For Quick Alerts
ALLOW NOTIFICATIONS  
For Daily Alerts

ಎಳೆಯ ಮಗು ರಚ್ಚೆ ಹಿಡಿದು ಅಳಲು ಕಾರಣವೇನು?

|

ಹಸುಗೂಸುಗಳು ಅಳಲು ಆರಂಭಿಸಿದರೆ, ಅದು ಅವರು ಅನುಭವಿಸುತ್ತಿರುವ ಅಸೌಖ್ಯದ ಮುನ್ಸೂಚನೆಯಾಗಿರುತ್ತದೆ. ಇದರ ಮೂಲಕ ಮಕ್ಕಳು ತಮ್ಮ ತಾಯಿಗೆ ನನ್ನನ್ನು ನೋಡುಬಾ ಎಂಬ ಸಂದೇಶವನ್ನು ರವಾನಿಸುತ್ತವೆ. ಕೆಲವೊಮ್ಮೆ ಮಕ್ಕಳು ನಿಭಾಯಿಸಲು ಸಾಧ್ಯವಾಗದ ಕೆಲಸಗಳಿಗಾಗಿ ಅಮ್ಮನ ಸಹಾಯವನ್ನು ಪಡೆಯುವ ಸಲುವಾಗಿ ಮಕ್ಕಳು ಅಳುತ್ತವೆ.

ಹಲವಾರು ಬಾರಿ ಪೋಷಕರ ಸಹಾಯವನ್ನು ಪಡೆಯಲು ಮತ್ತು ಗಮನವನ್ನು ತಮ್ಮ ಕಡೆ ನೀಡಿ ಎಂದು ಹೇಳಲು ಮಕ್ಕಳು ಅಳುತ್ತವೆ. ರಚ್ಚೆ ಹಿಡಿದು ಅಳುವ ಮಕ್ಕಳನ್ನು ಸಮಾಧಾನ ಮಾಡುವುದು ಸುಲಭ. ಆದರೆ ಅಳು ನಿಲ್ಲಿಸುವವರೆಗು ಅದನ್ನು ಅದು-ಇದು ಹೇಳಿ, ಅಥವಾ ಕೇಳಿದ್ದನ್ನು ನೀಡಿ ಸಮಾಧಾನ ಪಡಿಸಬೇಕು. ಇದನ್ನು ನೀವು ಸಮಾಧಾನದಿಂದ, ತಾಳ್ಮೆಯಿಂದ ಸಹಿಸಿಕೊಳ್ಳಬೇಕು. ಏಕೆಂದರೆ ನಿಮ್ಮ ಮಗುವಿಗೆ ಇದನ್ನು ಬಿಟ್ಟು ಬೇರೆ ಸಂಭಾಷಣೆ ಗೊತ್ತಿಲ್ಲ.

Common Reasons Why Babies Cry

ಮಗು ಅತ್ತಾಗ ನೀವು ಅದರ ಡೈಪರ್ ಪರೀಕ್ಷಿಸುತ್ತೀರಿ, ಹೊಟ್ಟೆಯನ್ನು ಪರೀಕ್ಷಿಸುತ್ತೀರಿ, ದೇಹದ ಉಷ್ಣಾಂಶವನ್ನು ಪರೀಕ್ಷಿಸುತ್ತೀರಿ ಮತ್ತು ಇತ್ಯಾದಿ ಅಂಶಗಳನ್ನು ಪರೀಕ್ಷಿಸುತ್ತೀರಿ. ಆದರೂ ನೀವು ಈ ಸಮಯದಲ್ಲಿ ಅಗತ್ಯ ವಿಚಾರಗಳತ್ತ ಗಮನ ಹರಿಸಬೇಕು. ಮಗುವಿಗೆ ಹಾಲು ಕುಡಿಸದಿದ್ದರೆ ಅಳುತ್ತದೆ, ಜೊತೆಗೆ ಹಾಲನ್ನು ಅತಿಯಾಗಿ ಕುಡಿಸಿದರು ಸಹ ಅಳುತ್ತದೆ. ಅದು ಮಗುವಿನ ಅಸೌಖ್ಯತೆಯನ್ನು ಮತ್ತಷ್ಟು ಹೆಚ್ಚು ಮಾಡುತ್ತದೆ.

ಬಹುತೇಕ ಕುಟುಂಬಗಳಲ್ಲಿ ತಾಯಿಯಂದಿರು ಮತ್ತು ವಯಸ್ಸಾದ ಮಹಿಳೆಯರು, ಮಗು ಏಕೆ ಅಳುತ್ತಿದೆ ಎಂದು ನಿಖರವಾಗಿ ಹೇಳುತ್ತಾರೆ. ಹೊಸ ತಾಯಂದಿರು ಈ ನಿಟ್ಟಿನಲ್ಲಿ ಸ್ವಲ್ಪ ಹಿಂದೆ ಉಳಿದಿರುತ್ತಾರೆ. ಅದಕ್ಕಾಗಿ ಅವರಿಗೆ ಒಂದು ಚೆಕ್ ಲಿಸ್ಟ್ ನಾವು ನೀಡುತ್ತಿದ್ದೇವೆ. ನಿಮ್ಮ ಮಗು ಅಳಲು ಆರಂಭಿಸಿದರೆ ಅದಕ್ಕೆ ಈ ಕೆಳಕಂಡ ಕಾರಣಗಳು ಇರಬಹುದು ಎಂಬುದನ್ನು ತಿಳಿಯಿರಿ. ಬನ್ನಿ ಆ ಕಾರಣಗಳ ಕುರಿತು ನೋಡೋಣ.

ಹಾಲು ಕುಡಿಸುವ ಸಮಯ
ಮಕ್ಕಳಿಗೆ ಹೊಟ್ಟೆ ಹಸಿದಾಗ ಅವರು ಅಳಲು ಆರಂಭಿಸುತ್ತವೆ. ಮಗು ಮೊದ ಮೊದಲಿಗೆ ದ್ರವ ರೂಪದ ಆಹಾರವನ್ನೆ ಸೇವಿಸುತ್ತವೆ. ಇದರಿಂದಾಗಿ ಮಕ್ಕಳ ಹೊಟ್ಟೆ ಬೇಗ ಹಸಿಯಲು ಆರಂಭಿಸುತ್ತವೆ. ಮಗುವಿಗೆ ನಿಯಮಿತವಾಗಿ ಹಾಲು ಕುಡಿಸುವುದರಿಂದಾಗಿ ಅವರ ಅಳುವನ್ನು ನಿಲ್ಲಿಸಬಹುದು. ಗರ್ಭದಲ್ಲಿರುವ ಕಂದಮ್ಮನಿಗೆ ಎಲ್ಲವೂ ಅರ್ಥವಾಗುತ್ತದೆಯಂತೆ!

ಮುತ್ರ ವಿಸರ್ಜನೆ
ಕೊಳಕಾದ ಡೈಪರ್ ಮಗುವಿನ ಅಳುವಿಗೆ ಕಾರಣವಾಗುತ್ತದೆ. ಮಗುವು ಆಗಾಗ ಮೂತ್ರ ವಿಸರ್ಜನೆಯನ್ನು ಮಾಡುತ್ತಲೆ ಇರುತ್ತದೆ. ಹಾಲು ಕುಡಿದ ಮೇಲೆ ಅದಕ್ಕೆ, ಅಸೌಖ್ಯವುಂಟಾಗಬಹುದು ಮತ್ತು ಸರಿಯಾಗಿ ನೋಡಿಕೊಳ್ಳದಿದ್ದಲ್ಲಿ, ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಮಗುವಿನ ಈ ವಿಷಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸಿ.

ಅಸೌಖ್ಯ
ಮಕ್ಕಳು ಏಕೆ ಅಳುತ್ತವೆ? ಉತ್ತರ ತುಂಬಾ ಸರಳ, ಕೆಲವೊಮ್ಮೆ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಬಹುದು. ಮಗುವಿಗೆ ಯಾವುದಾದರು ಸಣ್ಣ ಪ್ರಮಾಣದ ಕಾಯಿಲೆ ಬಂದಿರಬಹುದು. ಅವರು ಅದಕ್ಕೆ ಪರಿಹಾರ ಸೂಚಿಸುತ್ತಾರೆ. ಮೂಗು ಕಟ್ಟುವಿಕೆ, ಜ್ವರ ಮಕ್ಕಳಲ್ಲಿ ಅಳುವನ್ನು ತರಬಹುದು.

ಎತ್ತಿಕೋ....
ಮಕ್ಕಳು ಸಾಮಾನ್ಯವಾಗಿ ಪೋಷಕರ ಕೈಯಲ್ಲಿಯೇ ಇರಬೇಕು ಎಂದು ಆಸೆ ಪಡುತ್ತವೆ. ಅದಕ್ಕಾಗಿ ತಮ್ಮನ್ನು ಎತ್ತಿಕೊಂಡು ಸುತ್ತಾಡಿ ಎಂದು ಅಳುತ್ತವೆ. ಇದು ಸಾಮಾನ್ಯವಾಗಿ ಎಲ್ಲಾ ಮಕ್ಕಳು ಮಾಡುವ ಚೇಷ್ಟೆಗಳಲ್ಲಿ ಒಂದಾಗಿರುತ್ತದೆ.

ಹೊಟ್ಟೆ ನೋವು
ಮಕ್ಕಳು ಸಾಮಾನ್ಯವಾಗಿ ಹೊಟ್ಟೆ ನೋವಿನಿಂದ ಬಳಲುತ್ತವೆ. ಕರುಳಿನ ನೋವು ಅಥವಾ ಗ್ಯಾಸ್ ಹಾಗು ಅಜೀರ್ಣ ಸಮಸ್ಯೆ ಇವರನ್ನು ಭಾದಿಸುತ್ತದೆ. ಇದಕ್ಕಾಗಿ ವೈದ್ಯರ ಬಳಿ ತಪಾಸಣೆ ನಡೆಸಿ, ಅಜೀರ್ಣ ಸಮಸ್ಯೆಯನ್ನು ನಿವಾರಿಸುವ ಔಷಧಿಯನ್ನು ಬರೆಸಿಕೊಳ್ಳಿ. ಇದರಿಂದ ಮಕ್ಕಳ ಅಳುವನ್ನು ನೀವು ನಿಯಂತ್ರಿಸಬಹುದು. ಹೊಟ್ಟೆ ನೋವು ಮಕ್ಕಳ ಚೈತನ್ಯವನ್ನು ಕಸಿದು ಬಿಡುತ್ತದೆ. ಅದಕ್ಕಾಗಿ ಮುಂಜಾಗರೂಕತೆಯಿಂದ ನೋಡಿಕೊಳ್ಳಿ. ಸಾಮಾನ್ಯವಾಗಿ ವೈದ್ಯರು "ಕೋಲಿಕ್ ಆಸಿಡ್" ನಂತಹ ಔಷಧಿಯನ್ನು ಬರೆಯುತ್ತಾರೆ. ಇದನ್ನು ವೈದ್ಯರು ಶಿಫಾರಸು ಮಾಡಿದ ನಂತರ ಮಾತ್ರ ನೀಡಿ.

English summary

Common Reasons Why Babies Cry

Crying is the only alarm that babies are equipped with to exhibit their displeasure or discomfort of any sorts. It is their way of informing the mother that she needs to pay attention and respond at the earliest. However, for the new-be mom's below given is a check-list of most common reasons of why babies cry..
Story first published: Saturday, May 2, 2015, 19:25 [IST]
X
Desktop Bottom Promotion