For Quick Alerts
ALLOW NOTIFICATIONS  
For Daily Alerts

ಮಗುವಿನ ಬೆಳವಣಿಗೆಗೆ ಅತ್ಯಗತ್ಯವಾಗಿರುವ ವಿಟಮಿನ್‌ಗಳು

By Super
|

ಪ್ರತಿಯೊಬ್ಬ ತಾಯಿಯು ತನ್ನ ಮಗುವಿಗೆ ಅಗತ್ಯವಾಗಿ ಸಿಗಬೇಕಾಗಿರುವ ಪೋಷಕಾಂಶಗಳು ದೊರೆಯುತ್ತಿವೆಯೇ ಇಲ್ಲವೇ, ಎಂದು ಕಳವಳ ಪಡುತ್ತಿರುತ್ತಾಳೆ. ನಿಮ್ಮ ಮಗು ಬೆಳೆಯುವ ಹಂತದಲ್ಲಿ ಅದಕ್ಕೆ ಅಗತ್ಯವಾಗಿರುವ ವಿಟಮಿನ್‍ಗಳು ಸಿಗದೆ ಇದ್ದರೆ, ಮುಂದೆ ಅದು ಗಂಭೀರವಾದ ಆರೋಗ್ಯದ ಸಮಸ್ಯೆಗಳಿಗೆ ಗುರಿಯಾಗುತ್ತಾಳೆ.

ಮಗು ಎದೆ ಹಾಲು ಕುಡಿಯುವಾಗ ಅದಕ್ಕೆ ಅಗತ್ಯವಾಗಿರುವ ಎಲ್ಲಾ ಪೋಷಕಾಂಶಗಳು ಸಿಗುತ್ತಿರುತ್ತವೆ. ಆದರೆ ಯಾವಾಗ ತಾಯಿಯು ಮಗುವಿಗೆ ಎದೆ ಹಾಲನ್ನು ನಿಲ್ಲಿಸುತ್ತಾಳೋ, ಆಗ ಮಗುವಿಗೆ ಅಗತ್ಯವಾಗಿ ಸಿಗಬೇಕಾಗಿರುವ ಪೋಷಕಾಂಶಗಳ ಸಮಸ್ಯೆ ಎದುರಾಗುತ್ತದೆ.

ಅದಕ್ಕಾಗಿ ಚಿಂತಿಸಬೇಡಿ, ನಿಮ್ಮ ಮಗುವಿಗೆ ಅಗತ್ಯವಾಗಿ ಬೇಕಾಗಿರುವ ಪೋಷಕಾಂಶಗಳನ್ನು ನೀವು ಒದಗಿಸಬಹುದು. ಇದಕ್ಕಾಗಿ ನೀವು ಸ್ವಲ್ಪ ಮಟ್ಟಿಗಿನ ಸಂಶೋಧನೆಯನ್ನು ಮಾಡಬೇಕು. ನಿಮ್ಮ ಮಗುವಿಗೆ ಯಾವುದು ಒಳ್ಳೆಯದು ಎಂದು ನಿರ್ಧರಿಸಲು ಇದರ ಅಗತ್ಯ ಹೆಚ್ಚಿಗಿದೆ. ಇದಕ್ಕೆ ಸಂಬಂಧಪಟ್ಟಂತೆ ಒಂದು ವಾರಕ್ಕೆ ಬೇಕಾಗುವ ವಿಟಮಿನ್ ಮತ್ತು ಮೂಲ ಆಹಾರಗಳ ಮಾರ್ಗದರ್ಶಿಗಳನ್ನು ಹೊಂದಿರುವ ಒಂದು ಪುಟವನ್ನು ನೀವು ತಯಾರಿಸಿ, ಹಾಗೂ ಅದನ್ನು ನಿಮ್ಮ ಮನೆಯಲ್ಲಿ ನೇತು ಹಾಕಿ.

ನೀವು ಒಂದು ವೇಳೆ ಸಸ್ಯಾಹಾರಿಯಾಗಿದ್ದಲ್ಲಿ, ಇದರ ಕುರಿತಂತೆ ಅತ್ಯಧಿಕವಾದ ಕಾಳಜಿಯನ್ನು ವಹಿಸಬೇಕು. ನೀವು ನಿಮ್ಮ ಮಗುವಿಗೆ ಅತ್ಯಗತ್ಯವಾಗಿ ಬೇಕಾಗಿರುವ ಪೋಷಕಾಂಶಗಳನ್ನು ಗುಂಪುಗಳಾಗಿ ವಿಂಗಡಿಸಿ ನಂತರ ಅವುಗಳನ್ನು ನಿಮ್ಮ ಮಗುವಿಗೆ ನೀಡಿ. ವಿಟಮಿನ್‍ಗಳ ಪೂರಕ ಆಹಾರಗಳನ್ನು ವೈದ್ಯರು ಶಿಫಾರಸು ಮಾಡುವುದಿಲ್ಲ. ಹಾಗಾಗಿ ಇದು ನಮ್ಮ ಕೈಯಲ್ಲೇ ಇರುತ್ತದೆ.

Vitamins That Toddlers Need The Most

ನಿಮ್ಮ ಮಗು ಯಾವ ಆಹಾರವನ್ನು ಸ್ವಾಭಾವಿಕವಾಗಿ ಸೇವಿಸುತ್ತದೆಯೋ ಅದನ್ನು ನಿಮ್ಮ ಮಗುವಿಗೆ ನೀಡಿ. ಈ ಆಹಾರವೇ ನಿಮ್ಮ ಮಗುವಿಗೆ ವಿಟಮಿನ್‍ಗಳನ್ನು ಒದಗಿಸುತ್ತದೆ. ಇನ್ನು ವಿಷಯಕ್ಕೆ ಬರೋಣ ಬನ್ನಿ, ಮಗುವಿಗೆ ಯಾವ ಯಾವ ವಿಟಮಿನ್‍ಗಳು ಅತ್ಯಗತ್ಯವಾಗಿ ಬೇಕು ಎಂಬುದನ್ನು ಈ ಕೆಳಗೆ ನೀಡಿದ್ದೇವೆ ಓದಿಕೊಳ್ಳಿ:

ವಿಟಮಿನ್ ಎ
ಎ ವಿಟಮಿನ್‍ಗಳು ಎಳೆ ಮಕ್ಕಳಿಗೆ ಅತ್ಯಗತ್ಯವಾಗಿ ಬೇಕಾಗಿರುವ ವಿಟಮಿನ್ ಆಗಿದೆ. ಈ ವಿಟಮಿನ್ ಕೇವಲ ಸಾಮಾನ್ಯ ಬೆಳವಣಿಗೆ ಮತ್ತು ಅಭಿವೃದ್ಧಿಗಷ್ಟೇ ಅಲ್ಲದೆ, ಅಂಗಾಂಶಗಳು ಮತ್ತು ಮೂಳೆಗಳ ರಿಪೇರಿಗು ಸಹ ಅಗತ್ಯವಾಗಿ ನೆರವಾಗುತ್ತದೆ. ಜೊತೆಗೆ ಕಣ್ಣುಗಳು ಮತ್ತು ತ್ವಚೆಗೆ ಸಹ ಸಹಕಾರಿ, ಒಳ್ಳೆಯ ರೋಗ ನಿರೋಧಕ ಶಕ್ತಿಗೆ ಇದರ ಕೊಡುಗೆ ಇದೆ. ಇದು ಹಾಲು, ಚೀಸ್, ಮೊಟ್ಟೆಗಳು ,ಕ್ಯಾರಟ್‍ಗಳು, ಯಮ್ ಮತ್ತು ಸ್ಕ್ವಾಷ್‌ಗಳಲ್ಲಿ ಲಭ್ಯವಿರುತ್ತವೆ.

ವಿಟಮಿನ್ ಬಿ
ಇದು ವಿಟಮಿನ್ ಬಿ2, ಬಿ3, ಬಿ6, ಮತ್ತು ಬಿ 12ರವರೆಗಿನ ಅಮೋಘ ಶ್ರೇಣಿಯನ್ನು ತನ್ನಲ್ಲಿ ಒಳಗೊಂಡಿದೆ. ಈ ವಿಟಮಿನ್‍ಗಳು ಜೀರ್ಣ ಕ್ರಿಯೆಗೆ ಸಹಕರಿಸುತ್ತವೆ ಮತ್ತು ಶಕ್ತಿಯನ್ನು ನೀಡುತ್ತವೆ. ಆರೋಗ್ಯಕರವಾದ ರಕ್ತ ಪರಿಚಲನೆಗೆ ಮತ್ತು ವಿಸರ್ಜನಾ ವ್ಯವಸ್ಥೆಯನ್ನು ಬಲಪಡಿಸಲು ಈ ವಿಟಮಿನ್ ಅಗತ್ಯ. ಇದು ಕುರಿ ಮಾಂಸ, ಕೋಳಿ ಮಾಂಸ, ಹಾಲು, ಚೀಸ್, ಬೀನ್ಸ್ ಮತ್ತು ಸೋಯಾ ಬೀನ್ಸ್‌ಗಳಲ್ಲಿ ಈ ವಿಟಮಿನ್‍ಗಳು ದೊರೆಯುತ್ತವೆ.

ವಿಟಮಿನ್ ಸಿ
ಕೆಂಪು ರಕ್ತ ಕಣಗಳನ್ನು, ಮೂಳೆಗಳನ್ನು ಮತ್ತು ಅಂಗಾಂಶಗಳನ್ನು ರಿಪೇರಿ ಮಾಡಲು ಈ ವಿಟಮಿನ್ ಬಳಕೆಯಾಗುತ್ತದೆ. ವಿಟಮಿನ್ ಸಿ ದವಡೆ ಹಲ್ಲುಗಳನ್ನು ಸದೃಢವಾಗಿ ಇರಿಸಲು ಮತ್ತು ಅವುಗಳಿಗೆ ರಕ್ತ ಪರಿಚಲನೆಯನ್ನು ಸದೃಢಗೊಳಿಸಲು ಅಗತ್ಯವಾಗಿ ಬೇಕಾಗುತ್ತದೆ. ಇದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಮತ್ತು ಸುಧಾರಿಸಲು ಅತ್ಯಗತ್ಯವಾಗಿ ನೆರವಾಗುತ್ತದೆ. ಆದ್ದರಿಂದ ಇದು ಇನ್‍ಫೆಕ್ಷನ್‍ಗಳನ್ನು ತಡೆಯುತ್ತದೆ. ಜೊತೆಗೆ ಇದು ಕಬ್ಬಿಣಾಂಶ ಹೆಚ್ಚಿರುವ ಆಹಾರ ಪದಾರ್ಥಗಳನ್ನು ದೇಹ ಹೀರಿಕೊಳ್ಳಲು ನೆರವಾಗುತ್ತದೆ. ಹೆತ್ತವರು ಕಟ್ಟುನಿಟ್ಟಾದ ಸ್ವಭಾವವನ್ನು ಯಾಕೆ ಹೊ೦ದಿರಬಾರದು?

ವಿಟಮಿನ್ ಡಿ
ಎಳೆ ಮಕ್ಕಳಿಗೆ ಅತ್ಯಗತ್ಯವಾಗಿ ಬೇಕಾಗಿರುವ ವಿಟಮಿನ್‍ಗಳಲ್ಲಿ ವಿಟಮಿನ್ ಡಿ ಸಹ ಒಂದು. ಇದು ದೃಢವಾದ ಹಲ್ಲುಗಳನ್ನು ಮತ್ತು ಮೂಳೆಗಳನ್ನು ಬೆಳೆಸಲು ಅಗತ್ಯವಾಗಿರುವ ಕ್ಯಾಲ್ಸಿಯಂನಂತಹ ಖನಿಜಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಮೂಳೆಗಳು ತಮ್ಮ ಬೆಳವಣಿಗೆಯ ಉನ್ನತ ಸ್ಥರಕ್ಕೆ ಹೋಗಬೇಕೆಂದಾದಲ್ಲಿ, ಈ ವಿಟಮಿನ್‍ ಬೇಕಾಗುತ್ತದೆ. ಇದರ ಜೊತೆಗೆ ಇದು ನಮ್ಮ ಆರೋಗ್ಯ, ಇನ್ಸುಲಿನ್ ಉತ್ಪಾದನೆ, ಜೀವಕೋಶಗಳ ಬೆಳವಣಿಗೆಯನ್ನು ನಿಯಂತ್ರಿಸುವುದು ಮತ್ತು ರೋಗ ನಿರೋಧಕ ಶಕ್ತಿಯಲ್ಲೂ ಸಹ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಹೈನು ಉತ್ಪನ್ನಗಳು ಮತ್ತು ಮೀನೆಣ್ಣೆಗಳು ವಿಟಮಿನ್ ಡಿಯ ಅತ್ಯುತ್ತಮ ಮೂಲಗಳಾಗಿದ್ದರು, ಸೂರ್ಯನ ಬೆಳಕು ವಿಟಮಿನ್ ಡಿಯ ಉತ್ತಮ ಮೂಲವಾಗಿದೆ. ಅಂಡೋತ್ಪತ್ತಿಯ ವೇಳೆ ಆರೋಗ್ಯದ ಕಾಳಜಿ

ವಿಟಮಿನ್ ಇ
ಎಳೆ ಮಕ್ಕಳಿಗೆ ಅವರ ಆಹಾರದಲ್ಲಿ ಆರೋಗ್ಯಕಾರಿಯಾದ ವಿಟಮಿನ್ ಇ ನೀಡಬೇಕಾಗುತ್ತದೆ. ಈ ವಿಟಮಿನ್ ಕೀಟಾಣುಗಳ ವಿರುದ್ಧ ಹೋರಾಡುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ರಕ್ತ ಪರಿಚಲನೆಯನ್ನು ಸುಗಮ ಮಾಡಲು ರಕ್ತ ನಾಳಗಳನ್ನು ತೆರೆದು ಇರಿಸುತ್ತದೆ. ವಿಟಮಿನ್ ಎಯು ನಮ್ಮ ದೇಹದ ಜೊತೆಗೂಡಿ ಹಲವಾರು ಕಾರ್ಯಗಳನ್ನು ಮಾಡುತ್ತದೆ. ವಿಟಮಿನ್ ಇ ಯು ಹಲವಾರು ಆಹಾರ ಪದಾರ್ಥಗಳಲ್ಲಿ ಕಂಡುಬರುತ್ತದೆ. ಉದಾಹರಣೆಗೆ, ಹಣ್ಣುಗಳು, ತರಕಾರಿಗಳು, ಒಣ ಹಣ್ಣುಗಳು ಮತ್ತು ಬೀಜಗಳಲ್ಲಿ ವಿಟಮಿನ್ ಇ ಇರುತ್ತದೆ.

English summary

Vitamins That Toddlers Need The Most

A mother is always concerned whether her child is getting sufficient nutrients. During the growing stages of your child's life, if your kid does not receive adequate amount of vitamins, it can lead to many health issues. When a child is breastfed, the baby gets all the nutrients.
X
Desktop Bottom Promotion