For Quick Alerts
ALLOW NOTIFICATIONS  
For Daily Alerts

ಮಗುವಿನ ಕೋಪೋದ್ರೇಕ ಕಡಿಮೆಗೊಳಿಸುವುದು ಹೇಗೆ?

By Hemanth P
|

ಕೆಟ್ಟ ಮನೋಭಾವದ ಮಕ್ಕಳೊಂದಿಗೆ ವ್ಯವಹರಿಸುವುದು ತುಂಬಾ ಕಠಿಣ ಕೆಲಸ. ತುಂಬಾ ದೀರ್ಘ ಸಮಯದ ಬಳಿಕ ಪರಿಣಾಮಕಾರಿ ಫಲಿತಾಂಶ ಪಡೆಯಬಹುದು. ಈ ಹಾದಿಯಲ್ಲಿ ತಾಳ್ಮೆ ಮತ್ತು ದೃಢನಿರ್ಧಾರ ಅತೀ ಮುಖ್ಯ. ಕೆಟ್ಟ ಮನೋಭಾವದ ಮಕ್ಕಳೊಂದಿಗೆ ವ್ಯವಹರಿಸಲು ಆ ಪರಿಸ್ಥಿತಿಯಲ್ಲಿ ಮಕ್ಕಳು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂದು ತಿಳಿಯುವುದು ಅತ್ಯಗತ್ಯ.

ಮಗುವಿನ ಕೋಪೋದ್ರೇಕವು ಮಗುವಿನ ಮೂಕ ಅಳುವಾಗಿರಬಹುದು ಅಥವಾ ಅನಿರೀಕ್ಷಿತವಾಗಿರುವ ಒರಟು ಪ್ರತಿಕ್ರಿಯೆಯಾಗಿರಬಹುದು. ಇದು ಹೊಡೆಯುವುದು, ಬೊಬ್ಬೆ ಹಾಕುವುದು, ಅಳುವುದು ಅಥವಾ ಕಚ್ಚುವಂತಹ ಪ್ರತಿಕ್ರಿಯೆ ಆಗಿರಬಹುದು. ನಿಮ್ಮ ಮಗು ಆಗಾಗ ಇಂತಹ ವರ್ತನೆ ತೋರಿಸುತ್ತಿದ್ದರೆ ಕೆಟ್ಟ ಮನೋಭಾವದ ಮಗುವಿನೊಂದಿಗೆ ವ್ಯವಹರಿಸಲು ನೀವು ಕೆಲವೊಂದು ಪ್ರಮುಖ ವಿಧಾನಗಳನ್ನು ಪಾಲಿಸಬೇಕು.

ಮಕ್ಕಳ ಇಂತಹ ವರ್ತನೆ ಹೆತ್ತವರಿಗೆ ಮಾನಸಿಕ ಆಯಾಸ ಮತ್ತು ಒತ್ತಡ ಉಂಟುಮಾಡುತ್ತದೆ. ಇದನ್ನು ಮನೋಭಾವದ ಸಮಸ್ಯೆಯೆಂದು ಪರಿಗಣಿಸಬಹುದು. ಸೂಕ್ತ ಆರೈಕೆ ಮತ್ತು ಗಮನವಿಡುವುದರಿಂದ ಮಗುವಿನ ವರ್ತನೆಯಲ್ಲಿ ಭಾರೀ ಬದಲಾವಣೆ ತರಬಹುದು. ಕೋಪೋದ್ರಿಕ್ತರಾಗಿ ಮತ್ತೆ ಸಾಮಾನ್ಯ ಸ್ಥಿತಿಗೆ ಬಂದಾಗ ಅವರೊಂದಿಗೆ ಮಾತನಾಡಿ ಮತ್ತು ಇದು ತುಂಬಾ ಕೆಟ್ಟ ವರ್ತನೆ ಎಂದು ಅವರಿಗೆ ತಿಳಿಹೇಳಿ. ಕೆಲವೊಂದು ಟಿಪ್ಸ್ ಮತ್ತು ತಂತ್ರಗಳು ನಿಮಗೆ ತಿಳಿದಿದ್ದರೆ ಪರಿಸ್ಥಿತಿಯನ್ನು ಸರಳವಾಗಿ ನಿಭಾಯಿಸಬಹುದು. ಕೆಟ್ಟ ಮನೋಭಾವದ ಮಕ್ಕಳೊಂದಿಗೆ ವ್ಯವಹರಿಸಲು ಕೆಲವೊಂದು ಟಿಪ್ಸ್ ಗಳು ಇಲ್ಲಿವೆ.

How To Deal With A Bad-Tempered Child?

ಕಾರಣ ತಿಳಿದುಕೊಳ್ಳಿ
ನಿಮ್ಮ ಮಗು ಅತೀ ಬೇಗ ಯಾಕೆ ಸಿಟ್ಟಿಗೊಳಗಾಗುತ್ತದೆ ಎಂದು ಕಾರಣ ತಿಳಿದುಕೊಳ್ಳಿ. ಕೆಲವೊಮ್ಮೆ ನಿಮ್ಮ ಗಮನ ಸೆಳೆಯಲು ಅಥವಾ ಯಾವುದೇ ವಸ್ತುವನ್ನು ನಿರಾಕರಿಸಿದ ಸಿಟ್ಟಿನಲ್ಲಿ ಹೀಗೆ ಮಾಡಬಹುದು. ನಿಮ್ಮ ಮಗುವಿನ ಶಾರ್ಟ್ ಟೆಂಪರ್ ಗೆ ಕಾರಣ ಏನೆಂದು ತಿಳಿದುಕೊಳ್ಳುವುದು ತುಂಬಾ ಮುಖ್ಯ.

ಕೆಲವೊಂದು ನಿಮಯ ಮಾಡಿಕೊಳ್ಳಿ
ನೀವು ಪ್ರತಿಕ್ರಿಯಿಸುವ ಮೊದಲು ಸೂಕ್ತ ಯೋಜನೆ ಹಾಕಿಕೊಳ್ಳುವುದು ತುಂಬಾ ಮುಖ್ಯ. ಪ್ರತಿಕ್ರಿಯೆಗೆ ಕೆಲವೊಂದು ನಿಯಮಗಳನ್ನು ಮಾಡಿ. ಅವರ ಬೇಡಿಕೆ ತಿರಸ್ಕರಿಸಲು ನಿಮ್ಮಲ್ಲಿ ಬಲವಾದ ಕಾರಣವಿದೆ ಎಂದು ಅವರಿಗೆ ತಿಳಿಯಲಿ. ಅವರ ಬೇಡಿಕೆಗಳನ್ನೆಲ್ಲಾ ತಿರಸ್ಕರಿಸಬಾರದು ಎಂದು ನೆನಪಿರಲಿ.

ಕ್ಷಿಪ್ರಗತಿಯಲ್ಲಿ ಪ್ರತಿಕ್ರಿಯಿಸಿ
ನಿಮ್ಮ ಮಗು ಕೆಟ್ಟ ಮನೋಭಾವ ಹೊಂದಿದೆ ಎಂದಾದರೆ ನೀವು ಕ್ಷಿಪ್ರಗತಿಯಲ್ಲಿ ಕ್ರಮ ತೆಗೆದುಕೊಳ್ಳುವುದು ತುಂಬಾ ಮುಖ್ಯ. ಇದರಿಂದ ನಿಮ್ಮ ಮಗುವಿನ ಕೆಟ್ಟ ಮನೋಭಾವದೊಂದಿಗೆ ಸುಲಭ ಹಾಗೂ ಪರಿಣಾಮಕಾರಿಯಾಗಿ ವ್ಯವಹರಿಸಲು ನೆರವಾಗುತ್ತದೆ.

ಮಾರ್ಗದರ್ಶನ ನೀಡಿ
ಇಂದಿನ ದಿನಗಳಲ್ಲಿ ಹೆತ್ತವರು ತಮ್ಮ ಕೆಲಸಕಾರ್ಯಗಳಲ್ಲಿ ವ್ಯಸ್ತರಾಗಿರುವ ಕಾರಣ ತಮ್ಮ ಮಕ್ಕಳ ವರ್ತನೆ ಬದಲಾಯಿಸಲು ಅವರಿಗೆ ಹೆಚ್ಚಿನ ಸಮಯ ಸಿಗುವುದಿಲ್ಲ. ಈ ಕಾರಣದಿಂದಾಗಿ ಮಕ್ಕಳು ಕೆಟ್ಟ ಮನೋಭಾವ ಪ್ರದರ್ಶಿಸುತ್ತಾರೆ. ನಿಮ್ಮ ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯಿರಿ. ಯಾವುದು ಸರಿ ಹಾಗೂ ಯಾವುದು ತಪ್ಪು ಎಂದು ಅವರಿಗೆ ಹೇಳಿಕೊಡಿ.

ಕಡೆಗಣಿಸಿ
ಕೆಲವೊಂದು ಸಂದರ್ಭಗಳಲ್ಲಿ ಶಾರ್ಟ್ ಟೆಂಪರ್ ನ ಮಕ್ಕಳೊಂದಿಗೆ ವ್ಯವಹರಿಸಲು ಒಳ್ಳೆಯ ಟಿಪ್ಸ್ ಎಂದರೆ ಅವರ ಪ್ರತಿಕ್ರಿಯೆಯನ್ನು ಕಡೆಗಣಿಸುವುದು. ಪ್ರತೀ ಸಲ ಅವರು ಶಾರ್ಟ್ ಟೆಂಪರ್ ಪ್ರದರ್ಶಿಸಿದಾಗ ಅವರ ಬೇಡಿಕೆಗಳು ಈಡೇರುತ್ತದೆ ಎಂದು ಅವರು ಭಾವಿಸಿದರೆ ಆಗ ಅದನ್ನೇ ಮುಂದುವರಿಸುತ್ತಾರೆ.

ವೃತ್ತಿಪರರ ನೆರವು ಪಡೆಯಿರಿ
ಕೆಟ್ಟ ಮನೋಭಾವದ ಮಕ್ಕಳೊಂದಿಗೆ ವ್ಯವಹರಿಸಲು ನೀವು ಈ ಟಿಪ್ಸ್ ಪಾಲಿಸಬಹುದು. ಮಕ್ಕಳ ಇಂತಹ ವರ್ತನೆ ಸರಿ ಮಾಡಲು ಕೆಲವೊಂದು ಮನೋಭಾವದ ಥೆರಪಿಗಳಿವೆ. ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ವೃತ್ತಿಪರರ ಸಲಹೆ ತುಂಬಾ ನೆರವಾಗಲಿದೆ.

ಅತಿಯಾಗಿ ವರ್ತಿಸಬೇಡಿ
ಮಗುವು ತುಂಬಾ ಕೋಪದಿಂದ ಯಾವುದಾದರೂ ಕೆಟ್ಟ ವರ್ತನೆ ತೋರಿಸಿದರೆ ಆಗ ಬೊಬ್ಬೆ ಹಾಕಬೇಡಿ ಅಥವಾ ಬೈಯಬೇಡಿ. ನೀವು ಬೈದರೆ ಅಥವಾ ಬೊಬ್ಬೆ ಹಾಕಿದರೆ ಆಗ ಅವರ ವರ್ತನೆಯಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಾರೆ. ಇಂತಹ ವರ್ತನೆಯಿಂದ ಬೇರೆಯವರ ಗಮನ ಸೆಳೆಯುವುದು ಅವರ ಮುಖ್ಯ ಉದ್ದೇಶವಾಗಿರುತ್ತದೆ.

English summary

How To Deal With A Bad-Tempered Child?

Dealing with a bad-tempered child is not an easy task. It may take a long time to get a productive result. This makes patience and persistency the key of the process.
X
Desktop Bottom Promotion