲಿ ಕಾಣಬಹುದು.

ಈ ನಿಟ್ಟಿನಲ್ಲಿ ತಜ್ಞರ ಪ್ರಕಾರ ಸೂಕ್ತವಯಸ್ಸಿನಲ್ಲಿ ಕನಿಷ್ಠ ಒಂದು ಸಂತಾನವನ್ನು ಪಡೆಯುವುದು ಆರೋಗ್ಯಕರವೂ ಹೌದು ಮತ್ತು ಬಾಂಧವ್ಯ ಬೆಳೆಯಲೂ ಉತ್ತಮವಾಗಿದೆ. ಇದರ ಹೊರತಾಗಿ ಕೆಲವು ಜೋಡಿಗಳೇಕೆ ಸಂತಾನಕ್ಕೆ ಹಿಂದೇಟು ಹಾಕುತ್ತಾರೆ ಎಂಬ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ...

ಆರೋಗ್ಯದ ಕುರಿತಾದ ಕಾರಣಗಳು

ಆರೋಗ್ಯದ ಕುರಿತಾದ ಕಾರಣಗಳು

ಕೆಲವು ದಂಪತಿಗಳಲ್ಲಿ ಸಂತಾನಭಾಗ್ಯ ಪಡೆಯಲು ಕೆಲವು ದೈಹಿಕ ನ್ಯೂನ್ಯತೆಗಳಿದ್ದು ವೈದ್ಯರೇ ಇದಕ್ಕೆ ಕಡಿವಾಣ ಹಾಕಲು ಸಲಹೆ ನೀಡಿರುತ್ತಾರೆ. ಈ ದಂಪತಿಗಳು ಸಂತಾನಭಾಗ್ಯಕ್ಕಾಗಿ ಸೂಕ್ತ ಚಿಕಿತ್ಸೆಯನ್ನು ಪಡೆಯುತ್ತಾ ವೈದ್ಯರ ಮತ್ತು ಹಿರಿಯರ ಸಲಹೆಯನ್ನು ಪಡೆಯುತ್ತಾ ದಿನಕಳೆಯುತ್ತಿರುತ್ತಾರೆ.

ಆರೋಗ್ಯದ ಕುರಿತಾದ ಕಾರಣಗಳು

ಆರೋಗ್ಯದ ಕುರಿತಾದ ಕಾರಣಗಳು

ಇಂದು ವಿಜ್ಞಾನದಲ್ಲಿ ಸಂತಾನಪ್ರಾಪ್ತಿಗಾಗಿ ಹಲವು ವಿಧಾನಗಳು ಲಭ್ಯವಿದ್ದು ಸಾವಿರಾರು ದಂಪತಿಗಳ ಪಾಲಿಗೆ ಆಶಾಕಿರಣವಾಗಿ ಪರಿಣಮಿಸಿದೆ. ಈ ಪರಿಸ್ಥಿತಿ ದಂಪತಿಗಳ ಪ್ರಯತ್ನಕ್ಕೆ ಮೀರಿರುವ ಕಾರಣ ಯಾರನ್ನೂ ದೂಷಿಸಲು ಸಾಧ್ಯವಿಲ್ಲ. ಇವರಿಗೆ ಬೇಗನೇ ಸಂತಾನಪ್ರಾಪ್ತಿಯಾಗಲಿ ಎಂದೇ ಎಲ್ಲರೂ ಹಾರೈಸುತ್ತಾರೆ.

ವೃತ್ತಿಪರ ಕಾರಣಗಳು

ವೃತ್ತಿಪರ ಕಾರಣಗಳು

ಕೆಲವು ವೃತ್ತಿಗಳಲ್ಲಿ ಇಷ್ಟು ವಯಸ್ಸಿನವರೆಗೆ ಸಂತಾನ ಪಡೆಯಕೂಡದು ಎಂಬ ನಿಯಮವೇ ಇರುತ್ತದೆ. ಇನ್ನೂ ಕೆಲವರು ತಮ್ಮ ವೃತ್ತಿಯಲ್ಲಿ ಅತ್ಯುನ್ನತ ದರ್ಜೆಗೇರಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದು ಒಂದು ವೇಳೆ ಮಗುವಾದರೆ ಈ ಪ್ರಯತ್ನಕ್ಕೆ ಹಿನ್ನಡೆಯಾಗಬಹುದು ಎಂಬ ದುಗುಡದಿಂದ ಸಂತಾನಭಾಗ್ಯದಿಂದ ಹಿಂದೆ ಸರಿಯುತ್ತಾರೆ. ಅಲ್ಲದೇ ವೃತ್ತಿಯಲ್ಲಿ ತೀರಾ ವ್ಯಸ್ತರಾಗಿ ಮಗುವಿಗೆ ಸಮಯ ನೀಡಲು ಸಾಧ್ಯವಾಗುವುದಿಲ್ಲವೆಂಬ ಸಬೂಬು ನೀಡುತ್ತಾರೆ. ಆದರೆ ಇದು ನಿಮ್ಮ ಇಪ್ಪತ್ತರ ಕೊನೆಯ ವರ್ಷಗಳವರೆಗೆ ಮಾತ್ರ ಮುಂದೂಡಬಹುದು.

ವೃತ್ತಿಪರ ಕಾರಣಗಳು

ವೃತ್ತಿಪರ ಕಾರಣಗಳು

ಬಳಿಕ ಗರ್ಭ ಕಟ್ಟುವ ಸಾಧ್ಯತೆ ಕಡಿಮೆಯಾಗುತ್ತಾ ಹೋಗುವುದರಿಂದ ನಿಸರ್ಗ ಮುನಿಸಿಕೊಳ್ಳುವ ಮುನ್ನವೇ ಈ ಬಗ್ಗೆ ಗಮನಹರಿಸುವುದು ಉತ್ತಮ. ಅಷ್ಟಕ್ಕೂ ಸಮಾಜದಲ್ಲಿ ಅತ್ಯುನ್ನತ ಸ್ಥಾನ ಪಡೆದವರಿಗೆ ಸಂತಾನವೇ ಇಲ್ಲವೇ? ಅವರಿಗೂ ಅತಿ ತಡವಾಗಿಯೇ ಸಂತಾನ ಪ್ರಾಪ್ತಿಯಾಯಿತೇ? ಅವರಿಗೆ ಸಾಧ್ಯವಾಗಿರುವುದು ನಿಮಗೂ ಸಾಧ್ಯವಾಗಬಹುದಲ್ಲ! ಕೊಂಚ ಆತ್ಮವಿಮರ್ಶೆ ಅಗತ್ಯ.

ಸಂಬಂಧಗಳ ಕುರಿತಾದ ಕಾರಣಗಳು

ಸಂಬಂಧಗಳ ಕುರಿತಾದ ಕಾರಣಗಳು

ಕೆಲವೊಮ್ಮೆ ವಿವಾಹವಾದ ಕೆಲವೇ ದಿನಗಳಲ್ಲಿ ನಿಮ್ಮ ಸಂಗಾತಿಯ ನಿಜರೂಪ ಕಂಡುಕೊಂಡು ಈ ವ್ಯಕ್ತಿಯೊಡನೆ ಜೀವನಪರ್ಯಂತ ಬಾಳಲು ಸಾಧ್ಯವಿಲ್ಲ ಎಂಬ ಚಿಂತನೆ ಮೂಡಿದರೆ ಆ ವ್ಯಕ್ತಿಯಿಂದ ಮಗುವನ್ನು ಪಡೆಯಲು ಸಹಾ ಮನ ಹಿಂದೇಟು ಹಾಕುತ್ತದೆ.

ಸಂಬಂಧಗಳ ಕುರಿತಾದ ಕಾರಣಗಳು

ಸಂಬಂಧಗಳ ಕುರಿತಾದ ಕಾರಣಗಳು

ಇದಕ್ಕೆ ಆಪ್ತ ಸಮಾಲೋಚನೆ ಮತ್ತು ಕೊಂಚ ಸಮಯ ಅಗತ್ಯ. ಒಂದು ವೇಳೆ ಅಪಾರ್ಥ ಕಲ್ಪನೆಯಿಂದ ನಿಮ್ಮ ವ್ಯಕ್ತಿಯನ್ನು ತಪ್ಪಾಗಿ ತಿಳಿದುಕೊಂಡಿದ್ದು ಬಳಿಕ ವಾತಾವರಣ ತಿಳಿಯಾದರೆ ಎಲ್ಲವೂ ಸುಖಾಂತವಾಗುತ್ತದೆ. ಇಲ್ಲದಿದ್ದರೆ ಇಷ್ಟವಿಲ್ಲದ ವ್ಯಕ್ತಿಯಿಂದ ಪಡೆದ ಮಕ್ಕಳು ಹೆತ್ತವರ ಅವಗಣನೆಗೆ ಗುರಿಯಾಗುವ ಸಂಭವವಿರುತ್ತದೆ ಅಥವಾ ವಿಚ್ಛೇದನದ ಬಳಿಕ ಮಕ್ಕಳು ಪಾಲಕರ ಪೋಷಣೆಯಿಂದ ವಂಚಿತರಾಗುತ್ತಾರೆ.

ಹಣಕಾಸಿನ ತೊಂದರೆಗಳು

ಹಣಕಾಸಿನ ತೊಂದರೆಗಳು

ಕೆಲವು ದಂಪತಿಗಳು ತಮ್ಮ ಹಣಕಾಸಿನ ಕೊರತೆಯನ್ನು ನೇರವಾಗಿ ಸಂತಾನವನ್ನು ಸಾಕುವ ಖರ್ಚಿಗೆ ಕಾರಣವಾಗಿಸುತ್ತಾರೆ. ಇವರ ಪ್ರಕಾರ ಈಗಾಗಲೇ ಹಣಕಾಸಿನ ತೊಂದರೆಯಿದ್ದು ಹುಟ್ಟುವ ಮಗುವಿಗೆ ಹಾಲು ಕುಡಿಸಲೂ ಸಾಧ್ಯವಿಲ್ಲವಾಗಿ ಆ ಪಾಪವನ್ನು ಹೊರಲು ತಯಾರಿರುವುದಿಲ್ಲ. ಈ ಪರಿಸ್ಥಿತಿ ನಿಜಕ್ಕೂ ಇಷ್ಟೊಂದು ಕೆಟ್ಟದಿದೆಯೇ ಎಂದು ವಿಮರ್ಶೆ ಮಾಡಿಕೊಳ್ಳುವುದು ಅಗತ್ಯ. ಏಕೆಂದರೆ ದಿವಂಗತ ಅಬ್ದುಲ್ ಕಲಾಂ ಸಹಾ ಬಡಕುಟುಂಬದಲ್ಲಿಯೇ ಹುಟ್ಟಿದವರಾಗಿದ್ದರು. ನಾವು ಎಷ್ಟು ಸಂಪಾದಿಸುತ್ತೇವೆಯೋ ಅದರಲ್ಲಿಯೇ ಒಂದು ತುತ್ತು ನಮ್ಮ ಮಗುವಿಗೂ ತಿನ್ನಿಸಿ ಸತ್ಪ್ರಜೆಯಾಗಿಸುತ್ತೇವೆ ಎಂಬ ಸಕಾರಾತ್ಮಕ ಚಿಂತನೆಯಿದ್ದರೆ ಜೀವನ ಸ್ವರ್ಗವಾಗುತ್ತದೆ. ಇದಕ್ಕೆ ವ್ಯತಿರಿಕ್ತವಾದ ಚಿಂತನೆಯಿದ್ದರೆ ಎಷ್ಟೇ ಹಣವಂತರಾಗಿದ್ದರೂ ಅದು ಮಗುವಿನ ಪಾಲನೆಗೆ ಕಡಿಮೆಯೆಂದೇ ಅನಿಸುತ್ತದೆ.

English summary

Why Some Couples Postpone Pregnancy

Some couples do postpone pregnancy after marriage. They do have their own reasons. In fact, raising a kid needs a lot of attention from the parents and also enough financial resources. So, no wonder postponing pregnancy has become common in today's world where stable relationships and stable finances have become difficult things. On the other hand, there are some people who are postponing pregnancy for career reasons. They too have their own reasons.
Story first published: Tuesday, September 29, 2015, 14:52 [IST]
X
Desktop Bottom Promotion