For Quick Alerts
ALLOW NOTIFICATIONS  
For Daily Alerts

ನಿಮ್ಮ ಮಗು ಸದಾ ಬ್ಯುಸಿಯಾಗಿರಬೇಕೆ ?

By Poornima Hegde
|

ಮುಗ್ಧ ಮಕ್ಕಳು ಹೇಗಿದ್ದರೂ ಅದನ್ನು ನೋಡುವುದೇ ಚಂದ, ಮಗುವಾಗಿದ್ದಾಗ ಅವರು ಆಡಿದ್ದು, ನಡೆದಿದ್ದು, ನಡೆಯುವಾಗ ಜಾರಿದ್ದು ಇವೆಲ್ಲವನ್ನೂ ತಾಯಿಯಾದವಳು ಪ್ರತಿಕ್ಷಣ ಸಂತೋಷದಿಂದ ನೋಡುತ್ತಾಳೆ. ಆ ಖುಷಿಯನ್ನು ಅನುಭವಿಸುತ್ತಾಳೆ. ಚಿಕ್ಕ ವಯಸ್ಸಿನಲ್ಲಿ ಮಕ್ಕಳ ಪಾಲನೆ ಅತ್ಯಂತ ಮುಖ್ಯ.

ಪಾಲಕರು ಮಗು ಇಡುವ ಪ್ರತಿಯೊಂದು ಹೆಜ್ಜೆಯನ್ನೂ ಗಮನಿಸುತ್ತಿರಬೇಕು. ಅವರ ಸರಿ ತಪ್ಪುಗಳ ಬಗ್ಗೆ ಗಮನವಹಿಸಬೇಕು. ಅದರಲ್ಲೂ ತಾಯಿಯಾದವಳ ಕರ್ತವ್ಯ ಮಕ್ಕಳ ವಿಷಯದಲ್ಲಿ ಸಾಕಷ್ಟಿದೆ. ಮಕ್ಕಳ ಮುಗ್ಧ ಮನಸ್ಸನ್ನು ಅರ್ಥ ಮಾಡಿಕೊಂಡು ಅವರು ಸದಾ ಚಟುವಟಿಕೆಯಾಗಿರುವಂತೆ ನೋಡಿಕೊಳ್ಳಬೇಕು!

ಹಾಗಂದ ಮಾತ್ರಕ್ಕೆ ಮಕ್ಕಳನ್ನು ಚಟುವಟಿಕೆಯಿಂದಿಡಲು ಅವರಿಗೆ ಚಾಕಲೇಟ್, ಐಸ್ ಕ್ರೀಮ್ ಇನ್ನೂ ಮೊದಲಾದ ತಿಂಡಿ ಅಥವಾ ವಸ್ತುಗಳನ್ನು ಕೊಡುವುದು ಖಂಡಿತ ತಪ್ಪು! ಅವರಿಗೆ ಆಸಕ್ತಿಯಿರುವ ಹಾಗೂ ಹೊಸದಾದಂತಹ ವಸ್ತುಗಳನ್ನು ನೀಡಿ ಅದರಲ್ಲಿ ಅವರ ಆಸಕ್ತಿ ಹೆಚ್ಚುವಂತೆ ಮಾಡಬೇಕು. ಮಕ್ಕಳು ಅತ್ಯಂತ ಉತ್ಸಾಹಿಗಳಾಗಿರುವುದರಿಂದ ಕ್ಷಣ ಕ್ಷಣಕ್ಕೂ ಹೊಸದನ್ನೇ ಬಯಸುತ್ತಾರೆ!

ನೀವು ಮನೆಯಲ್ಲಿಯೇ ಶಿಶುಪಾಲನಾ ವ್ಯವಸ್ಥೆಯನ್ನು ಮಾಡಿ, ನಿಮ್ಮ ಮಗುವಿಗೆ ನೀವೆ ಹೊಸದನ್ನು ಕಲಿಸಲು ಇಷ್ಟಪಡುವಿರಾದರೆ ಇದರ ತಯಾರಿಗಾಗಿ ನಿಮ್ಮ ಕೊಂಚ ಸಮಯವನ್ನು ಮೀಸಲಿಡಬೇಕಾಗುತ್ತದೆ. ಬೆಳೆಯುವ ಮಕ್ಕಳ ತಲೆಯಲ್ಲಿರುವ ಸಾವಿರ ಪ್ರಶ್ನೆಗಳಿಗೆ ಉತ್ತರಿಸಲು ನೀವು ಸಿದ್ಧರಿರಬೇಕಾಗುತ್ತದೆ. ಅವರು ಚಟುವಟಿಕೆಯಿಂದಿರಲು ಕೆಲವು ಡಿವಿಡಿಗಳು,( PS3 / XBOX) ಮಕ್ಕಳ ಆಟಕ್ಕೆ ಸಂಬಂಧಿಸಿದ ಡಿವಿಡಿ ಹಾಗೂ ಆಟದ ಸಾಮಾನುಗಳು, ಕಥೆ ಪುಸ್ತಕಗಳು ಇಂತಹ ಕೆಲವು ವಸ್ತುಗಳನ್ನು ನಿಮ್ಮ ಜೊತೆಯಲ್ಲಿಟ್ಟುಕೊಳ್ಳಿ.

ನಿಮ್ಮ ಮಗು ಸದಾ ಕಾರ್ಯ ನಿರತವಾಗಿರಲು ಇಲ್ಲಿ ಕೆಲವು ಚಟುವಟಿಕೆಗಳನ್ನು ಹೇಳಲಾಗಿದೆ.

ಚಿತ್ರಕಲೆ

ಚಿತ್ರಕಲೆ

ಸಾಮಾನ್ಯವಾಗಿ ಎಲ್ಲಾ ಮಕ್ಕಳು ಚಿತ್ರಬಿಡಿಸುವುದು, ಬಣ್ಣ ತುಂಬುವುದು ರೇಖಾಚಿತ್ರ / ಪೇಂಟಿಂಗ್ ಗಳನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಬಣ್ಣಗಳ ಜೊತೆ ಆಟವಾಡುತ್ತಾ ಅದರ ಜೊತೆಯಲ್ಲಿಯೇ ಇಡಿದಿನವನ್ನೇ ಕಳೆಯುತ್ತಾರೆ. ಆದ್ದರಿಂದ ನಿಮ್ಮ ಮಗುವಿಗಾಗಿ ಕೆಲವು ಚಿತ್ರಗಳನ್ನು ಡೌನ್ ಲೋಡ್ ಮಾಡಿ, ಅಥವಾ ಪೇಂಟಿಂಗ್ ಪುಸ್ತಕಗಳನ್ನು ತಂದು ಕೊಡಿ. ಇದರಿಂದ ದಿನದ ಕೆಲವು ಸಮಯ ನಿಮ್ಮ ಮಗು ಬಣ್ಣದೊಂದಿಗೆ ಆಟಮಾಡಲಿ.

ಕಣ್ಣಾಮುಚ್ಚಾಲೆ ಆಟ:

ಕಣ್ಣಾಮುಚ್ಚಾಲೆ ಆಟ:

ಮಕ್ಕಳು ಇಷ್ಟಪಡುವ ಅದ್ಭುತ ಆಟ ಕಣ್ಣಾಮುಚ್ಚಾಲೆ / ಹೈಡ್ ಆಂಡ್ ಸೀಕ್. ಮಕ್ಕಳ ಓಡುವ ಶಕ್ತಿ ಮತ್ತು ತಾಳ್ಮೆಯನ್ನು ಹೆಚ್ಚಿಸಬಲ್ಲ ಈ ಆಟವನ್ನು ಆಟಲಿ ನೀವು ಬೆಂಬಲ ನೀಡಿ.

ಕಾರ್ಟೂನ್ ಗಳು:

ಕಾರ್ಟೂನ್ ಗಳು:

ಮಕ್ಕಳು ಕಾರ್ಟೂನ್ ಚಾನಲ್ ಗಳನ್ನು ವೀಕ್ಷಣೆ ಮಾಡುವುದು ಸಾಮಾನ್ಯ. ಆದ್ದರಿಂದ ನಿಮ್ಮ ಮಗುವಿಗೆ ಆಸಕ್ತಿ ಹೆಚ್ಚಿಸುವ ಕೆಲವು ಕಾರ್ಟೂನ್ ಡಿವಿಡಿಗಳನ್ನು ತಂದು ತೋರಿಸಿ.

ಬಿಲ್ಡಿಂಗ್ ಬ್ಲಾಕ್ಸ್ ಗಳು:

ಬಿಲ್ಡಿಂಗ್ ಬ್ಲಾಕ್ಸ್ ಗಳು:

ಮಕ್ಕಳು ಸದಾ ನಿರತರಾಗಿರಲು ಹಾಗೂ ಆ ಚಟಿವಟಿಕೆಯನ್ನು ಆನಂದಿಸಲು ಸಹಾಯಕವಾದ ಇನ್ನೊಂದು ಆಟ ಬಿಲ್ಡಿಂಗ್ ಬ್ಲಾಕ್ಸ್. ಮಕ್ಕಳಿಗಾಗಿ ಕೆಲವು ಬೇರೆ ಬೇರೆ ವಿಧದ ಬ್ಲಾಕ್ಸ್ ಸೆಟ್ ಗಳನ್ನು ಕೊಟ್ಟು ಅವರಿಗೆ ಬೇಕಾದ ಹಾಗೆ ಅದನ್ನು ಜೋಡಿಸಲು ಹೇಳಿ.

ಪುಸ್ತಕಗಳು:

ಪುಸ್ತಕಗಳು:

ಮಕ್ಕಳು ಪುಸ್ತಕಗಳನ್ನು ಓದದಿದ್ದರೂ ನೀವು ಮಕ್ಕಳಿಗೆ ಪುಸ್ತಕದಲ್ಲಿರುವ ಕಥೆಗಳನ್ನು ಓದಿ ಹೇಳಿ. ಅದರಲ್ಲಿರುವ ಬಣ್ಣ ಬಣದ ಚಿತ್ರಗಳನ್ನು ನೋಡುತ್ತ ನೀವು ಹೇಳುವ ಕಥೆಗಳನ್ನು ಅವರು ಆಸಕ್ತಿಯಿಂದ ಕೇಳುತ್ತಾರೆ.

ಉದ್ಯಾನಗಳು ಮತ್ತು ಆಟದ ಮೈದಾನಗಳು:

ಉದ್ಯಾನಗಳು ಮತ್ತು ಆಟದ ಮೈದಾನಗಳು:

ನಿಮ್ಮ ಮನೆಯ ಹತ್ತಿರದಲ್ಲಿ ಉದ್ಯಾನಗಳಿದ್ದರೆ ನಿಮ್ಮ ಮಗುವನ್ನು ಅಲ್ಲಿಗೆ ಕರೆದೊಯ್ಯಿರಿ. ಇತರ ಮಕ್ಕಳೊಂದಿಗೆ ನಿಮ್ಮ ಮಗುವು ಅಲ್ಲಿ ಸ್ವಲ್ಪ ಸಮಯವನ್ನು ಕಳೆಯಲಿ.

ಶೂಟಿಂಗ್:

ಶೂಟಿಂಗ್:

ಕೆಲವು ಆಟದ ಗನ್ / ಪಿಸ್ತೂಲುಗಳನ್ನು ಖರೀದಿಸಿ ಮಕ್ಕಳಿಗೆ ನೀಡಿ ನೀವು ಅವರೊಂದಿಗೆ ಆಟವಾಡಿ. ನಿಮ್ಮ ಮಗು ಗಂಡು ಮಗುವಾಗಿದ್ದರೆ ಖಂಡಿತವಾಗಿಯೂ ಈ ಆಟವನ್ನು ಇಷ್ಟಪಡುತ್ತದೆ.

ವೀಡಿಯೊ ಗೇಮ್ಸ್:

ವೀಡಿಯೊ ಗೇಮ್ಸ್:

ನಿಮ್ಮ ಮೊಬೈಲ್ ಗಳಲ್ಲಿ ಅಥವಾ ಕಂಪ್ಯೂಟರ್ ಗಳಲ್ಲಿ ಕೆಲವು ವಿಡೊಯೋ ಗೇಮ್ಸ್ ಗಳನ್ನು ಡೌನ್ ಲೋಡ್ ಮಾಡಿ ಆಗಾಗ ನಿಮ್ಮ ಮಗುವಿಗೆ ಆಡಲು ನೀಡಿ. ಆದರೆ ನಿಮ್ಮ ಮಗು ಇದರಲ್ಲಿಯೇ ಹೆಚ್ಚು ಸಮಯವನ್ನು ಕಳೆಯದಂತೆ ಎಚ್ಚರವಹಿಸಿ!

ರೋಲ್ ಪ್ಲೆಯಿಂಗ್:

ರೋಲ್ ಪ್ಲೆಯಿಂಗ್:

ನಿಮಗೆ ಹೆಣ್ಣು ಮಗುವಾಗಿದ್ದರೆ ದಿನದ ಸ್ವಲ್ಪ ಸಮಯವನ್ನು ಕಳೆಯಲು ಈ ಆಟ ಉತ್ತಮವಾಗಿದೆ. ಒಂದಿಷ್ಟು ಡಾಲ್ / ಗೊಂಬೆಗಳು ಕೂಡ ಈ ಸಮಯದಲ್ಲಿ ಸಹಾಯಕ.

ಮಲಗುವ ಸಮಯ / ನಿದ್ರೆ:

ಮಲಗುವ ಸಮಯ / ನಿದ್ರೆ:

ನಿಮ್ಮ ಮಕ್ಕಳ ದಿನದ ವಟಿವಟಿಕೆಯ ನಂತರ ಕೆಲವು ಕಥೆಗಳನ್ನು ಹೇಳುತ್ತ ಅವರನ್ನು ಮಲಗಿಸಿ. ಇದರಿಂದ ಕೆಲವು ಸಮಯ ಮಗುವಿಗೆ ಹಾಗೂ ನಿಮಗೆ ವಿಶ್ರಾಂತಿ ದೊರೆಯುತ್ತದೆ. ನೀವು ಇತರ ಕೆಲಸಗಳಲ್ಲಿಯೋ ಭಾಗಿಯಾಗಬಹುದು.

English summary

Ways to keep kids busy when babysitting

There will be times when you are made to baby sit your own kid when your wife is out for girl’s night out or your nephew when your sister makes an offer you just can’t say no to. Looking after kids without their mother around is not everyone’s cup of tea.
Story first published: Tuesday, May 13, 2014, 16:21 [IST]
X
Desktop Bottom Promotion