For Quick Alerts
ALLOW NOTIFICATIONS  
For Daily Alerts

ಕಾಲ ಬದಲಾಗಿದೆ ನೋಡಿ, ಮಕ್ಕಳಿಗೂ ಚಿಂತೆ ತಪ್ಪಿದ್ದಲ್ಲ!

By manu
|

ಈ ಶೀರ್ಷಿಕೆಯನ್ನು ಓದಿದ ತಕ್ಷಣ ಮಕ್ಕಳಿಗೆ ಎಂಥಹ ಚಿಂತೆಗಳು ಇರುತ್ತವೆ. ಅವರೇನು ದುಡಿಯಬೇಕೆ? ಇಲ್ಲವೇ ಮನೆ-ಸಂಸಾರ ಸಾಗಿಸಬೇಕೇ ಎಂಬ ಆಲೋಚನೆ ನಿಮಗೆ ಬರಬಹುದು. ನಿಮ್ಮ ತರ್ಕ ಸರಿಯಿರಬಹುದು. ಆದರೆ ಒಂದು ಚಿಂತೆಗೆ ಸಿಕ್ಕಿಹಾಕಿಕೊಂಡಿರುವ ಮಗುವಿಗು ಸಹ ಒಂದು ಕಾಳಜಿಯ ಅಗತ್ಯವಿರುತ್ತದೆ.

ಮಕ್ಕಳಿಗೆ ಚಿಂತೆಗಳೇ ಬರುವುದಿಲ್ಲ ಎಂಬ ಮಾತು ಸುಳ್ಳು, ಅವರಿಗು ಸಹ ಅವರದೇ ಆದ ಚಿಂತೆಗಳು ಇರುತ್ತವೆ, ಅದಕ್ಕೆ ನಿಮ್ಮ ಸಹಾಯ ಅವರಿಗೆ ಅಗತ್ಯವಿರುತ್ತದೆ ಎಂಬುದನ್ನು ಮರೆಯಬೇಡಿ. ಸಾಮಾನ್ಯವಾಗಿ ಮಕ್ಕಳು ತಮ್ಮ ವಿದ್ಯಾಭ್ಯಾಸದ ಕುರಿತಾಗಿ ಹೆಚ್ಚು ಚಿಂತೆ ಮಾಡುತ್ತಾರೆ, ಅವರ ಓದು, ಮನೆಕೆಲಸ, ಪರೀಕ್ಷೆಗಳು, ಜೊತೆಗೆ ಮನೆಯಲ್ಲಿ ಮತ್ತು ಶಾಲೆಯಲ್ಲಿ ಅವರಿಗೆ ಹಿಡಿಸದ ಕೆಲವೊಂದು ಸನ್ನಿವೇಶಗಳು ಅವರನ್ನು ಚಿಂತೆ ಮಾಡುವಂತೆ ಪ್ರೇರೇಪಿಸುತ್ತವೆ. ಒಂದು ವೇಳೆ ಮಗುವೊಂದು ಚಿಂತೆ ಮಾಡಲು ಆರಂಭಿಸಿದರೆ, ಅದಕ್ಕೆ ಇರುವ ಕಾರಣದ ಕುರಿತು ಮೊದಲು ನೀವು ತಿಳಿದುಕೊಳ್ಳಲು ಪ್ರಯತ್ನಿಸಬೇಕು.

ನಿಮ್ಮ ಮಗು ಯಾವಾಗ ಹೆಚ್ಚು ಚಿಂತೆ ಮಾಡುತ್ತದೆಯೋ, ಆಗ ಅದಕ್ಕೆ ಸಹಾಯ ಮಾಡಲು ಕೆಲವೊಂದು ನಿರ್ದಿಷ್ಟ ಕ್ರಮಗಳು ಇರುತ್ತವೆ. ಬನ್ನಿ ಅದನ್ನು ನಾವು ಇಂದು ನಿಮಗೆ ತಿಳಿಸಿಕೊಡುತ್ತೇವೆ. ಆ ಹಂತಗಳನ್ನು ಈ ಕೆಳಗೆ ನೀಡಿದ್ದೇವೆ ಮುಂದೆ ಓದಿ. ಆಧುನಿಕ ತಂತ್ರಜ್ಞಾನ ಮಕ್ಕಳನ್ನು ದಿಕ್ಕು ತಪ್ಪಿಸುತ್ತಿದೆಯೇ?

How To Help A Child Who Worries Too Much

ಕಾರಣ

ಮಕ್ಕಳು ಸಾಮಾನ್ಯವಾಗಿ ತಾವು ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳ ಕುರಿತಾಗಿ ಹೆಚ್ಚು ಚಿಂತೆ ಮಾಡುತ್ತಾರೆ ಅಥವಾ ತಮ್ಮ ಸ್ನೇಹಿತರನ್ನು ಶಾಲೆಯಲ್ಲಿ ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದು ಸಹ ಅವರಿಗೆ ಚಿಂತೆಯ ವಿಚಾರವಾಗಿರುತ್ತದೆ. ತರಗತಿಯಲ್ಲಿರುವ ತರ್ಲೆ ಮಕ್ಕಳು, ತಾವು ಅನುಭವಿಸುವ ಸೋಲುಗಳು ಮತ್ತು ಇತರರ ಎದುರು ಅನುಭವಿಸುವ ಅವಮಾನಗಳು ಮಕ್ಕಳನ್ನು ಚಿಂತೆಗೆ ತಳ್ಳಿ ಬಿಡುತ್ತವೆ. ಪೋಷಕರಾಗಿ ನೀವು ಈ ಕಾರಣಗಳನ್ನು ಆದಷ್ಟು ಶೀಘ್ರವಾಗಿ ಹುಡುಕಬೇಕು.

ಅವರ ಮಾತನ್ನು ಕೇಳಿ

ನಿಮ್ಮ ಮಕ್ಕಳ ಕಥೆಯನ್ನು ಕೇಳಲು ಆರಂಭಿಸಿ. ಇವುಗಳು ಸ್ವಲ್ಪ ಕುತೂಹಲಭರಿತವಾಗಿರುತ್ತವೆ. ನಿಮ್ಮ ಮಗುವಿಗೆ ಸ್ವಲ್ಪ ಆರಾಮವಾಗುವಂತಹ ಪರಿಸರವನ್ನು ನಿರ್ಮಿಸಿ. ಇದರಿಂದ ನಿಮ್ಮ ಮಗು ಮುಕ್ತವಾಗಿ ನಿಮ್ಮ ಜೊತೆ ಚರ್ಚಿಸಲು ಸಹಾಯವಾಗುತ್ತದೆ. ನಿಮ್ಮ ಮಗು ನಿಮ್ಮೊಂದಿಗೆ ತನ್ನ ಮನಸ್ಸಿನಲ್ಲಿರುವ ಕಷ್ಟಗಳನ್ನು ಹೇಳಿಕೊಳ್ಳುವಂತಹ ಮನೋಭಾವವನ್ನು ಚಿಕ್ಕ ವಯಸ್ಸಿನಿಂದಲೆ ರೂಢಿ ಮಾಡಿಸಿ. ಇದರಿಂದ ಚಿಂತೆಯ ಕಾರಣಗಳನ್ನು ಬೇಗ ನಿಮಗೆ ಅವರು ತಿಳಿಸುತ್ತಾರೆ.

ಕಾಳಜಿ ತೋರಿಸಿ
ಯಾವಾಗ ನೀವು ಪರಿಪೂರ್ಣವಾಗಿ ಆಸಕ್ತಿಯನ್ನು ತೋರಿಸುತ್ತೀರೋ, ಆಗ ಮಗುವಿಗೆ ಸಂತೋಷ ಸಿಗುತ್ತದೆ. ಜೊತೆಗೆ ತನ್ನ ಬೆಂಬಲಕ್ಕೆ ನೀವಿದ್ದೀರಿ ಎಂಬ ಮನೋಭಾವ ಅವರಲ್ಲಿ ಬೆಳೆಯುತ್ತದೆ. ನಿಮ್ಮ ಮಗುವಿನ ಸಮಸ್ಯೆಯನ್ನು ಪೂರ್ತಿಯಾಗಿ ಕೇಳಿದ ನಂತರ ಅದಕ್ಕೆ ಪೂರಕವಾಗಿ ಪ್ರತಿಕ್ರಿಯಿಸಿ. ಹದಿಹರೆಯದ ಪ್ರಾಯದ ಮಕ್ಕಳ ಬಗ್ಗೆ ಎಚ್ಚರ!

ತಿಳುವಳಿಕೆಯನ್ನು ನೀಡಿ

ಯಾವುದಾದರು ಒಂದು ಸಮಸ್ಯೆ ಬಂದಾಗ ಅದಕ್ಕೆ ಹೇಗೆ ಪ್ರತಿಕ್ರಿಯಿಸುವುದು ಎಂಬುದನ್ನು ನಿಮ್ಮ ಮಗುವಿಗೆ ತಿಳಿಸಿಕೊಡಿ. ಆ ಸಮಸ್ಯೆಗಳನ್ನು ಬಗೆಹರಿಸುವ ಮಾರ್ಗಗಳನ್ನು ಸಹ ಹೇಳಿ ಕೊಡಿ. ಇದರಿಂದ ನಿಮ್ಮ ಮಗುವಿಗೆ ಸಮಸ್ಯೆಗಳನ್ನು ಬಗೆಹರಿಸುವ ಕೌಶಲ್ಯ ಬೆಳೆಯುತ್ತದೆ. ಜೊತೆಗೆ ಅಂತಹ ಸಮಸ್ಯೆಗಳಿಗೆ ಚಿಂತೆ ಮಾಡುವುದು ಸಹ ತಪ್ಪುತ್ತದೆ.

ಧನಾತ್ಮಕ ಮನೋಭಾವವನ್ನು ತಿಳಿಸಿ

ನಿಮ್ಮ ಮಗು ನಿಮ್ಮ ಜೊತೆಗೆ ಮುಕ್ತವಾಗಿ ತನ್ನ ನೋವನ್ನು ಹಂಚಿಕೊಂಡಾಗ, ಅವರಲ್ಲಿರುವ ಕೊರಗನ್ನು ಹೋಗಲಾಡಿಸಿ. ನಿಮ್ಮ ಮಗು ತಮ್ಮನ್ನು ತಾನು ಒಬ್ಬ ದೊಡ್ಡ ಸಾಹಸಿಯಂತೆ ಪರಿಗಣಿಸಿಕೊಳ್ಳುವಂತೆ ಸಲಹೆ ನೀಡಿ. ಇಲ್ಲಿ ಎದುರಾಗುವ ಸಮಸ್ಯೆಗಳು ಎಲ್ಲವೂ ಒಂದು ಆಟ, ಅವು ಕೇವಲ ಕ್ಷಣಿಕ. ಅದನ್ನು ಬೇಗ ದಾಟಿದರೆ ಯಶಸ್ಸು ಖಂಡಿತ ಎಂಬುದನ್ನು ಮನವರಿಕೆ ಮಾಡಿಕೊಡಿ. ತನ್ನನ್ನು ತಾನು ಇರುವುದಕ್ಕಿಂತ ಸ್ವಲ್ಪ ಹೆಚ್ಚಿನ ಧೈರ್ಯಶಾಲಿ ಮತ್ತು ಧನಾತ್ಮಕ ಮನೋಭಾವದ ವ್ಯಕ್ತಿಯಾಗಿ ನಿಮ್ಮ ಮಗು ಭಾವಿಸುವಂತೆ ತಿಳಿಸಿ.
English summary

How To Help A Child Who Worries Too Much

A worried kid needs attention. You might think that your kids have nothing to worry. Just because they don't have to earn money or do the household chores, it doesn't mean that kids are free from any worry.Kids may worry about their academics, exam tensions or any other issue in the school or at home. So, if a kid worries too much, you should first be curious to know about the reason instead of dismissing it.
Story first published: Tuesday, September 15, 2015, 14:00 [IST]
X
Desktop Bottom Promotion