For Quick Alerts
ALLOW NOTIFICATIONS  
For Daily Alerts

ಮಗುವನ್ನು ದತ್ತು ಪಡೆಯಲು ಇರುವ ಹತ್ತು ಸುಂದರವಾದ ಕಾರಣಗಳು.

By Deepak M
|

ಮಕ್ಕಳು ಯಾರಿಗೆ ತಾನೇ ಇಷ್ಟವಾಗಲ್ಲ. ಮಕ್ಕಳಾಗಲಿ ಎಂದು ಎಷ್ಟು ದೇವರುಗಳಿಗೆ ಹರಕೆ ಹೊರಲು ಸಿದ್ಧವಾಗಿರುತ್ತಾರೆ ಪೋಷಕರು. ಆದರೆ ಈ ಎಲ್ಲಾ ಬೇಡಿಕೆಗಳು- ಹರಕೆಗಳು ನಿಷ್ಪಲವಾದರೆ? ಆಗ ಒಂದು ವೇಳೆ ನಿಮಗೆ ಸಂತಾನ ಶಕ್ತಿ ಹೀನತೆಯಿಂದಾಗಿ ಮಗುವನ್ನು ದತ್ತು ಪಡೆಯುವ ಅವಶ್ಯಕತೆಯುಂಟಾಗಿದ್ದಲ್ಲಿ, ನಾವು ದತ್ತು ಪಡೆಯಲು ಇರುವ ಕೆಲವು ಅಸಾಂಪ್ರದಾಯಿಕ ವಿಷಯಗಳನ್ನು ನಾವಿಲ್ಲಿ ತಿಳಿಸುತ್ತಿದ್ದೇವೆ.

ಸ್ವಾಭಾವಿಕವಾಗಿ ಮಕ್ಕಳಾಗದ ದಂಪತಿಗಳಿಗೆ ದತ್ತು ತೆಗೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅದರಲ್ಲೂ ಮದುವೆಯಾಗಿ ತುಂಬಾ ವರ್ಷಗಳಾದ ನಂತರವು ಮಕ್ಕಳಾಗದಿರುವ ಪೋಷಕರಿಗೆ ಅನಾಥಾಶ್ರಮ ಅಥವಾ ಸಾಮಾಜಿಕ ಸಂಸ್ಥೆಯಿಂದ ಒಂದು ಮಗುವನ್ನು ದತ್ತು ತಂದು ಕೊಳ್ಳುವ ಸಲಹೆಯನ್ನು ನೀಡಲಾಗುತ್ತದೆ.

ಮಗು ಸ್ತನ್ಯಪಾನ ತ್ಯಜಿಸಲು ಅನುಸರಿಸಬೇಕಾದ ವಿಧಾನಗಳು

ನಿಮಗೆ ಗೊತ್ತಿದೆಯೇ ದತ್ತು ತೆಗೆದುಕೊಳ್ಳುವ ವಿಚಾರದಲ್ಲಿ ಪ್ರಪಂಚದಾದ್ಯಂತ ಈಗ ಮನೋಭಾವನೆಗಳು ಬದಲಾಗುತ್ತಿವೆ. ಕುತೂಹಲಕರ ವಿಚಾರವೇನೆಂದರೆ ಈಗ ಕೆಲವು ಪೋಷಕರು ಕೇವಲ ತಮ್ಮ ಸಂತಾನ ಹೀನತೆಯಿಂದಾಗಿ ಮಾತ್ರವಲ್ಲದೆ ಮತ್ತಿತರ ಅಂಶಗಳ ಸಲುವಾಗಿ ಮಕ್ಕಳನ್ನು ದತ್ತು ತೆಗೆದುಕೊಳ್ಳುತ್ತಿದ್ದಾರೆ.

Ten 'beautiful' reasons for adopting a child

ಅದಕ್ಕೆ ಕಾರಣ ಅವರಿಗೆ ಮಕ್ಕಳೆಂದರೆ ಇಷ್ಟ, ಅಥವಾ ತಮಗೆ ಹುಟ್ಟಿದ ಮಗುವಿಗೆ ಜೊತೆಯಾಗಿ ಬೆಳೆಯಲು ಅಥವಾ ಸಮಾಜ ಸೇವೆಯ ದೃಷ್ಟಿಯಿಂದಲೂ ಸಹ ಮಕ್ಕಳನ್ನು ದತ್ತು ತೆಗೆದುಕೊಳ್ಳುತ್ತಿದ್ದಾರೆ. ಇಂತಹ ಅಸಂಪ್ರದಾಯಿಕ ವಿಧಾನಗಳ ಮೂಲಕ ದತ್ತು ತೆಗೆದುಕೊಳ್ಳುವ ದಂಪತಿಗಳು ಮತ್ತು ಅವರಿಗಿರುವ ಕಾರಣಗಳ ಕುರಿತು ಸ್ವಲ್ಪ ಗಮನ ಹರಿಸೋಣ ಬನ್ನಿ.

ಮಕ್ಕಳೆಂದರೆ ಮಮಕಾರ:
ಕೇಳಲು ವಿಚಿತ್ರವಾದರು ಸರಿ, ಇದು ಸತ್ಯ. ಕೆಲವು ದಂಪತಿಗಳಿಗೆ ಮಕ್ಕಳೆಂದರೆ ಇಷ್ಟ, ಅದಕ್ಕಾಗಿ ಅವರು ಎಳೆಯ ಮಕ್ಕಳನ್ನು ದತ್ತು ತೆಗೆದುಕೊಂಡು ತಮ್ಮ ಪ್ರೀತಿಯನ್ನು ಅವುಗಳಿಗೆ ಧಾರೆಯೆರೆಯುತ್ತಾರೆ. ಅವರ ಪ್ರೀತಿ ನಿಷ್ಕಲ್ಮಷವಾದುದು, ಹಾಗಾಗಿ ಅವರಿಗೆ ಸ್ವಾಭಾವಿಕವಾಗಿ ಮಕ್ಕಳಾಗಿರಲಿ ಅಥವಾ ಇಲ್ಲದಿರಲಿ, ಮಗುವನ್ನು ದತ್ತು ತೆಗೆದುಕೊಂಡು ಅವುಗಳ ಪಾಲನೆಯಲ್ಲಿ ತೊಡಗುತ್ತಾರೆ.

ಆರತಿಗೆ ಮತ್ತು ಕೀರುತಿಗೆ ಹೊಂದಾಣಿಕೆ ತರಲು:
"ಆರತಿಗೆ ಒಬ್ಬ ಮಗಳು, ಕೀರ್ತಿಗೆ ಒಬ್ಬ ಮಗ" ಎಂಬ ಗಾದೆ ಮಾತಿನಂತೆ ನಡೆದುಕೊಳ್ಳುವ ಇಷ್ಟ ಯಾರಿಗಿರುವುದಿಲ್ಲ. ತಮಗಿರುವ ಒಂದೇ ಪ್ರಕಾರದ ಮಕ್ಕಳಿಗಿಂತ ಭಿನ್ನ ಲಿಂಗಿಯಾದ ಮಗುವನ್ನು ದತ್ತು ತೆಗೆದುಕೊಳ್ಳುವ ಕೋರಿಕೆ ಕೆಲವು ದಂಪತಿಗಳಿಗೆ ಇರುತ್ತದೆ. ಇದಕ್ಕೆ ಸ್ವಾಭಾವಿಕ ಪ್ರಯತ್ನಿಸಲು ಅವರಿಗೆ ಸಮಯ ಅಥವಾ ಇನ್ಯಾವುದೋ ತೊಂದರೆ ಇರಬಹುದು. ಅದಕ್ಕಾಗಿ ಅವರು ಈ ಸುಲಭ ಮಾರ್ಗದ ಮೂಲಕ ತಮ್ಮ ಕೋರಿಕೆಯ ಮಗುವನ್ನು ದತ್ತು ಪಡೆದು ಅದನ್ನು ಸಾಕುವ ತೀರ್ಮಾನ ತೆಗೆದುಕೊಳ್ಳುತ್ತಾರೆ. ಇದಕ್ಕೆ ಅವರ ಬೇಡಿಕೆ ಇರುವುದು ನಿರ್ದಿಷ್ಟ ಲಿಂಗದ ಮಗು ಬೇಕೆಂದು ಮಾತ್ರ. ಕೆಲವರಂತು ಗಂಡು ಮತ್ತು ಹೆಣ್ಣು ಮಗು ಇಬ್ಬರನ್ನು ದತ್ತು ತೆಗೆದುಕೊಂಡು ಬೀಗುವವರು ಸಹ ಇದ್ದಾರೆ.

ಒಂದೇ ಒಂದು ಮಗುವಿನ ತಂದೆ- ತಾಯಿಗಳು:
ಒಮ್ಮೊಮ್ಮೆ " ಒಂದೇ" ಮಗು ಒಂಟಿತನದಿಂದ ನರಳುತ್ತದೆ. ಅದಕ್ಕಾಗಿ ದಂಪತಿಗಳು, ಅದರಲ್ಲೂ ವಿಶೇಷವಾಗಿ ತಾಯಿ ಮತ್ತೊಮ್ಮೆ ಗರ್ಭವತಿಯಾಗಲು ಇಚ್ಛೆ ವ್ಯಕ್ತಪಡಿಸದಿದ್ದಲ್ಲಿ ವಿಧಿಯಿಲ್ಲದೆ ದತ್ತು ಪಡೆಯುವ ಆಲೋಚನೆಯನ್ನು ದಂಪತಿಗಳು ಮಾಡುತ್ತಾರೆ. ಇಲ್ಲಿ ಮಗುವಿಗೆ ಒಂದು ಜೊತೆಯನ್ನು ಹುಡುಕುವ ಇಚ್ಛೆ ತಂದೆ- ತಾಯಿಯರಿಗಿರುತ್ತದೆ.

ಕಿವಿ ಚುಚ್ಚುವ ಮೊದಲು ಅನುಸರಿಸಬೇಕಾಗಿರುವ ಸಲಹೆ

ಒಂಟಿ ಬಾಳನ್ನು ಬಾಳುತ್ತಿರುವ ವ್ಯಕ್ತಿಯು ಪೋಷಕನಾಗಲು:
ಮಾಜಿ ಮಿಸ್. ಯೂನಿವರ್ಸ್ ಮತ್ತು ಸಿನಿಮಾ ನಟಿ ಸುಷ್ಮಿತಾ ಸೇನ್ ಮಗುವನ್ನು ದತ್ತು ಪಡೆದ ಏಕೈಕ ಪೋಷಕಿ ( ಸಿಂಗಲ್ ಮದರ್). ಅದಕ್ಕೆ ಆಕೆ ಹೇಳಿದ್ದು, " ಆ ಪುಟ್ಟ ಮಗುವಿಗೆ ತಾಯಿ ಪ್ರೀತಿ ಬೇಕಾಗಿತ್ತು ಮತ್ತು ನನಗೆ ಮಗು ಬೇಕಾಗಿತ್ತು". ಇದೊಂದು ಸುಂದರವಾದ ಪ್ರಕ್ರಿಯೆ. ಇದಕ್ಕೆ ಕೇವಲ ಜನಪ್ರಿಯ ತಾರೆಗಳಲ್ಲದೆ, ಸಾಮಾನ್ಯ ನಾಗರೀಕರು ಸಹ ಆಕರ್ಷಿತರಾಗುತ್ತಿದ್ದಾರೆ. ಮದುವೆಯಾಗದೆ ಒಂಟಿಯಾಗಿರಲು ಇಷ್ಟಪಡುವ ಮತ್ತು ಅದೇ ಸಮಯದಲ್ಲಿ ಪೋಷಕರ ಜವಾಬ್ದಾರಿಗಳನ್ನು ನಿರ್ವಹಿಸಲು ಹಾತೊರೆಯುವ ಜನರು ಈಗ ದತ್ತು ಪಡೆದು ಮಕ್ಕಳೊಂದಿಗೆ ಸಂತೋಷವಾಗಿ ಜೀವನವನ್ನು ಸಾಗಿಸುತ್ತಿದ್ದಾರೆ. ಆ ಮಕ್ಕಳಲ್ಲಿ ತಮ್ಮ ಸಂತೋಷವನ್ನು ಕಂಡು ಕೊಳ್ಳುತ್ತಿದ್ದಾರೆ.

ಜನಸಂಖ್ಯೆಯನ್ನು ನಿಯಂತ್ರಿಸಲು:
ಕೆಲವು ಉದಾತ್ತ ವ್ಯಕ್ತಿಗಳು ವಿಶ್ವದ ಏರುತ್ತಿರುವ ಜನಸಂಖ್ಯೆಯನ್ನು ಗಮನಿಸಿ, ತಾವು ಮಗುವನ್ನು ಹೆರಲು ನಿರಾಕರಿಸುತ್ತಿದ್ದಾರೆ. ಆದರೂ ಸಹ ತಮಗೆ ಮತ್ತು ತಮ್ಮ ಕುಟುಂಬಕ್ಕೆ ಮಕ್ಕಳು ಬೇಕೆಂದೆನಿಸಿದಲ್ಲಿ ಈ ಅಗಾಧ ವಿಶ್ವದ ಜನಸಂಖ್ಯೆಯಿಂದ ಒಂದು ಮಗುವನ್ನು ದತ್ತು ಪಡೆಯುತ್ತಾರೆ. ಇದು ನಿಜಕ್ಕು ಅದ್ಭುತವಾದ ಆಲೋಚನೆ ಮತ್ತು ನಿಜವಾದ ಸಮಾಜ ಸೇವೆ ಎಂದೆನ್ನಬಹುದು.

ಥಲ್ಲಸೀಮಿಕ್ಸ್:
ಥಲ್ಲಸೀಮಿಕ್ಸ್ ( ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆ ಇರುವುದು) ಅಥವಾ ಮತ್ತಿತರ ವಂಶ ಪಾರಂಪರ್ಯವಾಗಿ ಹರಡುವ ಮಾರಕ ಕಾಯಿಲೆಗಳು ಇರುವವರು ತಮ್ಮ ಮಗುವನ್ನು ಸುರಕ್ಷಿತವಾಗಿಡಲು ಸ್ವತಃ ಗರ್ಭಧಾರಣೆಗೆ ಮುಂದಾಗುವುದಿಲ್ಲ. ಅದಕ್ಕೆ ಬದಲಾಗಿ ದತ್ತು ತೆಗೆದುಕೊಂಡು ಮಕ್ಕಳ ಚಿಣ್ಣಟವನ್ನು ನೋಡಿ ಆನಂದಿಸುತ್ತಾರೆ.

ಪ್ರಸವ ವೇದನೆಯಿಲ್ಲದೆ ಮಕ್ಕಳ ಆನಂದವನ್ನು ಅನುಭವಿಸಲು:
ಬಹುಶಃ ನೀವು " ಸೋಮಾರಿತನದ ಪರಮಾವಧಿ ಎಂದರೆ ಆರೋಗ್ಯವಂತ ದಂಪತಿಗಳು ಮಗುವನ್ನು ದತ್ತು ಪಡೆಯುವುದು" ಎಂಬ ಪ್ರಸಿದ್ಧ ನಗೆಹನಿಯನ್ನು ಕೇಳಿರಬಹುದು. ಆರೋಗ್ಯವಂತರಾಗಿದ್ದು ಮಕ್ಕಳನ್ನು ದತ್ತು ತೆಗೆದುಕೊಳ್ಳುವುದು ಹೇಗೆ ಎಂದು ನೀವು ಪ್ರಶ್ನಿಸಬಹುದು. ಇಲ್ಲಿ ನಿಜವಾದ ವಿಚಾರವೆಂದರೆ ಕೆಲವು ಹೆಂಗಸರು ಹೆರಿಗೆ ಭೇನೆಯ ಬಗ್ಗೆ ವಿಪರೀತವಾದ ಭಯವನ್ನು ಹೊಂದಿರುತ್ತಾರೆ. ಇದರ ಜೊತೆಗೆ ಕೆಲವು ಹೆಂಗಸರಿಗೆ ಹೆರಿಗೆಯಿಂದ ತಮ್ಮ ಸೌಂದರ್ಯವು ಹಾಳಾಗುತ್ತದೆ ಎಂಬ ಭಾವನೆಯು ಸಹ ಕಾಡುತ್ತದೆ. ಅದಕ್ಕಾಗಿ ಅವರು ಒಂದು ಮಗುವನ್ನು ದತ್ತು ತೆಗೆದುಕೊಂಡು ತಾಯಿ- ತಂದೆಯರಾಗುತ್ತಾರೆ, ನೋವಿಲ್ಲದೆ!

ವೃತ್ತಿಯಲ್ಲಿ ಇರುವ ದಂಪತಿಗಳು:
ಕೆಲವು ಪೋಷಕರಿಗೆ ಬಿಡುವು ಎಂಬುದು ಇರುವುದಿಲ್ಲ. ಅವರಿಗೆ ಗರ್ಭ ಧರಿಸಿ ಮಗುವನ್ನು ಹೆರುವಷ್ಟು ಸಮಯ ಮತ್ತು ಪುರುಸೊತ್ತನ್ನು ಅವರ ವೃತ್ತಿ ನೀಡಿರುವುದಿಲ್ಲ. ಭವಿಷ್ಯದ ದೃಷ್ಟಿಯಿಂದ ಅವರು ಮಕ್ಕಳನ್ನು ದತ್ತು ತೆಗೆದುಕೊಂಡು ಸಾಕುವ ತೀರ್ಮಾನಕ್ಕೆ ಬರುತ್ತಾರೆ. ಇನ್ನು ಕೆಲವು ಸಂದರ್ಭಗಳಲ್ಲಿ ಹೆಂಗಸರ ಜೈವಿಕ ಗಡಿಯಾರವು ಅವರ ಜೀವನದ ಜೊತೆಗೆ ಹೊಂದಾಣಿಕೆಯಾಗದಿದ್ದಾಗ ಅವರು ಮಗುವನ್ನು ದತ್ತು ಪಡೆಯಲು ನಿರ್ಧರಿಸುತ್ತಾರೆ.

ತಮ್ಮ ಸ್ನೇಹಿತ ಅಥವಾ ಸಂಬಂಧಿಕರಿಗೆ ಸಹಾಯ ಮಾಡಲು:
ಕೆಲವೊಮ್ಮೆ ದತ್ತು ಪಡೆಯುವುದರ ಹಿಂದೆ ಒಂದು ನಿರ್ದಿಷ್ಟ ಕಾರಣ ಇರುತ್ತದೆ. ಉದಾಹರಣೆಗೆ, ತಮ್ಮ ಸ್ನೇಹಿತನ ದುರ್ದಿನಗಳಲ್ಲಿ ಆತನಿಗೆ ಸಹಾಯ ಮಾಡುವ ಸಲುವಾಗಿ ಅವರ ಮಗುವನ್ನು ದತ್ತು ತೆಗೆದುಕೊಳ್ಳುತ್ತಾರೆ. ಇನ್ನೂ ಕೆಲವೊಮ್ಮೆ ಕೆಲವು ದಂಪತಿಗಳಿಗೆ ದೇವರು ಅವಳಿ- ಜವಳಿ ಮಕ್ಕಳ ವರ ನೀಡಿರುತ್ತಾನೆ. ಆ ಅವಳಿ ಮಕ್ಕಳ ಪೋಷಕರಿಗೆ ಎರಡು ಮಕ್ಕಳನ್ನು ನಿಭಾಯಿಸುವ ಧೈರ್ಯ ಮತ್ತು ಸ್ಥೈರ್ಯದ ಕೊರತೆ ಇರಬಹುದು. ಆಗ ಅವರ ಸಂಬಂಧಿಗಳಲ್ಲಿ ಮಕ್ಕಳಿಲ್ಲದಿರುವ ದಂಪತಿಗಳು ಅವರ ಒಂದು ಮಗುವನ್ನು ದತ್ತು ತೆಗೆದುಕೊಳ್ಳುವ ನಿರ್ಧಾರಕ್ಕೆ ಬರಬಹುದು.

ಮಗುವಿನ ಸವಿನಿದ್ದೆಗೆ ಕೆಲವು ಟಿಪ್ಸ್

ವಯಸ್ಕ ಮಗುವನ್ನು ದತ್ತು ತೆಗೆದುಕೊಳ್ಳುವುದು:
ಕೆಲವು ದಂಪತಿಗಳಿಗೆ ರಾತ್ರಿಯೆಲ್ಲಾ ಮಗುವಿನ ಜೊತೆಗೆ ಜಾಗರಣೆ ಮಾಡುವ ಬಯಕೆ ಇರುವುದಿಲ್ಲ. ಅದಕ್ಕಾಗಿ ಅವರು ಸ್ವಲ್ಪ ವಯಸ್ಸಾದ ಮಗುವನ್ನು ದತ್ತು ತೆಗೆದುಕೊಳ್ಳುತ್ತಾರೆ. ಹೀಗೆ ಅವರು ಬೆಳೆಯುವ ಮಗು ಉಂಟು ಮಾಡುವ ಕಿರಿಕಿರಿ ಮತ್ತು ಮಾನಸಿಕ ಒತ್ತಡವನ್ನು ತಪ್ಪಿಸಿಕೊಳ್ಳುತ್ತಾರೆ.

English summary

Ten 'beautiful' reasons for adopting a child

Adoption is generally associated with couples unable to bear natural children. A couple unable to produce a child long after marriage is most often advised to contact an orphanage or a social institution for the bringing a readymade child home.
X
Desktop Bottom Promotion