For Quick Alerts
ALLOW NOTIFICATIONS  
For Daily Alerts

ಶಿಶುವಿನ ಆರೋಗ್ಯಕ್ಕಾಗಿ ಪ್ರೋಟೀನ್ ಭರಿತ ಆಹಾರಗಳ ವೈಶಿಷ್ಟ್ಯವೇನು?

|

ನಿಮ್ಮ ಮಗು ತನಗೆ ಅಗತ್ಯವಿರುವಷ್ಟು ಪ್ರೋಟೀನ್‌ಗಳನ್ನು ಸೇವಿಸುತ್ತಿದೆಯೇ? ಹೌದು, ಮಕ್ಕಳಿಗೆ ಪ್ರೋಟೀನ್ ತುಂಬಾ ಅವಶ್ಯಕ. ಆ ಪ್ರೋಟೀನ್ ಏಕೆ ಅವಶ್ಯಕ, ಅದರಿಂದ ಮಕ್ಕಳಿಗೆ ಏನು ಅನುಕೂಲ ಎಂಬುದನ್ನು ತಿಳಿದುಕೊಳ್ಳಲು ತಪ್ಪದೆ ನೀವು ಈ ಅಂಕಣವನ್ನು ಓದಬೇಕು. ಪ್ರೋಟೀನ್ ನಿಮ್ಮ ಮಗುವಿನ ಬೆಳವಣಿಗೆಗೆ ಅತ್ಯಾವಶ್ಯಕವಾಗಿ ಬೇಕಾಗಿರುವ ಅಂಶವಾಗಿದೆ. ಹಾಗಾಗಿ ಇದನ್ನು ನಿಮ್ಮ ಮಗು ಸೇವಿಸುವ ಆಹಾರದಲ್ಲಿ ತಪ್ಪದೆ ಸೇರಿಸುವ ಅವಶ್ಯಕತೆ ಇದೆ.

ಪ್ರೋಟೀನ್ ಎನ್ನುವುದು ಅಮೈನೊ ಆಮ್ಲಗಳ ಒಂದು ಸರಪಣಿ. ಇವುಗಳು ಪರಸ್ಪರ ಒಂದನ್ನೊಂದು ಬೆಸೆದುಕೊಂಡು ಇರುತ್ತವೆ. ನಿಮ್ಮ ದೇಹಕ್ಕೆ 22 ಬಗೆಯ ಅಮೈನೊ ಆಮ್ಲಗಳ ಅವಶ್ಯಕತೆ ಇರುತ್ತದೆ. ಅದರಲ್ಲಿ 13 ಆಮ್ಲಗಳು ದೇಹದಲ್ಲಿಯೇ ಹುಟ್ಟಿಕೊಳ್ಳುತ್ತವೆ ಮತ್ತು ಉಳಿದ 9 ನ್ನು ನಾವು ಆಹಾರದ ರೂಪದಲ್ಲಿ ಸೇವಿಸುತ್ತೇವೆ: ಇವುಗಳನ್ನು ನಾವು " ಅತ್ಯಗತ್ಯವಾದ ಅಮೈನೊ ಆಮ್ಲಗಳು" ಎಂದು ಕರೆಯುತ್ತೇವೆ.

ಯಾವಾಗೆಲ್ಲ ಮಗುವಿನ ಹೊಟ್ಟೆಯಲ್ಲಿ ಅಮೈನೊ ಆಮ್ಲಗಳು ಹುಟ್ಟುತ್ತವೆಯೋ, ಆಗ ಮಗುವಿನ ಗ್ಯಾಸ್ಟ್ರೋಇಂಟೆಸ್ಟಿನಲ್ ನಾಳವು ಅದನ್ನು ಹೀರಿಕೊಂಡು ಬಿಡುತ್ತದೆ. ಈ ಪ್ರೋಟೀನ್ ಮೊದಲು ಅಮೈನೊ ಆಮ್ಲಗಳಾಗಿ ಪರಿವರ್ತನೆ ಹೊಂದಿ ಆನಂತರ ಮೂಳೆ, ತ್ವಚೆ, ಮಾಂಸಖಂಡ, ಕೂದಲು ಇತ್ಯಾದಿಗಳಂತಹ ಹಲವಾರು ಅಂಗಗಳ ಕಾರ್ಯಗಳಿಗಾಗಿ ಬಳಸಲ್ಪಡುತ್ತದೆ. ಇದೆಲ್ಲಕ್ಕಿಂತ ಮಿಗಿಲಾಗಿ ದೇಹವು ಈ ಪ್ರೋಟೀನ್‪ ಗಳನ್ನು ಹಿಮೋಗ್ಲೋಬಿನ್‍ಗಳ ತಯಾರಿಕೆಗೆ ಬಳಸುತ್ತದೆ. ನಿಮ್ಮ ಪುಟಾಣಿಯ ಮನಸ್ಸನ್ನು ಅಧ್ಯಯನದ ಕಡೆ ಆಕರ್ಷಿಸುವ ಬಗೆ ಹೇಗೆ?

Protein Rich Foods For Babies

ಅದು ಮಗುವಿನ ದೇಹಕ್ಕೆ ಅಗತ್ಯವಾಗಿರುವ ಆಮ್ಲಜನಕವನ್ನು ಪೂರೈಸುತ್ತದೆ. ಸಮೃದ್ಧ ಪ್ರೋಟೀನ್ ಇರುವ ಆಹಾರಗಳು ಮಗುವಿಗೆ ತೀರಾ ಅತ್ಯಾವಶ್ಯಕ. ಅದರಲ್ಲೂ ಮಗುವಿನ ಆರಂಭಿಕ ವರ್ಷಗಳಲ್ಲಿ, ಇದರ ಅಗತ್ಯ ತೀರಾ ಹೆಚ್ಚು. ಅದಕ್ಕಾಗಿ ಮಗುವಿನ ಬೆಳವಣಿಗೆ ಸರಿಯಾಗಿ ನಡೆಯಲು ಮತ್ತು ಅದು ಆರೋಗ್ಯವಾಗಿರಲು ತಪ್ಪದೆ ನಾವು ಸಮೃದ್ಧ ಪ್ರೋಟೀನ್ ಇರುವ ಆಹಾರ ಪದಾರ್ಥಗಳನ್ನು ಮಗುವಿಗೆ ನೀಡಬೇಕು. ಬನ್ನಿ ಆ ಸಮೃದ್ಧ ಪ್ರೋಟೀನ್ ಯಾವ ಆಹಾರಗಳಲ್ಲಿ ದೊರೆಯುತ್ತದೆ ಎಂದು ತಿಳಿದುಕೊಂಡು ಬರೋಣ.

ಮೊಟ್ಟೆಗಳು
ಮೊಟ್ಟೆಗಳು, ಪ್ರೋಟೀನ್ ಸಮೃದ್ಧವಾಗಿರುವ ಆಹಾರಗಳಲ್ಲಿಯೇ ಅತ್ಯಂತ ಸುಲಭವಾಗಿ ಸಿಗುವ ಆಹಾರ ಪದಾರ್ಥವಾಗಿದೆ. ಇದು ಮಕ್ಕಳಲ್ಲಿ ಬೆಳವಣಿಗೆಯನ್ನು ಪ್ರಚೋದಿಸುತ್ತದೆ. ನಿಮಗೆ ಬೇಕಾದರೆ, ಮೊಟ್ಟೆಯನ್ನು ಬೇಯಿಸಿ ಮಗುವಿಗೆ ನೀಡಬಹುದು. ಮೊಟ್ಟೆಯ ಹಳದಿ ಭಾಗವನ್ನು ಚೆನ್ನಾಗಿ ಬೇಯಿಸಿ ಸಹ ಮಗುವಿಗೆ ನೀಡಬಹುದು. ಆದರೆ ಮಗು ಒಂದು ವರ್ಷ ತುಂಬುವವರೆಗೆ ಮಗುವಿಗೆ ಮೊಟ್ಟೆ ನೀಡಬೇಡಿ.

ಅವೊಕ್ಯಾಡೊ
ಹಸಿರು ಬಣ್ಣದ ಈ ಹಣ್ಣಿನಲ್ಲಿ ಇತರೆ ಹಣ್ಣುಗಳಿಗೆ ಹೋಲಿಸಿದರೆ ಹೆಚ್ಚುವರಿ ಪೋಷಕಾಂಶಗಳು ಇರುತ್ತವೆ. ಇದರಲ್ಲಿರುವ ಪೋಷಕಾಂಶಗಳ ಕಾರಣದಿಂದಾಗಿ ಅವೊಕ್ಯಾಡೊಗಳು ಮಕ್ಕಳು ಸೇವಿಸಬೇಕಾದ ಸಮೃದ್ಧ ಪ್ರೋಟೀನ್ ಯುಕ್ತ ಆಹಾರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಪರೀಕ್ಷೆಯಲ್ಲಿ ನಿಮ್ಮ ಮಕ್ಕಳು ಟಾಪ್ ಸ್ಕೋರರ್ ಎನಿಸಿಕೊಳ್ಳಬೇಕೇ?

ಕೋಳಿ ಮಾಂಸ
ಕೋಳಿ ಮಾಂಸವು ಪ್ರೋಟೀನ್ ಹೆಚ್ಚಾಗಿರುವ ಆಹಾರಗಳಲ್ಲಿ ಒಂದಾಗಿದೆ. ಹಾಗಾಗಿ ನಿಮ್ಮ ಮಗುವಿನ ಡಯಟ್‌ನಲ್ಲಿ ಇದನ್ನು ಸಹ ಸೇರಿಸಲು ಮರೆಯಬೇಡಿ. ಮೊದಲು ಕೋಳಿ ಮಾಂಸವನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ. ಅದನ್ನು ಚೆನ್ನಾಗಿ ಬೇಯಿಸಿ, ನಿಮ್ಮ ಮಗುವಿಗೆ ತಿನ್ನಿಸಿ. ಬೀದಿಬದಿಯ ತಿಂಡಿ, ತಿನಿಸುಗಳು ನಿಮ್ಮ ಮಕ್ಕಳಿಗೆ ಸುರಕ್ಷಿತವೇ?

ಬೀನ್ಸ್
ಇದು ಸಹ ಪ್ರೋಟೀನ್ ಅಧಿಕವಾಗಿರುವ ಒಂದು ಆಹಾರ ಪದಾರ್ಥವಾಗಿದ್ದು, ನಿಮ್ಮ ಮಗುವಿಗೆ ಹೇಳಿ ಮಾಡಿಸಿದ ಆಹಾರವಾಗಿರುತ್ತದೆ. ಇದನ್ನು ಮಕ್ಕಳು ಸಹ ಇಷ್ಟಪಡುತ್ತಾರೆ. ನಿಮ್ಮ ಮಗುವಿಗೆ ಬೀನ್ಸ್ ಸೂಪ್ ಮಾಡಿ ಕುಡಿಸಿ ಅಥವಾ ಸುಮ್ಮನೆ ಅದನ್ನು ಬೇಯಿಸಿ, ಹಿಚುಕಿ ತಿನ್ನಿಸಿ. ನಿಮ್ಮ ಮಗುವಿಗೆ ಇಷ್ಟವಾದಲ್ಲಿ ಇದನ್ನು ಫಿಜ, ಬ್ರೆಡ್ ಜೊತೆಗೆ ಬೇಕಾದರು ಸೇವಿಸಲು ನೀಡಬೇಡಿ. ಮಗುವಿಗೆ ಆಹಾರ ಸೇವಿಸುವಾಗ ಉಸಿರುಗಟ್ಟದೆ ಇರಲು ಬೀನ್ಸ್ ಅನ್ನು ಎರಡು ಭಾಗ ಮಾಡಿ ಸೇವಿಸಿ.

English summary

Protein Rich Foods For Babies

Is your baby getting enough protein in his diet? Well, if you don’t know about the importance of protein food for babies and why it is necessary to include it in the daily diet, you must follow this article. Protein is extremely essential for the development of your baby.
Story first published: Monday, March 16, 2015, 10:29 [IST]
X
Desktop Bottom Promotion