For Quick Alerts
ALLOW NOTIFICATIONS  
For Daily Alerts

ಮಗುವಿಗೆ ಪರಿಪೂರ್ಣ ಬಾಡಿ ಮಸಾಜ್ ಮಾಡುವುದು ಹೇಗೆ?

By Super
|

ನಿಮ್ಮ ಮಗುವಿಗೆ ನಿಮ್ಮ ಪ್ರೀತಿ ಮತ್ತು ಆರೈಕೆಯನ್ನು ವ್ಯಕ್ತಪಡಿಸಲು ಇರುವ ಅತ್ಯುತ್ತಮ ಮಾರ್ಗವೇ ಮಸಾಜ್. ಇದು ಮಗುವಿಗೆ ಆರಾಮವನ್ನು ನೀಡಿ ಚೆನ್ನಾಗಿ ನಿದ್ರಿಸಲು ಅನುಕೂಲ ಮಾಡಿಕೊಡುತ್ತದೆ. ಮಸಾಜ್ ಕೇವಲ ಮಗುವಿಗಷ್ಟೇ ಅಲ್ಲ, ನಿಮಗೂ ಸಹ ವಿಶ್ರಾಂತಿಯನ್ನು ನೀಡುವ ಪ್ರಕ್ರಿಯೆಯಾಗಿರುತ್ತದೆ.

ಮಸಾಜ್‍ನಿಂದ ದೊರೆಯುವ ಮೃದುವಾದ, ಮೆತ್ತನೆಯ ಹಾಗು ಮುದ ನೀಡುವ ಹಿಡಿತಗಳು ಮತ್ತು ಸವರುವಿಕೆಗಳು ನಿಮ್ಮ, ಅಲ್ಲಿಯೇ ಇದ್ದಲ್ಲಿ ನಿಮ್ಮ ಸಂಗಾತಿಯ ಹಾಗು ಮಗುವಿನಲ್ಲಿರುವ " ಚೇತೋಹಾರಿ" ಹಾರ್ಮೋನುಗಳನ್ನು ಉದ್ದೀಪನಗೊಳಿಸುತ್ತವೆ. ಮಸಾಜ್‍ನಿಂದ ಮಗುವಿಗೆ ಹಲವಾರು ಬಗೆಯಲ್ಲಿ ಉಪಯೋಗಗಳು ದೊರೆಯುತ್ತವೆ.

ಒಂದು ಮಗುವಿನ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ಮಗುವಿಗೆ ವಿಶ್ರಾಂತಿ ದೊರೆಯುತ್ತದೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಮಗು ಮತ್ತು ನಿಮ್ಮ ನಡುವಿನ ಭಾಂದವ್ಯ ವೃದ್ಧಿಯಾಗುತ್ತದೆ. ಹಾಗಾದರೆ ಮಗುವಿಗೆ ಮಸಾಜ್ ಹೇಗೆ ಮಾಡಬೇಕು, ಅದರ ವಿಧಿ ವಿಧಾನಗಳು ಹೇಗೆ ಎಂಬುದನ್ನು ಮುಂದೆ ವಿವರಿಸಿದ್ದೇವೆ, ಓದಿ;-

How to Give Your Baby a Complete Body Massage in 10 Steps

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಮಗುವಿಗೆ ಎಣ್ಣೆ ಮಸಾಜ್ ಒಳ್ಳೆಯದೇ?

1. ಕಾಲುಗಳು:
ಮಸಾಜ್ ಮಾಡುವುದನ್ನು ಯಾವಾಗಲು ಕಾಲಿನಿಂದ ಆರಂಭಿಸಿ. ಏಕೆಂದರೆ ದೇಹದ ಇತರ ಭಾಗಗಳಿಗೆ ಹೋಲಿಸಿದಲ್ಲಿ ಕಾಲುಗಳು ಅತ್ಯಂತ ಸೂಕ್ಷ್ಮವಾದ ಅಂಗಗಳಾಗಿರುತ್ತವೆ. ನಿಮ್ಮ ಎರಡು ಕೈಗಳಿಗೆ ಎಣ್ಣೆಯನ್ನು ಹಾಕಿಕೊಳ್ಳಿ. ಅದನ್ನು ನಿಮ್ಮ ಮಗುವಿನ ತೊಡೆಗಳ ಸುತ್ತ ಸವರಿ, ಹಾಗೆಯೇ ನಿಮ್ಮ ಕೈಯಿಂದ ಮೃದುವಾಗಿ ಒತ್ತುತ್ತ ಪಾದಗಳೆಡೆಗೆ ಸಾಗಿ. ಹೀಗೆಯೇ ಮತ್ತೊಂದು ಕಾಲಿಗು ಮಾಡಿ. ಇದನ್ನು ಕೆಲ ಬಾರಿ ಪುನರಾವರ್ತಿಸಿ.

2. ಪಾದಗಳು:
ನಿಮ್ಮ ಮಗುವಿನ ಒಂದು ಪಾದವನ್ನು ತೆಗೆದುಕೊಳ್ಳಿ. ನಿಮ್ಮ ಕೈಗಳಿಂದ ಗಡಿಯಾರ ಸುತ್ತುವ ಮತ್ತು ಅದರ ವಿರುದ್ಧ ದಿಕ್ಕಿನಲ್ಲಿ 4-5 ಬಾರಿ ಉಜ್ಜಿ. ಆಮೇಲೆ ಹಿಮ್ಮಡಿಯಿಂದ ಬೆರಳುಗಳವರೆಗೆ ಒತ್ತಿ, ಹೀಗೆ ಎರಡು ಪಾದಗಳಿಗೆ ಮಾಡಿ.

3. ಹಿಮ್ಮಡಿ:
ನಿಮ್ಮ ಮಗುವಿನ ಹಿಮ್ಮಡಿಯನ್ನು ನಿಮ್ಮ ಹೆಬ್ಬೆರಳುಗಳಿಂದ ವೃತ್ತಾಕಾರವಾಗಿ ಒತ್ತಿ.

4.ಕಾಲು ಬೆರಳುಗಳು:
ನಿಮ್ಮ ಮಗುವಿನ ಕಾಲು ಬೆರಳುಗಳನ್ನು ನಿಮ್ಮ ಹೆಬ್ಬೆರಳು ಮತ್ತು ತೋರುಬೆರಳುಗಳಿಂದ ಮೃದುವಾಗಿ ಹಿಡಿದುಕೊಳ್ಳಿ. ಅಷ್ಟೇ ಮೃದುವಾಗಿ ಅವುಗಳನ್ನು ನಿಮ್ಮೆಡೆಗೆ ಎಳೆಯಿರಿ. ಸ್ವಲ್ಪ ನೆಟಿಕೆ ತೆಗೆಯುವ ರೀತಿ ಮಾಡಿ ಇದರಿಂದ ಬೆರಳುಗಳಿಗು ಆರಾಮ ಸಿಗುತ್ತದೆ.

5. ಕೈಗಳು:

ನಿಮ್ಮ ಮಗುವಿನ ಕೈಯನ್ನು ಮೃದುವಾಗಿ ಹಿಡಿದುಕೊಳ್ಳಿ. ಕಂಕುಳಿಂದ ಮುಂಗೈವರೆಗೆ ಮೃದುವಾಗಿ ಒತ್ತುತ್ತ ಬನ್ನಿ. ಹಾಗೆಯೇ ಅಷ್ಟೇ ಮೃದುವಾಗಿ ಕೈಯನ್ನು ನಿಧಾನವಾಗಿ ಪರಸ್ಪರ ವಿರುದ್ಧ ದಿಕ್ಕಿನಲ್ಲಿ 4-5 ಬಾರಿ ತಿರುಗಿಸಿ. ಹೀಗೆ ಮತ್ತೊಂದು ಕೈಗೂ ಮಸಾಜ್ ಮಾಡಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಮಕ್ಕಳ ಸಾಮಾನ್ಯ ಆಹಾರ ಸೇವಿಸುವ ಅವಧಿಗಳು

6. ಹಸ್ತಗಳು:
ನಿಮ್ಮ ಮಗುವಿನ ಹಸ್ತವನ್ನು ತೆಗೆದುಕೊಂಡು ಅದರಲ್ಲಿ ನಿಮ್ಮ ಹೆಬ್ಬೆರಳಿನಿಂದ ವೃತ್ತಾಕಾರವಾಗಿ ಒತ್ತಿ. ಇದನ್ನು ಮತ್ತೊಂದು ಹಸ್ತಕ್ಕು ಪುನರಾವರ್ತಿಸಿ.

7. ಕೈ ಬೆರಳುಗಳು:
ನಿಮ್ಮ ಮಗುವಿನ ಕೈಬೆರಳುಗಳನ್ನು ನಿಮ್ಮ ಹೆಬ್ಬೆರಳು ಮತ್ತು ತೋರುಬೆರಳುಗಳಿಂದ ಮೃದುವಾಗಿ ಹಿಡಿದುಕೊಳ್ಳಿ. ಅಷ್ಟೇ ಮೃದುವಾಗಿ ಅವುಗಳನ್ನು ನಿಮ್ಮೆಡೆಗೆ ಎಳೆಯಿರಿ. ಸ್ವಲ್ಪ ನೆಟಿಕೆ ತೆಗೆಯುವ ರೀತಿ ಮಾಡಿ. ಎಳೆಯುವ ನಿಮ್ಮ ಕೈ ಬೆರಳುಗಳಿಂದ ನಿಮ್ಮ ಮಗುವಿನ ಬೆರಳುಗಳು ಜಾರುವಂತಾಗಲಿ.

8. ಮುಖ ಮತ್ತು ತಲೆ:

ನಿಮ್ಮ ಮಗುವಿನ ತಲೆಯನ್ನು ನಿಮ್ಮ ಕೈಗಳಿಂದ ಹಿಡಿದುಕೊಳ್ಳಿ. ಈಗ ನಿಮ್ಮ ಕೈ ಬೆರಳುಗಳಿಂದ ಮೃದುವಾಗಿ ಮಗುವಿನ ಕೂದಲ ಬುಡದಲ್ಲಿ ನೇವರಿಸಲು ಆರಂಭಿಸಿ. ನಂತರ ಹುಬ್ಬುಗಳನ್ನು ಮೃದುವಾಗಿ ಒತ್ತಿ, ಮಗುವಿನ ಕಣ್ಣನ್ನು ಮುಚ್ಚಿಸಿ ಮೂಗಿನ ಮೇಲ್ತುದಿಯಿಂದ ಕೆಳ ತುದಿಯವರೆಗೆ ಒತ್ತುತ್ತ ಬನ್ನಿ. ನಂತರ ಕೆನ್ನೆಯನ್ನು ಒತ್ತಿ. ಆನಂತರ ಹೊರ ಕಿವಿಯ ಸ್ನಾಯುಗಳನ್ನು ಒತ್ತುತ್ತ ಬನ್ನಿ. ಮಗುವಿನ ದವಡೆಗಳ ಭಾಗದ ಮೇಲು ಸಣ್ಣ ವೃತ್ತಾಕಾರವಾಗಿ ಮೃದುವಾಗಿ ಒತ್ತಿ.

9. ಎದೆ ಭಾಗ:
ನಿಮ್ಮ ಮಗುವಿನ ಎದೆಯ ಭಾಗದ ಮೇಲೆ ನಿಮ್ಮ ಕೈಗಳನ್ನು ಪ್ರಾರ್ಥನಾ ಸ್ಥಿತಿಯಲ್ಲಿ ಇಡಿ. ಈಗ ನಿಮ್ಮ ಕೈಗಳನ್ನು ಹಾಗೆಯೆ ಮಗುವಿನ ಎದೆಯ ಭಾಗದಿಂದ ಮೇಲೆ ಎತ್ತದೆ, ಸ್ಪರ್ಷಿಸುವ ಸ್ಥಿತಿಯಲ್ಲಿಯೇ ಕೆಳ ಮುಖವಾಗಿ ತೆರೆಯಿರಿ. ಇದರಿಂದ ನಿಮ್ಮ ಹಸ್ತಗಳು ಮಗುವಿನ ಎದೆಯ ಮೇಲೆ ಮೃದುವಾಗಿ ಸವರಿಕೊಂಡು ಹೋಗುತ್ತವೆ. ಹಾಗು ಮಗುವಿಗೆ ಇದರಿಂದ ಒಳ್ಳೆಯ ಮಸಾಜ್ ದೊರೆಯುತ್ತದೆ. ಈ ಪ್ರಕ್ರಿಯೆಯನ್ನು ಕೆಲಬಾರಿ ಪುನರಾವರ್ತಿಸಿ.

10. ಬೆನ್ನು;
ಬೆನ್ನಿನ ಮಸಾಜ್ ಮಾಡಲು ನಿಮ್ಮ ಮಗುವನ್ನು ಹೊಟ್ಟೆ ಕೆಳಗೆ ಮಾಡಿ ಮಲಗಿಸಿ. ನಿಮ್ಮ ಮಗುವಿನ ಕುತ್ತಿಗೆಯಿಂದ ಆರಂಭಿಸಿ ಸೊಂಟದವರೆಗೆ ವೃತ್ತಾಕಾರವಾಗಿ ನಿಮ್ಮ ಬೆರಳುಗಳಿಂದ ಒತ್ತುತ್ತ ಬನ್ನಿ. ಈ ಪ್ರಕ್ರಿಯೆಯನ್ನು ಬೆನ್ನು ಹುರಿಯ ಅಕ್ಕ ಪಕ್ಕದಲ್ಲಿ ಮಾಡಿ.

English summary

How to Give Your Baby a Complete Body Massage in 10 Steps

Massage is warm and lovely way to convey your love and care to your baby. It comforts and helps the baby to sleep. Not just baby, you too will find it relaxing.
X
Desktop Bottom Promotion