For Quick Alerts
ALLOW NOTIFICATIONS  
For Daily Alerts

ಬೇಸಿಗೆಯ ಸುಡು ಬಿಸಿಲಿಗೆ ಪುಟ್ಟ ಕಂದಮ್ಮನ ಆರೈಕೆ ಹೇಗಿರಬೇಕು?

|

ಹೊಸ ಮಗುವಿನ ನಿರೀಕ್ಷೆಯಲ್ಲಿ ನೀವು ಇದ್ದಲ್ಲಿ, ನಿಜಕ್ಕೂ ಆ ನಿರೀಕ್ಷೆಯ ಭಾರ ನಿಮಗೆ ಗೊತ್ತಿರುತ್ತದೆ. ಈ ಬೇಸಿಗೆಯಲ್ಲಿ ಮಕ್ಕಳು ಜನಿಸಿದರೆ ಒಂದು ರೀತಿ ಒಳ್ಳೆಯದೇ, ಈ ಮಕ್ಕಳಿಗೆ ನೆಗಡಿ ಮತ್ತು ಕಾಯಿಲೆ ಬರುವ ಸಾಧ್ಯತೆಗಳು ಕಡಿಮೆ ಇರುತ್ತವೆ. ಆದರೆ ಈ ಸುಡುವ ಬಿಸಿಲು ಮತ್ತು ಇದರ ಉಷ್ಣಾಂಶವು ಬಾಣಂತಿಯರಿಗೆ ತಲೆನೋವಾಗಿ ಪರಿಣಮಿಸುತ್ತದೆ. ಅದಕ್ಕಾಗಿ ಈ ಬೇಸಿಗೆ ಸಲಹೆಗಳನ್ನು ಪಾಲಿಸಿ ಮತ್ತು ವ್ಯತ್ಯಾಸವನ್ನು ಕಾಣಿ.

ಹೊರಾಂಗಣವಾಗಿರಲಿ ಅಥವಾ ಒಳಾಂಗಣವಾಗಿರಲಿ, ಬಿಸಿಲು ಮತ್ತು ಉಷ್ಣಾಂಶವು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ತರುತ್ತದೆ. ಈ ಸಮಯದಲ್ಲಿ ದಡಾರ ಮತ್ತು ಸಿಡುಬು ರೋಗಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಪ್ರತಿಯೊಬ್ಬ ಬಾಣಂತಿಯರು ಈ ಸಂದರ್ಭದಲ್ಲಿ ಸುರಕ್ಷಿತವಾಗಿರಲು ಅಗತ್ಯವಾದ ಸಲಹೆಗಳನ್ನು ನಿರೀಕ್ಷಿಸುತ್ತಾರೆ.

 Summer Tips For The New Born

ಬೇಸಿಗೆಯಲ್ಲಿ ಹಲವರಿಗೆ ಬಿಸಿಲಿನ ಝಳದಿಂದ ಸನ್ ಬರ್ನ್ ಮತ್ತು ಹೀಟ್ ಸ್ಟ್ರೋಕ್ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಇದಕ್ಕೆ ತೊಡುವ ಬಟ್ಟೆ ಮತ್ತು ನೀರಿನಂಶದ ಕೊರತೆ ಕಾರಣವಾಗಿರುತ್ತದೆ. ಹೊಟ್ಟೆಯ ಮೇಲೆ ಹೆಚ್ಚಾಗಿ ಮಲಗುವುದರಿಂದ ಗರ್ಭಿಣಿಯರಲ್ಲಿ ಇನ್‌ಫ್ಯಾಂಟ್ ಡೆಥ್ ಸಿಂಡ್ರೋಮ್ ಕಂಡುಬರುತ್ತದೆ, ಬೆನ್ನಿಗೆ ಒರಗಿಕೊಂಡು ಮಲಗಿದರೆ, ಬೆನ್ನಿನಲ್ಲಿ ಗುಳ್ಳೆಗಳು ಕಂಡು ಬರುತ್ತವೆ. ಈ ಸಮಸ್ಯೆಯಿಂದ ಪಾರಾಗಲು ಯಾವ ದಾರಿಯನ್ನು ಅನುಸರಿಸಬೇಕು ಎಂದು ಬಾಣಂತಿಯರು ತಲೆ ಕೆಡಿಸಿಕೊಳ್ಳುತ್ತಾರೆ. ಅಂತಹವರಿಗಾಗಿ ನಾವು ಇಲ್ಲಿ ಕೆಲವೊಂದು ಸಲಹೆಗಳನ್ನು ನೀಡಿದ್ದೇವೆ. ಓದಿಕೊಳ್ಳಿ.

ತಂಪಾದ ಬಟ್ಟೆಗಳು


ಈ ಕಾಲದಲ್ಲಿ ಬಿಗಿಯಾದ ಬಟ್ಟೆಗಳು ಹೀಟ್ ಸ್ಟ್ರೋಕ್‍ಗೆ ಕಾರಣವಾಗುತ್ತವೆ. ಇದರಿಂದ ಮಕ್ಕಳಿಗೆ ಸೆಖೆ ಹೆಚ್ಚಾಗುತ್ತದೆ. ಆದ್ದರಿಂದ ಮಕ್ಕಳಿಗೆ ಸ್ವಚ್ಛವಾದ ಹತ್ತಿಯ ಬಟ್ಟೆಗಳನ್ನು ಹಾಕಿ, ಇದರಿಂದ ಅವರ ತ್ವಚೆಗೆ ಯಾವುದೇ ಹಾನಿಯುಂಟಾಗುವುದಿಲ್ಲ. ಈ ಸಲಹೆಯನ್ನು ಬೇಸಿಗೆಯಲ್ಲಿ ತಪ್ಪದೆ ಪಾಲಿಸಿ.

ಮೆದುವಾದ ಮತ್ತು ಸರಿಯಾಗಿ ಬೇಯಿಸಿದ ಆಹಾರ
ಆಹಾರಗಳು ಬೇಸಿಗೆಯಲ್ಲಿ ಸಾಮಾನ್ಯವಾಗಿ ಕೆಟ್ಟು ಹೋಗುತ್ತವೆ. ನಿಮ್ಮ ಮಗುವಿಗೆ ಆಹಾರ ಬೇಕಾದಾಗ ತಾಜಾ ಆಗಿ ತಯಾರಿಸಿಕೊಳ್ಳಿ. ತಾಜಾ ಆಹಾರವಿಲ್ಲದೆ ಈ ಸಲಹೆಗಳು ಪೂರ್ಣಗೊಳ್ಳುವುದಿಲ್ಲ. ಪ್ರತಿ ಬಾರಿ ಆಹಾರವನ್ನು ಸೇವಿಸುವಾಗ ಅದನ್ನು ರುಚಿ ನೋಡಿ, ನಂತರ ತಿನ್ನಲು ನೀಡಿ.

ನೀರಿನಂಶ


ಡೀಹೈಡ್ರೇಷನ್ ಈ ಅವಧಿಯಲ್ಲಿ ಕಾಣಿಸಿಕೊಳ್ಳುವ ಅತ್ಯಂತ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಹಾಗಾಗಿ ಈ ಬೇಸಿಗೆಯಲ್ಲಿ ಅಗತ್ಯ ಪ್ರಮಾಣದಷ್ಟು ನೀರನ್ನು ನಿಮ್ಮ ಮಗುವಿಗೆ ನೀಡಲು ಮರೆಯಬೇಡಿ.

ಶುಚಿತ್ವವನ್ನು ಕಾಪಾಡುವುದು
ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರೆ, ಶುಚಿತ್ವವನ್ನು ಕಾಪಾಡಿಕೊಳ್ಳಬೇಕು. ಈ ಅವಧಿಯಲ್ಲಿ ಕಾಣಿಸಿಕೊಳ್ಳುವ ಹೆಚ್ಚಿನ ಬೆವರು, ನಿಮ್ಮ ಮಗುವಿನ ತ್ವಚೆಯ ಮೇಲೆ ಗುಳ್ಳೆಗಳು, ಇತ್ಯಾದಿ ತ್ವಚೆಯ ಸಮಸ್ಯೆಗಳನ್ನುಂಟು ಮಾಡಬಹುದು. ಶುಚಿಯಾಗಿಲ್ಲದ ಸ್ಥಳಗಳು ನಿಮ್ಮ ಮಗುವಿಗೆ ಬರುವ ಅನೇಕ ಕಾಯಿಲೆಗಳ ತವರು ಮನೆಯಾಗಿರುತ್ತದೆ.

ಸಂಜೆ ವಾಕ್ ಮಾಡಿ
ಆದಷ್ಟು ನಿಮ್ಮ ಮಗುವನ್ನು ಬಿಸಿಲಿನಲ್ಲಿ ಕರೆದುಕೊಂಡು ಹೋಗಬೇಡಿ. ಮಗುವಿಗೆ ಬಿಸಿಲು ಎಂದರೆ ಸರಿಹೋಗುವುದಿಲ್ಲ. ಅದರ ತ್ವಚೆಯು ಇದನ್ನು ತಡೆಯುವುದಿಲ್ಲ. ನಿರ್ಜಲೀಕರಣ ಅಥವಾ ಡಿಹೈಡ್ರೇಶನ್ ಸಮಸ್ಯೆಯು ಸಹ ಇದರಿಂದ ಮಗುವನ್ನು ಕಾಡುತ್ತದೆ.. ಆದ್ದರಿಂದ ಹೊರಾಂಗಣದಲ್ಲಿ ಮಾಡುವ ಕೆಲಸಗಳನ್ನು ಆದಷ್ಟು ಸಂಜೆಯ ಅವಧಿಯಲ್ಲಿ ಮಾಡಿ. ಇಲ್ಲವೇ ಮುಂಜಾನೆ ಮಾಡಿ.

English summary

Summer Tips For The New Born

Tending for a new born baby is an emotional experience. Summer babies are healthier as they are less likely to catch cold and become sick. But summer has its own set of worries for the new mothers due to soaring heat. Follow few summer tips for new born this season & see the difference.
Story first published: Monday, March 23, 2015, 12:46 [IST]
X
Desktop Bottom Promotion