For Quick Alerts
ALLOW NOTIFICATIONS  
For Daily Alerts

ಪರೀಕ್ಷೆಯಲ್ಲಿ ನಿಮ್ಮ ಮಕ್ಕಳು ಟಾಪ್ ಸ್ಕೋರರ್ ಎನಿಸಿಕೊಳ್ಳಬೇಕೇ?

By Super
|

ಮಕ್ಕಳು ಸೇವಿಸುವ ಆಹಾರವನ್ನು ಮತ್ತು ಪರೀಕ್ಷೆ ಸಮಯದಲ್ಲಿ ಅವರ ಡಯಟ್ ಅನ್ನು ನಾವು ಬಹುವಾಗಿ ನಿರ್ಲಕ್ಷಿಸುತ್ತೇವೆ. ನಮಗೆ ಗೊತ್ತಿರುವಂತೆ ಮಕ್ಕಳು ಆರೋಗ್ಯಕರವಾಗಿರುವ ಆಹಾರವನ್ನೆ ತಿನ್ನುತ್ತಾರೆ, ಆದರೆ ಕೊನೆಯಲ್ಲಿ ಪರೀಕ್ಷೆಗೆ ಮಗುವನ್ನು ಖುಷಿಯಾಗಿ ಕಳುಹಿಸಿಕೊಡುವಾಗ ಪೋಷಕರೆ ಅವರಿಗೆ ಜಂಕ್ ಫುಡ್ ಕೊಟ್ಟು ಕಳುಹಿಸುತ್ತಾರೆ. ಜೊತೆಗೆ ಲೋಟಗಟ್ಟಲೆ ಕಾಫಿ ಕುಡಿಸಿ ಕಳುಹಿಸುತ್ತಾರೆ.

ಹಾಗಾಗಿ ನಿಮ್ಮ ಮಕ್ಕಳ ಡಯಟ್ ಅನ್ನು ಮೊದಲೆ ನಿರ್ಧರಿಸಿ, ಅವರ ಜೊತೆ ಕೂತು ಮಾತನಾಡಿ. ನಿಮಗೆ ಮಾರ್ಗದರ್ಶನ ನೀಡಲು ನಾವಿದ್ದೇವೆ. ಯಾವ ಯಾವ ಆಹಾರವನ್ನು ತಿನ್ನಿಸಬೇಕೆಂದು ಮುಂದೆ ಓದಿ. ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವ 18 ಅದ್ಭುತ ಆಹಾರಗಳು

ಆರೋಗ್ಯಕರವಾದ ಉಪಾಹಾರವನ್ನು ಸೇವಿಸಿ

ಆರೋಗ್ಯಕರವಾದ ಉಪಾಹಾರವನ್ನು ಸೇವಿಸಿ

ಓಟ್ಸ್, ಮುಸೆಲಿ, ಉಪ್ಪಿಟ್ಟು, ಕಿಚಡಿ, ಇಡ್ಲಿ ಇತ್ಯಾದಿಗಳಲ್ಲಿ ಕಡಿಮೆ ಗ್ಲಿಸೆಮಿಕ್ ಇಂಡೆಕ್ಸ್ ಇರುತ್ತದೆ. ಇದು ನಿಮ್ಮ ದೇಹದಲ್ಲಿ ಗ್ಲೂಕೋಸಿನ ಪ್ರಮಾಣವನ್ನು ಸುಸ್ಥಿತಿಯಲ್ಲಿಡುತ್ತದೆ.

ನಿಯಮಿತವಾಗಿ ಸಣ್ಣ ಪ್ರಮಾಣದ ಊಟ ಮಾಡಿ

ನಿಯಮಿತವಾಗಿ ಸಣ್ಣ ಪ್ರಮಾಣದ ಊಟ ಮಾಡಿ

ನಿಯಮಿತವಾಗಿ ಸಣ್ಣ ಪ್ರಮಾಣದಲ್ಲಿ ಊಟ ಮಾಡುವುದರಿಂದ ನಿಮ್ಮ ದೇಹಕ್ಕೆ ಅಗತ್ಯವಾದ ಚೈತನ್ಯವನ್ನು ನೀಡಬಹುದು. ತಾಜಾ ಹಣ್ಣುಗಳು/ ಹಣ್ಣಿನ ರಸ/ ಒಣಹಣ್ಣು/ ಜೇನು ತುಪ್ಪದಲ್ಲಿ ಅದ್ದಿದ ಒಣ ಹಣ್ಣುಗಳು/ಸೂಪ್‍ಗಳು/ ಉತ್ತಮವಾದ ಸಲಾಡ್‍ಗಳು ಇತ್ಯಾದಿಗಳನ್ನು ಸೇವಿಸಿರಿ.

ನಿಮ್ಮ ಡಯಟ್‍ನಲ್ಲಿ ಪ್ರೋಟೀನ್‍ಗಳನ್ನು ಸೇರಿಸಿ

ನಿಮ್ಮ ಡಯಟ್‍ನಲ್ಲಿ ಪ್ರೋಟೀನ್‍ಗಳನ್ನು ಸೇರಿಸಿ

ಕಾರ್ಬೋಹೈಡ್ರೇಟ್‍ಗಳು ನಿಮ್ಮ ದೇಹದಲ್ಲಿ ಶಕ್ತಿಯನ್ನು ತತ್‍ಕ್ಷಣಕ್ಕೆ ತಂದು ನೀಡುತ್ತವೆ. ಕಾರಣ ಇವು ನಿಮ್ಮ ದೇಹದಲ್ಲಿ ಬೇಗ ಕರಗುತ್ತವೆ. ಪ್ರೋಟಿನ್‍ಗಳು ಸಹ ಈ ಕಾರ್ಯದಲ್ಲಿ ಕೈಗೂಡಿಸುತ್ತವೆ. ಪ್ರೋಟೀನ್ ಭರಿತವಾದ ಉಪಾಹಾರವನ್ನು(ಮೊಟ್ಟೆ, ಪೊಹಾ, ಇಡ್ಲಿ, ದೋಸೆ, ದೋಕ್ಲಾ ಇತ್ಯಾದಿ) ಸೇವಿಸಿ, ಇವು ನಿಮ್ಮ ದೇಹದಲ್ಲಿ ಅದರಲ್ಲೂ ವಿಶೇಷವಾಗಿ ರಕ್ತ ಮತ್ತು ಮೆದುಳಿನಲ್ಲಿ ಅಮೈನೋ ಆಮ್ಲಗಳ ಮಟ್ಟವನ್ನು ಸುಧಾರಿಸುತ್ತದೆ.ಇದರಿಂದ ನಿಮ್ಮ ಮಕ್ಕಳು ಚುರುಕಾಗಿ ಮತ್ತು ಕ್ರಿಯಾಶೀಲರಾಗಿರುತ್ತಾರೆ.

ಅವರಿಗೆ ನೀರನ್ನು ಚೆನ್ನಾಗಿ ಕುಡಿಯಲು ಹೇಳಿ

ಅವರಿಗೆ ನೀರನ್ನು ಚೆನ್ನಾಗಿ ಕುಡಿಯಲು ಹೇಳಿ

ಹೌದು ಮಕ್ಕಳು ಸಹ ನೀರನ್ನು ಚೆನ್ನಾಗಿ ಕುಡಿಯಬೇಕು. ಅವರು ತಂಪಾದ ವಾತಾವರಣದಲ್ಲಿ ಕೂರುವುದರಿಂದ ಅವರಿಗೆ ಬಾಯಾರಿಕೆ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಆದರೆ ನೀರನ್ನು ಹೆಚ್ಚು ಕುಡಿದರೆ ಅವರಿಗೆ ಆಲಸ್ಯತನ ಕಾಡುವುದಿಲ್ಲ. ಅವರ ಏಕಾಗ್ರತೆ ಹೆಚ್ಚಾಗುತ್ತದೆ. ಒಂದು ವೇಳೆ ಅವರಿಗೆ ಬರೀ ನೀರು ಕುಡಿಯುವುದು ಇಷ್ಟವಾಗಲಿಲ್ಲವಾದರೆ, ಹಣ್ಣಿನ ರಸ/ಮಜ್ಜಿಗೆ/ ನಿಂಬೆ ರಸಗಳನ್ನು ನೀಡಿ. ಗ್ರೀನ್ ಟೀಯನ್ನು ಸಹ ನೀಡಬಹುದು.

ಅಧಿಕ ಪ್ರಮಾಣದ ಕೆಫಿನ್ ಸೇವಿಸಲು ನೀಡಬೇಡಿ

ಅಧಿಕ ಪ್ರಮಾಣದ ಕೆಫಿನ್ ಸೇವಿಸಲು ನೀಡಬೇಡಿ

ಅಧಿಕ ಪ್ರಮಾಣದ ಕೆಫಿನ್/ ಎನರ್ಜಿ ಡ್ರಿಂಕ್/ ಟೀ/ಕೋಲಾಗಳನ್ನು ಕುಡಿಯುವುದರಿಂದ ಮಕ್ಕಳಲ್ಲಿ ನಿದ್ರಾಹೀನತೆ ಬರುತ್ತದೆ. ಆದ್ದರಿಂದ ಇವುಗಳನ್ನು ನಿಯಂತ್ರಿಸಿ, ಇಲ್ಲವೆ ಸ್ವಲ್ಪ ಮಾತ್ರ ಸೇವಿಸಲು ಅವಕಾಶ ನೀಡಿ.

ಅಧಿಕ ಪ್ರಮಾಣದ ಸಕ್ಕರೆ ಮತ್ತು ಸಂಸ್ಕರಿಸಿದ ಆಹಾರವನ್ನು ಸೇವಿಸಲು ನೀಡಬೇಡಿ

ಅಧಿಕ ಪ್ರಮಾಣದ ಸಕ್ಕರೆ ಮತ್ತು ಸಂಸ್ಕರಿಸಿದ ಆಹಾರವನ್ನು ಸೇವಿಸಲು ನೀಡಬೇಡಿ

ಚಾಕೊಲೆಟ್, ಕುಕೀಗಳು ಇತ್ಯಾದಿಗಳು ರಕ್ತದಲ್ಲಿ ಇದ್ದಕ್ಕಿದ್ದಂತೆ ಸಕ್ಕರೆಯ ಪ್ರಮಾಣವನ್ನು ಅಧಿಕಗೊಳಿಸುತ್ತವೆ. ಸ್ವಲ್ಪ ಹೊತ್ತಿನ ನಂತರ ಹೊಟ್ಟೆ ಖಾಲಿ ಖಾಲಿಯಾಗುತ್ತದೆ. ಆದ್ದರಿಂದ ಇಂತಹ ಜಂಕ್ ಫುಡ್‍ಗಳನ್ನು ನೀಡಬೇಡಿ.

ಒತ್ತಡ ನಿವಾರಕ ಆಹಾರವನ್ನು ಸೇವಿಸುತ್ತಿದ್ದಾರೆ ಎಂದು ಖಾತ್ರಿಪಡಿಸಿಕೊಳ್ಳಿ

ಒತ್ತಡ ನಿವಾರಕ ಆಹಾರವನ್ನು ಸೇವಿಸುತ್ತಿದ್ದಾರೆ ಎಂದು ಖಾತ್ರಿಪಡಿಸಿಕೊಳ್ಳಿ

ಪರೀಕ್ಷೆ ಅವಧಿಯಲ್ಲಿ ಮಕ್ಕಳು ಒತ್ತಡ ನಿವಾರಕ ಆಹಾರವನ್ನು ಸೇವಿಸುತ್ತಿದ್ದಾರೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ವಿಟಮಿನ್ ಬಿ ಕಾಂಪ್ಲೆಕ್ಸ್ ಮತ್ತು ಸಿ,ಸತುವಿನಂತಹ ಖನಿಜಾಂಶಗಳುನ್ನು ನಿಮ್ಮ ಮಗುವಿಗೆ ನೀಡಿ.ಇವು ಮೆದುಳಿನಲ್ಲಿ ಆಡ್ರೆನಲ್ ಹಾರ್ಮೋನ್‍ಗಳನ್ನು ಉದ್ಧೀಪನ ಮಾಡುತ್ತವೆ. ಈ ಹಾರ್ಮೊನ್‍ಗಳು ಒತ್ತಡವನ್ನು ಹೊಡೆದೋಡಿಸಲು ನೆರವಾಗುತ್ತವೆ. ಕುಸುಬಲಕ್ಕಿ, ಒಣ ಹಣ್ಣುಗಳು, ಮೊಟ್ಟೆಗಳು, ತಾಜಾ ತರಕಾರಿಗಳು ಮತ್ತು ಹಣ್ಣುಗಳು ನಿಮ್ಮ ಮಗುವಿಗೆ ಈ ನಿಟ್ಟಿನಲ್ಲಿ ಸಹಾಯ ಮಾಡುತ್ತವೆ.

ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುವಂತಹ ಆಹಾರಗಳನ್ನು ನೀಡಿ

ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುವಂತಹ ಆಹಾರಗಳನ್ನು ನೀಡಿ

ವಿಟಮಿನ್ ಎ ಮತ್ತು ಇ ಮೆದುಳಿನ ಕೋಶಗಳಿಗೆ ಹಾನಿಯಾಗದಂತೆ ತಡೆಯುತ್ತವೆ. ಇವು ಫ್ರಿ ರ‍್ಯಾಡಿಕಲ್‍ಗಳ ಮೇಲೆ ಹೋರಾಡುತ್ತವೆ. ಇವು ಮೊಟ್ಟೆ, ಮೀನು, ಕ್ಯಾರಟ್, ಕುಂಬಳಕಾಯಿ, ಹಸಿರು ಸೊಪ್ಪುಗಳು, ತಾಜಾ ಹಣ್ಣುಗಳು ನಿಮ್ಮ ಮಗುವಿನ ಅಗತ್ಯತೆಯನ್ನು ಪೂರೈಸುತ್ತವೆ. ಜೊತೆಗೆ ಇವು ನಿಮ್ಮ ಮಗುವಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಮಗುವಿಗೆ ಕಾಯಿಲೆಗಳು ಬರುವ ಸಾಧ್ಯತೆ ಕಡಿಮೆಯಾಗುತ್ತದೆ.

ನೆನಪಿನ ಶಕ್ತಿ ಹೆಚ್ಚಿಸುವ ಆಹಾರವನ್ನು ಸೇವಿಸುವುದನ್ನು ಮಿಸ್ ಮಾಡಿಕೊಳ್ಳಬೇಡಿ

ನೆನಪಿನ ಶಕ್ತಿ ಹೆಚ್ಚಿಸುವ ಆಹಾರವನ್ನು ಸೇವಿಸುವುದನ್ನು ಮಿಸ್ ಮಾಡಿಕೊಳ್ಳಬೇಡಿ

ಒಮೆಗಾ 3 ಕೊಬ್ಬಿನ ಆಮ್ಲಗಳು ಮೀನಿನಲ್ಲಿ ಅಧಿಕವಾಗಿ ದೊರೆಯುತ್ತವೆ. ಇವು ಮೆದುಳಿನ ಕಾರ್ಯಕ್ಷಮತೆಯನ್ನು ಮತ್ತು ನೆನಪಿನಶಕ್ತಿಯನ್ನು ಹೆಚ್ಚಿಸುತ್ತವೆ. ಆದ್ದರಿಂದ ವಾರಕ್ಕೆ ಎರಡು ಬಾರಿಯಾದರು ಸಾಲ್ಮನ್ ಮೀನನ್ನು ನೀಡಿ. ಒಂದು ವೇಳೆ ನೀವು ಮೀನು ಸೇವಿಸದಿದ್ದಲ್ಲಿ, ಅಲ್ಸಿ, ಕುಂಬಳ ಕಾಯಿ ಬೀಜಗಳು, ಎಳ್ಳು, ಸೋಯಾಬೀನ್ ಸೇವಿಸಬಹುದು. ಇದರ ಜೊತೆಗೆ ಒಮೆಗಾ 3 ಕೊಬ್ಬಿನ ಆಮ್ಲದ ಮಾತ್ರೆ ಸಹ ದೊರೆಯುತ್ತದೆ.

ಪರೀಕ್ಷೆ ಅವಧಿಯಲ್ಲಿ ಹೊರಗೆ ದೊರೆಯುವ ಆಹಾರಗಳನ್ನು ಸೇವಿಸಬೇಡಿ

ಪರೀಕ್ಷೆ ಅವಧಿಯಲ್ಲಿ ಹೊರಗೆ ದೊರೆಯುವ ಆಹಾರಗಳನ್ನು ಸೇವಿಸಬೇಡಿ

ಪರೀಕ್ಷೆ ಎಂದರೆ ಅಧಿಕ ಒತ್ತಡ ಮತ್ತು ಕಡಿಮೆ ರೋಗ ನಿರೋಧಕ ಶಕ್ತಿಯ ದಿನಗಳು ಎಂದರ್ಥ. ಈ ಅವಧಿಯಲ್ಲಿ ಮಕ್ಕಳಿಗೆ ಇನ್‍ಫೆಕ್ಷನ್‍ಗಳು ಅಧಿಕವಾಗಿ ಭಾದಿಸುತ್ತವೆ. ಆದ್ದರಿಂದ ಹೊರಗೆ ದೊರೆಯುವ ಆಹಾರಗಳನ್ನು ಸೇವಿಸಲು ನಿಮ್ಮ ಮಗುವಿಗೆ ಅವಕಾಶ ನೀಡಬೇಡಿ. ಒಂದು ವೇಳೆ ನಿಮ್ಮ ಮಗು ಅದನ್ನೆ ಇಷ್ಟಪಟ್ಟರೆ ಮನೆಯಲ್ಲಿ ಅಥವಾ ಶುಚಿಯಾದ ರೆಸ್ಟೋರೆಂಟಿನಲ್ಲಿ ಕೊಡಿಸಿ.

English summary

10 diet changes to help your kids top exams

A child’s diet is one of the most neglected aspects during their exams. It has been observed that even kids who usually eat healthy end up eating a lot of junk food and drink pots of coffee to stay awake during exam times. We list out 10 tried-and-tested tips to help you:
X
Desktop Bottom Promotion