For Quick Alerts
ALLOW NOTIFICATIONS  
For Daily Alerts

ಮಕ್ಕಳಿಗೆ ವಿನಮ್ರತೆ, ವಿಧೇಯತೆಯ, ಪಾಠ ಹೇಳಿ ಕೊಡಿ

|

ಯಾವುದೇ ಪೋಷಕರು ತಮ್ಮ ಮಕ್ಕಳಿಗೆ ನೀಡಬಹುದಾದ ಅತ್ಯಂತ ಬೆಲೆಬಾಳುವ ಕಾಣಿಕೆಯೆಂದರೆ ಅದು ಸದ್ಗುಣಗಳೇ ಆಗಿವೆ. ವಿನಮ್ರತೆ, ವಿಧೇಯತೆ, ಸತ್ಯಸಂಧತೆ, ತ್ಯಾಗ, ಕೂಡಿ ಬಾಳುವ ಮನೋಭಾವ, ಹಂಚಿ ತಿನ್ನುವ ಮನೋಭಾವ, ಉಪಕಾರಿ, ದಾನಿ, ನಿಷ್ಕಳಂಕ ಪ್ರೇಮ, ಪ್ರೀತಿ ಮೊದಲಾದವುಗಳೆಲ್ಲಾ ಈ ಸದ್ಗುಣಗಳಲ್ಲೇ ಸೇರುತ್ತವೆ. ಹೆಚ್ಚಿನವರು ಈ ಗುಣಗಳು ಆನುವಂಶಿಕವಾದುದು ಎಂದು ತಿಳಿಯುತ್ತಾರೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಇದು ತಪ್ಪು ಎಂದು ತಿಳಿದುಬರುತ್ತದೆ.

ವಾಸ್ತವವಾಗಿ ಯಾವುದೇ ವ್ಯಕ್ತಿಯ ಸದ್ಗುಣಗಳ ಹಿಂದೆ ಅವರ ಪೋಷಕರು ಮತ್ತು ಹಿರಿಯರ ಮಾರ್ಗದರ್ಶನ ಅಡಗಿರುತ್ತದೆ. ಇಂದಿನ ಮಕ್ಕಳು ಬೆಳೆಯುತ್ತಿರುವ ಯುಗ ರಾಕೆಟ್ ಯುಗವಾಗಿದೆ. ಇಂದು ಕಲಿತದ್ದು ನಾಳೆ ಹಳೆಯದಾಗಿರುತ್ತದೆ. ಬೆರಳತುದಿಯಲ್ಲಿ ವಿಶ್ವವನ್ನು ಸಂಪರ್ಕಿಸುವ ಸಾಧನದ ಮೂಲಕ ದಿಗಂತಗಳು ಕಾಣೆಯಾಗಿವೆ. ಆಧುನಿಕ ತಂತ್ರಜ್ಞಾನ ಮಕ್ಕಳನ್ನು ದಿಕ್ಕು ತಪ್ಪಿಸುತ್ತಿದೆಯೇ?

ಇಂತಹ ಪರಿಸ್ಥಿತಿಯಲ್ಲಿ ಮಕ್ಕಳು ಪೋಷಕರಿಗಿಂತ ಹೆಚ್ಚಾಗಿ ತಮ್ಮ ಸುತ್ತಮುತ್ತಲಿನ, ತಾವು ನೋಡುವ ಮಾಧ್ಯಮಗಳ ಮೂಲಕ ಹೆಚ್ಚು ಕಲಿಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸದ್ಗುಣಗಳನ್ನು ಮೈಗೂಡಿಸಿಕೊಳ್ಳಲು ಅವರು ತೋರುವ ಮಾರ್ಗಗಳು ಮಕ್ಕಳಿಗೆ ಅನಗತ್ಯವಾದ ಶಿಕ್ಷೆಯಂತೆ ಪರಿಗಣಿಸಲ್ಪಡುತ್ತಿದೆ.

ಗೌರವಾದರಗಳ ಮಹತ್ವವನ್ನು ತಿಳಿಸಿ ಹೇಳಿ

ಗೌರವಾದರಗಳ ಮಹತ್ವವನ್ನು ತಿಳಿಸಿ ಹೇಳಿ

ಈ ಸಮಾಜದಲ್ಲಿರುವಾಗ ನಾಲ್ಕು ಜನರ ನಡುವೆ ಬೆರೆಯುವುದು ಅಗತ್ಯವಾಗಿದೆ. ನಮ್ಮ ನಡುವೆ ವಿವಿಧ ಸ್ತರದ ಜನರಿರುತ್ತಾರೆ. ಎಲ್ಲಾ ಮನುಷ್ಯರನ್ನು ಗೌರವದಿಂದ ಮಾತನಾಡಿಸುವುದನ್ನು, ಸಲ್ಲಬೇಕಾದ ಗೌರವ ಸಲ್ಲಿಸುವುದನ್ನು ನಿವೇ ಸ್ವತಃ ಪಾಲಿಸಿ ಮಕ್ಕಳಿಗೆ ಹೀಗೇ ಮಾಡಿ ಎಂದು ತಿಳಿಸಿಕೊಡಬೇಕು. ಒಂದು ವೇಳೆ ಹಿರಿಯರೇ ಸಮಾಜದಲ್ಲಿರುವ ಕೆಳಸ್ತರದ ಜನರನ್ನು ಏಕವಚನದಲ್ಲಿ ಮಾತನಾಡಿಸಿದರೆ ಮಕ್ಕಳೂ ಹಾಗೆಯೇ ಕಲಿಯುತ್ತಾರೆ. ಹಿರಿಯರು ಸ್ವತಃ ವಿಧೇಯತೆಯನ್ನು ಪಾಲಿಸಿ ತಮ್ಮ ಮಕ್ಕಳೂ ಇದನ್ನು ಅನುಸರಿಸಲು ಪ್ರೇರಣೆ ನೀಡಿದರೆ ಮಾತ್ರ ಮಕ್ಕಳಿಂದಲೂ ವಿಧೇಯತೆಯನ್ನೇ ಅಪೇಕ್ಷಿಸಬಹುದು.

ಮಕ್ಕಳ ಮನಸ್ಸು ತಿಳಿಗೊಳವಿದ್ದಂತೆ

ಮಕ್ಕಳ ಮನಸ್ಸು ತಿಳಿಗೊಳವಿದ್ದಂತೆ

ಹೌದು, ಮಕ್ಕಳ ಮನಸ್ಸು ತಿಳಿಗೊಳವಿದ್ದಂತೆ. ಈ ಕ್ಷಣ ಆಟದಲ್ಲಿದ್ದ ಮನ ಮರುಕ್ಷಣ ಬದಲಿಸಿ ಬೇರೆ ಕಡೆ ಹೊರಳುವ ಚಂಚಲತೆ. ನಮಗೆ ತೀರಾ ಚಿಲ್ಲರೆ ಎನಿಸುವ ವಿಷಯಗಳು ಅವರಿಗೆ ತೀರಾ ಗಹನವಾದುದು. ಯಾವುದೇ ವಿಷಯವನ್ನು ಮಕ್ಕಳಿಗೆ ತಿಳಿಸಿಹೇಳಬೇಕಾದರೆ ಮೊದಲಿಗೆ ಅವರ ಮನಸ್ಸನ್ನು ತಿಳಿಗೊಳಿಸಬೇಕು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮಕ್ಕಳ ಮನಸ್ಸು ತಿಳಿಗೊಳವಿದ್ದಂತೆ

ಮಕ್ಕಳ ಮನಸ್ಸು ತಿಳಿಗೊಳವಿದ್ದಂತೆ

ಆ ವಿಷಯದ ಅತ್ಯಂತ ಪ್ರಮುಖವಾದುದು ಮತ್ತು ಜೀವನಪರ್ಯಂತ ಪಾಲಿಸಬೇಕಾದ ಮಹತ್ವವುಳ್ಳದ್ದು ಎಂದು ನಿಧಾನವಾಗಿ ಮನಸ್ಸಿಗೆ ನಿಧಾನವಾಗಿ ನಾಟುವಂತೆ ತಿಳಿಹೇಳಬೇಕು. ಈ ಸಮಯದಲ್ಲಿ ಒತ್ತಡ ಸರ್ವಥಾ ಸಲ್ಲದು. ಜೊತೆಗೇ ಈ ವಿಷಯಗಳನ್ನು ಸ್ವತಃ ಅನುಸರಿಸಬೇಕು. ನೆನಪಿಡಿ, ನಿಮ್ಮ ಮಕ್ಕಳು ನಿಮ್ಮನ್ನು ನೋಡಿ ಅನುಸರಿಸಿ ಕಲಿಯುವಷ್ಟು ಸಮರ್ಥವಾಗಿ ಬೇರೇನನ್ನೂ ಕಲಿಯುವುದಿಲ್ಲ.

ಮಕ್ಕಳಿಂದ ತಪ್ಪಾದರೆ ಗದರಿಸಬೇಡಿ, ನಿಧಾನವಾಗಿ ತಿಳಿಹೇಳಿ

ಮಕ್ಕಳಿಂದ ತಪ್ಪಾದರೆ ಗದರಿಸಬೇಡಿ, ನಿಧಾನವಾಗಿ ತಿಳಿಹೇಳಿ

ಎಲ್ಲಾ ಮಕ್ಕಳೂ ಒಂದಲ್ಲಾ ಒಂದು ತಪ್ಪನ್ನು ಮಾಡಿಯೇ ಮಾಡುತ್ತಾರೆ. ಇದರ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಹಿರಿಯರ ಕರ್ತ್ಯವ್ಯವೇ ಹೊರತು ಮಕ್ಕಳ ಮೇಲೆ ಗೂಬೆ ಕೂರಿಸುವುದು ಸರ್ವಥಾ ತರವಲ್ಲ. ಉದಾಹರಣೆಗೆ ಈಗ ತಾನೇ ನಡಿಗೆ ಕಲಿತ ಮಗುವಿಗೆ ತನ್ನ ಕೈಗೆಟಕುವ ವಸ್ತುಗಳನ್ನು ಎತ್ತಿಕೊಳ್ಳುವ ಕುತೂಹಲವಿರುತ್ತದೆ. ಅದು ಒಡೆಯುವ ವಸ್ತುವಾದರೂ ಸರಿ. ಮೇಜಿನ ಮೇಲಿಟ್ಟ ಮೊಬೈಲ್ ಅಥವಾ ಗಾಜಿನ ಲೋಟವನ್ನು ಎತ್ತಿ ಹಿಡಿದುಕೊಳ್ಳಲು ಸಾಧ್ಯವಾಗದೇ ಕೆಳಗೆ ಬೀಳಿಸಿ ಒಡೆಯುವುದರಿಂದ ನಷ್ಟವಾಗುವ ಮೊಬೈಲ್‌ಗೆ ಹಿರಿಯರೇ ಕಾರಣವೇ ಹೊರತು ಮಕ್ಕಳಲ್ಲ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮಕ್ಕಳಿಂದ ತಪ್ಪಾದರೆ ಗದರಿಸಬೇಡಿ, ನಿಧಾನವಾಗಿ ತಿಳಿಹೇಳಿ

ಮಕ್ಕಳಿಂದ ತಪ್ಪಾದರೆ ಗದರಿಸಬೇಡಿ, ನಿಧಾನವಾಗಿ ತಿಳಿಹೇಳಿ

ಮಕ್ಕಳ ಕೈಗೆ ಸೂಕ್ಷ್ಮ ವಸ್ತುಗಳು ಸಿಗದಂತೆ ಎಲ್ಲಾ ವಸ್ತುಗಳನ್ನು ಮೊದಲೇ ಗುರುತಿಸಿ ಜೋಪಾನ ಮಾಡುವುದು ಹಿರಿಯರ ಜವಾಬ್ದಾರಿ. ಆದರೂ ಮಕ್ಕಳಿಂದಾಗುವ ತಪ್ಪುಗಳನ್ನು ನಿಧಾನವಾಗಿ ತಿಳಿಹೇಳಿ ಸಂತೈಸುವುದು ಮಾತ್ರ ಸಾಲದು. ಮಕ್ಕಳಿಂದ ಏಕೆ ಈ ತಪ್ಪಾಯಿತು ಎಂದು ಮತ್ತೊಮ್ಮೆ ಅವರಿಂದಲೇ ಆ ಕಾರ್ಯವನ್ನು ಮಾಡಿಸಿ ಎಲ್ಲಿ ತಪ್ಪಾಯಿತು ಎಂಬುದನ್ನು ಗುರುತಿಸಿ ತಿದ್ದುವುದು ಮುಖ್ಯ.

ಶಿಸ್ತಿಗೆ ಮೊದಲ ಆದ್ಯತೆ ನೀಡಿ

ಶಿಸ್ತಿಗೆ ಮೊದಲ ಆದ್ಯತೆ ನೀಡಿ

ಸುಮಾರು ಮೂರು ವರ್ಷದ ಬಳಿಕ ಮಗು ತನ್ನ ಕೆಲಸಗಳನ್ನು ತಾನೇ ಮಾಡಿಕೊಳ್ಳುವಂತೆ ಪ್ರೇರಣೆ ನೀಡುತ್ತಾ ಬರಬೇಕು. ಅಚ್ಚುಕಟ್ಟುತನದ ಬಗ್ಗೆ ನಿಧಾನವಾಗಿ ಹೇಳಿಕೊಡುತ್ತಾ ಬರಬೇಕು. ಅಲ್ಲದೇ ಸ್ವತಃ ಮಾಡಿ ತೋರಿಸಬೇಕು. ಮಕ್ಕಳು ಇದನ್ನು ನೋಡಿ ಶೀಘ್ರವಾಗಿ ಕಲಿಯುತ್ತಾರೆ.

ಶಿಸ್ತಿಗೆ ಮೊದಲ ಆದ್ಯತೆ ನೀಡಿ

ಶಿಸ್ತಿಗೆ ಮೊದಲ ಆದ್ಯತೆ ನೀಡಿ

ಮಕ್ಕಳ ವಯಸ್ಸು ಹೆಚ್ಚಿದಷ್ಟೂ ಅಚ್ಚುಕಟ್ಟುತನವನ್ನು ಕಲಿತುಕೊಳ್ಳುವುದು ಕಷ್ಟಕರವಾಗುತ್ತಾ ಹೋಗುತ್ತದೆ. ಮಕ್ಕಳು ಎಂದು ಉದಾಸೀನ ಮಾಡಿ ಹಾಗೇ ಬಿಟ್ಟು ದೊಡ್ಡವರಾದ ಬಳಿಕವೂ ತಮ್ಮ ಕೋಣೆಯನ್ನು ಅಸ್ತವ್ಯಸ್ತವಾಗಿಯೇ ಇಡುವುದು ಗಮನಕ್ಕೆ ಬಂದಿದೆ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?


English summary

Tips to train your child to be obedient and behave well in public

If you are looking for ways to Teach Your Kids To Be Obedient, #look no further! Teaching kids to be obedient is not easy by any stretch of the imagination, but with a little patience and effort, it is certainly possible! I've put together several tips and #things to remember when trying to train your child to be obedient and behave well in public. Please, keep on reading for effective ways to teach kids to be obedient!
Story first published: Wednesday, October 7, 2015, 14:55 [IST]
X
Desktop Bottom Promotion