For Quick Alerts
ALLOW NOTIFICATIONS  
For Daily Alerts

ಮಕ್ಕಳ ಮುಗ್ಧ ಮನಸ್ಸನ್ನು ನಿರಾಸೆಯ ಕೂಪಕ್ಕೆ ತಳ್ಳಬೇಡಿ!

By Super
|

ಮಕ್ಕಳು ಭಾರೀ ಚೂಟಿಯಾಗಿರುತ್ತಾರೆ. ಈ ಚೂಟಿತನದಿಂದ ನಮ್ಮನ್ನು ಅವರು ಯಾಮಾರಿಸುವುದು ನಡೆಯುತ್ತಿರುತ್ತದೆ. ಮಕ್ಕಳು ಸಂಪೂರ್ಣವಾಗಿ ತಮ್ಮ ಭಾವನೆಗಳನ್ನು ಹೊರ ಹಾಕುವವರೆಗು ಅವರು ಏನು ಮಾಡುತ್ತಾರೆ ಎಂದು ಊಹಿಸಲು ಸಾಧ್ಯವಾಗುವುದಿಲ್ಲ. ಮಗುವಿನ ಭಾವನಾತ್ಮಕ ಬೆಳವಣಿಗೆಯು ಅದರ ದೈಹಿಕ ಬೆಳವಣಿಗೆಗೆ ಅತ್ಯಾವಶ್ಯಕವಾಗಿ ಬೇಕಾಗುತ್ತದೆ. ಮಕ್ಕಳು ವಿವಿಧ ಬಗೆಯ ತಂತ್ರಗಳನ್ನು ಅನುಸರಿಸುತ್ತಾರೆ.

ಪೋಷಕರಾದವರು ಅದನ್ನು ತಿಳಿದುಕೊಂಡಿರಬೇಕಾದುದು ಅತ್ಯಗತ್ಯ. ಮಕ್ಕಳನ್ನು ಈ ವರ್ತನೆಗಳ ಕುರಿತು ನಿಂದಿಸುವ ಮೊದಲು, ಅವರಿಗೆ ಬೇಸರ ಮತ್ತು ನಿರಾಸೆ ಉಂಟು ಮಾಡುವ ವಿಷಯಗಳ ಕುರಿತು ತಿಳಿದುಕೊಳ್ಳುವುದು ಉತ್ತಮ. ಮಕ್ಕಳಿಗೆ ಹಲವಾರು ವಿಚಾರಗಳು ಬೇಸರವನ್ನುಂಟು ಮಾಡುತ್ತವೆ. ಅದಕ್ಕೆ ತಕ್ಕಾಗಿ ಮಕ್ಕಳು ಸಹ ಋಣಾತ್ಮಕವಾಗಿ ಪ್ರತಿಕ್ರಿಯೆಯನ್ನು ತೋರಿಸುತ್ತಾರೆ.

Things That Can Upset Kids

ಮಕ್ಕಳಿಗೆ ಹಲವಾರು ವಿಚಾರಗಳು ನಿರಾಸೆಯನ್ನು ಮತ್ತು ಬೇಸರವನ್ನುಂಟು ಮಾಡುತ್ತವೆ. ಹಾಗಾಗಿ ಅವರ ವರ್ತನೆಯಲ್ಲಿ ಬದಲಾವಣೆಗಳನ್ನು ನಾವು ಕಾಣಬಹುದು. ಅದರಲ್ಲಿಯೂ ಕೆಟ್ಟ ವರ್ತನೆಗಳು ಕಂಡು ಬಂದಲ್ಲಿ ಅದನ್ನು ಉದಾಸೀನ ಮಾಡಬೇಡಿ. ಇದರಿಂದ ಭವಿಷ್ಯದಲ್ಲಿ ಸಮಸ್ಯೆಗಳು ಕಂಡು ಬರಬಹುದು.

ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಸ್ಪಂದಿಸುವ ಸವಾಲನ್ನು ನಿಮ್ಮ ಮಕ್ಕಳು ಸ್ವೀಕರಿಸುತ್ತಾರೋ, ಇಲ್ಲವೋ ಎಂಬುದನ್ನು ಸರಿಯಾಗಿ ನೀವು ಖಾತ್ರಿಪಡಿಸಿಕೊಳ್ಳಬೇಕು. ಬನ್ನಿ ಮಕ್ಕಳಿಗೆ ಬೇಸರ ಮತ್ತು ನಿರಾಸೆ ತರುವ ವಿಚಾರಗಳನು ತಿಳಿದುಕೊಳ್ಳಿ. ಈ ರೀತಿಯ ಮಾತು ಪ್ರಯೋಗ ಮಕ್ಕಳ ಮೇಲೆ ಬೇಡ!

ನಿರುತ್ಸಾಹಪಡಿಸುವಿಕೆ
ಕೆಲವು ಪೋಷಕರು ತಮ್ಮ ಮಕ್ಕಳ ಸಾಧನೆಯನ್ನು ಪ್ರೋತ್ಸಾಹ ಮಾಡುವುದನ್ನು ಮರೆತಿರುತ್ತಾರೆ. ಮಕ್ಕಳ ಸಾಧನೆಯನ್ನು ಪ್ರೋತ್ಸಾಹಿಸಲು ಯಾವುದೇ ಕಾರಣಕ್ಕು ಮರೆಯಬೇಡಿ. ನಿಮ್ಮ ಪ್ರೋತ್ಸಾಹ ಒಂದು ಮಾತಿಗಾಗಿ ಅವರು ಎದುರು ನೋಡುತ್ತಿರುತ್ತಾರೆ. ಇದನ್ನು ಯಾವಾಗ ನೀವು ಮಾಡುವುದಿಲ್ಲವೋ, ಆಗ ಅವರಿಗೆ ಇದರಿಂದ ನೋವಾಗುತ್ತದೆ.

ಋಣಾತ್ಮಕ ಪದಗಳು
ಪೋಷಕರು ಮಕ್ಕಳ ಕುರಿತು ಬಳಸುವ ಕೆಲವೊಂದು ಋಣಾತ್ಮಕ ಪದಗಳು ಅವರ ಮನಸ್ಸಿಗೆ ನೋವನ್ನುಂಟು ಮಾಡುತ್ತವೆ. ಇದು ಮಕ್ಕಳನ್ನು ನಕಾರಾತ್ಮಕ ಪರಿಸರಕ್ಕೆ ದೂಡುತ್ತದೆ. ಮಕ್ಕಳು ಪ್ರತಿಯೊಂದಕ್ಕು ತಮ್ಮ ಪೋಷಕರತ್ತ ನೋಡುತ್ತಾರೆ. ಆದರೆ ಆ ಸಮಯದಲ್ಲಿ ನೀವು ಪೋಷಕರು ಅವರತ್ತ ನಕಾರಾತ್ಮಕವಾಗಿ ನಡೆದಿಕೊಂಡರೆ, ಅದರಿಂದ ಅವರಿಗೆ ನೋವಾಗುತ್ತದೆ. ಅವರ ಸ್ಫೂರ್ತಿಯು ಇದರಿಂದ ಮುದುಡಿಹೋಗುತ್ತದೆ.

ಭಯಭೀತಿ ಉಂಟು ಮಾಡುವುದು ಮತ್ತು ನಿಯಂತ್ರಿಸುವುದು
ಇದು ಸಹ ಮಕ್ಕಳಲ್ಲಿ ನಕಾರಾತ್ಮಕ ಪರಿಣಾಮವನ್ನುಂಟು ಮಾಡುತ್ತದೆ. ಕೆಲವೊಮ್ಮೆ ಮಕ್ಕಳಿಗೆ ಭಯವನ್ನುಂಟು ಮಾಡಿದರೆ, ಅವರು ಕೇಳುತ್ತಾರೆ. ಆದರೆ ಯಾವಾಗಲು ನಿಮ್ಮ ಮಗವನ್ನು ನಿಯಂತ್ರಣದಲ್ಲಿರಿಸಿಕೊಳ್ಳಲು ಹೋದರೆ, ಅದರಿಂದ ಅವರ ಮೇಲೆ ನಕಾರಾತ್ಮಕ ಪರಿಣಾಮವನ್ನುಂಟು ಮಾಡುತ್ತದೆ. ಇದರಿಂದ ಅವರ ಪ್ರತಿಕ್ರಿಯೆ ಸಹ ನಕಾರಾತ್ಮಕವಾಗಿರುತ್ತದೆ. ಮಗುವಿನ ಪದ ಉಚ್ಛಾರವನ್ನು ಉತ್ತಮಗೊಳಿಸಲು ಸಲಹೆಗಳು

ಕೌಟುಂಬಿಕ ಸಮಸ್ಯೆಗಳು
ಮನೆಯಲ್ಲಿ ರಂಪಾಟ ಮತ್ತು ರಾದ್ಧಾಂತಗಳು ನಡೆಯುತ್ತ ಇದ್ದರೆ, ಅದರಿಂದ ಸಹ ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮವುಂಟಾಗುತ್ತದೆ. ಇದರಿಂದ ಅವರು ಭಾವನಾತ್ಮಕವಾಗಿ ಘಾಸಿಗೊಳಗಾಗುತ್ತಾರೆ ಎಂಬುದು ದುರದೃಷ್ಟಕರ ಸಂಗತಿ. ಮಗು ದೊಡ್ಡವನಾದಾಗ ಅವರಿಗೆ ಇದು ಅರ್ಥವಾಗುತ್ತದೆ. ಅಲ್ಲಿಯವರೆಗು ಮಕ್ಕಳ ಮುಂದೆ ನಿಮ್ಮ ಜಗಳಗಳನ್ನು ಮಾಡಲು ಹೋಗಬೇಡಿ.

English summary

Things That Can Upset Kids

Kids are very tricky and in fact quite complicated. A lot of guessing will be needed to know what exactly is in their minds until they can express their feelings. The emotional development of the child is as important as the physical development.
X
Desktop Bottom Promotion