For Quick Alerts
ALLOW NOTIFICATIONS  
For Daily Alerts

ಚಿಣ್ಣರ ಪಾಲಿನ ಸ್ವರ್ಗವೆಂದೆನಿಸಿರುವ ಬೇಸಿಗೆ ಶಿಬಿರಗಳು

By Deepak
|

ನಿಮ್ಮ ಮಕ್ಕಳು ಈ ವರ್ಷ ಏಕೆ ಬೇಸಿಗೆ ಶಿಬಿರಗಳಿಗೆ ಹೋಗಲು ಆಯ್ಕೆ ಮಾಡಿಕೊಂಡರು ಎಂದು ನಿಮಗೆ ಅಚ್ಚರಿಯಾಗುತ್ತಿದೆಯೇ? ಇರಲಿ, ಆದರೆ ನಿಮ್ಮ ಮಕ್ಕಳು ಈ ಬೇಸಿಗೆಯನ್ನು ಉಪಯೋಗಕಾರಿಯಾಗಿ ಕಳೆಯಲು ಆಯ್ಕೆ ಮಾಡಿಕೊಂಡಾಗ, ನೀವು ಮರು ಯೋಚಿಸದೆ ಅವರ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸುವುದು ಒಳ್ಳೆಯದು.

ಬೇಸಿಗೆ ಶಿಬಿರಗಳು ಮಕ್ಕಳಿಗೆ ತರಗತಿಯಲ್ಲಿ ಅಥವಾ ಮನೆಯಲ್ಲಿ ಹೇಳಿ ಕೊಡುವ ವಿಚಾರಗಳನ್ನು ತಿಳಿಸುವುದಿಲ್ಲ. ಆದರೂ ಸಹ ಇವುಗಳು ತಮ್ಮದೇ ಆದ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ. ಬೇಸಿಗೆ ಶಿಬಿರದಲ್ಲಿ ಪಾಲ್ಗೊಳ್ಳುವ ಮಕ್ಕಳು ಕೆಲವೊಂದು ನಿರ್ದಿಷ್ಟ ಕಲೆಗಳನ್ನು ಕಲಿತುಕೊಳ್ಳುತ್ತಾರೆ. ಸಾಮಾನ್ಯವಾಗಿ ಮಕ್ಕಳು ಇಡೀ ದಿನವನ್ನು ತರಗತಿಗಳಲ್ಲಿ ಕಳೆಯುತ್ತಾರೆ. ಹೊರಗೆ ಹೋಗಿ ಆಟವಾಡಲು ಅವರಿಗೆ ಸ್ವಲ್ಪ ಸಮಯ ಮಾತ್ರ ದೊರೆಯುತ್ತದೆ.

ಬೆಟ್ಟ, ಗುಡ್ಡ ಮತ್ತು ಪ್ರಾಕೃತಿಕವಾಗಿ ಸುಂದರವಾಗಿರುವ ಸ್ಥಳದಲ್ಲಿ ನಡೆಯುವ ಬೇಸಿಗೆ ಶಿಬಿರಗಳಿಗೆ ಮಕ್ಕಳನ್ನು ಕಳುಹಿಸಿದರೆ, ಅವರಿಗೆ ಕಲಿಯಲು ಹೆಚ್ಚಿನ ಅವಕಾಶ ದೊರೆಯುತ್ತದೆ. ಬೇಸಿಗೆ ಶಿಬಿರಗಳಲ್ಲಿ ಒದಗಿಸುವ ಆಹಾರದಿಂದ ಹಿಡಿದು ಚಟುವಟಿಕೆಗಳವರೆಗೆ ಮಕ್ಕಳಿಗೆ ಪ್ರತಿಯೊಂದು ವಿಚಾರದಲ್ಲಿಯೂ ಕಲಿಯಲು ಹಲವಾರು ಹೊಸ ಅಂಶಗಳು ದೊರೆಯುತ್ತವೆ.

Reasons To Send Kids To Summer Camps

ಹಾಗೆಂದು ಎಲ್ಲಾ ಬೇಸಿಗೆ ಶಿಬಿರಗಳು ನಿಮ್ಮ ಮಗುವಿಗೆ ಪೂರಕವಲ್ಲ. ಅದನ್ನು ನೀವು ಮತ್ತು ನಿಮ್ಮ ಮಗು ಇಬ್ಬರೂ ಸೇರಿ ನಿರ್ಧರಿಸಬೇಕಾಗುತ್ತದೆ. ಆದ್ದರಿಂದ ಸುರಕ್ಷಿತವಾಗಿ ತೋರುವ ಮತ್ತು ಅನುಭವವನ್ನು ಹೊಂದಿರುವ ಶಿಬಿರದ ವ್ಯವಸ್ಥಾಪಕರ ಬಳಿ ನಿಮ್ಮ ಮಗುವನ್ನು ಬಿಡುವುದು ಒಳ್ಳೆಯ ಔತಣ. ಬನ್ನಿ ಬೇಸಿಗೆ ಶಿಬಿರಗಳಲ್ಲಿ ಭಾಗವಹಿಸುವುದರಿಂದ ನಿಮ್ಮ ಮಕ್ಕಳಿಗೆ ದೊರೆಯುವ ಪ್ರಯೋಜನಗಳು ಯಾವುವು ಎಂದು ತಿಳಿದುಕೊಂಡು ಬರೋಣ.

ಚಟುವಟಿಕೆಗಳು
ಈಜು, ಸೈಕ್ಲಿಂಗ್, ಓಟ ಅಥವಾ ಬೆಟ್ಟ ಹತ್ತುವುದು ಮುಂತಾದ ಚಟುವಟಿಕೆಗಳು ಮಕ್ಕಳಲ್ಲಿ ಫಿಟ್‌ನೆಸ್ ಬೆಳೆಯುವಂತೆ ಮಾಡುತ್ತವೆ. ಟಿವಿಗಳ ಮುಂದೆ ಬೇಸಿಗೆಯನ್ನು ಕಳೆಯುವ ಬದಲಿಗೆ ಈ ಚಟುವಟಿಗಳಲ್ಲಿ ಪಾಲ್ಗೊಳ್ಳುವುದರಿಂದ ನಿಮ್ಮ ಮಕ್ಕಳಿಗೆ ಹಲವಾರು ಪ್ರಯೋಜನಗಳು ದೊರೆಯುತ್ತವೆ.

ಆತ್ಮ ವಿಶ್ವಾಸದ ಮಟ್ಟ
ಬೇಸಿಗೆ ಶಿಬಿರಗಳಲ್ಲಿ ಮಕ್ಕಳು ಇತರರ ಜೊತೆಗೆ ಬೆರೆಯುವ ಮೂಲಕ ಸಂವಹನ ಕೌಶಲ್ಯವನ್ನು ಕಲಿಯುತ್ತಾರೆ. ಅವರಲ್ಲಿ ಇದರಿಂದ ಸಾಮಾಜೀಕರಣ ಬೆಳೆಯುತ್ತದೆ. ಹೀಗೆ ಶಿಬಿರವು ಅವರಲ್ಲಿ ಆತ್ಮ ವಿಶ್ವಾಸ ಮಟ್ಟವನ್ನು ಹೆಚ್ಚಿಸುತ್ತದೆ.

ಸ್ನೇಹಿತರು ದೊರೆಯುತ್ತಾರೆ
ಬೇಸಿಗೆ ಶಿಬಿರಗಳು ನಿಮ್ಮ ಮಕ್ಕಳಿಗೆ ಹೊಸ ಸ್ನೇಹಿತರನ್ನು ಒದಗಿಸುವ ಸ್ಥಳಗಳಾಗಿರುತ್ತವೆ. ಏಕೆಂದರೆ ಇಲ್ಲಿ ನಿಮ್ಮ ಮಗುವಿನಂತೆಯೇ ಸಮಾನಾಸಕ್ತಿ ಇರುವ ಮಕ್ಕಳು ಬಂದಿರುತ್ತಾರೆ. ಹೀಗೆ ಸಹಜವಾಗಿ ನಿಮ್ಮ ಮಕ್ಕಳಿಗೆ ಸ್ನೇಹಿತರಾಗುತ್ತಾರೆ.

ಸ್ವಾತಂತ್ರ್ಯ
ಇಲ್ಲಿ ನಿಮ್ಮ ಮಕ್ಕಳು ಸ್ವತಂತ್ರವಾಗಿ ಬದುಕುವುದನ್ನು ಕಲಿಯುತ್ತಾರೆ. ನಿಮ್ಮ ಮಕ್ಕಳು ಶಿಬಿರದಲ್ಲಿ ಇದ್ದಾಗ, ಸ್ವತಂತ್ರವಾಗಿ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾರೆ. ಹೀಗೆ ಅವರು ದೊಡ್ಡವರಾದ ಮೇಲೆ ಸ್ವತಂತ್ರವಾಗಿ ಬದುಕುವುದನ್ನು ರೂಢಿಸಿಕೊಳ್ಳುತ್ತಾರೆ.

English summary

Reasons To Send Kids To Summer Camps

Are you wondering whether to choose a summer camp for kids this year? Well, if you want your kids to spend their holidays in a productive way, you don't need to think twice. Summer camps play a very important role in teaching children what can't be taught in the classroom or in your home.
X
Desktop Bottom Promotion