For Quick Alerts
ALLOW NOTIFICATIONS  
For Daily Alerts

ಮಕ್ಕಳ ದೈನಂದಿನ ಬದುಕಿನಲ್ಲಿ ವಿಧೇಯತೆಯನ್ನು ಬೆಳೆಸುವುದು ಹೇಗೆ?

By Super
|

ಸಾಮಾಜಿಕ ಮೌಲ್ಯಗಳೊಂದಿಗೆ ಹೊಸ ಪೀಳಿಗೆಯನ್ನು ಸುಧಾರಿಸಬೇಕಾದರೆ ಪೋಷಕರು ಮಹತ್ವದ ಪಾತ್ರ ನಿರ್ವಹಿಸಬೇಕಾಗುತ್ತದೆ. ಮನೆಯಲ್ಲಿ ಮಕ್ಕಳಿಗೆ ಏನು ಕಲಿಸಲಾಗುತ್ತದೆಯಾ ಅದನ್ನೇ ಅವರು ಸಮಾಜಕ್ಕೆ ನೀಡುತ್ತಾರೆ. ಇಂದಿನ ದಿನಗಳಲ್ಲಿ ಪೋಷಕರಿಗೆ ತಮ್ಮ ಮಕ್ಕಳೊಂದಿಗೆ ಸಮಯ ಕಳೆಯಲು ಮತ್ತು ಕುಟುಂಬದ ಮೌಲ್ಯಗಳ ಬಗ್ಗೆ ಹೇಳಲು ಸಮಯವೇ ಅವರಲ್ಲಿ ಇರುವುದಿಲ್ಲ. ಇದರಿಂದಾಗಿ ವಿಧೇಯವಿಲ್ಲದ ಸಮಾಜ ನಿರ್ಮಾಣವಾಗುತ್ತದೆ. ಪೋಷಕರು ತಮ್ಮ ಮಕ್ಕಳಿಗೆ ಕೌಟುಂಬಿಕ ಮೌಲ್ಯಗಳನ್ನು ತಿಳಿಹೇಳಿದಾಗ ಸಮಾಜವು ಸುಧಾರಣೆಯಾಗುತ್ತದೆ ಮತ್ತು ಅವರಿಗೂ ಬದಕಲು ಇದು ನೆರವಾಗುತ್ತದೆ.

ಹೆತ್ತವರಿಬ್ಬರು ಉದ್ಯೋಗದಲ್ಲಿರುವ ಕಾರಣ ಕೌಟುಂಬಿಕ ಸಂಬಂಧಗಳು ಅಪಾಯದಲ್ಲಿದೆ. ಪೋಷಕರು ತಮ್ಮ ಬಿಡುವಿಲ್ಲದ ವೇಳಾಪಟ್ಟಿಯಲ್ಲಿಯೂ ಸಮಯ ತೆಗೆದು ಮಕ್ಕಳೊಂದಿಗೆ ಕಳೆಯಬೇಕು ಮತ್ತು ಅವರಿಗೆ ಕೌಟುಂಬಿಕ ಮೌಲ್ಯಗಳನ್ನು ತಿಳಿಸಿಕೊಡಬೇಕು. ಕೆಲವೊಂದು ಕೌಟುಂಬಿಕ ಮೌಲ್ಯಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ಇದು ಕೇವಲ ಪೋಷಕರ ಕೆಲಸವಲ್ಲ, ಮಕ್ಕಳನ್ನು ಲಾಲನೆಪಾಲನೆ ಮಾಡುವವರು ಮತ್ತು ಶಿಕ್ಷಕರು ಕೂಡ ಇದನ್ನು ಮಾಡಬೇಕಾಗುತ್ತದೆ. ಸಣ್ಣ ವಯಸ್ಸಿನಲ್ಲೇ ಮಕ್ಕಳಿಗೆ ಕೌಟುಂಬಿಕ ಮೌಲ್ಯಗಳ ಬಗ್ಗೆ ತಿಳಿಸಿಕೊಡಬೇಕು. ಅವರು ತಮ್ಮ ಶಿಕ್ಷಕರು ಮತ್ತು ಹತ್ತಿರದವರಿಂದ ಇದನ್ನು ಕಲಿಯುತ್ತಾರೆ. ಇದರಿಂದಾಗಿ ಮಕ್ಕಳು ಯಾರೊಂದಿಗೆ ಹೆಚ್ಚು ಬೆರೆಯುತ್ತಾರೆ ಎನ್ನುವುದನ್ನು ಹೆತ್ತವರು ತುಂಬಾ ಎಚ್ಚರಿಕೆಯಿಂದ ಗಮನಿಸಬೇಕಾಗುತ್ತದೆ. ನಿಜಕ್ಕೂ ಕಾರ್ಟೂನ್ ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತದೆಯೇ?

How To Teach Kids To Be Obedient

ಉದಾಹರಣೆಗೆ ಮನೆಯ ಬಾಗಿಲನ್ನು ಯಾರೋ ಬಡಿದಾಗ ಕಂಪ್ಯೂಟರ್ ಗೇಮ್ ನಲ್ಲಿ ಮಗ್ನನಾಗಿದ್ದ ಬಾಲಕ ಅದನ್ನು ಅರ್ಧದಲ್ಲಿ ಬಿಟ್ಟುಬರಲು ಸಾಧ್ಯವಾಗದೇ ತಾಯಿಯನ್ನೇ ಬಾಗಿಲು ತೆರೆಯುವಂತೆ ಗದರಿಸುತ್ತಾನೆ. ಇದನ್ನು ಗಮನಿಸಿದ ಅಜ್ಜ ಹಾಗೆಲ್ಲಾ ಹೇಳಬಾರದು, ಮನೆಗೆ ಯಾರೇ ಬಂದರೂ ಮೊದಲು ಕೈಯಲ್ಲಿದ್ದ ಏನೇ ಕೆಲಸವಿದ್ದರೂ ಅದನ್ನು ಬದಿಗಿರಿಸಿ ಮೊದಲು ಅತಿಥಿಗಳನ್ನು ಬರಮಾಡಿಕೊಳ್ಳಬೇಕು ಎಂದು ಬುದ್ದಿವಾದ ಹೇಳುತ್ತಾರೆ.

ಅಜ್ಜನ ಈ ಹಿತವಚನಗಳು ಆಟದ ಗಮ್ಮತ್ತಿನಲ್ಲಿದ್ದ ಮೊಮ್ಮಗನಿಗೆ ಹಿಡಿಸುವುದಿಲ್ಲ. ಇಲ್ಲಿ 'ಏನೇ' ಎಂಬ ಕೆಲಸದಲ್ಲಿ ತನ್ನ ಕಂಪ್ಯೂಟರ್ ಆಟವನ್ನು ಬಿಡಲು ಆತ ಸಿದ್ಧನಿಲ್ಲ. ಕ್ರಮೇಣ ಈ ಉಪೇಕ್ಷೆ ಬೆಳೆಯುತ್ತಾ ಹಠಮಾರಿಯಾಗಿ ಮಾರ್ಪಾಡು ಹೊಂದುತ್ತಾನೆ. ಹಾಗಾದರೆ ಒಳ್ಳೆಯ ಮಾತಿನಲ್ಲಿ ಅವರ ಮನಗೆಲ್ಲುವುದು ಹೇಗೆ? ಈ ಬಗ್ಗೆ ಮಹತ್ವದ ಸಂಗತಿಗಳನ್ನು ಇಲ್ಲಿ ನೀಡಲಾಗಿದೆ.

ನಿಮ್ಮ ಮಗು ಅನುಸರಿಸಬೇಕಾದ ಮಾರ್ಗಗಳನ್ನು ನಯವಾಗಿ ಅನಿವಾರ್ಯವೆಂದು ತಿಳಿಸಿ
ಯಾವುದೇ ವಿಷಯವನ್ನು ಮಕ್ಕಳಿಗೆ ತಿಳಿಸಿಹೇಳಬೇಕಾದರೆ ಮೊದಲಿಗೆ ಅವರ ಮನಸ್ಸನ್ನು ತಿಳಿಗೊಳಿಸಬೇಕು. ಆ ವಿಷಯದ ಅತ್ಯಂತ ಪ್ರಮುಖವಾದುದು ಮತ್ತು ಜೀವನಪರ್ಯಂತ ಪಾಲಿಸಬೇಕಾದ ಮಹತ್ವವುಳ್ಳದ್ದು ಎಂದು ನಿಧಾನವಾಗಿ ಮನಸ್ಸಿಗೆ ನಿಧಾನವಾಗಿ ನಾಟುವಂತೆ ತಿಳಿಹೇಳಬೇಕು. ಈ ಸಮಯದಲ್ಲಿ ಒತ್ತಡ ಸರ್ವಥಾ ಸಲ್ಲದು. ಜೊತೆಗೇ ಈ ವಿಷಯಗಳನ್ನು ಸ್ವತಃ ಅನುಸರಿಸಬೇಕು. ನೆನಪಿಡಿ, ನಿಮ್ಮ ಮಕ್ಕಳು ನಿಮ್ಮನ್ನು ನೋಡಿ ಅನುಸರಿಸಿ ಕಲಿಯುವಷ್ಟು ಸಮರ್ಥವಾಗಿ ಬೇರೇನನ್ನೂ ಕಲಿಯುವುದಿಲ್ಲ. ಒಳ್ಳೆಯದನ್ನೂ, ಕೆಟ್ಟದ್ದನ್ನೂ. ಅಶಿಸ್ತಿನಿಂದ ವರ್ತಿಸುವ ಮಕ್ಕಳಿಗೆ ಶಿಸ್ತನ್ನು ಹೇಗೆ ಕಲಿಸಬೇಕು?

ನಿಮ್ಮ ತರಬೇತಿಯಲ್ಲಿ ಸುಸಂಗತತೆ ಇರಲಿ (Consistency)
ಸಾಮಾನ್ಯವಾಗಿ ಮಕ್ಕಳ ಕಲಿಯುವಿಕೆ ಕೆಂಡವನ್ನು ಬೆಳಗಿದಂತೆ. ಆಗಾಗ ಊದುತ್ತಲೇ ಇದ್ದರೆ ಮಾತ್ರ ಕೆಂಡ ಚೆನ್ನಾಗಿ ಉರಿಯಬಲ್ಲುದು. ಆದರೆ ಮೊದಲ ಕಿಡಿಯನ್ನು ಹಚ್ಚಿ ಹಾಗೇ ಬಿಟ್ಟರೆ ಅದಕ್ಕೂ ಮುನ್ನ ಪಟ್ಟ ಅಷ್ಟೂ ಶ್ರಮ ಹೊಳೆಯಲ್ಲಿ ಹುಣಸೆಹಣ್ಣು ಕಿವುಚಿದಂತಾಗುತ್ತದೆ. ಮೊತ್ತ ಮೊದಲಾಗಿ ನೀವೇ ಸತತವಾಗಿ ನಿಮ್ಮ ತರಬೇತಿಯನ್ನು ಅನುಸರಿಸುತ್ತಿರಬೇಕು. ನಿಮ್ಮ ಮಕ್ಕಳಿಗೆ ಈ ಬಗ್ಗೆ ಸತತವಾಗಿ ಮನನ ಮಾಡಿಕೊಡುತ್ತಿರಬೇಕು. ನಿಮ್ಮ ಪುಟಾಣಿಯ ಮನಸ್ಸನ್ನು ಅಧ್ಯಯನದ ಕಡೆ ಆಕರ್ಷಿಸುವ ಬಗೆ ಹೇಗೆ?
ಮಕ್ಕಳು ಮರೆತರೆ ಇದನ್ನು ಸ್ವಾಭಾವಿಕ ಎಂದು ತಿಳಿದು ಹುಸಿಕೋಪದಿಂದ ಮಾತ್ರ ಗದರಿಸಿ ನೆನಪಿಡುವಂತೆ ಪ್ರೇರೇಪಿಸಬೇಕು. ಮಕ್ಕಳು ನೆನಪಿನಲ್ಲಿಟ್ಟ ಮತ್ತು ಅದನ್ನು ಅನುಸರಿಸಿದರೆ ಮುಕ್ತಕಂಠದಿಂದ ಶ್ಲಾಘಿಸಬೇಕು ಹಾಗೂ ನಿಮ್ಮ ಮೆಚ್ಚುಗೆಯನ್ನು ಪ್ರಕಟಿಸಬೇಕು. ನೆನಪಿಡಿ, ಮಕ್ಕಳಿಗೆ ತಮ್ಮ ಪೋಷಕರಿಂದ ಪಡೆಯುವ ಶ್ಲಾಘನೆಯೇ ಅತ್ಯಂತ ದೊಡ್ಡ ಬಹುಮಾನವಾಗಿದೆ.

English summary

How To Teach Kids To Be Obedient

It is very important to teach obedience to children. When you try to teach something, you may face certain challenges. Your kids may get resistant. They may also throw tantrums. Your kids may get resistant. They may also throw tantrums. Children love to rebel as they naturally want to do things their way.
X
Desktop Bottom Promotion