For Quick Alerts
ALLOW NOTIFICATIONS  
For Daily Alerts

ಮಕ್ಕಳಿಗೆ ಕಾಡುವ ಮಲಬದ್ಧತೆ ಸಮಸ್ಯೆಗೆ ಸೂಕ್ತ ಮನೆಮದ್ದು

|

ಪ್ರಕೃತಿಯ ವೈಚಿತ್ರ್ಯವೇ ಇಷ್ಟು! ನಮಗೆ ಸಂತಸವನ್ನುಂಟು ಮಾಡುವ ಪುಟಾಣಿಗಳು ಸಣ್ಣ ಸಣ್ಣ ವಿಚಾರಕ್ಕು ನಮಗೆ ಚಿಂತೆಯನ್ನುಂಟು ಮಾಡುತ್ತಿರುತ್ತಾರೆ. " ಅಮ್ಮಾ ಅವನು ಹೊಡೆದ", " ಅಮ್ಮಾ ಅವನು ನನ್ನತ್ರ, ಚಾಕ್ ಲೆಟ್ ಕಿತ್ಕೊಂಡ" ಹೀಗೆ ನಾನಾ ಅವಾಂತರಗಳು ನಮಗೆ ಎದುರಾಗುತ್ತಲೆ ಇರುತ್ತವೆ. ಆದರೆ ಅವೆಲ್ಲಕ್ಕು ಹೆಚ್ಚಿಗೆ ನಮಗೆ ಚಿಂತೆಯುಂಟು ಮಾಡುವುದು ಮಗುವಿನಲ್ಲಿ ಕಂಡುಬರುವ ಶೌಚದ ಸಮಸ್ಯೆ.

ಒಂದು ವೇಳೆ ನಿಮ್ಮ ಮಗು ಶೌಚಾಲಯದ ಕಡೆಗೆ ತಲೆನೇ ಹಾಕುತ್ತಿಲ್ಲವೆಂದರೆ ನಿಮಗೆ ಗಾಬರಿಯಾಗಿ ಬಿಡುತ್ತದೆ. ಗಾಬರಿಯಾಗಬೇಡಿ, ಮಲಬದ್ಧತೆಯೆಂಬುದು ನಿಮ್ಮ ಮಗುವಿನಲ್ಲಷ್ಟೇ ಅಲ್ಲದೆ ಎಲ್ಲಾ ಮಕ್ಕಳಲ್ಲು ಸಾಮಾನ್ಯವಾಗಿರುವ ವಿಚಾರವಾಗಿದೆ. ಇದಕ್ಕೆ ಕಾರಣ ಅಸಮರ್ಪಕವಾದ ಆಹಾರ ಪದ್ಧತಿ ಮತ್ತು ಕರುಳಿನ ಚಲನೆಗಳು.

ಅದಕ್ಕಾಗಿ ನಿಮ್ಮ ಮಗುವು ಬಾತ್‍ರೂಮಿಗೆ ಹೋಗುತ್ತಿದಿಯಾ ಅಥವಾ ಇಲ್ಲವೆ ಎಂಬುದನ್ನು ಗಮನಿಸುತ್ತಾ ಇರಿ. ಆಗ ನಿಮ್ಮ ಮಗುವಿಗೆ ಈ ಮಲಬದ್ಧತೆಯ ಸಮಸ್ಯೆ ಇದೆಯೇ? ಅಥವಾ ಇಲ್ಲವೇ? ಎಂಬುದನ್ನು ನೀವು ಅರಿಯುವಿರಿ. ನೀವು ಸುಮ್ಮನೆ ನಿಮ್ಮ ಮಗುವಿನ ಬಗೆಗೆ ಸ್ವಲ್ಪ ಗಮನವಹಿಸಿದರೆ ಸಾಕು, ನಿಮ್ಮ ಮಗುವಿಗೆ ಮಲಬದ್ಧತೆಯ ಸಮಸ್ಯೆಯನ್ನು ಅರಿತುಕೊಳ್ಳುವಿರಿ. ಮಗುವಿನಲ್ಲಿ ಕರುಳಿನ ಚಲನೆ ಸಮರ್ಪಕವಾಗಿರಬೇಕು. ಅದರಲ್ಲು ಹಸುಗೂಸುಗಳು ಪ್ರತಿದಿನ ಒಂದಷ್ಟು ಹೊತ್ತು ಕರುಳಿನ ಚಲನೆಯನ್ನು ಮಾಡಬೇಕು. ಕೆಲವೊಂದು ಮಕ್ಕಳಲ್ಲಿ ಈ ಕರುಳಿನ ಚಲನೆಯು ವಾರಕ್ಕೆ ಎರಡು ಅಥವಾ ಮೂರು ಬಾರಿ ಮಾತ್ರ ಇರುತ್ತದೆಯೆಂದು ತಿಳಿದುಬಂದಿದೆ.

Ways to naturally treat constipation in toddlers

ಮಲಬದ್ಧತೆ ಸಮಸ್ಯೆಗೆ ಮೂಲ ಕಾರಣ ಗಟ್ಟಿಯಾದ ಮಲ, ಇದನ್ನು ವಿಸರ್ಜಿಸಲು ಮಗುವಿಗೆ ಅಸಾಧ್ಯವಾಗಿ ಮಲಬದ್ಧತೆಯು ಹುಟ್ಟುತ್ತದೆ. ಈ ಮಲಬದ್ಧತೆಯ ಜೊತೆಗೆ ವಾಂತಿ, ಹೊಟ್ಟೆನೋವು, ಊತ, ಊಟ ಸೇರದಿರುವಿಕೆ ಮುಂತಾದ ಸಮಸ್ಯೆಗಳು ಭಾದಿಸುತ್ತವೆ. ಅದಕ್ಕಾಗಿ ಮಗುವಿಗೆ ಪಥ್ಯವನ್ನು ನೀಡುತ್ತಾರೆ. ಸಂಸ್ಕರಿತ ಆಹಾರ ಮತ್ತು ಗಟ್ಟಿಯಾದ ಆಹಾರವನ್ನು ಸೇವಿಸುವುದನ್ನು ತಡೆಯುವ ಮೂಲಕ ಮಲಬದ್ಧತೆಯನ್ನು ದೂರಮಾಡಿಕೊಳ್ಳಬಹುದು.

ಆರೋಗ್ಯಯುತವಾದ ಆಹಾರ
ಹಸುಗೂಸುಗಳಲ್ಲಿ ಕಾಡುವ ಮಲಬದ್ಧತೆಯನ್ನು ನಿವಾರಿಸಲು ಅವರಿಗೆ ಅಗತ್ಯವಾದ ಆಹಾರಗಳನ್ನು ನೀಡಿ. ಹೆಚ್ಚಿನ ನಾರಿನಂಶವನ್ನು ಹೊಂದಿರುವ ಆಹಾರವನ್ನು ನಿಮ್ಮ ಮಗುವು ಸೇವಿಸುವಂತೆ ನೋಡಿಕೊಳ್ಳಿ. ಅವರಿಗೆ ಹಿಡಿಸುವ ಮತ್ತು ರುಚಿಯಾದ ಆರೋಗ್ಯಯುತ ಆಹಾರವನ್ನೆ ನೀಡಿ. ಈ ನಿಟ್ಟಿನಲ್ಲಿ ಹಣ್ಣು ಮತ್ತು ತರಕಾರಿಗಳು ಉತ್ತಮವಾದ ಆಯ್ಕೆಯಾಗಿರುತ್ತವೆ.
ಮಗುವಿಗೆ ನೀಡುವ ಆಹಾರ ಆಕರ್ಷಕಾವಾಗಿರಲಿ, ಅದರಿಂದ ಮಗು ಆಹಾರವನ್ನು ಸೇವಿಸದೆ ಬಿಡುವುದಿಲ್ಲ. ಒಂದೊಮ್ಮೆ ನಿಮ್ಮ ಮಗುವಿಗೆ ಬಲವಂತವಾಗಿ ನಾರಿನಂಶವಿರುವ ಆಹಾರವನ್ನು ಹೆಚ್ಚಿಗೆ ನೀಡಿದಲ್ಲಿ, ಹೆಚ್ಚಿನ ಪ್ರಮಾಣದಲ್ಲಿ ದ್ರವರೂಪದ ಆಹಾರವನ್ನು ನೀಡುವುದನ್ನು ಮರೆಯಬೇಡಿ. ಇದು ಮಕ್ಕಳಲ್ಲಿ ಕರುಳಿನ ಪ್ರಕ್ರಿಯೆಯು ಕ್ರಿಯಾಶೀಲವಾಗಲು ಅತ್ಯುತ್ತಮ ವಿಧಾನವಾಗಿ ಗುರುತಿಸಲ್ಪಟ್ಟಿದೆ.

ಸರಿಯಾಗಿ ನೀರು ಕುಡಿಸಿ
ಮಕ್ಕಳು ನೀರನ್ನು ಕಡಿಮೆ ಕುಡಿದರೆ ಮಲವಿಸರ್ಜನೆಗೆ ತೊಂದರೆಯಾಗುವುದು. ಆದ್ದರಿಂದ ಮಕ್ಕಳಿಗೆ ಕಮ್ಮಿಯೆಂದರೂ ಒಂದು ಲೀಟರ್ ನೀರನ್ನು ದಿನದಲ್ಲಿ ಕುಡಿಸಲು ಮರೆಯದಿರಿ. ಊಟದ ನಂತರ ಸ್ವಲ್ಪ ಹದ ಬಿಸಿ ನೀರು ಕುಡಿಸುವುದು ಮಗುವಿನ ಆರೋಗ್ಯ ದೃಷ್ಟಿಯಿಂದ ಅತ್ಯುತ್ತಮ.

ಒಣ ದ್ರಾಕ್ಷಿ ರಸ
ಮಲ ಬದ್ಧತೆಯನ್ನು ಓಡಿಸುವ ಮತ್ತೊಂದು ಮಾಂತ್ರಿಕ ಪರಿಹಾರವೆಂದರೆ ಅದು, ಒಣ ದ್ರಾಕ್ಷಿ ರಸ. ಇದನ್ನು ಸ್ವಲ್ಪ ಜೇನು ತುಪ್ಪದ ಜೊತೆಗೆ ನೀಡಿದರೆ ಒಳ್ಳೆಯ ಪರಿಹಾರವನ್ನು ಕಾಣಬಹುದು.

ದೈಹಿಕ ಚಟುವಟಿಕೆಗಳು
ಹಸುಗೂಸುಗಳ ಆರೋಗ್ಯಕ್ಕೆ ಸಂಬಂಧಿಸಿದಂತೆ ದೈಹಿಕ ಚಟುವಟಿಕೆಗಳು ಪ್ರಧಾನ ಪಾತ್ರವನ್ನು ನಿರ್ವಹಿಸುತ್ತವೆ. ಈ ಚಟುವಟಿಕೆಗಳ ವಿಚಾರದಲ್ಲಿ ಯಾವುದೇ ರಾಜಿ ಇಲ್ಲಾ. ಅದಕ್ಕಾಗಿ ನಿಮ್ಮ ಮಗು ಅತ್ಯಗತ್ಯವಾದ ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಒಂದು ವೇಳೆ ಇಲ್ಲವಾದಲ್ಲಿ ಮಗುವಿಗೆ ಈ ಚಟುವಟಿಕೆಗಳನ್ನು ನೀಡಿ. ಒಂದು ಮಗುವಿಗೆ ಪ್ರತಿದಿನ ಕನಿಷ್ಠ 60 ನಿಮಿಷಗಳ ಕಾಲದಷ್ಟಾದರು ದೈಹಿಕ ಚಟುವಟಿಕೆಯ ಅಗತ್ಯವಿರುತ್ತದೆ. ಇದರಿಂದಾಗಿ ಮಗುವಿನ ಕರುಳಿನ ಚಟುವಟಿಕೆಗಳು ಚುರುಕಾಗುತ್ತವೆ.

ಅದಾಗಿಯೂ ಈ ಎಲ್ಲ ಪರಿಹಾರೋಪಾಯಗಳ ಜೊತೆಗೆ ಆರೋಗ್ಯಯುತವಾದ ನಾರಿನಂಶವನ್ನು ಒಳಗೊಂಡ ಆಹಾರ ಮತ್ತು ಮಲಬದ್ಧತೆ ನಿವಾರಿಸುವ ಡ್ರಾಪ್ಸ್ ನೀಡಿ. ಒಳ್ಳೆಯ ದೈಹಿಕ ಚಟುವಟಿಕೆಗಳಲ್ಲಿ ನಿಮ್ಮ ಮಗುವನ್ನು ತೊಡಗಿಸಿ. ಆಗ ಮಲಬದ್ಧತೆಯು ತನ್ನಿಂದ ತಾನೇ ನಿವಾರಣೆಯಾಗುತ್ತದೆ.

English summary

Ways to naturally treat constipation in toddlers

Constipation and other bowel disorders are common symptoms of underlying illness, which can be treated with dietary and lifestyle changes. When your child becomes constipated, it’s a signal that the digestive tract is lacking in friendly bacteria, which normally populate the bowel and are obtained from foods your child eats. A good diet provides a solid foundation for health to keep the digestive tract strong and capable of good elimination to prevent disease.
X
Desktop Bottom Promotion