For Quick Alerts
ALLOW NOTIFICATIONS  
For Daily Alerts

ಮಗುವಿನ ಕೋಮಲ ತ್ವಚೆಗೆ ಹೇಳಿ ಮಾಡಿಸಿದ ಎಣ್ಣೆ

|

ಇತ್ತೀಚೆಗೆ ಮಗು ಹುಟ್ಟಿರುವ ಯಾವುದೇ ಮನೆಯಲ್ಲಿ ಆಗಾಗ ಕಂದ ಜೋರಾಗಿ ಅಳುತ್ತಿರುವುದು ಕೇಳಿಬರುತ್ತಿದೆ. ಈ ಅಳು ಕೇಳಿ ವ್ಯಾಕುಲರಾದ ಅಕ್ಕಪಕ್ಕದವರು ವಿಚಾರಿಸಿದರೆ 'ಮಗುವಿಗೆ ಎಣ್ಣೆಸ್ನಾನ ಮಾಡಿಸುತ್ತಿದ್ದಾರೆ' ಎಂಬ ಉತ್ತರ ದೊರಕುತ್ತದೆ. ಆಗ ಎಲ್ಲರೂ ನಿರಾಳರಾಗುತ್ತಾರೆ. ಅಂದರೆ ಮಗುವಿನ ಮೈಗೆ ಎಣ್ಣೆ ಹಚ್ಚಿ ಚೆನ್ನಾಗಿ ತಿಕ್ಕಿ ಬಿಸಿಬಿಸಿ ನೀರಿನಲ್ಲಿ ಸ್ನಾನ ಮಾಡಿಸುವುದು ಒಂದು ಸಂಪ್ರದಾಯದಂತೆಯೇ ನಡೆದುಕೊಂಡು ಬಂದಿದೆ.

ಹಾಗಂತ ಎಣ್ಣೆಸ್ನಾನ ಮಗುವಿಗೆ ಉತ್ತಮ ಎಂದು ಮಾರುಕಟ್ಟೆಯಲ್ಲಿ ಯಾವುದೋ ಒಂದು ಎಣ್ಣೆಯನ್ನು ನೇರವಾಗಿ ಬಳಸಬಾರದು. ಏಕೆಂದರೆ ಮಗುವಿನ ಚರ್ಮ ಅತ್ಯಂತ ಸೂಕ್ಷ್ಮವಾಗಿದ್ದು ಮೈಗೆ ಹಿಡಿಸದ ಯಾವುದೇ ಎಣ್ಣೆಯಿಂದ ಅದರ ಮೈಗೆ ಉರಿ ತರಿಸಬಹುದು. ಮಗುವಿನ ಕೋಮಲ ಚರ್ಮದ ಕಾಂತಿಗೆ ಮನೆ ಮದ್ದು

ತನಗೆ ಉರಿಯುತ್ತಿದೆ ಎಂದು ಹೇಳಲೂ ಬಾರದ ಕಂದ ಕೇವಲ ಅಳುವುದನ್ನು ನೋಡಿ ಮರುಗಬೇಕಾಗಿಬರಬಹುದು, ಪರಿಣಾಮವಾಗಿ ಚರ್ಮದ ತೊಂದರೆಗಳೂ ಉಂಟಾಗಬಹುದು. ಆದುದರಿಂದ ಅತ್ಯಂತ ಸೂಕ್ತವಾದ ಎಣ್ಣೆಯನ್ನೇ ಆಯ್ಕೆ ಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ. ಬನ್ನಿ ಇಂದು ಬೋಲ್ಡ್ ಸ್ಕೈ ಮಗುವಿನ ಕೋಮಲ ತ್ವಚೆಗೆ ಸೂಕ್ತವಾದ ಎಣ್ಣೆಗಳ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ನೀಡಲಾಗಿದೆ, ಮುಂದೆ ಓದಿ..

ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆ

ಯಾವುದೇ ಸುಗಂಧ ಅಥವಾ ಬೇರೆ ಎಣ್ಣೆಯನ್ನು ಸೇರಿಸದ ಅಪ್ಪಟ ಕೊಬ್ಬರಿ ಎಣ್ಣೆ ಮಗುವಿನ ಚರ್ಮಕ್ಕೆ ಅತ್ಯುತ್ತಮವಾದ ಎಣ್ಣೆಯಾಗಿದೆ. ಈ ಎಣ್ಣೆಯನ್ನು ಚಳಿಗಾಲದಲ್ಲಿಯೂ ಸೆಖೆಗಾಲದಲ್ಲಿಯೂ ಬಳಸಬಹುದು. ಕೊಬ್ಬರಿ ಎಣ್ಣೆಯನ್ನು ಚರ್ಮ ಸುಲಭವಾಗಿ ಹೀರುವುದರಿಂದ ಹೆಚ್ಚು ಹೊತ್ತು ಮಸಾಜ್ ಮಾಡಬೇಕಾಗಿಲ್ಲ, ಕೊಂಚ ಹೊತ್ತಿನಲ್ಲಿಯೇ ಮುಗಿಸಬಹುದು. ಕೊಬ್ಬರಿ ಎಣ್ಣೆಯ ಮಸಾಜ್ ನಿಂದ ಚರ್ಮವ್ಯಾಧಿಗಳನ್ನು ಮತ್ತು ಒಣಚರ್ಮವಾಗುವ ಸಾಧ್ಯತೆಯನ್ನು ದೂರವಿಡಬಹುದು. ಕೆಲವೊಮ್ಮೆ ತಲೆಯ ಚರ್ಮಕ್ಕೆ ಅಗತ್ಯವಾದ ಆರ್ದ್ರತೆ ದೊರಕದೇ ಬಹುವಾಗಿ ಒಣಗಿ ಸೀಳುಬಿಡುತ್ತದೆ. ಈ ಸ್ಥಿತಿಗೆ cradle cap ಎಂದು ಕರೆಯುತ್ತಾರೆ.

ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆ

ಈ ಸ್ಥಿತಿ ಬಾರದಿರಲು ಕೊಬ್ಬರಿ ಎಣ್ಣೆಯ ಮಸಾಜ್ ಮಹತ್ವದ ಪಾತ್ರ ವಹಿಸುತ್ತದೆ. ಕೊಬ್ಬರಿ ಎಣ್ಣೆಯಲ್ಲಿ ಹೇರಳವಾದ ಆಂಟಿ ಆಕ್ಸಿಡೆಂಟುಗಳು, ಲಾರಿಕ್ ಮತ್ತು ಕ್ಯಾಪ್ರಿಲಿಕ್ ಆಮ್ಲಗಳಿವೆ. ಈ ಎಲ್ಲವೂ ಮಗುವಿನ ಚರ್ಮಕ್ಕೆ ಹೇಳಿ ಮಾಡಿಸಿದಂತಹ ಪೋಷಕಾಂಶಗಳಾಗಿವೆ. ಇದರಲ್ಲಿ ಬ್ಯಾಕ್ಟೀರಿಯಾ ನಿವಾರಕ (anti-bacterial) ಮತ್ತು ಬೂಸು ನಿವಾರಕ (anti-fungal) ಗುಣಗಳಿದ್ದು ಕ್ರಿಮಿಗಳು ಮಗುವಿನ ಚರ್ಮವನ್ನು ಆಕ್ರಮಿಸುವುದರಿಂದ ರಕ್ಷಿಸುತ್ತದೆ. ಮಗುವಿನ ಸ್ನಾನಕ್ಕೂ ಮೊದಲು ಮತ್ತು ಸ್ನಾನದ ನಂತರ ತೆಳ್ಳಗಿನ ಲೇಪನದಂತೆ ಉಗುರುಬೆಚ್ಚನೆಯ ಕೊಬ್ಬರಿ ಎಣ್ಣೆಯನ್ನು ಹಚ್ಚಿ ನಯವಾಗಿ ಮಸಾಜ್ ಮಾಡುವುದರಿಂದ ಮಗುವಿನ ಚರ್ಮ ಕಾಂತಿಯುತವಾಗುತ್ತದೆ.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ವಿಶ್ವದ ಹೆಚ್ಚಿನ ರಾಷ್ಟ್ರಗಳಲ್ಲಿ ಆಲಿವ್ ಎಣ್ಣೆಯನ್ನೇ ಮಗುವಿನ ತ್ವಚೆಗೆ ಮಸಾಜ್ ಮಾಡಲು ಬಳಸಲಾಗುತ್ತಿದೆ. ಇತ್ತೀಚೆಗೆ ಭಾರತದಲ್ಲೂ ಲಭ್ಯವಾಗುತ್ತಿರುವ ಆಲಿವ್ ಎಣ್ಣೆ ಮಗುವಿನ ಚರ್ಮಕ್ಕೆ ಪೂರಕವಾಗಿದೆ. ಈ ಎಣ್ಣೆಯ ಬಳಕೆಯಿಂದ ಮಗುವಿನ ಚರ್ಮಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಬದಲಿಗೆ ಚರ್ಮವ್ಯಾಧಿಗಳಾದ ಎಕ್ಸಿಮಾ, ಅಲರ್ಜಿ, ಚಿಕ್ಕ ಪುಟ್ಟ ಗೀರುಗಳು, ಒಣಚರ್ಮ ಮೊದಲಾದ ತೊಂದರೆಗಳಿಗೆ ಆರೈಕೆಯನ್ನೇ ನೀಡುತ್ತದೆ.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಒಂದು ವೇಳೆ ಮಗುವಿನ ಚರ್ಮ ಅತೀವ ಸಂವೇದಿಯಾಗಿದ್ದರೆ (ಎಣ್ಣೆ ಹಚ್ಚಿದ ಕೆಲ ನಿಮಿಷಗಳಲ್ಲಿಯೇ ತುಂಬಾ ಕೆಂಪಾಗಿ ಮಗು ಅಳಹತ್ತಿದರೆ) ಆಲಿವ್ ಎಣ್ಣೆಯನ್ನು ಬಳಸುವುದು ತರವಲ್ಲ. ಏಕೆಂದರೆ ಆಲಿವ್ ಎಣ್ಣೆಯ ಕಣಗಳು ಮಗುವಿನ ಚರ್ಮದ ರಂಧ್ರಗಳಿಗಿಂತಲೂ ಚಿಕ್ಕದಿರುವುದರಿಂದ ಕೂಡಲೇ ಹೀರಲ್ಪಟ್ಟು ಚರ್ಮದಲ್ಲಿದ್ದ ಆರ್ದ್ರತೆಯನ್ನು ಹೊರದೂಡುತ್ತದೆ. ಇದು ಚರ್ಮವನ್ನು ಇನ್ನಷ್ಟು ಒಣಗಾಗಿಸಲು ಕಾರಣವಾಗುತ್ತದೆ.

ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆಯನ್ನೂ ಮಗುವಿನ ಮಸಾಜ್‌ಗೆ ಉಪಯೋಗಿಸಬಹುದು. ಆದರೆ ಈ ಎಣ್ಣೆ ಕೊಂಚ ಉರಿ ತರಿಸುವ ಗುಣ ಹೊಂದಿರುವುದರಿಂದ ಸೆಖೆಗಾಲದಲ್ಲಿ ಉಪಯೋಸಬಾರದು. ಚಳಿಗಾಲದಲ್ಲಿ ಈ ಎಣ್ಣೆಯ ಬಳಕೆ ಉಪಯುಕ್ತವಾಗಿದೆ. ಈ ಎಣ್ಣೆಯನ್ನು ಸುಮಾರು ಒಂದು ವರ್ಷ ದಾಟಿದ ಮಕ್ಕಳ ಚರ್ಮಕ್ಕೆ ಉಪಯೋಗಿಸುವುದು ಒಳ್ಳೆಯದು. ಇನ್ನೂ ಚಿಕ್ಕ ಮಕ್ಕಳ ತ್ವಚೆಗೆ ಈ ಎಣ್ಣೆ ಸಮಂಜಸವಲ್ಲ. ಅಲ್ಲದೇ ಈ ಎಣ್ಣೆಯನ್ನು ತಣ್ಣಗಿರುವಾಗಲೇ ಹಚ್ಚಬೇಕು. ಬಿಸಿಮಾಡಿದರೆ ಚರ್ಮದ ಉರಿ ಹೆಚ್ಚಾಗುತ್ತದೆ.

ಎಳ್ಳೆಣ್ಣೆ

ಎಳ್ಳೆಣ್ಣೆ

ಅಗ್ಗವಾಗಿರುವ ಮತ್ತು ನೀರಿನಷ್ಟೇ ತೆಳ್ಳಗಿರುವ ಎಳ್ಳೆಣ್ಣೆ ಸಹಾ ಮಗುವಿನ ತ್ವಚೆಗೆ ಉತ್ತಮವಾಗಿದೆ. ಇದರಲ್ಲಿರುವ ಪೋಷಕಾಂಶಗಳು ಮಗುವಿನ ತ್ವಚೆ ಕಾಂತಿಯುಕ್ತವಾಗಲು ನೆರವಾಗುತ್ತದೆ. ಸೆಖೆಗಾಲದಲ್ಲಿ ಎಳ್ಳೆಣ್ಣೆಯ ಬಳಕೆ ಸಲ್ಲದು. ಆದರೆ ಚಳಿಗಾಲದಲ್ಲಿ ಬಳಸಬಹುದು. ಉತ್ತಮ ಪರಿಣಾಮಕ್ಕಾಗಿ ಕರಿ ಎಳ್ಳಿನಿಂದ ತೆಗೆದ ಎಣ್ಣೆಯನ್ನು ಬಳಸಿ. ಎಳ್ಳೆಣ್ಣೆ ಮಗುವಿನ ತ್ವಚೆಗೆ ಒಳ್ಳೆಯದು ಎಂದು ಆಯುರ್ವೇದದಲ್ಲಿಯೂ ಹೇಳಲಾಗಿದೆ.

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆ

ಚರ್ಮಕ್ಕೆ ಅಗತ್ಯವಾಗಿ ಬೇಕಾಗಿರುವ ವಿಟಮಿನ್ ಇ ಬಾದಾಮಿ ಎಣ್ಣೆಯಲ್ಲಿ ಹೇರಳವಾಗಿರುವುದರಿಂದ ಮಗುವಿನ ಚರ್ಮಕ್ಕೆ ಸೂಕ್ತವಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಬಾದಾಮಿ ಎಣ್ಣೆಯನ್ನು ಖರೀದಿಸುವ ಮೊದಲು ಅದರಲ್ಲಿ ಬೇರೆ ಯಾವುದೇ ಸುಗಂಧ ಅಥವಾ ಎಣ್ಣೆಗಳನ್ನು ಮಿಶ್ರಣ ಮಾಡಿಲ್ಲವೆಂದು ಖಚಿತಪಡಿಸಿಕೊಳ್ಳಿ.

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆ

ಏಕೆಂದರೆ ಮಿಶ್ರಿತ ಎಣ್ಣೆ ಮಗುವಿನ ತ್ವಚೆಯ ಮೇಲೆ ಮಾರಕ ಪರಿಣಾಮ ಉಂಟುಮಾಡಬಹುದು. ಕೊಂಚ ದುಬಾರಿಯಾಗಿರುವ ಕಾರಣ ಸ್ನಾನದ ಬಳಿಕ ಅಲ್ಪ ಪ್ರಮಾಣದಲ್ಲಿ ಹಚ್ಚಿದರೆ ಸಾಕಾಗುತ್ತದೆ. ಈ ಎಣ್ಣೆಯನ್ನು ತಣ್ಣಗೇ ಹಚ್ಚಬೇಕು, ಬಿಸಿಮಾಡುವ ಅಗತ್ಯವಿಲ್ಲ.

English summary

Choosing Right Oil for Baby's Massage

Choosing right oil for massaging your baby is very crucial. As oil is an important aspect of massage, you need to be verywhile choosing oil for baby's sensitive skin. There are several oils available in market for massaging baby. It is good to prefer natural baby oils for massaging your baby.
Story first published: Thursday, September 3, 2015, 20:06 [IST]
X
Desktop Bottom Promotion