For Quick Alerts
ALLOW NOTIFICATIONS  
For Daily Alerts

ಅಶಿಸ್ತಿನಿಂದ ವರ್ತಿಸುವ ಮಕ್ಕಳಿಗೆ ಶಿಸ್ತನ್ನು ಹೇಗೆ ಕಲಿಸಬೇಕು?

By Super
|

ಒಂದು ವೇಳೆ ನಿಮ್ಮ ಮಗು ಇದ್ದಕ್ಕಿದ್ದಂತೆ ನಿಮಗೆ ಎದುರುತ್ತರ ನೀಡುವ ಮಟ್ಟಕ್ಕೆ ಬೆಳೆದರೆ, ನಿಮಗೆ ನಿಜಕ್ಕು ಆ ಕ್ಷಣ ಆಘಾತವಾಗುವುದು ಸಹಜ. ಆ ಸಂದರ್ಭದಲ್ಲಿ ನೀವು ಹೇಗೆ ಪ್ರತಿಕ್ರಿಯಿಸುತ್ತೀರಾ, ಆ ನಿಮ್ಮ ಮಗುವಿನಲ್ಲಿ ಒಂದು ಒಳ್ಳೆಯ ವರ್ತನೆಯನ್ನು ಹೇಗೆ ತರುತ್ತಿರಿ. ಈ ಪರಿಸ್ಥಿತಿಯನ್ನು ನೀವು ನಾಜೂಕಿನಿಂದ ನಿಭಾಯಿಸಬೇಕಾಗುತ್ತದೆ. ಅನಾಗರೀಕವಾಗಿ ವರ್ತಿಸುವ ಮಕ್ಕಳನ್ನು ತಿದ್ದಲು ಹೋದಾಗ ಅವರು ಉದ್ವೇಗಕ್ಕೆ ಒಳಗಾಗುವುದು ಸಹಜ. ಹಾಗೆಂದು ಈ ವಿಚಾರವನ್ನು ನಿಧಾನವಾಗಿ ಪರಿಹರಿಸಲು ಸಹ ಸಾಧ್ಯವಾಗುವುದಿಲ್ಲ.

ಏಕೆಂದರೆ ಇದೊಂದು ತಕ್ಷಣ ಪರಿಹಾರವನ್ನು ಹುಡುಕಿಕೊಳ್ಳಬೇಕಾಗಿರುವ ಸಮಸ್ಯೆಯಾಗಿರುತ್ತದೆ. ಮಗುವನ್ನು ಸರಿಯಾದ ದಾರಿಯಲ್ಲಿ ತರಬೇಕಾದುದು ಎಷ್ಟಾದರು ಪೋಷಕರ ಕರ್ತವ್ಯವಲ್ಲವೆ, ಹಾಗೆಂದು ಅದಕ್ಕೆ ನೀವು ಸಹ ಒರಟಾಗಿ ಮಗುವಿನ ಹತ್ತಿರ ನಡೆದುಕೊಳ್ಳಬೇಡಿ. ಮಗುವಿನ ಒರಟತನ ಮತ್ತು ಕೋಪದ ಸ್ಥಳದಲ್ಲಿ ಸಭ್ಯತೆಯನ್ನು ತಂದರೆ ಪರಿಸ್ಥಿತಿ ತನ್ನಷ್ಟಕ್ಕೆ ತಾನೇ ಸರಿ ಹೋಗುತ್ತದೆ.

ಒರಟು ಮಕ್ಕಳಲ್ಲಿ ಶಿಸ್ತನ್ನು ತರುವುದು ಹೇಗೆ? ಮಗುವಿನಲ್ಲಿ ಸಭ್ಯತೆಯನ್ನು ಮತ್ತು ಶಿಸ್ತನ್ನು ತರುವುದು ಯಾವುದೇ ರೀತಿಯಲ್ಲಿ ಕಷ್ಟವಲ್ಲ. ಇದಕ್ಕೆ ಸ್ವಲ್ಪ ತಾಳ್ಮೆ ಬೇಕಾಗುತ್ತದೆ. ಅದೊಂದು ನಿಮ್ಮ ಬಳಿ ಇದ್ದರೆ, ನಿಮ್ಮ ಮಗುವನ್ನು ನೀವು ಸರಿ ದಾರಿಗು ತರುವುದು ಏನು ಕಷ್ಟವಲ್ಲ. ಒರಟು ಮಕ್ಕಳಿಗೆ ಹೇಗೆ ಪ್ರತಿಕ್ರಿಯಿಸಬೇಕು?

How To Discipline A Rude Child?

ತಕ್ಷಣ ಪ್ರತಿಕ್ರಿಯಿಸಿ
ನಿಮ್ಮ ಮಗು ಒಂದು ವೇಳೆ ಅಸಭ್ಯವಾಗಿ ವರ್ತಿಸಿದರೆ ತಡ ಮಾಡದೆ ತಕ್ಷಣ ಪ್ರತಿಕ್ರಿಯಿಸಿ. ಇದು ತೀರಾ ಮುಖ್ಯ ಎಂಬುದನ್ನು ಮರೆಯಬೇಡಿ. ನಿಮ್ಮ ಮಗುವಿಗೆ ನಾನೇನೋ, ತಪ್ಪು ಮಾಡಿದೆ ಎಂದು ಗೊತ್ತಾಗಲಿ. ಒಂದು ವೇಳೆ ನಿಮ್ಮ ಮಗು ನಿಮ್ಮ ಜೊತೆ ಕೋಪದಿಂದ ನಡೆದುಕೊಂಡಲ್ಲಿ, ನಿಮ್ಮ ಮಗುವನ್ನು ಹದ್ದು ಬಸ್ತಿನಲ್ಲಿಡಲು ನೀವು ನಿಮ್ಮ ಅಧಿಕಾರವನ್ನು ಬಳಸಿಕೊಳ್ಳಿ. ಆದರೆ ಅದೇ ಸಮಯದಲ್ಲಿ ನಿಮ್ಮ ದೈಹಿಕ ಭಾಷೆಯನ್ನು ಗಮನದಲ್ಲಿಟ್ಟುಕೊಳ್ಳುವುದನ್ನು ಮರೆಯಬೇಡಿ. ಲೈಂಗಿಕ ದೌರ್ಜನ್ಯ-ಮಕ್ಕಳನ್ನು ಜಾಗೃತಿಗೊಳಿಸುವುದು ಹೇಗೆ?

ಒಳ್ಳೆಯ ಆಯ್ಕೆಗಳನ್ನು ನೀಡಿ
ಕೋಪವನ್ನು ತೋರಿಸುವ ಮಕ್ಕಳನ್ನು ಹೇಗೆ ನಿಭಾಯಿಸುವುದು? ಮೊದಲು ನಿಮ್ಮ ಮಗುವಿಗೆ ಹೇಳಿ, ಯಾವುದಾದರು ಒಂದು ವಿಚಾರದ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸುವುದು ಒಳ್ಳೆಯದೇ, ಹಾಗೆಂದು ಅದಕ್ಕಾಗಿ ಕೋಪಾತಾಪವನ್ನು ಪ್ರದರ್ಶಿಸುವುದು ಒಳ್ಳೆಯದಲ್ಲ ಎಂಬುದನ್ನು ತಿಳಿಸಿಕೊಡಿ.

ಮಗುವಿಗೆ ಅಭ್ಯಾಸ ಮಾಡಿಸಿ
ತನಗೆ ಇಷ್ಟವಾಗಲಿಲ್ಲ ಎಂಬುದನ್ನು ತಿಳಿಸಲು ಮಗುವಿಗೆ ಕೆಲವು ಸಾಲುಗಳನ್ನು ಹೇಳಿ ಕೊಡಿ. ಅದು ಸಭ್ಯತೆಯ ಗೆರೆಯೊಳಗೆ ಇರಲಿ. ಇದನ್ನು ಆತ ಅಭ್ಯಾಸ ಮಾಡಲಿ, ಸಮಯ ಸಂದರ್ಭ ಬಂದಾಗ ಮಗುವು ತನ್ನ ಅಸಮಾಧಾನವನ್ನು ತೋರಿಸಲು ಈ ಸಾಲುಗಳನ್ನು ಬಳಸಿಕೊಳ್ಳುವಂತೆ ಮಾಡಿ. ಗರ್ಭಿಣಿಯರೇ ಎಚ್ಚರ..! ಅಪ್ಪಿತಪ್ಪಿಯೂ ಹಾಗಲಕಾಯಿ ಸೇವಿಸಬೇಡಿ

ಸಮತೋಲನ
ಒರಟು ಮಕ್ಕಳಿಗೆ ಹೇಗೆ ಪ್ರತಿಕ್ರಿಯಿಸುವುದು? ನಿಮ್ಮ ಮಾನಸಿಕ ಸಮತೋಲನವನ್ನು ಕಳೆದುಕೊಳ್ಳುವುದು ಸಾಮಾನ್ಯವಾಗಿ ನಡೆಯುತ್ತಲೆ ಇರುತ್ತದೆ. ಆದರೆ ಅದರಿಂದ ನೀವು ಅಷ್ಟೇ ಬೇಗ ಯಥಾಸ್ಥಿತಿಗೆ ಬರುತ್ತೀರಿ. ಇದನ್ನೆ ನಿಮ್ಮ ಮಗುವಿಗು ಸಹ ತಿಳಿಸಿಕೊಡಿ.

ನಿಮ್ಮ ಮಗುವಿಗೆ ಎಟುಕುವಂತಿರಿ
ಒರಟು ಮಕ್ಕಳಿಗೆ ಹೇಗೆ ಪ್ರತಿಕ್ರಿಯಿಸುವುದು? ಮೊದಲಿಗೆ, ಒಬ್ಬ ಪೋಷಕರಾಗಿ, ನಿಮ್ಮ ಮಗುವಿನ ಆಗು-ಹೋಗುಗಳಿಗೆ ಎಟುಕುವಂತಿರಿ, ಇದರಿಂದ ನಿಮ್ಮ ಮಗು ನಿಮ್ಮ ಬಳಿ ಮುಚ್ಚು ಮರೆಯಿಲ್ಲದೆ ತನ್ನ ವಿಚಾರಗಳನ್ನು ತೋಡಿಕೊಳ್ಳುತ್ತದೆ. ಯಾವಾಗ ಸಮಯ ಸಮಯಕ್ಕೆ ಸಂವಹನಗಳು ನಡೆಯುತ್ತವೆಯೋ, ಆಗ ನಿಮ್ಮ ಮಗು ಹಾಳಾಗುವ ಸಾಧ್ಯತೆಗಳು ಕಡಿಮೆಯಾಗುತ್ತವೆ.

English summary

How To Discipline A Rude Child?

When your kid suddenly flares up at you and tries to give you answers, you will surely be shocked for a moment. How you react to such a situation is of importance because that will shape the mind and behaviour of your child.
Story first published: Monday, March 16, 2015, 19:49 [IST]
X
Desktop Bottom Promotion