For Quick Alerts
ALLOW NOTIFICATIONS  
For Daily Alerts

ಸುಳ್ಳು ಹೇಳುವ ತುಂಟ ಪೋರರನ್ನು ನಿಭಾಯಿಸುವುದು ಹೇಗೆ?

By Super
|

ಮಕ್ಕಳು ಎಂದ ಮೇಲೆ ಅವರಿಗೆ ಹಲವಾರು ಗುಣಗಳು ಇರುವುದು ಸಹಜ. ಅವುಗಳಲ್ಲಿ ಕೆಲವೊಂದು ಒಳ್ಳೆಯವು ಮತ್ತು ಕೆಲವೊಂದು ಕೆಟ್ಟವು ಇರುತ್ತವೆ. ಇವು ಅವರು ಬೆಳೆಯುತ್ತಿರುವ ಮತ್ತು ಒಡನಾಡುವ ವಾತಾವರಣಕ್ಕೆ ಅನುಗುಣವಾಗಿ ಇರುತ್ತದೆ. ಅಧ್ಯಯನಗಳ ಪ್ರಕಾರ ತಿಳಿದು ಬಂದಿರುವ ವಿಚಾರವೇನೆಂದರೆ ಮಕ್ಕಳು ತಾವು ಇರುವ ವಾತಾವರಣದಲ್ಲಿನ ಅಂಶಗಳಿಂದ ಕಲಿಯುತ್ತಾರೆ ಮತ್ತು ಅದನ್ನೆ ಅನುಕರಿಸುತ್ತಾರೆ.

ವಿಶೇಷವಾಗಿ 10-15 ವರ್ಷದೊಳಗಿನ ಮಕ್ಕಳಲ್ಲಿ ಇಂತಹ ಕಲಿಕೆಯು ಅಧಿಕ ಪ್ರಮಾಣದಲ್ಲಿರುತ್ತದೆ. ಅವರ ಸುತ್ತ-ಮುತ್ತಲಿನ ವಾತಾವರಣವು ಅವರ ವರ್ತನೆಗಳ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ಅಲ್ಲಿ ಅವರು ಕಲಿಯುವುದನ್ನೆ ನಮ್ಮ ಮುಂದೆ ತೋರ್ಪಡಿಸುತ್ತಾರೆ. ಇದರಲ್ಲಿ ಕದ್ದು ಮುಚ್ಚಿ ಮಾಡುವಂತಹ ಕೆಲಸಗಳನ್ನು ಸಹ ಇವರು ಕಲಿಯುತ್ತಾರೆ. ಇದರಲ್ಲಿ ಮಕ್ಕಳು ಸುಳ್ಳು ಹೇಳುವುದು ಸಹ ಸೇರಿರುತ್ತದೆ. ಒಬ್ಬ ಜವಾಬ್ದಾರಿಯುತ ಪೋಷಕರಾಗಿ ನಾವು ನಮ್ಮ ಮಕ್ಕಳು ಸುಳ್ಳು ಹೇಳುವುದನ್ನು ಮತ್ತು ಕಪಟ ಮಾಡುವುದನ್ನು ಕಲಿಯುವುದನ್ನು ತಡೆಯಬೇಕು. ಸಿಕ್ಕಾ ಪಟ್ಟೆ ತುಂಟ ಮಗುವಿಗೆ ಆಹಾರಕ್ರಮ ಹೀಗಿರಲೇಬೇಕು

Ways To Deal With A Sneaky Child

ಬನ್ನಿ ಹಾಗಾದರೆ ಹೀಗೆ ಸುಳ್ಳು ಹೇಳುವ ಮಕ್ಕಳನ್ನು ಹೇಗೆ ನಿಭಾಯಿಸುವುದು ಎಂಬುದನ್ನು ತಿಳಿಯೋಣ. ನಾವು ಇಲ್ಲಿ ಇಂತಹ ಕಪಟ ನಾಟಕವಾಡುವ ಕಂದಮ್ಮಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ಬಗೆಯನ್ನು ಹಂಚಿಕೊಂಡಿದ್ದೇವೆ. ಮುಂದೆ ಓದಿ...

ಮಕ್ಕಳ ಮೇಲೆ ಹೆಚ್ಚಿನ ಒತ್ತಡವನ್ನು ಹೇರಬೇಡಿ
ಮಕ್ಕಳ ಮೇಲೆ ಹೆಚ್ಚಿನ ಒತ್ತಡವನ್ನು ಹೇರುವುದರಿಂದ ಅವರು ತಮ್ಮ ವರ್ತನೆಯಲ್ಲಿ ಸುಳ್ಳು ಹೇಳುವುದನ್ನು ರೂಢಿಸಿಕೊಳ್ಳುತ್ತಾರೆ. ಉದಾಹರಣೆಗೆ ಹೆಚ್ಚಿನ ಅಂಕ ಬರಬೇಕೆಂದು ಮಕ್ಕಳ ಮೇಲೆ ಒತ್ತಡ ಹೇರಿದರೆ, ಅವರು ಕಡಿಮೆ ಅಂಕ ಬಂದಾಗ ನಿಮಗೆ ಸುಳ್ಳು ಹೇಳುತ್ತಾರೆ. ಆದ್ದರಿಂದ ಅತಿ ಒತ್ತಡ ಅಪಾಯಕಾರಿ ಎಂಬುದನ್ನು ತಿಳಿಯಿರಿ.

ಅವರು ಆರಾಮವಾಗಿರಲು ಬಿಡಿ
ಮಕ್ಕಳು ತಪ್ಪು ಮಾಡಿದರೆ ಚಂದ, ಅದನ್ನು ಸಹಿಸಿಕೊಳ್ಳಿ, ಅದನ್ನು ಬಿಟ್ಟು ಅವರಿಗೆ ಕೋರ್ಟಿನಲ್ಲಿ ಕೇಳಿದ ಹಾಗೆ ಪಾಟಿ ಸವಾಲುಗಳನ್ನು ಕೇಳ ಬೇಡಿ. ಇದರಿಂದ ಅವರ ಸೂಕ್ಷ್ಮ ಮನಸ್ಸು ನೊಂದುಕೊಳ್ಳುತ್ತದೆ. ಅಪ್ಪಿ-ತಪ್ಪು ಅವರು ತಮ್ಮ ವಸ್ತುಗಳನ್ನು ಕಳೆದುಕೊಂಡು ಅಥವಾ ಹಾಳು ಮಾಡಿಕೊಂಡು ಬಂದಾಗ ಅವರ ಕುರಿತು ಔದಾರ್ಯ ತೋರಿಸಿ. ಆಗ ಅವರೇ ನಿಮ್ಮ ಜೊತೆ ಸತ್ಯಾಂಶವನ್ನು ಹಂಚಿಕೊಳ್ಳುತ್ತಾರೆ. ಅದನ್ನು ಬಿಟ್ಟು ಹೇಗೆ ಆಯಿತು ಎಂದು ಶುರು ಮಾಡಿ ಪ್ರಶ್ನಿಸಲಾರಂಭಿಸಿದಿರಿ, ಆಗ ಅವರು ತಪ್ಪಿಸಿಕೊಳ್ಳಲು ಕಳ್ಳ ದಾರಿಗಳನ್ನು ಹುಡುಕುತ್ತಾರೆ. ನಿಮ್ಮ ಔದಾರ್ಯ ಮತ್ತು ಕಾಳಜಿ ಅವರಲ್ಲಿ ಸತ್ಯ ಸಂಧತೆಯನ್ನು ಬೆಳೆಸುತ್ತದೆ.

ತಪ್ಪು ಕಂಡಾಗ ತಿದ್ದಿ
ನಿಮ್ಮ ಮಗು ಸುಳ್ಳು ಹೇಳುತ್ತಿದೆ ಎಂಬುದು ಎಲ್ಲರಿಗಿಂತ ಮೊದಲು ನಿಮಗೆ ತಿಳಿಯುತ್ತದೆ. ಒಮ್ಮೆ ಹೀಗೆ ಆದಾಗ ಉದಾಸೀನ ತೋರಬೇಡಿ. ನಿಮ್ಮ ಮಗುವನ್ನು ಕರೆದು ಮಾತನಾಡಿ. ಸತ್ಯ ಹೇಳುವುದರಿಂದ ಆಗುವ ಒಳ್ಳೆಯ ಅಂಶಗಳನ್ನು ಮನವರಿಕೆ ಮಾಡಿಕೊಡಿ. ನಿಮ್ಮ ಮಗು ಸತ್ಯ ಹೇಳಿದಾಗ ಅದಕ್ಕೆ ಶಹಬಾಷ್‍ಗಿರಿ ನೀಡಿ. ಸುಳ್ಳು ಹೇಳಿದಾಗ ಅದನ್ನೆ ಎತ್ತಿ ತೋರಬೇಡಿ. ಸತ್ಯ ಹೇಳಲು ಪ್ರೋತ್ಸಾಹಿಸಿ. ಒಟ್ಟಾರೆಯಾಗಿ ನಿಮ್ಮ ಮಗು ಸತ್ಯ ಹೇಳಬೇಕು ಎಂದು ನಿಮ್ಮ ಆಸೆ ಎಂಬುದನ್ನು ನಿಮ್ಮ ಮಗುವು ಅರ್ಥ ಮಾಡಿಕೊಳ್ಳಲಿ. ಮಕ್ಕಳನ್ನು ಟ್ಯೂಷನ್ ಗೆ ಕಳಿಸುತ್ತಿದ್ದೀರಾ?

ಅವರಿಗೆ ತಿಳಿಸಿ ಎಲ್ಲಿ ತಪ್ಪಾಗುತ್ತಿದೆ
ಅತಿ ದೊಡ್ಡ ತಪ್ಪಿಗೆ ದಂಡನೆ ನೀಡಿ. ಏಕೆಂದರೆ "ದಂಡಂ ದಶಗುಣಂ". ಆದರೆ ಒಬ್ಬ ಪೋಷಕರಾಗಿ ನಿಮ್ಮ ಮಗು ಎಲ್ಲಿ ತಪ್ಪು ಮಾಡುತ್ತಿದೆ ಎಂಬುದನ್ನು ತಿಳಿಸಿ ಹೇಳಬೇಕಾದುದು ನಿಮ್ಮ ಕರ್ತವ್ಯ. ಹಾಗೆಂದು ಎಲ್ಲಾ ತಪ್ಪಿಗೆ ದಂಡನೆ ನೀಡಬೇಡಿ. ದಂಡಿಸುವಂತಹ ಅಪರಾಧವಾಗಿದ್ದರೆ, ಸುಮ್ಮನೆ ಬಿಡಬೇಡಿ. ಇದನ್ನು ನೀವೇ ನೋಡಿ ನಿರ್ಧರಿಸಿಕೊಳ್ಳಿ. ಪರಿಸ್ಥಿತಿ ವಿಕೋಪಕ್ಕೆ ಹೋದಾಗ ದಂಡಿಸಿ. ನಿಮ್ಮ ಮಗುವಿಗೆ ತಪ್ಪು ಹೇಗೆ ಆಗುತ್ತದೆ, ಅದರಿಂದ ಏನೆಲ್ಲ ಸಮಸ್ಯೆ ಆಗುತ್ತದೆ ಎಂಬುದನ್ನು ಅವರಿಗೆ ಅರ್ಥವಾಗುವಂತೆ ವಿವರಿಸಿ. ನೀವು ಸುಳ್ಳನ್ನು ಸಹಿಸುವುದಿಲ್ಲ ಎಂಬುದು ನಿಮ್ಮ ಮಗುವಿಗೆ ಅರ್ಥವಾಗಲಿ.

English summary

Ways To Deal With A Sneaky Child

Children acquire different traits- some and some bad- depending on the kind of environment they are exposed to. Research studies have shown that kids usually take from the kind of environment they are exposed to. Here are some effective ways to deal with sneaky children. Read on...
X
Desktop Bottom Promotion