For Quick Alerts
ALLOW NOTIFICATIONS  
For Daily Alerts

ನಿಮ್ಮ ಮಕ್ಕಳಿಗೆ ನಿದ್ರೆ ಸಮಸ್ಯೆಯೇ? ಇಲ್ಲಿದೆ ಪರಿಹಾರ

By Hemanth P
|

ನಿದ್ರೆಯು ದಿನದ ಆಯಾಸವನ್ನು ಹೋಗಲಾಡಿಸಿ ಮುಂದಿನ ದಿನವನ್ನು ಉಲ್ಲಾಸದಿಂದ ಎದುರಿಸಿ ಸಾಕಷ್ಟು ಕಲಿಯಲು ಮತ್ತು ಕ್ರಿಯಾ ಚಟುವಟಿಕೆಗಳಿಂದ ಇರಲು ನೆರವಾಗುತ್ತದೆ. ಸಣ್ಣ ಮಕ್ಕಳಿಗೆ ನಿದ್ರೆಯು ತುಂಬಾ ಮುಖ್ಯವಾಗಿರುತ್ತದೆ. ಜ್ಞಾನ ಮತ್ತು ಇತರ ಅರಿವಿನ ಚಟುವಟಿಕೆಗಳನ್ನು ಬಲಗೊಳಿಸಲು ಕನಸು ತುಂಬಾ ಮುಖ್ಯವಾಗಿರುತ್ತದೆ ಹಾಗೂ ಹಾರ್ಮೋನು ಬೆಳವಣಿಗೆ ಸ್ರವಿಸುವಿಕೆ ಹೆಚ್ಚಾಗಲು ನೆರವಾಗುತ್ತದೆ. ಇದಕ್ಕೆ ಬೇಕಾದ ಪ್ರಾಮುಖ್ಯತೆಯನ್ನು ನಾವು ನೀಡಬೇಕಾಗುತ್ತದೆ.

ಮಕ್ಕಳಿಗೆ ತಮ್ಮ ವಯಸ್ಸಿಗೆ ಅನುಗುಣವಾಗಿ ವಿಭಿನ್ನ ಅವಧಿಯ ನಿದ್ದೆ ಬೇಕಾಗುತ್ತದೆ. ಶಾಲೆಗೆ ಹೋಗುವ ಮೊದಲು ಮಕ್ಕಳಿಗೆ ಸುಮಾರು 10 ರಿಂದ 12 ಗಂಟೆಗಳ ನಿದ್ದೆ ಬೇಕಾಗುತ್ತದೆ. 2ರ ಹರೆಯದಲ್ಲಿ ಸುಮಾರು 10 ಗಂಟೆಗಳ ನಿದ್ರೆ, ಪ್ರೌಢಾವಸ್ಥೆ ತಲುಪಿದಾಗ 8ರಿಂದ 9 ಗಂಟೆಗಳ ನಿದ್ರೆ ಬೇಕಾಗುತ್ತದೆ. ಆದರೂ ಹಲವಾರು ಮಕ್ಕಳೂ ಕಡಿಮೆ ನಿದ್ದೆ ಮಾಡುತ್ತಾರೆ.

ಮಕ್ಕಳ ನಿದ್ರೆಯಲ್ಲಿ ಆಗುವ ಬದಲಾವಣೆಗಳಿಂದ ನಿದ್ರೆಯ ಅಭ್ಯಾಸದ ಮೇಲೆ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಇದರಿಂದ ನಕಾರಾತ್ಮಕ ಪರಿಣಾಮಗಳಾದ ಹೆಚ್ಚಿನ ಕ್ರಿಯಾಶೀಲ, ಕಿರಿಕಿರಿ, ತೊಂದರೆ ನಿಭಾಯಿಸುವ ಭಾವನೆಗಳು, ದುಡುಕುತನ ಹೆಚ್ಚುವುದು...ಈ ಸಲಹೆಗಳನ್ನು ಪಡೆದುಕೊಂಡು ಹೆಚ್ಚಿನ ನಿದ್ರೆಯನ್ನು ಆನಂದಿಸಿರಿ.

Ways to make children sleep

ಒಂದು ನಿಯಮಿತ ವೇಳಾಪಟ್ಟಿ
ಪ್ರತೀ ದಿನ ಕ್ರಿಯಾಚಟುವಟಿಕೆಯಿಂದ ಇರಲು ದೇಹಕ್ಕೆ ತನ್ನದೇ ಆದ ವಿಶ್ರಾಂತಿಯ ವೇಳಾಪಟ್ಟಿ ಬೇಕಾಗುತ್ತದೆ. ಇದಕ್ಕೆ ದೇಹವು ಹೊಂದಿಕೊಂಡಿರುತ್ತದೆ. ಕನಸುಗಳು ನಿಯಮಿತ ಮತ್ತು ಸ್ಥಿರ ಸಮಯದಲ್ಲಿರುತ್ತದೆ. ಇದನ್ನು ಪ್ರೀತಿಸಿದರೂ ಶನಿವಾರ ಹಾಗೂ ಆದಿತ್ಯವಾರ ಮಲಗುವಾಗ ತಡರಾತ್ರಿಯಾಗುತ್ತದೆ.

ಗರ್ಭಿಣಿಯರಲ್ಲಿ ಹುಳಿ ತಿನ್ನುವ ಬಯಕೆ; ಏನಿದರ ರಹಸ್ಯ?

ನಿದ್ರೆಯು ಒಂದು ಆಚರಣೆ
ಮಲಗುವ ತಯಾರಿಯನ್ನು ಒಂದು ಆಚರಣೆಯನ್ನಾಗಿ ಮಾಡಿ. ನೀವು ಬಿಸಿನೀರಿನ ಸ್ನಾನ, ಸಂಗೀತವನ್ನು ಆಫ್ ಮಾಡಿ, ಪೈಜಾಮಾ ಧರಿಸಿ, ಮುಂದಿನ ದಿನಕ್ಕೆ ನಿಮ್ಮ ಬಟ್ಟೆಗಳನ್ನು ತಯಾರಿ ಮಾಡಿಡಿ. ಹಲ್ಲುಜ್ಜಿ ಮಲಗಿ.

ಮಲಗುವ ಮೊದಲು ಎಲ್ಲಾ ಚಟುವಟಿಕೆ ನಿಲ್ಲಿಸಿ
ಮಲಗುವ ಮೊದಲು ಪುಸ್ತಕ ಓದುವುದು ಒಳ್ಳೆಯ ಹವ್ಯಾಸ ಹಾಗೂ ಇದರಿಂದ ಸುವ್ಯಸ್ಥಿತವಾಗಿ ಮಲಗಬಹುದು. ಮಲಗುವ ಮೊದಲು ವೀಡಿಯೋ ಗೇಮ್ಸ್ ಆಡುವುದು ಅಥವಾ ಟಿವಿ ನೋಡಬೇಡಿ. ಮಲಗುವ ಮೊದಲು ಊಟ ಮಾಡಿ ಮತ್ತು ಕೆಫಿನ್ ಸೇವನೆ ಬೇಡ.

ನಾವು ಮಲಗುವ ಕೋಣೆಯು ತುಂಬಾ ಶಾಂತ ಮತ್ತು ಕತ್ತಲಿನಿಂದ ಇರಬೇಕು.
ಇದರಿಂದ ದೇಹದ ಉಷ್ಣಾಂಶವು ಕಡಿಮೆಯಾಗಿ ವಿಶ್ರಾಂತಿಗೆ ನೆರವಾಗುತ್ತದೆ. ಶಬ್ದ ಬರದಂತಿರಲಿ, ಒಳ್ಳೆಯ ಬಣ್ಣ, ಮೆದುವಾದ ಹಾಸಿಗೆ ಬಳಸಿ. ಕಂಪ್ಯೂಟರ್ ಅಥವಾ ಇತರ ಯಾವುದೇ ಇಲೆಕ್ಟ್ರಾನಿಕ್ ಸಾಧನಗಳನ್ನು ಬಳಸಬೇಡಿ.

ರಾತ್ರಿಯ ಊಟ ಹಗುರವಾಗಿರಲಿ
ರಾತ್ರಿಯ ಊಟ ಹೊಟ್ಟೆಗೆ ಭಾರವಾಗಿರಬಾರದು. ಆದರೆ ನಾವು ಖಾಲಿ ಹೊಟ್ಟೆಯಲ್ಲಿ ಮಲಗಬಾರದು. ಮಲಗುವ ಎರಡು ಗಂಟೆ ಮೊದಲು ರಾತ್ರಿಯ ಊಟ ಮಾಡಿ. ಆದರೆ ಬಿಸಿ ಹಾಲು ಸೇವನೆ ಮಾಡುವುದರಿಂದ ದೇಹವು ವಿಶ್ರಾಂತಿ ಪಡೆಯುತ್ತದೆ.

ಜಡ ಚಟುವಟಿಕೆಗಳನ್ನು ಕೈಬಿಡಿ
ವ್ಯಾಯಮವು ನಮ್ಮನ್ನು ಕೇವಲ ಫಿಟ್ ಆಗಿಡುವುದು ಮಾತ್ರವಲ್ಲದೆ ನಮ್ಮ ದೇಹದ ನಿರಾಳ, ಒತ್ತಡ ನಿವಾರಣೆಗೆ ನೆರವಾಗುತ್ತದೆ. ಇದರಿಂದ ಉತ್ತಮವಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತದೆ. ಒಂದು ವ್ಯಾಯಾಮ ಮತ್ತು ಮತ್ತೊಂದು ವ್ಯಾಯಾಮದ ಮಧ್ಯೆ ಸಮಯದ ಅಂತರವಿರಲಿ. ಮಲಗುವ ಕೆಲವು ಗಂಟೆಗಳ ಮೊದಲು ವ್ಯಾಯಾಮ ಮಾಡಿ.

ರಕ್ತದೊತ್ತಡದ ಮಹಿಳೆಯರಿಗೆ ಗರ್ಭಧಾರಣೆಯ ಸಲಹೆಗಳು

ನಿದ್ರೆಯ ನಿಂದಿಸಬೇಡಿ
ದೀರ್ಘ ನಿದ್ರೆ ಮತ್ತು ಅಗತ್ಯಕ್ಕಿಂತ ಹೆಚ್ಚು ಹಾಸಿಗೆಯಲ್ಲಿ ಮಲಗಬೇಡಿ. ನಿದ್ರೆಯ ಸಮಯ ಮುಗಿದ ಬಳಿಕ ನೀವು ಹಾಸಿಗೆಯಿಂದ ಎದ್ದು ದಿನವನ್ನು ಆನಂದಿಸಿ. ನಿದ್ರೆಯ ಸಮಯದಲ್ಲಿ ಟಿವಿ ನೋಡುವುದು, ಓದುವುದು ಮತ್ತು ಹೋಮ್ ವರ್ಕ್ ಮಾಡಬೇಡಿ.

English summary

Ways to make children sleep

Sleep allows us to get up every day with the forces and energies to face another day where learn and spend big. And for the little ones this time is more important still: the dream has a very important role in the consolidation of memory and other cognitive activities,
Story first published: Friday, August 22, 2014, 16:19 [IST]
X
Desktop Bottom Promotion