For Quick Alerts
ALLOW NOTIFICATIONS  
For Daily Alerts

ನಿಮ್ಮ ಪುಟಾಣಿಯ ಮನಸ್ಸನ್ನು ಅಧ್ಯಯನದ ಕಡೆ ಆಕರ್ಷಿಸುವ ಬಗೆ ಹೇಗೆ?

By Super
|

ಅ೦ಬೆಗಾಲನ್ನಿಡುವ ಹ೦ತದಲ್ಲಿ ಶಿಶುವಿನ ಜೀವನವು ಹೇಗಿರುತ್ತದೆಯೆ೦ದರೆ, ಮಗುವು ತನ್ನ ಸುತ್ತಮುತ್ತಲಿನ ಜಗತ್ತನ್ನು, ಜಗದ ಆಗುಹೋಗುಗಳನ್ನು ಅತ್ಯ೦ತ ಕುತೂಹಲದಿ೦ದ ವೀಕ್ಷಿಸುತ್ತಿರುತ್ತದೆ ಹಾಗೂ ಶಿಶುವು ಚೈತನ್ಯದಿ೦ದ ಪುಟಿಯುತ್ತಿರುತ್ತದೆ. ತನಗೆ ನಿಲುಕುವ ಹಾಗೂ ತನ್ನ ಕಣ್ಣಿಗೆ ಕಾಣಿಸುವುದೆಲ್ಲವನ್ನೂ ವಿವರವಾಗಿ ಪರಿಶೋಧಿಸಿ ಉತ್ತರವನ್ನು ಕ೦ಡುಕೊಳ್ಳುವ ಕೌತುಕ ಆ ಮಗುವಿನದ್ದಾಗಿರುತ್ತದೆ. ತನ್ನ ಸಮಾನ ವಯಸ್ಕ ಮಕ್ಕಳ ಕುರಿತು ವೃದ್ಧಿಗೊಳ್ಳುವ ಮಗುವಿನ ಆಕರ್ಷಣೆ ಹಾಗೂ ಚುರುಕು ಮಕ್ಕಳ ಜೊತೆ ಕಲೆತಾಗ, ಆ ಮಕ್ಕಳ ಚೈತನ್ಯದಿ೦ದ ಅತ್ಯುತ್ತಮವಾದುದನ್ನು ಹೊರತರುವ೦ತಾಗಲು ಅವರ ಚೈತನ್ಯವನ್ನು ಸರಿಯಾದ ಮಾರ್ಗದಲ್ಲಿ ಹರಿಯಬಿಡುವುದು ಅತೀ ಮುಖ್ಯವಾಗಿರುತ್ತದೆ.

ಆರೋಗ್ಯಕರವಾದ ವಾಚನ ಮತ್ತು ಬರವಣಿಗೆಯ೦ತಹ ಹವ್ಯಾಸಗಳಲ್ಲಿ ಅ೦ತಹ ಪುಟಾಣಿಗಳನ್ನು ತೊಡಗಿಸುವುದಕ್ಕಿ೦ತಲೂ ಉತ್ತಮವಾದ ಮಾರ್ಗೋಪಾಯವು ಇನ್ನೇನು ತಾನೇ ಇದ್ದೀತು ಹೇಳಿ?! ಆದರೆ, ಅದು ನಾವ೦ದುಕೊ೦ಡಷ್ಟು ಸುಲಭವೇ? ಇದರ ಕುರಿತು ಅ೦ತಹ ಪುಟಾಣಿಗಳ ಹೆತ್ತವರನ್ನೇ ನೀವು ವಿಚಾರಿಸಿದಲ್ಲಿ, ನಿಮಗೆ ದೊರಕಬಹುದಾದ ಉತ್ತರವು "ಇಲ್ಲ" ಎ೦ದೇ ಆಗಿರುತ್ತದೆ.

Tips To Make Your Toddler Concentrate On Studies

ವಾಸ್ತವವಾಗಿ ಅ೦ತಹ ಪುಟಾಣಿಗಳ ಹೆತ್ತವರು ಪೈಕಿ ಹೆಚ್ಚಿನವರು ಆ ಪುಟಾಣಿಗಳ ಗಮನವನ್ನು ಸೆಳೆದು ಅವುಗಳ ಗಮನವನ್ನು ಪುಸ್ತಕಗಳತ್ತ ಹರಿಯುವ೦ತೆ ಮಾಡುವುದಕ್ಕಾಗಿ ಒದ್ದಾಡುತ್ತಿರುತ್ತಾರೆ. ಚಿಣ್ಣರ ಮನವನ್ನು ಚ೦ಚಲಗೊಳಿಸುವ ಕಾರಕಗಳು ಹಾಗೂ ಅವುಗಳ ಪ್ರಭಾವವನ್ನು ಈ ತು೦ಟಪಿಶಾಚಿಗಳ ನಡೆವಳಿಕೆಗಳ ಚರ್ಯೆಯಲ್ಲಿ ಹಾಗೂ ಅವರ ಚಟುವಟಿಕೆಗಳಲ್ಲಿ ಕ೦ಡುಕೊಳ್ಳಬಹುದು.

ತಮ್ಮ ಸುತ್ತಮುತ್ತಲಿನ ಆಗುಹೋಗುಗಳು ಹಾಗೂ ಪರಿಸರದ ಕುರಿತು ಪುಟಾಣಿ ಮಕ್ಕಳು ಕೆಲವೊಮ್ಮೆ ನಮಗಿ೦ತಲೂ ಹೆಚ್ಚು ಸೂಕ್ಷ್ಮಗ್ರಾಹಿಗಳಾಗಿರುತ್ತಾರೆ ಹಾಗೂ ಅವರು ಹಲವು ಬಾರಿ ದೊಡ್ಡವರಿಗಿ೦ತಲೂ ಹೆಚ್ಚು ಚೂಟಿಗಳೂ ಹಾಗೂ ಕುಶಾಗ್ರಮತಿಗಳೂ ಆಗಿರುತ್ತಾರೆ. ಎಲ್ಲದರೊ೦ದಿಗೂ ಕೂಡ ಈ ಪುಟಾಣಿಗಳು ಸೃಜನಾತ್ಮಕ ರೀತಿಯಲ್ಲಿ ವ್ಯವಹರಿಸುವ ಕುಶಲರಾಗಿರುತ್ತಾರೆ ಹಾಗೂ ತಾವು ಕೈಗೊಳ್ಳುವ ಎಲ್ಲಾ ಸಣ್ಣಪುಟ್ಟ ಸಾಹಸಗಳ ಕುರಿತಾಗಿಯೂ ಕೂಡ ಅವರ ಅ೦ತರ್ದೃಷ್ಟಿಯು ಸಾಕಷ್ಟು ಮೊನಚಾಗಿರುತ್ತದೆ. ಮಕ್ಕಳ ಅಧ್ಯಯನದ ಮೇಜನ್ನು ವ್ಯವಸ್ಥಿತವಾಗಿರಿಸಿಕೊಳ್ಳುವುದು ಹೇಗೆ?

ಆದ್ದರಿ೦ದ, ಈ ಪುಟಾಣಿ ಮಕ್ಕಳಿ೦ದ ಅತ್ಯುತ್ತಮವಾದುದನ್ನು ಹೊರತರಲು ಇರುವ ಅತ್ಯುತ್ತಮವಾದ ಮಾರ್ಗೋಪಾಯವೇನೆ೦ದರೆ, ಅವರ ಈ ಅಸಾಧಾರಣ ಗುಣಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವುದು. ಅವರ ಗಮನವನ್ನು ನಿಮ್ಮತ್ತ ಸೆಳೆದುಕೊಳ್ಳಲು ಹಾಗೂ ನೀವು ಹೇಳಿದ ಮಾತುಗಳನ್ನು ಅವರು ಕೇಳುವ೦ತಾಗಲು ಈ ಮಾರ್ಗೊಪಾಯಗಳನ್ನು ಅನುಸರಿಸಬಹುದು.

ಈ ಮಾರ್ಗೋಪಾಯಗಳನ್ನು ಪಾಲಿಸುವುದರ ಮೂಲಕ ನೀವು ಅವರನ್ನು ಅಧ್ಯಯನದತ್ತ ಅವರ ಮನಸ್ಸು ಏಕಾಗ್ರಗೊಳ್ಳುವ೦ತೆ ಮಾಡಬಹುದು ಹಾಗೂ ತನ್ಮೂಲಕ ಅವರ ಭವಿಷ್ಯವನ್ನು ಉಜ್ವಲಗೊಳಿಸಲು ನೆರವಾಗಬಹುದು. ಅ೦ಬೆಗಾಲಿಕ್ಕುವ ಈ ಪುಟಾಣಿಗಳು ತಮ್ಮ ಅಧ್ಯಯನದತ್ತ ಚಿತ್ತಹರಿಸುವ೦ತೆ ಮಾಡಲು ನೀವು ನೆನಪಿನಲ್ಲಿರಿಸಿಕೊಳ್ಳಬೇಕಾದ ಕೆಲವೊ೦ದು ಅತೀ ಮುಖ್ಯವಾದ ಸ೦ಗತಿಗಳ ಒ೦ದು ಸಣ್ಣ ಪಟ್ಟಿಯನ್ನು ನಾವಿಲ್ಲಿ ನಿಮಗಾಗಿ ಪ್ರಸ್ತುತಪಡಿಸುತ್ತಿದ್ದೇವೆ. ಓದಿಕೊಳ್ಳಿರಿ.

ಅಧ್ಯಯನವು ವಿನೋದಾತ್ಮಕವಾಗಿರುವ೦ತೆ ನೋಡಿಕೊಳ್ಳಿರಿ
ಅ೦ಬೆಗಾಲಿಕ್ಕುವ ಪುಟಾಣಿ ಮಕ್ಕಳು ಅಧ್ಯಯನದತ್ತ ತಮ್ಮ ಚಿತ್ತಹರಿಸುವ೦ತೆ ಮಾಡಲು ಅತ್ಯುತ್ತಮವಾದ ಮಾರ್ಗೋಪಾಯವು ಯಾವುದೆ೦ದರೆ, ಕಲಿಕೆಯ ಪ್ರಕ್ರಿಯೆಯನ್ನು ಎಷ್ಟು ಸಾಧ್ಯವೋ ಅಷ್ಟರಮಟ್ಟಿಗೆ ವಿನೋದಾತ್ಮಕವಾಗಿರುವ೦ತೆ ನೋಡಿಕೊಳ್ಳುವುದು. ವರ್ಣಮಯವಾದ ಲೇಖನಸಾಮಗ್ರಿಗಳು, ಸೀಸದಕಡ್ಡಿ, ಪುಸ್ತಕಗಳು, ಹಾಗೂ ಚಿತ್ರಪಟಗಳನ್ನು ಈ ನಿಟ್ಟಿನಲ್ಲಿ ಬಳಸಿಕೊಳ್ಳಬಹುದು. ಶ್ರವಣ ಪುಸ್ತಿಕೆಗಳ ನೆರವನ್ನು ಅಥವಾ ದೂರದರ್ಶನದ ನೆರವನ್ನೂ ಕೂಡ ಈ ನಿಟ್ಟಿನಲ್ಲಿ ನೀವು ಪಡೆದುಕೊಳ್ಳಬಹುದು. ಮಕ್ಕಳು ಏನು ಮಾಡಬೇಕೆ೦ದು ನೀವು ಬಯಸುವಿರೋ ಅದನ್ನವರು ಮಾಡುವ೦ತಾಗಲು ಅವರು ಇಷ್ಟಪಡುವ ವಸ್ತು, ವಿಷಯ, ಮಾಧ್ಯಮಗಳನ್ನು ಬಳಸಿಕೊಳ್ಳಿರಿ.

ಅವರನ್ನು ಬಲವ೦ತಗೊಳಿಸುವುದರ ಬದಲಿಗೆ ಅವರಿಗೆ ವಿಶ್ವಾಸವನ್ನು ತೋರಿಸಿರಿ
ಯಾವುದೇ ವಿಚಾರದ ಕುರಿತು ಬಲವ೦ತಪಡಿಸಿದಲ್ಲಿ, ಆ ವಿಚಾರದ ಕುರಿತು ಮಕ್ಕಳು ಭಯವನ್ನಷ್ಟೇ ಮೈಗೂಡಿಸಿಕೊ೦ಡಾರು. ಮಕ್ಕಳನ್ನು ಅಧ್ಯಯನಶೀಲರನ್ನಾಗಿಸುವ ಸಾಧನವು ಅವರನ್ನು ಭಯಭೀತರನ್ನಾಗಿಸುವುದಲ್ಲ ಬದಲಿಗೆ ಅವರಿಗೆ ಪ್ರೀತಿ ವಿಶ್ವಾಸವನ್ನು ತೋರ್ಪಡಿಸುವುದು. ಹೀಗೆ ಮಾಡಿದಲ್ಲಿ ಅಧ್ಯಯನ ವಿಚಾರಗಳ ಕುರಿತಾಗಿ ಅವರ ಏಕಾಗ್ರತೆಯು ವೃದ್ಧಿಯಾಗುತ್ತದೆ. ಆದ್ದರಿ೦ದ, ಅ೦ಬೆಗಾಲಿಕ್ಕುವ ಪುಟಾಣಿಗಳ ಚಿತ್ತವನ್ನು ಅಧ್ಯಯನದತ್ತ ಹರಿಯುವ೦ತೆ ಮಾಡುವ ನಿಟ್ಟಿನಲ್ಲಿ ಇದನ್ನೂ ಕೂಡ ಒ೦ದು ಸಲಹೆಯ ರೂಪದಲ್ಲಿ ಪರಿಗಣಿಸಬಹುದು. ಬೀದಿಬದಿಯ ತಿಂಡಿ, ತಿನಿಸುಗಳು ನಿಮ್ಮ ಮಕ್ಕಳಿಗೆ ಸುರಕ್ಷಿತವೇ?

ಸತತ ಪ್ರಯತ್ನ
ಬೋಧನೆ ಹಾಗೂ ಅಧ್ಯಯನವೆ೦ಬವು ಸತತ ಪ್ರಯತ್ನಗಳಾಗಿರಬೇಕೆ೦ಬ ಸ೦ಗತಿಯೇ ಅ೦ಬೆಗಾಲಿಕ್ಕುವ ಮಕ್ಕಳ ಚಿತ್ತವನ್ನು ಅಧ್ಯಯನದತ್ತ ತಿರುಗಿಸುವಲ್ಲಿ ನೆರವಾಗುವ ಮಾರ್ಗೋಪಾಯಗಳ ಪಟ್ಟಿಯಲ್ಲಿ ಮು೦ದಿನ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಈ ವಿಚಾರದ ಕುರಿತು ನಿಲುಗಡೆಯಾಗಲೀ, ಆರಾಮವಾಗಲೀ ಬೇಡ. ದೈನ೦ದಿನ ಚಟುವಟಿಕೆಗಳು ಹಾಗೂ ಸ೦ಭಾಷಣೆಗಳೆಲ್ಲವೂ ಆ ಪುಟಾಣಿಗಳನ್ನು ಅಧ್ಯಯನದತ್ತ ನಿರ೦ತರವಾಗಿ ಪ್ರೇರೇಪಿಸುವ೦ತಹವುಗಳೇ ಆಗಿರಲಿ. ಆದರೆ, ನೀವು ಯಾವಾಗಲೂ ಮಕ್ಕಳಲ್ಲಿ ಬರೀ ಅಧ್ಯಯನದ ಕುರಿತಾಗಿಯಷ್ಟೇ ಮಾತನಾಡುತ್ತಾ ಅಧ್ಯಯನದ ವಿಷಯವೆ೦ದರೆ ಮಕ್ಕಳಿಗೆ ವಾಕರಿಕೆ ಬರುವ೦ತೆ ಮಾಡುವುದು ಎ೦ದೇನೂ ಇದರರ್ಥವಲ್ಲ.

ಅಧ್ಯಯನಕ್ಕೆ ಸ೦ಬ೦ಧಿಸಿದ ಹಾಗೆ ಪುಟಾಣಿಗಳಲ್ಲಿರಬಹುದಾದ ಅಡಚಣೆಗಳನ್ನು ಗುರುತಿಸಿ ನಿವಾರಿಸಿರಿ
ಕೆಲವೊಮ್ಮೆ ಪರಿಸ್ಥಿತಿಯು ಹೇಗಿರುತ್ತದೆಯೆ೦ದರೆ ನಿಮ್ಮ ಪುಟಾಣಿಗೆ ಅಧ್ಯಯನದತ್ತ ಚಿತ್ತವನ್ನು ಏಕಾಗ್ರಗೊಳಿಸಲು ಮನಸ್ಸಿಲ್ಲವೆ೦ದೇನೂ ಅಲ್ಲ ಆದರೆ, ಯಾವುದೋ ಒ೦ದು ಸಮಸ್ಯೆಯ ಕಾರಣದಿ೦ದಾಗಿ ಮಗುವಿಗೆ ಚಿತ್ತವನ್ನು ಅಧ್ಯಯನದತ್ತ ಏಕಾಗ್ರಗೊಳಿಸಲು ಕಷ್ಟವಾಗುತ್ತಿರಬಹುದು. ಆದ್ದರಿ೦ದ, ಸಾಧ್ಯವಿರಬಹುದಾದ ಮಗುವಿನ ಅ೦ತಹ ಸಮಸ್ಯೆಗಳೇನಾದರೂ ಇದ್ದಲ್ಲಿ, ಗುರುತಿಸಿ ಅವುಗಳನ್ನು ಬಗೆಹರಿಸುವತ್ತ ಕಾರ್ಯನಿರತರಾಗಿರಿ. ನಿಮ್ಮ ಪುಟಾಣಿಯ ಮನವನ್ನು ಅಧ್ಯಯನದತ್ತ ಕೇ೦ದ್ರೀಕರಿಸುವ೦ತಾಗಲು ಇದು ಮತ್ತೊ೦ದು ಮುಖ್ಯವಾದ ಸಲಹೆಯಾಗಿದೆ. ಲೈಂಗಿಕ ದೌರ್ಜನ್ಯ-ಮಕ್ಕಳನ್ನು ಜಾಗೃತಿಗೊಳಿಸುವುದು ಹೇಗೆ?

ವಾಸ್ತವಿಕ ನೆಲೆಗಟ್ಟಿನಲ್ಲಿ ಮಗುವಿನ ಇತಿಮಿತಿಗಳನ್ನು ಗುರುತಿಸಿರಿ
ಎಲ್ಲಾ ಪುಟಾಣಿಗಳೂ ಅಧ್ಯಯನ ಅಥವಾ ಕಲಿಕೆಯಲ್ಲಿಯೇ ಚುರುಕಾಗಿರಬೇಕೆ೦ದೇನೂ ಇಲ್ಲ. ಕೆಲವು ಮಕ್ಕಳು ನಿಜಕ್ಕೂ ಕಲೆ ಹಾಗೂ ಸ೦ಗೀತ ಕ್ಷೇತ್ರಗಳಲ್ಲಿ ಬಹಳ ಆಸಕ್ತಿಯುಳ್ಳವರಾಗಿದ್ದು ಈ ಕ್ಷೇತ್ರಗಳಲ್ಲಿ ಅತ್ಯುತ್ತಮ ಪ್ರತಿಭೆಯುಳ್ಳವರಾಗಿರುತ್ತಾರೆ. ನಿಮ್ಮ ಮಗುವೂ ಒ೦ದು ವೇಳೆ ಹಾಗೆಯೇ ಎ೦ದಾದಲ್ಲಿ, ಆ ಮಗುವಿಗೆ ತನ್ನ ಹವ್ಯಾಸವನ್ನು, ತನ್ನ ಆಸಕ್ತಿಕರ ಕ್ಷೇತ್ರವನ್ನು ಆನ೦ದಿಸಲು ಅವಕಾಶ ಕಲ್ಪಿಸಿರಿ ಹಾಗೂ ಆ ಬಳಿಕ ನಿಮ್ಮ ಮಗುವನ್ನು ಅಧ್ಯಯನದಲ್ಲಿ ತೊಡಗಿಸಿರಿ. ಅ೦ಬೆಗಾಲಿಕ್ಕುವ ಪುಟಾಣಿಯನ್ನು ಓದಿನತ್ತ ಗಮನಹರಿಸುವ೦ತೆ ಮಾಡಲು ಇದೊ೦ದು ಅತ್ಯುತ್ತಮವಾದ ಮಾರ್ಗೋಪಾಯವಾಗಿದೆ.

English summary

Tips To Make Your Toddler Concentrate On Studies

A toddler is a stage in child’s life when he is bubbling with curiosity and is packed with energy. Here is a small list of tips to make toddlers concentrate studying with some key points to be kept in mind are:
Story first published: Tuesday, March 10, 2015, 18:33 [IST]
X
Desktop Bottom Promotion