For Quick Alerts
ALLOW NOTIFICATIONS  
For Daily Alerts

ಪ್ರತಿಯೊಂದು ಮಗುವೂ ತಿಳಿದುಕೊಳ್ಳಬೇಕಾದ ಪ್ರಮುಖ ಕೌಶಲ್ಯಗಳು

By Viswanath S
|

ಇಂದು ಬೆಳೆಯುತ್ತಿರುವ ಮಕ್ಕಳು, ಅದರಲ್ಲಿಯೂ ಪ್ರಸ್ತುತ ಕಾಲದಲ್ಲಿ ಎಲ್ಲಾ ಘಟನೆಗಳು ಎಷ್ಟು ಬೇಗ ಜರಗುತ್ತದೆಯೋ ಹಾಗೂ ಇಂದಿನ ಯುವ ಪೀಳಿಗೆಯವರು ಎಷ್ಟು ಬೇಗ ಬೇಗ ಅರಳುತ್ತಿದ್ದಾರೆಂದರೆ, ಹಲವಾರು ಕೌಶಲ್ಯಗಳನ್ನು ಅತಿ ಶೀಘ್ರವಾಗಿ ಕಲಿತು ದೊಡ್ಡವರನ್ನು ತಮ್ಮ ಹೆಚ್ಚಿನ ಚಾತುರ್ಯದಿಂದ ಸಣ್ಣವರನ್ನಾಗಿಮಾಡಿಬಿಡುತ್ತಾರೆ.

ಹಲವಾರು ಹೊರಗಿನ ಚಟುವಟಿಕೆಗಳು ಮಗುವಿನ ಯೋಚನಾಶಕ್ತಿಯ ಮೇಲೆ ಪ್ರಭಾವ ಬೀಳುವುದು ಮತ್ತು ತನ್ನ ಸುತ್ತಮುತ್ತ ನಡೆಯುವ ಸಂಗತಿಗಳನ್ನು ಬಹುಬೇಗ ಅರ್ಥಮಾಡಿಕೊಳ್ಳುವುದಾದರೂ ಸಹ ಪ್ರತಿಯೊಂದು ಮಗುವೂ ಕೆಲವು ಕಲೆಗಳನ್ನು ದೊಡ್ಡವರಿಂದ ಕಲಿಯುವ ಅವಶ್ಯಕತೆಯಿದೆ. ಪೋಷಕರಾಗಿ ನಾವು ಮಕ್ಕಳಿಗೆ ಕೆಲವು ನಿರ್ದಿಷ್ಟ ಅಭ್ಯಾಸಗಳನ್ನು ಕಲಿಸುವುದು ಬಹಳ ಮುಖ್ಯ ಮತ್ತು ಅವರು ಅಂತಹ ಮುಖ್ಯ ಕಲೆಗಳನ್ನು ಕಲಿಯುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ಹೆತ್ತವರು ಕಟ್ಟುನಿಟ್ಟಾದ ಸ್ವಭಾವವನ್ನು ಯಾಕೆ ಹೊ೦ದಿರಬಾರದು?

ಈ ಲೇಖನದಲ್ಲಿ ಪ್ರತಿಯೊಂದು ಮಗುವು ಕಲಿಯಲೇ ಬೇಕಾದ ಕೆಲವು ಕಲೆಗಳ ಕಡೆ ಗಮನಹರಿಸೋಣ ಬನ್ನಿ. ಪೋಷಕರಾಗಿ ನೀವು ನಿಮ್ಮ ಮಗುವಿಗೆ ಈ ಅತ್ಯವಶ್ಯ ಕಲೆಗಳನ್ನು ಕಲಿಸುವುದು ಕಡ್ಡಾಯವಾಗಿದೆ. ಆದ್ದರಿಂದ ಮಕ್ಕಳು ಈ ಅತ್ಯವಶ್ಯ ಕಲೆಗಳನ್ನು ಕಲಿಯುವ ಬಗ್ಗೆ ಮುಂದೆ ನೋಡೋಣ:

Crucial Skills Every Child Needs To Learn

ಸ್ವತಃ ಆಲೋಚನೆ ಮಾಡಿ ಅದರಂತೆಯೇ ನಡೆದುಕೊಳ್ಳುವುದು
ಪ್ರತಿಯೊಂದು ಮಗುವು ಕಲಿಯಬೇಕಾದ ಇದೊಂದು ಮುಖ್ಯ ಕಲೆ. ಮಕ್ಕಳು ಬಹುಬೇಗ ಸುಲಭವಾಗಿ ಪ್ರಭಾವಕ್ಕೊಳಗಾಗುತ್ತಾರೆ ಮತ್ತು ನಿಮ್ಮ ಮಗುವು ತಾನೇ ಆಲೋಚನೆಮಾಡುವುದನ್ನು ಕಲಿಯಲು ಸುಲಭವಾಗುತ್ತದೆ. ಸ್ವತಃ ಆಲೋಚನೆಮಾಡಿ ಕಲಿಯುವುದನ್ನು ತಮ್ಮ ಮಕ್ಕಳಿಗೆ ಪ್ರತಿಯೊಂದು ಪೋಷಕನೂ ಕಲಿಸಬೇಕಾದ ಜವಾಬ್ದಾರಿ. ಸ್ವತಂತ್ರ ಚಿಂತನೆ ಮತ್ತು ಅದರ ನಡೆವಳಿಕೆ ನಿಮ್ಮ ಮಗುವಿಗೆ ಅಗತ್ಯವಾಗಿದೆ.

ತಾವು ಸ್ವತಃ ಮಾಡುವ ಕಾರ್ಯಗಳಿಗೆ ತಾವೇ ಜವಬ್ದಾರರು
ನಿಮ್ಮ ಮಕ್ಕಳಿಗೆ ತಾನು ಕೈಗೊಳ್ಳುವ ಕಾರ್ಯಗಳ ಜವಾಬ್ದಾರಿಯನ್ನು ತೆಗೆದುಕೊಳ್ಳುವುದನ್ನು ಕಲಿಸುವುದರಿಂದ ತಾವು ಮಾಡುವ ಕಾರ್ಯಗಳ ಬಗ್ಗೆ ಅಸಮಾಧಾನ ಅಥವ ಬೇಸರಿಕೆ ತೋರುವುದಂತೂ ಸಾಧ್ಯವಿರುವುದಿಲ್ಲ. ನಿಮ್ಮ ಮಕ್ಕಳು ತಮ್ಮ ಕಾರ್ಯಗಳಿಗೆ ತಾವೇ ಜವಾಬ್ಧಾರರೆಂಬುದನ್ನು ಕಲಿಸಿ. ಹೀಗೆ ಮಾಡುವುದರಿಂದ ಮಕ್ಕಳು ಬುದ್ಧಿವಂತರಾಗುವುದಲ್ಲದೆ ಒದಗಿಸಿದ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಳ್ಳಲು ಸಹಾಯವಾಗುತ್ತದೆ. ನಿಮ್ಮ ಮಗು ಸುರಕ್ಷಿತವಾಗಿ ಶಾಲೆಗೆ ಹೋಗುತ್ತಿದೆಯೇ?

ವಿಘ್ನಗಳನ್ನು ನಿಭಾಯಿಸುವಿಕೆ
ಮಕ್ಕಳು ಕಲಿಯುವುದರಲ್ಲಿ ಇದು ಬಹುಶಃ ಅತ್ಯಂತ ಅವಶ್ಯಕ ಕಲೆಯಾಗಿದೆ. ಜೀವನದಲ್ಲಿ ಬರುವ ಅಡೆತಡೆ ಮತ್ತು ವಿಘ್ನಗಳನ್ನು ಎದುರಿಸಿ ನಿಭಾಯಿಸಿಕೊಳ್ಳುವುದು ಜೀವನದಲ್ಲಿ ಜರಗುವ ಒಂದು ಅವಿಭಾಜ್ಯ ಘಟನೆಗಳು. ಚಿಕ್ಕವಯಸ್ಸಿನಲ್ಲೇ ಮಕ್ಕಳಿಗೆ ಜೀವನದಲ್ಲಿ ಬರಬಹುದಾದ ಅಡೆತಡೆ ಮತ್ತು ವಿಘ್ನಗಳನ್ನು ಎದುರಿಸಿ ನಿಭಾಯಿಸುವುದನ್ನು ಕಲಿಸಬೇಕು. ಈ ರೀತಿ ಸಹಾಯಮಾಡಿದಲ್ಲಿ ಅಂತಹ ಅಡೆತಡೆ ಮತ್ತು ವಿಘ್ನಗಳನ್ನು ಎದುರಿಸಿ ನಿಭಾಯಿಸುವುದರಲ್ಲಿ ಪ್ರಬಲರಾಗುವುದಲ್ಲದೆ ಮುಂದೆ ಬರಬಹುದಾದ ಸವಾಲುಗಳನ್ನು ಹೆಚ್ಚಿನ ಹುಮ್ಮಸ್ಸಿನಿಂದ ಎದುರಿಸಲು ಸಹಾಯವಾಗುತ್ತದೆ.

ದೂರುವುದನ್ನು ಮತ್ತು ಅಸಮಾಧಾನಪಡುವುದನ್ನು ನಿಲ್ಲಿಸಿ
ಮಕ್ಕಳು ದೂರುವುದು ಮತ್ತು ಸಂಕಟಪಡುವುದರಿಂದ ದೂರವುಳಿಯುವಂತೆ ಇರಲು ಕಲಿಸಿ. ಅವರಿಗೆ ಜೀವನದಲ್ಲಿ ನಡೆಯುವ ಅತ್ಯಂತ ಸಣ್ಣ ಸಂಗತಿಗಳನ್ನು ಪ್ರಶಂಸೆಮಾಡುವುದನ್ನು ಮತ್ತು ಅಸಮಾಧಾನಪಡುವುದರಿಂದ ದೂರವಿರುವುದನ್ನು ಕಲಿಸಬೇಕು. ಪೋಷಕರಾಗಿ ನಿಮ್ಮ ಮಗುವು ಅಸಂಬದ್ಧವಾಗಿ ಮತ್ತು ತರ್ಕಹೀನವಾಗಿ ದೂರುಮಾಡದಿರುವುದನ್ನು ಖಚಿತಪಡಿಸಿಕೊಳ್ಳಿ. ಜೀವನದ ಅತಿ ಚಿಕ್ಕ ವಿಷಯಗಳನ್ನು ಹೇಗೆ ಪ್ರಶಂಶಿಸಬೇಕೆಂಬುದನ್ನು ಕಲಿಸಿ. ಹಾಗೆ ಮಾಡಿದಾಗ ಮಕ್ಕಳು ಯಾವ ವಿಷಯಗಳನ್ನೂ ಲಘುವಾಗಿ ತೆಗೆದುಕೊಳ್ಳುವುದಿಲ್ಲ, ಹೌದಲ್ಲವೆ?

English summary

Crucial Skills Every Child Needs To Learn

In this article, we look at certain skills every child needs to learn. As a parent, it is imperative that you teach your child these crucial skills. So let us go ahead and look at these crucial skills every child needs to learn. Read on... 
X
Desktop Bottom Promotion