For Quick Alerts
ALLOW NOTIFICATIONS  
For Daily Alerts

ಮಗುವಿಗೆ ಕಾಡುವ ತುರಿಕೆಗೆ ಪರಿಣಾಮಕಾರಿ ಚಿಕಿತ್ಸೆ

|

ನಿಮ್ಮ ಮಗುವಿಕೆ ಚರ್ಮದಲ್ಲಿ ತುರಿಕೆ ಇದ್ದರೆ ಅದು ಮಗುವಿನ ಬೆಳಗ್ಗೆ ಮತ್ತು ರಾತ್ರಿಯನ್ನೆಲ್ಲ ಹಾಳುಮಾಡುತ್ತದೆ. ಈ ರೀತಿ ಉಂಟಾಗದಿರಲು ಮಗುವಿನ ತ್ವಚೆ ಆರೈಕೆ ಬಗ್ಗೆ ಹೆಚ್ಚಿನ ಗಮನ ಕೊಡಬೇಕು. ಋತುವಿಗೆ ತಕ್ಕಂತೆ ಮಾಯಿಸ್ಚರೈಸರ್ ಅನ್ನು ಬಳಸಬೇಕಾಗಬಹುದು.

ಋತುವಿಗೆ ತಕ್ಕಂತೆ ಮಾಯಿಸ್ಚರೈಸರ್ ಅನ್ನು ಬಳಸುವುದನ್ನು ಮರೆಯಬೇಡಿ. ಸಾಧ್ಯವಾದರೆ ಮಕ್ಕಳ ವೈದ್ಯರ ಸಲಹೆಯನ್ನು ಪಡೆದುಕೊಳ್ಳಿ. ಇಂದು ಈ ಲೇಖನದಲ್ಲಿ ಮಗುವಿನಲ್ಲಿ ತುರಿಕೆ ಕಂಡು ಬಂದರೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳನ್ನು ನೀಡಲಾಗಿದೆ ಬನ್ನಿ ಹೆಚ್ಚಿನ ಮಾಹಿತಿಗಾಗಿ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಡೈಪರ್ ರಾಶಸ್ ಹೋಗಲಾಡಿಸಲು 12 ಮನೆಮದ್ದುಗಳು!

ಮಗುವಿನ ಉಗುರು ಬೆಳೆಸಬೇಡಿ

ಮಗುವಿನ ಉಗುರು ಬೆಳೆಸಬೇಡಿ

ಚಿಕ್ಕ ಮಗು ತುರಿಸಿಕೊಳ್ಳುವುದನ್ನು ತಡೆಯಲು ಮಗುವಿನ ಕೈಗೆ ಕೈಗವಸನ್ನು ಉಪಯೋಗಿಸಿ ಆದರೆ ಸ್ವಲ್ಪ ದೊಡ್ಡ ಮಕ್ಕಳಿಗೆ ಇದು ಅಷ್ಟೊಂದು ಉಪಯೋಗವಾಗುವುದಿಲ್ಲ. ಕೆರೆತವನ್ನು ಕಡಿಮೆ ಮಾಡಲು ನಿಮ್ಮ ಮಗುವಿನ ಕೈ ಉಗುರನ್ನು ಕತ್ತರಿಸಿ ಮತ್ತು ಚೂಪಾಗಿ ಇಲ್ಲದಂತೆ ನೋಡಿಕೊಳ್ಳಿ. ನಿಮ್ಮ ಮಗು ಹೆಚ್ಚು ತುರಿಸಿಕೊಳ್ಳುವುದು ಕಂಡುಬಂದಲ್ಲಿ ಮಗುವನ್ನು ನಿಮ್ಮ ವೈದ್ಯರ ಬಳಿ ಕರೆದುಕೊಂಡು ಹೋಗಿ ಮತ್ತು ಔಷಧಿ ಕೊಡಿಸಿ.

ತೆಳುವಾದ ಬ್ಲೀಚ್ ನಲ್ಲಿ ಸ್ನಾನ

ತೆಳುವಾದ ಬ್ಲೀಚ್ ನಲ್ಲಿ ಸ್ನಾನ

ಇಸುಬು ಅಥವಾ ಕಜ್ಜಿ ಇರುವ 6 ತಿಂಗಳವರೆಗಿನ ಮಕ್ಕಳಿಗೆ ತೆಳುವಾದ ಬ್ಲೀಚ್ ನಲ್ಲಿ ಸ್ನಾನ ಮಾಡಿಸಿ. ಚರ್ಮದಲ್ಲಿ ಗಡಸುತನವನ್ನು ಹೊಂದಿದ ಮಗುವಿಗೆ ಇದು ಸಹಾಯಕವಾಗಿದೆ. ಕಜ್ಜಿಯನ್ನು ಪ್ರಚೋದಿಸುವ ಸ್ಟಾಫ್ ಬ್ಯಾಕ್ಟೀರಿಯ ವನ್ನು ತೆಗೆಯಲು ಬ್ಲೀಚ್ ಸಹಕರಿಸುತ್ತದೆ. ನಿಮ್ಮ ಮಗುವಿಗೆ ಬ್ಲೀಚ್ ಸ್ನಾನ ಮಾಡಿಸುವ ಮೊದಲು ಮಕ್ಕಳ ತಜ್ಞರಿಂದ ಸಲಹೆ ಪಡೆಯಿರಿ.

ನೈಸರ್ಗಿಕ ಕ್ರೀಂ ಗಳಿಂದ ದೂರವಿಡಿ

ನೈಸರ್ಗಿಕ ಕ್ರೀಂ ಗಳಿಂದ ದೂರವಿಡಿ

ನೈಸರ್ಗಿಕ ಮಕ್ಕಳ ಉತ್ಪನ್ನಗಳು ಜನಪ್ರಿಯ ಆದರೆ ಹೆಚ್ಚಿನವು ಸಸ್ಯಗಳು ಮತ್ತು ಮೂಲಿಕೆಗಳಿಂದ ಕೂಡಿರುವುದರಿಂದ ಅದು ಮಗುವಿನ ಮೃದು ಚರ್ಮದ ಮೇಲೆ ಪ್ರತಿಕ್ರಿಯಿಸಬಹುದು . ಹೆಚ್ಚಿನ ಮಕ್ಕಳು ಹೂವಿನ ಸತ್ವ ಮತ್ತು ಪರಿಮಳದ ಬಗ್ಗೆ ಸೂಕ್ಷ್ಮವಾಗಿರುತ್ತವೆ . ಆದ್ದರಿಂದ ಮಕ್ಕಳ ಮೇಲೆ ಪರೀಕ್ಷೆ ನಡೆಸಿ ಸೂಕ್ಷ ಚರ್ಮಗಳಿಗೆ ಸರಿ ಹೊಂದುತ್ತದೆ ಎಂದು ನಿಮ್ಮ ವೈದ್ಯರಿಂದ ದೃಢ ಪಡಿಸಿಕೊಳ್ಳಿ.

ಪ್ರತೀ ದಿನ ಮಾಯಿಸ್ಚರೈಸ್ ಬಳಸಿ

ಪ್ರತೀ ದಿನ ಮಾಯಿಸ್ಚರೈಸ್ ಬಳಸಿ

ತುರಿಕೆ ಮತ್ತು ಒಣಗುವಿಕೆಯನ್ನು ತಡೆಯಲು ದಿನದಲ್ಲಿ ಕೊನೆಪಕ್ಷ ಎರಡು ಬಾರಿ ಮಾಯಿಸ್ಚರೈಸರ್ ಅನ್ನು ಮಗುವಿಗೆ ಹಚ್ಚಿ. ಒಣ ಚರ್ಮವು ಇಸುಬನ್ನು ಹೆಚ್ಚಿಸುವುದಲ್ಲದೆ ಉರಿಯನ್ನು ಕೂಡ ತರುವ ಸಾಧ್ಯತೆ ಇದೆ . ಹೆಚ್ಚು ನೀರಿರುವ ಲೋಶನ್ ಗಿಂತ ಗಟ್ಟಿ ಮಾಯಿಸ್ಚರೈಸರ್ ಕ್ರೀಂ ಮತ್ತು ಮುಲಾಮುಗಳು ಮಗುವಿನ ಚರ್ಮಕ್ಕೆ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತವೆ. ನಿಮ್ಮ ವೈದ್ಯರು ಕಜ್ಜಿ ವಿರೋಧಿ ಕ್ರೀಂ ಅನ್ನು ನೀಡಿದ್ದಾರೆ ಅದನ್ನು ಮಾಯಿಸ್ಚರೈಸರ್ ಹಚ್ಚುವ ಮೊದಲೇ ಹಚ್ಚಿ.

ಪದೇ ಪದೇ ಸ್ನಾನ ಮಾಡಿಸಿ

ಪದೇ ಪದೇ ಸ್ನಾನ ಮಾಡಿಸಿ

ಪ್ರತೀ ದಿನ ಸ್ನಾನ ಮಾಡಿಸುವುದರಿಂದ ಮಗುವಿಗಾದ ಇಸಬನ್ನು ಕಡಿಮೆ ಮಾಡಬಹುದು ಎಂದು ಮಕ್ಕಳ ಚರ್ಮರೋಗ ತಜ್ಞರು ಹೇಳುತ್ತಾರೆ. ಸ್ನಾನ ಮಾಡಿಸುವುದು ಮಗುವಿನ ದೇಹಕ್ಕೆ ತೇವವನ್ನು ಒದಗಿಸುತ್ತದೆ ಇದರಿಂದ ಮಗುವಿಗೆ ಸೊಂಕಿನಿಂದಾದ ಒಣ ಚರ್ಮ ಮತ್ತು ಬ್ಯಾಕ್ಟೀರಿಯ ದಿಂದ ಮುಕ್ತಿ ಸಿಗುತ್ತದೆ ಎನ್ನುತ್ತಾರೆ. ಪರಿಮಳರಹಿತವಾದ ಸೋಪುಗಳನ್ನು ಅಥವಾ ಕ್ಲೀನ್ಸರ್ ಗಳನ್ನು ಬಳಸುವುದು ಮಗುವಿನ ಸೂಕ್ಷ್ಮ ಚರ್ಮಕ್ಕೆ ಸೂಕ್ತ .ಮಗುವನ್ನು 5 ರಿಂದ 10 ನಿಮಿಷಗಳವರೆಗೆ ಸ್ನಾನ ಮಾಡಿಸಿ ನಂತರ ಮಾಯಿಶ್ಚರೈಸರ್ ಹಚ್ಚುವುದರಿಂದ ಮಗುವಿನ ಚರ್ಮ ತೇವವನ್ನು ಕಳೆದುಕೊಳ್ಳುವುದಿಲ್ಲ .

English summary

Tips For Soothing Your Baby's Eczema

When your baby has itchy, scaly skin that makes her scratch all day and night you can to ease her discomfort Fortunately, several effective eczema treatments can lead to a happier baby.
X
Desktop Bottom Promotion