For Quick Alerts
ALLOW NOTIFICATIONS  
For Daily Alerts

ತಂದೆಯ ಪ್ರೀತಿ ಮಗುವಿಗೆ ಶ್ರೀರಕ್ಷೆಯಾಗಲು ಸಲಹೆಗಳು

By Poornima
|

ಕೆಲವು ಅಧ್ಯಯನಗಳ ಪ್ರಕಾರ, ವರ್ಷಗಳ ಹಿಂದಿಗಿಂತಲೂ ಅಧಿಕವಾಗಿ ಇತ್ತೀಚಿಗೆ ಏಕ ತಂದೆಯ (ತಂದೆಯೊಬ್ಬನೇ ಮಕ್ಕಳನ್ನು ಪೋಷಣೆ ಮಾಡುವುದು) ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನೂ ಕೆಲವು ಮೌಲ್ಯಮಾಪನದ ಪ್ರಕಾರ ಇದರಲ್ಲಿ ಹಲವು ತಂದೆಯಂದಿರು ತಮ್ಮ ಸಂಗಾತಿಯೊಡನೆ ಸಹಜೀವನ ನಡೆಸುವವರೂ ಆಗಿದ್ದಾರೆ. ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ ಅವರು ಏಕ ತಾಯಂದಿರಿಗಿಂತ (ತಾಯಿಯೊಬ್ಬಳೆ ಮಕ್ಕಳನ್ನು ಪೋಷಣೆ ಮಾಡುವುದು) ಅತ್ಯಂತ ಹೆಚ್ಚಿನ ಆದಾಯವನ್ನು ಹೊಂದಿರುತ್ತಾರೆ.

ಆದರೆ ಇಂತಹ ಸಂದರ್ಭದಿಂದ ಇಂದು ಬಳಲುತ್ತಿರುವುದು ಮಾತ್ರ ಮಕ್ಕಳು! ತಂದೆ ತಾಯಿಯ ಪ್ರತ್ಯೇಕತೆಯಿಂದ ಮಗುವಿಗೆ ನೋವಾಗುತ್ತದೆ. ಮತ್ತು ತಂದೆಯೊಂದಿಗೆ ಮುಂದಿನ ಜೀವನವನ್ನು ಕಳೆಯಬೇಕಾದಂತಹ ಸಂದರ್ಭದಲ್ಲಿ ಆ ಪುಟ್ಟ ಜೀವವನ್ನು ನೋಡಿಕೊಳ್ಳುವುದು ತಂದೆಯೊಬ್ಬನಿಗೇ ಅಷ್ಟು ಸುಲಭವಲ್ಲ. ಮಗುವಿನ ಜನನದ ನಂತರ ತಾಯಿ ಆ ಮಗುವಿನ ರಕ್ಷಣೆ ಮಾಡುವುದು ನೈಸರ್ಗಿಕ. ಒಂದು ಸಂತೋಷ ತುಂಬಿದ ಕುಟುಂಬ, ಉತ್ತಮ ಬಾಲ್ಯ ಈ ಕೆಲವು ಸಹಜ ವಾತಾವರಣಗಳು ನಿಮ್ಮ ಮಗು ಸಂತೋಷವಾಗಿರಲು ಅಗತ್ಯವಾದ ಸಂಗತಿಗಳು.

Fathering A Child Alone: Tips

ಆದರೆ, ದುರದೃಷ್ಟವಶಾತ್, ಹೆಚ್ಚಿನ ಸಂದರ್ಭಗಳಲ್ಲಿ ಒಂದೇ ಪೋಷಕರಾಗಿ ತಂದೆಯೇ ಮಕ್ಕಳನ್ನು ನಿಭಾಯಿಸಬೇಕಾದ ಸಂದರ್ಭಗಳೂ ಎದುರಾಗುತ್ತವೆ. ಆದರೆ ಇದಕ್ಕೆ ಕಾರಣಗಳು ಸಾಕಷ್ಟಿರಬಹುದು. ಹೆಂಡತಿಯ ಸಾವು, ವಿಚ್ಛೇದನ, ಅಥವಾ ಬೇರೆಯಾಗುವುದು ಇತ್ಯಾದಿ! ನೀವು ಇಮ್ಮೆ ನಿಮ್ಮ ಮಗುವಿನೊಂದಿಗೆ ಇರಲು ಆರಂಭಿಸಿದ ಮೇಲೆ ನಿಮ್ಮ ಮಗುವು ನಿಧಾನಕ್ಕೆ ನಿಮ್ಮೊಂದಿಗೆ ಹೊಂದಿಕೊಳ್ಳಲು ಆರಂಭಿಸುತ್ತದೆ. ಇಲ್ಲಿ ತಂದೆ ಪಾಲಿಸಬೇಕಾದ ಕೆಲವು ಪೋಷಕ ಸಲಹೆಗಳನ್ನು ನೀಡಲಾಗಿದೆ. ಇದು ನೀವು ನಿಮ್ಮ ಮಗುವನ್ನು ಏಕಾಂಗಿಯಾಗಿಯೂ ಉತ್ತಮವಾಗಿ ಸಲಹಲು ಸಹಾಯಮಾಡಬಲ್ಲದು. ಮಗು ಸ್ತನ್ಯಪಾನ ತ್ಯಜಿಸಲು ಅನುಸರಿಸಬೇಕಾದ ವಿಧಾನಗಳು

ಒಂದು ಮಗುವಿನ ತಂದೆಯಾಗಬೇಕಾದರೆ ಇದು ಪ್ರಮುಖ ಅಂಶ. ನೀವು ನಿಮ್ಮ ಮಗುವಿನ ಸಮಸ್ಯೆಯನ್ನು ಕೇಳಬೇಕು. ಹಾಗೂ ಆ ಸಮಸ್ಯೆಯನ್ನು ಹೇಗೆ ಪರಿಹರಿಸಬಹುದು ಎಂಬುದನ್ನೂ ಕೇಳಬೇಕು. ನಿಮಗೆ ಸಮಸ್ಯೆಗೆ ಉತ್ತಮ ಪರಿಹಾರ ತಿಳಿದಿದ್ದರೆ, ಅದನ್ನು ನಿಮ್ಮ ಮಗುವಿಗೆ ತಿಳಿಸಿ. ಮುಕ್ತ ಸಂವಹನವೇ ನಿಮ್ಮ ಮಗುವಿನ ಸಮಸ್ಯೆಗೆ ಪರಿಹಾರ.
ಸಮಸ್ಯೆಗಳನ್ನು ಪರಿಹರಿಸಲು ಕಲಿಸಿ

ಪೋಷಕರ ಸಲಹೆಗಳಲ್ಲಿ ಇನ್ನೊಂದು ಪ್ರಮುಖವಾದದ್ದು, ಮಕ್ಕಳೊಂದಿಗೆ ಕುಳಿತು ಅವರ ಸಮಸ್ಯೆಗಳನ್ನು ಅವರದೇ ರೀತಿಯಲ್ಲಿ ಪರಿಹರಿಸಲು ಸಹಾಯಮಾಡುವುದು. ನೀವು ಮಗುವಿಗೆ ಒಂದು ವಿಷಯದ ಬಗ್ಗೆ ಯೋಚಿಸಲು ಅವಕಾಶ ನೀಡಿ. ನಂತರ ಆಯಾ ಸಮಸ್ಯೆಗೆ ಪರ್ಯಾಯ ಪರಿಹಾರವನ್ನು ಆಲೋಚಿಸಿ ನಿಮಗೂ ಹಾಗೂ ನಿಮ್ಮ ಮಗುವಿಗೂ ಸೂಕ್ತವಾಗುವಂತಹ ನಿರ್ಧಾರವನ್ನು ಕೈಗೊಳ್ಳಿ. ಇದಕ್ಕೆ ನಿಮ್ಮ ತಾಳ್ಮೆ ಅತ್ಯಗತ್ಯ. ಇದಕ್ಕೆ ಅಪಾರ ಸಮಯ ಮೀಸಲಾಗಿಡುವ ಅಗತ್ಯವಿರುವುದರಿಂದ ನೀವು ಅದನ್ನು ಮಾಡಲು ಮಾನಸಿಕವಾಗಿ ಸಿದ್ಧರಿರಬೇಕು. ಬಾಲ್ಯದಲ್ಲಿಯೇ ಮಾನಸಿಕ ಒತ್ತಡ, ತರುವುದು ಅಪಾಯ

ಅತಿಯಾದರಕ್ಷಣೆ (ಕಾಳಜಿ)
ನೀವೊಬ್ಬರೇ ಮಗುವನ್ನು ಪೋಷಣೆ ಮಾಡುತ್ತಿರಾದರೆ ಇದೊಂದು ನೈಸರ್ಗಿಕ ಪ್ರತಿಕ್ರಿಯೆಯಾಗಿದೆ. ನಿಮ್ಮ ಮಕ್ಕಳು ತಮ್ಮ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಹೆಚ್ಚು ಕಷ್ಟಪಡುವುದನ್ನು ನೀವು ಸಹಿಸುವುದಿಲ್ಲ. ನೀವು ನಿಮ್ಮ ಮಗುವಿಗೆ ಅತಿಯಾದ ರಕ್ಷಣೆಯನ್ನು ಯಾವಾಗ ಮಾಡುತ್ತಿರೋ ಆಗ ನಿಮ್ಮ ಮಕ್ಕಳು ಬಂಡಾಯ ಅಥವಾ ಅವಲಂಬನೆಯ ಸ್ವಭಾವವನ್ನು ಬೆಳೆಸಿಕೊಳ್ಳುವುದರಲ್ಲಿ ಸಂಶಯವಿಲ್ಲ. ಈ ಎರಡೂ ಫಲಿತಾಂಶಗಳು ಮಗುವಿನ ಬೆಳವಣಿಗೆಯ ಧನಾತ್ಮಕ ಚಿಹ್ನೆಗಳಲ್ಲ.

ತೊಡಗಿಸಿಕೊಳ್ಳುವಿಕೆ
ಅವರು ತಮ್ಮ ಜೀವನದಲ್ಲಿ ಎಷ್ಟು ಸಾಧ್ಯವೋ ಅಷ್ಟು ನಿಮ್ಮನ್ನು ನೀವು ತೊಡಗಿಸಿಕೊಳ್ಳಲು ಪ್ರಯತ್ನಿಸಿ. ಇದರಿಂದ ನಿಮ್ಮ ಮಗುವಿನ ಬಗ್ಗೆ ನಿಮಗಿರುವ ಕಾಳಜಿ ಮತ್ತು ಮಗು ಸುಧಾರಿಸಲು ನೀವು ಬಯಸುತ್ತಿದ್ದೀರಿ ಎಂಬುದು ಮಗುವಿಗೆ ಅರಿವಾಗುತ್ತದೆ. ಮಾಡುತ್ತದೆ. ನೀವು ಮತ್ತು ನಿಮ್ಮ ಮಗು ಜೊತೆಯಲ್ಲಿರಲು ಅವಕಾಶಗಳನ್ನು ಕಲ್ಪಿಸಿ. ಇದರಿಂದ ನಿಮ್ಮ ನಡುವೆ ಉತ್ತಮ ಸಂಬಂಧವನ್ನು ನಿರ್ಮಿಸಲು ಸಹಾಯವಾಗುತ್ತದೆ. ಅವರೊಂದಿಗೆ ಬೆರೆಯಿರಿ. ಆದರೆ ಅದೇ ರೀತಿ ಅಂತರವೂ ಇರಲಿ. ಇದರಿಂದ ನೀವು ನಿಮ್ಮ ಮಗುವಿನ ಮೇಲೆ ಭರವಸೆ ಇಟ್ಟಿದ್ದೀರಿ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳುತ್ತಾರೆ. ತಾಯ್ತನದ ಸಂತಸಕ್ಕೆ ಅಡ್ಡಿಯಾಗದಿರಲಿ ನಿಮ್ಮ ದಿನಚರಿ!

ಬೆಂಬಲದ ಗುಂಪುಗಳು
ಮಗುವಿನ ತಂದೆಗೆ ನೀಡುವ ಸಲಹೆಗಳಲ್ಲಿ ಇದೂ ಒಂದು. ನಿಮ್ಮ ನೆರೆಹೊರೆಯ ಒಂದು ಬೆಂಬಲ ಗುಂಪನ್ನು ಸೇರಿ ಅಥವಾ ಒಂದೇ ಪೋಷಕರ ಜೊತೆ ಮಾತನಾಡಲು ಪ್ರಯತ್ನಿಸಿ. ಇದರಿಂದ ನೀವು ಮಗುವನ್ನು ನೋಡಿಕೊಳ್ಳುವಲ್ಲಿ ನೀವು ಎದುರಿಸಿದಂತಹ ಸಮಸ್ಯೆಯನ್ನು ಬೇರೆ ತಂದೆಯಂದಿರೂ ಅನುಭವಿಸಿದ್ದರೆ ಅವರು ಕಂಡುಕೊಂಡ ಪರಿಹಾರ ನಿಮಗೆ ಸಹಾಯಕವಾಗಬಹುದು. ಏಕಾಂಗಿ ಪೋಷಕರಾಗಿ ಮಗುವನ್ನು ನೋಡಿಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ. ಸ್ವಲ್ವ ತಾಳ್ಮೆ ಮತ್ತು ಪ್ರೀತಿ ನಿಮ್ಮಲ್ಲಿದ್ದರೆ ನೀವು ಖಂಡಿತವಾಗಿಯೂ ನಿಮ್ಮ ಮಗುವಿಗೆ ಉತ್ತಮ ತಂದೆಯಾಗಬಲ್ಲಿರಿ.

English summary

Fathering A Child Alone: Tips

Studies have shown that the number of single fathers has drastically increased than a few years ago. There are few characteristics that are noted with single fathers, they usually have a cohabitating partner. Another interesting fact is that they have higher incomes than most of the single mothers.
X
Desktop Bottom Promotion