For Quick Alerts
ALLOW NOTIFICATIONS  
For Daily Alerts

ಮನೆಯ ಒಪ್ಪಓರಣದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುದು ಹೇಗೆ?

By Super
|

ಮಕ್ಕಳು ದೊಡ್ಡವರಾಗುತ್ತಾ ಹೋದ ಹಾಗೆ ಅವರ ಕೆಲಸವನ್ನು ಅವರೇ ಮಾಡಿಕೊಳ್ಳುವುದನ್ನು ಕಲಿಸುವುದು ಪ್ರತಿ ಪೋಷಕರ ಕರ್ತವ್ಯವಾಗಿದೆ. ಶಾಲೆಗೆ ಹೋಗಲು ತೊಡಗಿದ ಬಳಿಕ ಅವರ ಶಾಲಾ ಪುಸ್ತಕ ಮತ್ತು ಸಾಮಾಗ್ರಿಗಳನ್ನು, ಅವರ ಮಲಗುವ ಸ್ಥಳ, ಓದುವ ಸ್ಥಳ, ಪುಸ್ತಕ ಮತ್ತಿತರ ವಸ್ತುಗಳನ್ನು ಇಡುವ ಕಪಾಟು ಮೊದಲಾದವುಗಳನ್ನು ಒಪ್ಪಓರಣವಾಗಿರಿಸಿಕೊಳ್ಳುವುದು ಶಿಸ್ತಿನ ಒಂದು ಪಾಠವಾಗಿದೆ. ಆದರೆ ಸಾಮಾನ್ಯವಾಗಿ ಮಕ್ಕಳು ಪ್ರತಿಬಾರಿಯೂ ಗದರಿಸದೇ ತಮ್ಮ ವಸ್ತುಗಳನ್ನು ಓರಣವಾಗಿರಿಸಿಕೊಳ್ಳುವುದೇ ಇಲ್ಲ.

ಏಕೆಂದರೆ ಚಂಚಲವಾದ ಅವರ ಮನಸ್ಸು ಸದಾ ಆಟ ಮತ್ತು ಟೀವಿಯತ್ತಲೇ ತುಡಿಯುತ್ತಿರುತ್ತದೆ. ಅದಕ್ಕೆ ಸಮಯವಾಯ್ತೋ, ಇತ್ತ ಪುಸ್ತಕ, ಆಟದ ಸಾಮಾನು, ಬಟ್ಟೆಬರೆಗಳನ್ನು ಎಲ್ಲಿತ್ತೋ ಅಲ್ಲಿಯೇ ಅದೇ ಸ್ಥಿತಿಯಲ್ಲಿ ಚಿಲ್ಲಾಪಿಲ್ಲಿಯಾಗಿಸಿ ಓಡುವುದು ಮಕ್ಕಳಿರುವ ಪ್ರತಿ ಮನೆಯ ಸಾಮಾನ್ಯ ದೃಶ್ಯ. ಈ ಅಸ್ತವಸ್ತವನ್ನು ಸರಿಪಡಿಸಲು ತಾಯಿಗೆ ಸಾಕುಬೇಕಾಗಿ ಹೋಗುತ್ತದೆ. ಹಾಗಾದರೆ ಮಕ್ಕಳಿಗೆ ಈ ಶಿಸ್ತಿನ ಬಗ್ಗೆ ತಿಳಿಯಪಡಿಸುವುದು ಹೇಗೆ? ಅವರ ಕೆಲಸವನ್ನು ಅವರೇ ಮಾಡಿಕೊಳ್ಳುವಂತೆ, ಒಪ್ಪಓರಣದ ಬಗ್ಗೆ ಅರಿವು ಮೂಡಿಸುವುದು ಹೇಗೆ? ಮಕ್ಕಳ ದೈನಂದಿನ ಬದುಕಿನಲ್ಲಿ ವಿಧೇಯತೆಯನ್ನು ಬೆಳೆಸುವುದು ಹೇಗೆ?

ಇದಕ್ಕೆ ಉತ್ತರ ಪಡೆಯುವ ಮೊದಲು ಪೋಷಕರು ತಮ್ಮನ್ನು ಈ ಕೆಲಸಕ್ಕೆ ಸಿದ್ಧಪಡಿಸಿಕೊಳ್ಳಬೇಕು. ಮೊದಲಿಗೆ ಸ್ವತಃ ತಮ್ಮ ಕೆಲಸದ ಸ್ಥಳವನ್ನು ಒಪ್ಪಓರಣವಾಗಿಟ್ಟುಕೊಂಡು ಮಕ್ಕಳಿಗೆ ಒಂದು ಮಾದರಿಯಾಗಬೇಕು. ನಂತರವೇ ನಿಧಾನವಾಗಿ ಮಕ್ಕಳ ಮನಸ್ಸನ್ನು ಗೆಲ್ಲುತ್ತಾ ಈ ಬಗ್ಗೆ ಅರಿವು ಮೂಡಿಸಿ ಸ್ವತಃ ಮಾಡಿ ತೋರಿಸಿ ನಂತರ ಅವರ ಕೈಯಿಂದಲೇ ಮಾಡಿಸಿಕೊಳ್ಳಬೇಕು. ಒಪ್ಪವಾಗಿರುವ ಕೋಣೆಯ ಬಗ್ಗೆ ಶ್ಲಾಘನೆಯನ್ನು ತೋರಬೇಕು. ಈ ಬಗ್ಗೆ ಕಲವು ಉಪಯುಕ್ತ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

How To Teach Your Child To Clean Up Mess

ಮಕ್ಕಳು ಚಿಕ್ಕವಯಸ್ಸಿನವರಿದ್ದಾಗಿನಿಂದಲೇ ಕಲಿಯಲಿ
ಸುಮಾರು ಮೂರು ವರ್ಷದ ಬಳಿಕ ಮಗು ತನ್ನ ಕೆಲಸಗಳನ್ನು ತಾನೇ ಮಾಡಿಕೊಳ್ಳುವಂತೆ ಪ್ರೇರಣೆ ನೀಡುತ್ತಾ ಬರಬೇಕು. ಅಚ್ಚುಕಟ್ಟುತನದ ಬಗ್ಗೆ ನಿಧಾನವಾಗಿ ಹೇಳಿಕೊಡುತ್ತಾ ಬರಬೇಕು. ಅಲ್ಲದೇ ಸ್ವತಃ ಮಾಡಿ ತೋರಿಸಬೇಕು. ಮಕ್ಕಳು ಇದನ್ನು ನೋಡಿ ಶೀಘ್ರವಾಗಿ ಕಲಿಯುತ್ತಾರೆ. ಮಕ್ಕಳ ವಯಸ್ಸು ಹೆಚ್ಚಿದಷ್ಟೂ ಅಚ್ಚುಕಟ್ಟುತನವನ್ನು ಕಲಿತುಕೊಳ್ಳುವುದು ಕಷ್ಟಕರವಾಗುತ್ತಾ ಹೋಗುತ್ತದೆ. ಮಕ್ಕಳು ಎಂದು ಉದಾಸೀನ ಮಾಡಿ ಹಾಗೇ ಬಿಟ್ಟು ದೊಡ್ಡವರಾದ ಬಳಿಕವೂ ತಮ್ಮ ಕೋಣೆಯನ್ನು ಅಸ್ತವ್ಯಸ್ತವಾಗಿಯೇ ಇಡುವುದು ಗಮನಕ್ಕೆ ಬಂದಿದೆ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?

ಸತತವಾಗಿ ಈ ಬಗ್ಗೆ ಮಾಹಿತಿ ನೀಡುತ್ತಲೇ ಇರಿ
ಮಕ್ಕಳ ಮನಸ್ಸು ಚಂಚಲವಾಗಿದೆ. ಎಷ್ಟೇ ಸಲ ಹೇಳಿದರೂ ಮಾರನೆಯ ದಿನ ಆ ಹೊತ್ತಿನಲ್ಲಿ ಬರುವ ಕಾರ್ಟೂನು ಅವರ ಇರಾದೆಯನ್ನೇ ಬದಲಿಸಿಬಿಡಬಹುದು. ಹಾಗಾಗದಂತೆ ತಡೆಯಲು ಪ್ರತಿದಿನವೂ ಶಿಸ್ತನ್ನು ಅನುಸರಿಸಲು ಮನವೊಲಿಸಬೇಕು. ಕೆಲವರು ಈ ಶಿಸ್ತನ್ನು ರಜಾದಿನಗಳಲ್ಲಿ ಸಡಿಲಿಸಿ ಬಿಡುತ್ತಾರೆ. ಆದರೆ ಇದು ತಪ್ಪು. ರಜಾದಿನಗಳಲ್ಲೂ ಈ ಶಿಸ್ತನ್ನು ಎಂದಿನ ಪ್ರಕಾರ ಪಾಲಿಸಲು ಮನವೊಲಿಸಬೇಕು. ನಿಜಕ್ಕೂ ಕಾರ್ಟೂನ್ ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತದೆಯೇ?

ಶಿಸ್ತನ್ನು ಸುಲಭಗೊಳಿಸಿ
ಅಚ್ಚುಕಟ್ಟುತನವನ್ನು ಕಾಪಾಡಿಕೊಂಡು ಬರುವುದು ಸುಲಭ, ಅಸ್ತವ್ಯಸ್ತ ಮಾಡಿದ ಬಳಿಕ ಮೊದಲ ಸ್ಥಿತಿಗೆ ತರುವುದು ಕಷ್ಟ ಎಂಬ ವಿಷಯವನ್ನು ಮನದಟ್ಟು ಮಾಡಿಸಿ. ಸ್ವತಃ ನೀವೇ ಎದುರು ನಿಂತು ಸರಿಪಡಿಸಿ. ಮಗು ಹೇಗೆ ಇದನ್ನು ಅನುಸರಿಸಬೇಕು ಎಂದು ತೋರಿಸಿ ಕೊಡಿ. ಉದಾಹರಣೆಗೆ ಮಕ್ಕಳ ಪುಸ್ತಕವಿರಿಸುವ ಚೀಲ. ಅವರ ಪುಸ್ತಕಗಳನ್ನು ಆಯಾ ವಿಷಯಗಳಿಗೆ ಕುರಿತಂತೆ ಒಂದರ ಪಕ್ಕ ಒಂದು ಇಡುವಂತೆ, ಪ್ರತಿ ಬಾರಿ ತೆಗೆದ ಬಳಿಕ ಎಲ್ಲಿಂದ ತೆಗೆದಿದ್ದೋ ಅಲ್ಲಿಯೇ ಇಡುವಂತೆ, ಮುಂದಿನ ಸಾರಿ ತೆಗೆಯಲು ಅಗತ್ಯವಿದ್ದಾಗ ಹುಡುಕುವ ಅಗತ್ಯವಿಲ್ಲ, ಸುಲಭವಾಗಿ ನೆನಪಿನಿಂದ ಸಿಗುತ್ತದೆ ಎಂದು ತೋರಿಸಿ ಕೊಡಿ. ಮಕ್ಕಳು ಈ ಪರಿಯನ್ನು ತುಂಬಾ ಇಷ್ಟಪಡುತ್ತಾರೆ. ಒಂದು ವೇಳೆ ಇಲ್ಲಿದ್ದ ಪುಸ್ತಕವನ್ನು ಇನ್ನೊಂದೆಡೆ ಇಟ್ಟು ನಂತರ ಬೇಕಾದಾಗ ಎಲ್ಲಾ ಪುಸ್ತಕಗಳನ್ನು ಕಲಸುಮೇಲೋಗರ ಮಾಡುವುದರಿಂದ ಪರಿಸ್ಥಿತಿ ಕ್ಲಿಷ್ಟಕರವಾಗುತ್ತದೆ ಎಂದು ತಿಳಿಸಿ. ಇದೇ ಶಿಸ್ತನ್ನು ಮಕ್ಕಳು ತಮ್ಮ ಇತರ ಕೆಲಸಗಳಲ್ಲಿ ಪಾಲಿಸಲು ಮನವೊಲಿಸಿ. ಜೊತೆಗೇ ಸಮಯಪಾಲನೆಗೂ ಮಹತ್ವ ನೀಡಿ.

ಶಿಸ್ತನ್ನು ಒಂದು ನಿರ್ದಿಷ್ಟ ಕ್ರಮದಲ್ಲಿ ಅನುಸರಿಸಿ
ಪ್ರತಿ ಬಾರಿ ಮಕ್ಕಳು ತಮ್ಮ ಕೆಲಸಗಳನ್ನು ಮುಗಿಸಿದ ಬಳಿಕ ತಮ್ಮ ವಸ್ತುಗಳನ್ನು ಯಥಾವತ್ತಾಗಿ ಇರಿಸಲು ಒಂದು ಕ್ರಮವನ್ನು ಅನುಸರಿಸುವಂತೆ ಮನವೊಲಿಸಿ. ಇದನ್ನು ಅನುಸರಿಸಲು ಹಂತಗಳನ್ನು ಅನುಸರಿಸಲಿ. ಉದಾಹರಣೆಗೆ ಮನೆಕೆಲಸ ಮುಗಿಸಿದ ಬಳಿಕ ತಮ್ಮ ಪುಸ್ತಕ ಮತ್ತು ಸಾಮಾಗ್ರಿಗಳನ್ನು ಜೋಡಿಸಲು ಈ ಕ್ರಮವನ್ನು ಅನುಸರಿಸಲಿ.
*ಅಗತ್ಯವಿರುವ ಎಲ್ಲಾ ಪುಸ್ತಕಗಳನ್ನು ಚೀಲದಲ್ಲಿ ಅದರ ಸ್ಥಾನದಲ್ಲಿಡಿ.
*ನಾಳೆಗೆ ಅಗತ್ಯವಿಲ್ಲದ ಪುಸ್ತಕಗಳನ್ನು ಕಪಾಟಿನಲ್ಲಿ ಅದರ ಯಥಾಸ್ಥಾನದಲ್ಲಿಡಿ
*ಅಗತ್ಯವಿರುವ ಎಲ್ಲಾ ಪರಿಕರಗಳನ್ನು ಚೀಲದ ಒಳಗೆ ಇಡಿ.
*ನಾಳೆಗೆ ಅಗತ್ಯರುವ ಪೆನ್ನು, ಪೆನ್ಸಿಲ್ ಮೊದಲಾದವುಗಳು ಸುಸ್ಥಿತಿಯಲ್ಲಿವೆಯೇ? ಪೆನ್ನಿನಲ್ಲಿ ಸಾಕಷ್ಟು ಇಂಕು ಇದೆಯೇ ಎಂದು ಪರಿಶೀಲಿಸಿ ಇಲ್ಲದಿದ್ದರೆ ಈಗಲೇ ತುಂಬಿಡಿ.
*ಶಾಲೆಯ ಚೀಲವನ್ನು ಸಿದ್ಧಗೊಳಿಸಿ ಮೂಲೆಯಲ್ಲಿಟ್ಟ ಬಳಿಕ ಆ ಸ್ಥಳದಲ್ಲಿ ಬಿದ್ದಿದ್ದ ಕಸವನ್ನು ತೆಗೆದು ಬುಟ್ಟಿಗೆ ಹಾಕಿ ಸ್ವಚ್ಛಗೊಳಿಸಿ.
*ಕಪಾಟಿನ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿ. ಹೀಗೆ ಹಂತಗಳ ಮೂಲಕ ಶಿಸ್ತು ಕಲಿತ ಮಕ್ಕಳು ಒಂದು ವೇಳೆ ಏನನ್ನಾದರೂ ಮರೆತರೆ ಹಂತಗಳನ್ನು ನೆನಪಿಸಿಕೊಳ್ಳುವುದರಿಂದ ಕೂಡಲೇ ಸರಿಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಅಶಿಸ್ತಿನಿಂದ ವರ್ತಿಸುವ ಮಕ್ಕಳಿಗೆ ಶಿಸ್ತನ್ನು ಹೇಗೆ ಕಲಿಸಬೇಕು?

ಸಾಧ್ಯವಿರುವೆಡೆ ಪ್ಲಾಸ್ಟಿಕ್ಕಿನ ಡಬ್ಬಿಗಳನ್ನು ಉಪಯೋಗಿಸಿ
ಹೆಚ್ಚಿನ ಪಕ್ಷ ಅಸ್ತವ್ಯಸ್ತತೆ ಚಿಕ್ಕ ಚಿಕ್ಕ ಪರಿಕರಗಳು ಚಿಲ್ಲಾಪಿಲ್ಲಿಯಾಗಿ ಬಿದ್ದಿರುವ ಮೂಲಕವೇ ಆಗುತ್ತದೆ. ಉದಾಹರಣೆಗೆ ಪೆನ್ನು ಪೆನ್ಸಿಲ್ ಬಣ್ಣದ ಪೆನ್ಸಿಲ್ಲುಗಳು ಮೊದಲಾದವುಗಳನ್ನು ಹಾಗೇ ಬಿಟ್ಟು ಹೋಗುವುದು. ಇದನ್ನು ತಡೆಯಲು ಮಕ್ಕಳಿಗೆ ಕೆಲವು ಪ್ಲಾಸ್ಟಿಕ್ಕಿನ ಡಬ್ಬಿಗಳನ್ನು ಒದಗಿಸಿ ಪ್ರತಿ ಬಗೆಯ ವಸ್ತುಗಳನ್ನೂ ಆಯಾ ಡಬ್ಬಿಯಲ್ಲಿ ಹಾಕಿಡಲು ಕಲಿಸಿ. ಆಯಾ ಡಬ್ಬದ ಮೇಲೆ ಆಯಾ ಸಾಮಾಗ್ರಿಯ ಹೆಸರನ್ನು ಬರೆದಿಡಿ. ಇದನ್ನು ಪಾಲಿಸಲು ಮಕ್ಕಳೂ ಹೆಚ್ಚು ಇಷ್ಟಪಡುತ್ತಾರೆ. ಒಬ್ಬರಿಗಿಂತ ಹೆಚ್ಚು ಮಕ್ಕಳಿದ್ದರೆ ಮಕ್ಕಳ ಹೆಸರನ್ನು ಆಯಾ ಡಬ್ಬಿಯ ಮೇಲೆ ಬರೆದಿಡಿ. ಇದರಿಂದ ಒಬ್ಬರ ವಸ್ತುಗಳು ಇನ್ನೊಬ್ಬರ ವಸ್ತುಗಳೊಂದಿಗೆ ಸೇರಿ ಜಗಳವಾಗುವುದನ್ನು ತಪ್ಪಿಸಬಹುದು. ಸಾಧ್ಯವಾದರೆ ಪ್ರತಿ ಮಗುವಿಗೂ ಬೇರೆ ಬೇರೆ ಬಣ್ಣದ ಡಬ್ಬಿಗಳನ್ನು ಒದಗಿಸಿ.

English summary

How To Teach Your Child To Clean Up Mess

When you take a look at your kid's room, you might have always wondered about a question. How to teach kids to clean up the mess so that you don't have to spend your valuable time doing things yourself? Well, it is not really a tough task if you know how to do. 
X
Desktop Bottom Promotion