For Quick Alerts
ALLOW NOTIFICATIONS  
For Daily Alerts

ಬೆಳೆಯುವ ಮಕ್ಕಳ ಆಹಾರ ಪದ್ಧತಿ ಬಗ್ಗೆ ಗಮನವಿರಲಿ

|

ಪುಟ್ಟ ಮಕ್ಕಳು, ಆಹಾರ ಸೇವನೆಯ ವಿಚಾರಕ್ಕೆ ಬಂದಾಗ ಹಠ ಮಾಡುವುದು ಸಹಜ, ತಾವು ಬೆಳೆದ೦ತೆಲ್ಲಾ ತುಂಟಾಟ ಕೂಡ ಜಾಸ್ತಿಯಾಗಿ ಬಿಡುತ್ತವೆ. ನೀವೇನನ್ನು ಕೊಡುತ್ತಿದ್ದಿರೋ ಅದನ್ನು ಮಾತ್ರವೇ ನಿಮ್ಮ ಮಗು ತಿನ್ನುವ ಕಾಲವೊ೦ದಿತ್ತು. ಆದರೆ, ಮಕ್ಕಳು ಬೆಳೆದ೦ತೆಲ್ಲಾ ಪರಿಸ್ಥಿತಿಯು ಬದಲಾಗುತ್ತದೆ. ಮಕ್ಕಳು ತಮ್ಮ ಬೇಕು ಹಾಗೂ ಬೇಡಗಳನ್ನು ವ್ಯಕ್ತಪಡಿಸತೊಡಗಿದಾಗ ಸಮಸ್ಯೆಯ ಆರ೦ಭವಾಗುತ್ತದೆ.

ಮಕ್ಕಳ ಈ ಪ್ರವೃತ್ತಿಯು ಅವರು ಅ೦ಬೆಗಾಲಿಕ್ಕುವ ಹ೦ತದಿ೦ದಲೇ ಆರ೦ಭಗೊಳ್ಳುತ್ತದೆ. ಹಾಗಾಗಿ ಮಕ್ಕಳ ಬೆಳವಣಿಗೆಯಲ್ಲಿ ಮುತುವರ್ಜಿ ವಹಿಸುವುದು ಬಹಳ ಮುಖ್ಯವಾದ ವಿಷಯ. ಮಕ್ಕಳ ಬೆಳವಣಿಗೆಗೆ ಸೂಕ್ತವಾಗಿರುವ ಹಾಲು, ಹಣ್ಣುಗಳು, ಹಾಗೂ ತರಕಾರಿಗಳು ಮಗುವಿನ ಆಹಾರಕ್ರಮದಲ್ಲಿ ಪ್ರಧಾನವಾದ ಪಾತ್ರವಹಿಸಬೇಕಾಗುತ್ತದೆ, ಜೊತೆಗೆ ಮಕ್ಕಳ ಸಂಪೂರ್ಣ ಆರೋಗ್ಯಕ್ಕೆ ಯಾವ ಯಾವ ವಿಟಮಿನ್‌ಗಳ ಅವಶ್ಯಕತೆಯಿದೆಯೋ ಅಂತಹ ವಿಟಮಿನ್ ಅಥವಾ ಪೋಷಕಾಂಶಗಳಿರುವ ತಿಂಡಿತಿನಿಸುಗಳನ್ನೇ ಮಕ್ಕಳಿಗೆ ಕೊಡುವುದು ಅತ್ಯವಶ್ಯಕ. ಮಗುವಿನ ಪದ ಉಚ್ಛಾರವನ್ನು ಉತ್ತಮಗೊಳಿಸಲು ಸಲಹೆಗಳು

Healthy foods for kids which include vitamin

ಮೊಳಕೆ ತರಿಸಿದ ಧಾನ್ಯ
ವಿಟಮಿನ್ ಸಿ ಯ ಆಗರವಾಗಿರುವ ಮೊಳಕೆ ಕಾಳುಗಳನ್ನು ಬೇಯಿಸಿ ಒಂದು ಪಾತ್ರೆಯಲ್ಲಿ ಹಾಕಿ ಅದಕ್ಕೆ ಸುಂದರವಾಗಿ ಹೆಚ್ಚಿರುವ ಟೊಮೇಟೊ, ಸ್ಟ್ರಾಬೆರಿ, ಬ್ರೋಕಾಲಿಗಳಿಂದ ಅಲಂಕರಿಸಿ ಮಕ್ಕಳಿಗೆ ಸವಿಯಲು ಕೊಡಿ. ಇದರಿಂದ ಮಕ್ಕಳ ಚರ್ಮವೂ ಕೂಡಾ ಅಕಾಲಿಕ ಸುಕ್ಕುಗಟ್ಟುವಿಕೆಯಿಂದ ದೂರವಾಗುತ್ತವೆ. ಅಲ್ಲದೇ ಮಕ್ಕಳ ಹಲ್ಲಿನ ಆರೋಗ್ಯಕ್ಕೂ ಮೊಳಕೆ ತರಿಸಿದ ಕಾಳುಗಳು ಬಹಳ ಉತ್ತಮವಾದವು.

ಕ್ಯಾಲ್ಸಿಯಂ ಪ್ರಮಾಣ ಹೆಚ್ಚಿರುವ ಆಹಾರ ನೀಡಿ
ಹಾಲು ಮತ್ತು ಮೊಸರು ಕ್ಯಾಲ್ಸಿಯಂ ಪೋಷಕಾಂಶಗಳನ್ನು ಕೊಡುವ ಪ್ರಮುಖ ವಸ್ತುಗಳು. ಪ್ರತಿ ದಿನದ ಆಹಾರದ ಜೊತೆಗೆ ಮೊಸರಿನಿಂದ ತಯಾರಿಸಿದ ಸಲಾಡ್ ನಿಮ್ಮ ಮಗುವಿಗೆ ನೀಡಿ. ಮೊಳಕೆ ಕಾಳುಗಳು, ಹಣ್ಣು, ಡ್ರೈ ಫ್ರುಟ್ಸ್ ಇವುಗಳನ್ನು ಮೊಸರಿಗೆ ಮಿಶ್ರಣ ಮಾಡಿ ರುಚಿಗೆ ತಕ್ಕಷ್ಟು ಸಕ್ಕರೆಯನ್ನೂ ಸೇರಿಸಿ ತಿನ್ನಲು ಕೊಡಿ. ಕ್ಯಾಲ್ಸಿಯಂ ಸಾಂದ್ರವಿರುವ ಕಿತ್ತಳೆ ಹಣ್ಣಿನ ರಸವನ್ನೂ ಆಗಾಗ ಕೊಡುತ್ತಿರಿ.

ಸಿಹಿ ಪದಾರ್ಥ
ಸ್ನಾಯುಗಳ ಬೆಳವಣಿಗೆಗೆ ದೇಹದಲ್ಲಿ ಕಬ್ಬಿಣದ ಅಂಶ ಇರಲೇಬೇಕು.ಮಕ್ಕಳು ಸಿಹಿತಿಂದರೆ ಹಲ್ಲು ಹಾಳಾಗುತ್ತದೆ ಅಥವಾ ಹೊಟ್ಟೆ ಕೆಡುತ್ತದೆ ಎಂದೆಲ್ಲಾ ಹೇಳಿ ಮಕ್ಕಳನ್ನು ಸಿಹಿಯಿಂದ ಆದಷ್ಟೂ ದೂರ ಇಡುತ್ತೇವೆ. ಆದರೆ ಮಕ್ಕಳ ದೇಹದಲ್ಲಿ ಮಿತ ಪ್ರಮಾಣದಲ್ಲಿ ಸಿಹಿ ಅಂಶ ಸೇರಿದರೆ ಕಬ್ಬಿಣದ ಅಂಶಗಳು ಹೆಚ್ಚಾಗುತ್ತದೆ. ಬೆಳಗಿನ ಉಪಹಾರದ ಜೊತೆಗೆ ಒಂದಿಷ್ಟು ಸಿಹಿ ವಸ್ತುಗಳನ್ನೂ ತಿನ್ನಲು ಕೊಡಿ (ಮನೆಯಲ್ಲಿ ನೀವೇ ತಯಾರಿಸಿದ ಕೇಸರಿ ಬಾತ್ ನಂತಹ ತಿಂಡಿಗಳು ಉತ್ತಮ) ಬೆಲ್ಲದಲ್ಲಿಯೂ ಕಬ್ಬಿಣದ ಅಂಶ ಹೆಚ್ಚಾಗಿರುವುದರಿಂದ ದೋಸೆಯಂತಹ ತಿಂಡಿಗಳಿಗೆ ಬೆಲ್ಲವನ್ನು ನೆಕ್ಕಲು ಕೊಡುವುದು ಒಳ್ಳೆಯದು.

ಹಸಿ ತರಕಾರಿಗಳು
ಬೇಯಿಸಿರುವ ತರಕಾರಿಗಳಿಗಿಂತ ಹಸಿ ತರಕಾರಗಳನ್ನು ಹಾಗೆಯೇ ಹಸಿಯಾಗಿ ಮೊಸರಿನ ಜೊತೆ ಅಥವಾ ನೆನೆಯಿಟ್ಟ ಕಾಳುಗಳ ಜೊತೆ ಬೆಳಗಿನ ಉಪಹಾರಕ್ಕೆ ಕೊಟ್ಟರೆ ಮಗುವಿನ ಸದೃಢ ಬೆಳವಣಿಗೆ ಸರಿಯಾದ ಕಾಲಕ್ಕೆ ಸರಿಯಾಗಿ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಎಷ್ಟಾದರೂ ಮಕ್ಕಳ ಸರಿಯಾದ ಬೆಳವಣಿಗೆ ಪಾಲಕರಾದ ನಮ್ಮ ಪ್ರಥಮ ಕರ್ತವ್ಯವಲ್ಲವೇ?

English summary

Healthy foods for kids which include vitamin

Children want something different each day. It becomes quite impossible for the parents to meet their requirements all the time. Sometimes, parents just want the easy way out, but without the guilt of giving their child unhealthy things to eat. So have a look which food is good for kids
Story first published: Thursday, May 14, 2015, 15:43 [IST]
X
Desktop Bottom Promotion