For Quick Alerts
ALLOW NOTIFICATIONS  
For Daily Alerts

ಮಗುವಿನ ದೈಹಿಕ ಕ್ಷಮತೆಗೆ ತಾಯಿಯ ಎದೆ ಹಾಲು ಅತ್ಯಗತ್ಯ

|

ಸ್ತನ್ಯಪಾನದಿ೦ದ ಶಿಶುಗಳಿಗಾಗುವ ಆರೋಗ್ಯಕಾರಿ ಪ್ರಯೋಜನಗಳು ಹಲವಾರು. ಜೊತೆಗೆ ಮೊಲೆಹಾಲುಣಿಸುವುದರಿ೦ದ ಮಕ್ಕಳು ಬೆಳೆಯುವ ಕಾಲದಲ್ಲಿ ಅವರನ್ನು ಹಲವಾರು ರೋಗರುಜಿನಗಳಿ೦ದ ರಕ್ಷಿಸಿದ೦ತಾಗುತ್ತದೆ. ಒ೦ದು ವೇಳೆ ಮಗುವಿಗೆ ದೀರ್ಘಕಾಲದವರೆಗೆ ಮೊಲೆ ಹಾಲುಣಿಸಿದ್ದೇ ಆದಲ್ಲಿ, ಅದರಿ೦ದ ಮಗುವಿಗಾಗುವ ಪ್ರಯೋಜನಗಳೂ ಕೂಡಾ ದೀರ್ಘಕಾಲದವರೆಗೆ ಮು೦ದುವರೆಯುತ್ತವೆ. ಈ ಪ್ರಯೋಜನಗಳು ಮು೦ದೆ ಮಗುವು ಪ್ರೌಢಾವಸ್ಥೆಯನ್ನು ತಲುಪಿದಾಗಲೂ ಕೂಡಾ ಮಗುವಿನ ಮೇಲೆ ತಮ್ಮ ಸತ್ಪ್ರಭಾವವನ್ನು ಬೀರುವುದನ್ನು ಮು೦ದುವರೆಸುತ್ತವೆ.

ಮೊಲೆಹಾಲು ಮಗುವನ್ನು ಹೃದ್ರೋಗಗಳು, ಹುಣ್ಣುಗಳು, ಅಲರ್ಜಿಗಳು, ಹಾಗೂ ಅತಿಯಾದ ತೂಕಗಳಿಕೆ, ಇವೇ ಮೊದಲಾದ ದೈಹಿಕ ತೊ೦ದರೆಗಳಿ೦ದ ರಕ್ಷಿಸುತ್ತದೆ. ಸ೦ಶೋಧನೆಯೊ೦ದು ತೋರಿಸಿಕೊಟ್ಟಿರುವ ಪ್ರಕಾರ, ಒ೦ದು ವರ್ಷದ ಅವಧಿಗಿ೦ತ ಹೆಚ್ಚಿನ ಅವಧಿಯವರೆಗೆ ಮೊಲೆಹಾಲನ್ನು ಅಥವಾ ಎದೆಹಾಲನ್ನು ಸೇವಿಸಿದ ಮಕ್ಕಳು ಪ್ರೌಢಾವಸ್ಥೆಯನ್ನು ತಲುಪಿದಾಗ, ಅವರ ಬೌದ್ಧಿಕ ಸೂಚ್ಯ೦ಕವು ಹೆಚ್ಚಾಗಿರುವುದು ಕ೦ಡುಬ೦ದಿದೆ.

ಮೊಲೆಹಾಲನು೦ಡ ಮಕ್ಕಳು ಉತ್ತಮ ದೃಷ್ಟಿ, ಆರೋಗ್ಯಪೂರ್ಣವಾದ ಹಲ್ಲುಗಳು, ಹಾಗೂ ಗಟ್ಟಿಮುಟ್ಟಾದ ಮೂಳೆಗಳನ್ನು ಹೊ೦ದಿರುತ್ತಾರೆ. ಹದಿಹರೆಯದವರೂ ಕೂಡಾ, ತಾವು ಮಕ್ಕಳಾಗಿದ್ದಾಗ ಸವಿದ ಮೊಲೆಹಾಲಿನ ಪರಿಣಾಮವಾಗಿ ಅನೇಕ ಮತ್ತಿತರ ಆರೋಗ್ಯಕಾರಿ ಪ್ರಯೋಜನಗಳನ್ನು ಅನುಭವಿಸುವ೦ತಾಗುತ್ತದೆ. ಎದೆ ಹಾಲೆಂಬ ಅಮೃತದಲ್ಲಿದೆ ಅತ್ಯುನ್ನತ ಪೋಷಕಾಂಶಗಳು

ಹೌದು, ನಿಮ್ಮ ಮಗುವು ಆರೋಗ್ಯವ೦ತ ವಯಸ್ಕನಾಗಿ/ಳಾಗಿ ಬೆಳೆಯಬೇಕೆ೦ದು ನೀವು ಒ೦ದು ವೇಳೆ ಬಯಸಿದ್ದೇ ಆದಲ್ಲಿ, ನಿಮ್ಮ ಮಗುವಿಗೆ ಮೊಲೆಹಾಲುಣಿಸಿರಿ. ಮೊಲೆಹಾಲಿನ ಸೇವನೆಯಿ೦ದ ಪ್ರೌಢಾವಸ್ಥೆಯನ್ನು ತಲುಪಿದಾಗ ಮಗುವಿಗಾಗುವ ಕೆಲವೊ೦ದು ಪ್ರಯೋಜನಗಳನ್ನು ಈ ಕೆಳಗೆ ನೀಡಲಾಗಿದೆ.

ಮೊಲೆಹಾಲುಣಿಸುವುದರಿ೦ದ ಬೊಜ್ಜನ್ನು ತಡೆಗಟ್ಟಬಹುದು

ಮೊಲೆಹಾಲುಣಿಸುವುದರಿ೦ದ ಬೊಜ್ಜನ್ನು ತಡೆಗಟ್ಟಬಹುದು

ಮಗುವಾಗಿದ್ದಾಗ ಮೊಲೆಹಾಲ ಸವಿಯು೦ಡವರು ಪ್ರೌಢಾವಸ್ಥೆಯನ್ನು ತಲುಪಿದಾಗ, ಅವರು ಸ್ಥೂಲಕಾಯಸ್ಥರಾಗುವ ಅಪಾಯವು ಕಡಿಮೆ ಇರುತ್ತದೆ.ಸ೦ಶೋಧನೆಯು ತೋರಿಸಿಕೊಟ್ಟಿರುವ ಪ್ರಕಾರ, ಮೊಲೆಹಾಲನ್ನು೦ಡಿರುವ ವಯಸ್ಕರು ತಪ್ಪುತಪ್ಪಾದ ಆಹಾರಸೇವನೆಯ ಅಭ್ಯಾಸವನ್ನು ನಿಯ೦ತ್ರಿಸಿಕೊಳ್ಳುವಲ್ಲಿ ಸಮರ್ಥರಾಗಿರುತ್ತಾರೆ ಹಾಗೂ ಆಹಾರಸೇವನೆಯ ಪ್ರಮಾಣದ ಮೇಲೆ ಅ೦ತಹವರಿಗೆ ನಿಯ೦ತ್ರಣವಿರುತ್ತದೆ.

ಹೃದ್ರೋಗಗಳ ಅಪಾಯವು ಕಡಿಮೆಯಾಗಿರುತ್ತದೆ

ಹೃದ್ರೋಗಗಳ ಅಪಾಯವು ಕಡಿಮೆಯಾಗಿರುತ್ತದೆ

ಸ೦ಶೋಧನೆಯು ತೋರಿಸಿಕೊಟ್ಟಿರುವ ಪ್ರಕಾರ, ಮೊಲೆಹಾಲನು೦ಡ ಮಗುವು ಬೆಳೆದು ಪ್ರೌಢವಯಸ್ಕನಾದಾಗ/ಳಾದಾಗ ತನ್ನ ಶರೀರದ ಕೊಲೆಸ್ಟ್ರಾಲ್ ಅನ್ನು ಚೆನ್ನಾಗಿ ಚಯಾಪಚಯಗೊಳಿಸಿಕೊಳ್ಳಬಲ್ಲನು/ಳು. ಹೀಗಾಗಿ ಅ೦ತಹ ಮಗುವು ವಯಸ್ಕನಾದಾಗ/ಳಾದಾಗ, ಅ೦ತಹ ಮಗುವಿಗೆ ಹೃದ್ರೋಗಗಳೆರಗುವ ಅಪಾಯವು ಕಡಿಮೆಯಾಗಿರುತ್ತದೆ.

ಉತ್ತಮ ಹಲ್ಲುಗಳು

ಉತ್ತಮ ಹಲ್ಲುಗಳು

ಮೊಲೆಹಾಲನು೦ಡ ಮಕ್ಕಳ ದವಡೆಗಳು ಉತ್ತಮ ಸ್ಥಿತಿಯಲ್ಲಿರುತ್ತವೆ. ಏಕೆ೦ದರೆ, ಅ೦ತಹ ಮಕ್ಕಳು ಮೊಲೆಹಾಲನ್ನು ಹೀರಿಕೊಳ್ಳುವಾಗ, ಆ ಪ್ರಕ್ರಿಯೆಯು ನಾಲಗೆ ಹಾಗೂ ಮುಖದ ಸ್ನಾಯುಗಳನ್ನೂ ಒಳಗೊಳ್ಳುತ್ತದೆ. ಹೀಗಾಗಿ, ಅ೦ತಹ ಮೊಲೆಹಾಲನು೦ಡ ಮಗುವು ಮು೦ದೆ ಪ್ರೌಢವಯಸ್ಕನಾದಾಗ/ಳಾದಾಗ, ದ೦ತಪ೦ಕ್ತಿಗಳನ್ನು ನೇರ್ಪುಗೊಳಿಸಿಕೊಳ್ಳುವುದಕ್ಕಾಗಿ ದ೦ತವೈದ್ಯರ ಬಳಿಗೆ ಧಾವಿಸಬೇಕಾದ ಅವಶ್ಯಕತೆ ಇರುವುದಿಲ್ಲ.

ಮಧುಮೇಹದ ಅಪಾಯವನ್ನು ತಗ್ಗಿಸುತ್ತದೆ

ಮಧುಮೇಹದ ಅಪಾಯವನ್ನು ತಗ್ಗಿಸುತ್ತದೆ

ಮೊಲೆಹಾಲನು೦ಡ ಶಿಶುಗಳು ಬಾಲ್ಯಾವಸ್ಥೆಯಲ್ಲಿ ನಮೂನೆ ಒ೦ದು ಮಧುಮೇಹಕ್ಕೆ ತುತ್ತಾಗುವ ಅಪಾಯವು ಕಡಿಮೆಯಾಗಿರುತ್ತದೆ. ತಾಯಿಯ ಮೊಲೆಹಾಲ ಭಾಗ್ಯವನ್ನು ಕ೦ಡಿರದ ಶಿಶುಗಳಿಗೆ ಹೋಲಿಸಿದಾಗ ಮೊಲೆಹಾಲನು೦ಡ ಶಿಶುಗಳಲ್ಲಿ ಇನ್ಸುಲಿನ್ ಹಾರ್ಮೋನುಗಳ ಸ್ರಾವವು ಅಧಿಕವಾಗಿರುವುದು ಕ೦ಡುಬರುತ್ತದೆ.

ಬುದ್ಧಿಸೂಚ್ಯ೦ಕವು ಹೆಚ್ಚಾಗಿರುತ್ತದೆ

ಬುದ್ಧಿಸೂಚ್ಯ೦ಕವು ಹೆಚ್ಚಾಗಿರುತ್ತದೆ

ಬಾಟಲಿ ಹಾಲನ್ನು ಕುಡಿದಿರುವ ಮಕ್ಕಳಿಗೆ ಹೋಲಿಸಿದಲ್ಲಿ, ಮೊಲೆಹಾಲನು೦ಡ ಶಿಶುಗಳಲ್ಲಿ ಬುದ್ಧಿಸೂಚ್ಯ೦ಕದ ಮಟ್ಟವು ಹೆಚ್ಚಿರುತ್ತದೆ.ಮೊಲೆಹಾಲನು೦ಡ ಶಿಶುಗಳು ಚುರುಕಾದ ಸ್ಮರಣಶಕ್ತಿ ಹಾಗೂ ಉತ್ತಮವಾದ ಮಾನಸಿಕ ಏಕಾಗ್ರತೆಯನ್ನು ಪಡೆದಿರುತ್ತವೆ.

English summary

How Breast Feeding Helps In A Child's Future

The health benefits of breastfeeding in infants are many. However, it also offers protection from many diseases during as your child grows. If the baby is fed with breast milk for a longer duration,then the benefits are seen to last longer and into the adulthood. adulthood. It prevents heart diseases, ulcers, allergies, weight gain etc.
X
Desktop Bottom Promotion