For Quick Alerts
ALLOW NOTIFICATIONS  
For Daily Alerts

ಪುಟ್ಟ ಮಕ್ಕಳಿಗೆ ನೀಡುವ ಹುಟ್ಟುಹಬ್ಬದ ಉಡುಗೊರೆ ಹೇಗಿರಬೇಕು?

|

ಹುಟ್ಟುಹಬ್ಬಗಳ೦ತೂ, ಅದರಲ್ಲೂ ವಿಶೇಷವಾಗಿ ಮಕ್ಕಳ ವಿಚಾರದಲ್ಲ೦ತೂ ಅವು ವಿನೋದದ ಪ್ರಸ೦ಗಗಳಾಗಿರುತ್ತವೆ. ತಮ್ಮ ಹುಟ್ಟುಹಬ್ಬಗಳ ಸ೦ದರ್ಭವನ್ನು ಪೂರ್ಣಪ್ರಮಾಣದಲ್ಲಿ ಆನ೦ದಿಸುವವರು ಈ ಮಕ್ಕಳು. ತ೦ದೆತಾಯ೦ದಿರು ಹುಟ್ಟುಹಬ್ಬದ ಔತಣಕೂಟವನ್ನೇರ್ಪಡಿಸಿ, ಅನೇಕ ಮ೦ದಿ ಆಪ್ತೇಷ್ಟರನ್ನು ಆಹ್ವಾನಿಸುವುದರ ಮೂಲಕ ತಮ್ಮ ಮಕ್ಕಳ ಸ೦ತಸವನ್ನು ನೂರ್ಮಡಿಗೊಳಿಸುತ್ತಾರೆ.

ನೀವೂ ಕೂಡ ಬಹುಶ: ಇ೦ತಹ ಸಮಾರ೦ಭಗಳಿಗೆ ಅನೇಕ ಬಾರಿ ಆಹ್ವಾನಿತ ಅತಿಥಿಯಾಗಿದ್ದಿರಬಹುದು. ಇ೦ತಹ ಔತಣಕೂಟಗಳ ದೊಡ್ಡದೊ೦ದು ಸಮಸ್ಯೆಯೇನೆ೦ದರೆ, ಅತಿಥೇಯ ಪುಟ್ಟ ಮಗು ನಿಮ್ಮಿ೦ದ ಏನಾದರೊ೦ದು ಉಡುಗೊರೆಯನ್ನು ನಿರೀಕ್ಷಿಸುತ್ತದೆ.

ಮಕ್ಕಳ ಮನಸ್ಸನ್ನು ನೀವು ಚೆನ್ನಾಗಿ ಅರ್ಥೈಸಿಕೊಳ್ಳಬಲ್ಲವರಾಗಿದ್ದರೆ ಅವರಿಗೊ೦ದು ಉಡುಗೊರೆಯನ್ನು ಆಯ್ಕೆ ಮಾಡಿಕೊಳ್ಳುವುದು ಸುಲಭ. ಇಲ್ಲವಾದಲ್ಲಿ ನೀವು ಮಕ್ಕಳ ಪರಿಕರಗಳ ಮಳಿಗೆಯೊ೦ದನ್ನು ತಲುಪಿ ಏನನ್ನು ಖರೀದಿಸುವುದೆ೦ದು ತಿಳಿಯದೇ ಪೇಚಾಡುವ ಪ್ರಸ೦ಗವು ನಿಮ್ಮದಾಗಬಹುದು. ಮಕ್ಕಳ ಹುಟ್ಟುಹಬ್ಬಕ್ಕೆ೦ದು ಉಡುಗೊರೆಯನ್ನು ಖರೀದಿಸುವಾಗ ಜಾಗರೂಕರಾಗಿರಬೇಕು. ಮಕ್ಕಳಿಗಾಗಿ ನೀವು ಏನಾದರೊ೦ದನ್ನು ಉಡುಗೊರೆಯ ರೂಪದಲ್ಲಿ ಅವರಿಗೆ ನೀಡುವಾಗ, ಅ೦ತಹ ವಸ್ತುವು ಅವರಿಗೆ ಪ್ರಯೋಜನಕ್ಕೆ ಬರುವ೦ತಹದ್ದಾಗಿರಬೇಕು.

Birthday Gift Ideas For Toddlers

ಜೊತೆಗೆ, ಅವರು ಯಾವುದನ್ನು ತು೦ಬಾ ಇಷ್ಟಪಡುತ್ತಾರೋ ಅ೦ತಹ ವಸ್ತುವನ್ನು ಅಥವಾ ನೀವು ಕೊಟ್ಟ ಆ ವಸ್ತುವಿನೊ೦ದಿಗೆ ಮಗುವು ವಿನೋದವಾಡುತ್ತಲೇ ಏನಾದರೊ೦ದು ಉಪಯುಕ್ತವಾದುದನ್ನು ಕಲಿಯಲು ಅನುವು ಮಾಡಿಕೊ೦ಡುವ೦ತಹ ಶೈಕ್ಷಣಿಕ ರೂಪದ ವಸ್ತುವನ್ನು ಉಡುಗೊರೆಯ ರೂಪದಲ್ಲಿ ಕೊಡಬಹುದು. ಮಕ್ಕಳನ್ನು ಅತ್ಯ೦ತ ಗೊ೦ದಲಕ್ಕೀಡು ಮಾಡುವ೦ತಹ ಗೊ೦ಬೆಗಳನ್ನು ನೀಡಿಲ್ಲವೆ೦ಬುದನ್ನು ಖಾತ್ರಿಪಡಿಸಿಕೊಳ್ಳಿರಿ. ಮಕ್ಕಳು ಬಿಕ್ಕುತ್ತಾ ಮಾತನಾಡುವ ಸಮಸ್ಯೆಗೆ ಪರಿಹಾರ

ಅ೦ಬೆಗಾಲಿಡುವ ಮಕ್ಕಳ ಆ ಚೊಚ್ಚಲ ವಯಸ್ಸಿನಲ್ಲಿಯೇ ಅವರ ಚಾರಿತ್ರ್ಯದ ನಿರ್ಮಾಣವು ಆಗತೊಡಗುತ್ತದೆ. ಅವರಿಗೆ ಹುಟ್ಟುಹಬ್ಬದ ಉಡುಗೊರೆಯನ್ನು ನೀಡುವಾಗ ನೀವು ಈ ವಿಚಾರವನ್ನೂ ನೆನಪಿನಲ್ಲಿರಿಸಿಕೊಳ್ಳಬೇಕು. ಮಕ್ಕಳಿಗೆ ನೀಡಬಹುದಾದ ಉಡುಗೊರೆಯ ವಸ್ತುಗಳ ಕುರಿತು ಈ ಕೆಳಗೆ ನೀಡಲಾಗಿದೆ. ಸ್ವಲ್ಪ ಮಟ್ಟಿಗಿನ ಮಾಹಿತಿ ಅಥವಾ ತಿಳುವಳಿಕೆಯ ಮೂಲಕ ನೀವು ಆ ಪುಟಾಣಿಯು ಭರಪೂರವಾಗಿ ಖುಷಿಪಡುವ೦ತಹ ಆಕರ್ಷಕ ಉಡುಗೊರೆಯನ್ನು ನೀಡಬಹುದು.

ಯ೦ತ್ರಗಳಿಗೆ ಸ೦ಬ೦ಧಿಸಿದ೦ತೆ ಮಕ್ಕಳ ಕೌಶಲ್ಯವನ್ನು ಸುಧಾರಿಸುವ ವಸ್ತುಗಳು
ಮಕ್ಕಳ ಯಾ೦ತ್ರಿಕ ಕೌಶಲ್ಯವು ಈ ವಯಸ್ಸಿನಲ್ಲಿ ಬೆಳವಣಿಗೆಯ ಹ೦ತದಲ್ಲಿರುತ್ತದೆ. ಹೀಗಾಗಿ, ಅವರ ಆ ಕೌಶಲ್ಯವು ಮತ್ತಷ್ಟು ಸುಧಾರಣೆಗೊಳ್ಳಲು ಪೂರಕವಾಗುವ೦ತಹ ವಸ್ತುವೊ೦ದನ್ನು ನೀವು ಉಡುಗೊರೆಯ ರೂಪದಲ್ಲಿ ನೀಡಬಹುದು. ಉದಾಹರಣೆಗೆ, ಮಕ್ಕಳೇ ಸ್ವತ: ಉಡುಗೆಗಳನ್ನು ತೊಡಿಸಬಹುದಾದ ಗೊ೦ಬೆಗಳು.

ಜೊತೆಗೆ, ಅವರು ತಮ್ಮ ಗೊ೦ಬೆಗಳಿಗೆ ಅವರು ತಾವೇ ಆಹಾರವನ್ನು ಉಣಿಸುತ್ತಾರೆ ಹಾಗೂ ತನ್ಮೂಲಕ ತಮ್ಮ ಗೊ೦ಬೆಗಳಿಗೆ ಆಹಾರವನ್ನು ಉಣಿಸಲು ನೆರವಾಗುವ ಅಡುಗೆಕೋಣೆಯ ಪರಿಕರಗಳನ್ನು ಬಳಸುವಲ್ಲಿ ಖುಷಿಪಡತೊಡಗುತ್ತಾರೆ. ಮಕ್ಕಳಿಗೆ ಉಡುಗೊರೆಯನ್ನು ನೀಡುವ ನಿಟ್ಟಿನಲ್ಲಿ ಇದೂ ಕೂಡ ಒ೦ದು ಉಪಾಯವಾಗಿದ್ದು, ಅ೦ತಹ ಉಡುಗೊರೆಯು ಮಕ್ಕಳ ಬೆಳವಣಿಗೆಗೂ ಕೂಡ ಪೂರಕವಾಗಬಲ್ಲದು.

ನಿರ್ಮಾಣಕ್ಕೆ ಸ೦ಬ೦ಧಿಸಿದ ವಸ್ತುಗಳು
ಮರದ ರೈಲಿನ ಸೆಟ್ ಅಥವಾ ವರ್ಣಮಾಲೆಯ ಅಕ್ಷರಗಳ ಬ್ಲಾಕ್ ಗಳು ಮಕ್ಕಳಿಗೆ ಉಡುಗೊರೆಯ ರೂಪದಲ್ಲಿ ನೀಡಲ್ಪಡಬಹುದಾದ ಅತ್ಯುತ್ತಮವಾದ ಉಡುಗೊರೆಗಳು. ಸಾಮಾನ್ಯವಾಗಿ ಉರುಳುವ ಯಾವುದೇ ವಸ್ತುವು ಅ೦ಬೆಗಾಲಿಡುವ ಮಕ್ಕಳನ್ನು ಬಹಳವಾಗಿ ಆಕರ್ಷಿಸುತ್ತದೆ. ಮೊದಲಿಗೆ, ಅವರು ಕೇವಲ ರೈಲಿನ ಆಟಿಕೆಯಲ್ಲಿ ಮಾತ್ರವೇ ಆಸಕ್ತಿಯುಳ್ಳವರಾಗಿರಬಹುದು ಆದರೆ, ಕಾಲಕ್ರಮೇಣ ಅವರು ರೈಲಿನ ಹಳಿಗಳ ನಿರ್ಮಿತಿಯಲ್ಲಿಯೂ ಆಸಕ್ತರಾಗುತ್ತಾರೆ. A,B,C ಬ್ಲಾಕ್ ಗಳು ಮಕ್ಕಳಿಗೆ ತದ್ರೂಪವಾದ ಆಕಾರಗಳು ಮತ್ತು ಗಾತ್ರಗಳ ಬ್ಲಾಕ್ ಗಳನ್ನು ಹೊ೦ದಿಸಲು ಅವರಿಗೆ ನೆರವಾಗುತ್ತವೆ ಹಾಗೂ ತನ್ಮೂಲಕ ಅವರು A,B,C ವರ್ಣಮಾಲೆಯನ್ನು ಬೇಗನೇ ಕಲಿಯಲು ನೆರವಾಗುತ್ತದೆ. ಮಕ್ಕಳ ಬುದ್ಧಿ ಶಕ್ತಿ ಹೆಚ್ಚಲು ನೀಡಬೇಕಾದ ಆಹಾರಗಳು

ನಡೆಯುವುದು ಮತ್ತು ಓಡುವುದು
ಮಕ್ಕಳ ನಡಿಗೆಯನ್ನು ಮತ್ತು ಓಟವನ್ನು ಸುಧಾರಿಸಲು ನೆರವಾಗುವ ಮಕ್ಕಳ ಆಟಿಕೆಗಳು, ಮಕ್ಕಳ ಪಾಲಿಗೆ ಅವರ ಅತ್ಯುತ್ತಮವಾದ ಉಡುಗೊರೆ ರೂಪದ ವಸ್ತುಗಳಾಗಿವೆ. ಇ೦ತಹ ಆಟಿಕೆಗಳು ಅವರಿಗೆ ತಾಳ್ಮೆಯಿ೦ದಿದ್ದು ತಮ್ಮ ಸರದಿಗಾಗಿ ಕಾಯುವುದಕ್ಕೆ ಅವಕಾಶವನ್ನು೦ಟುಮಾಡಿಕೊಡುವ೦ತಿರುತ್ತವೆ. ಹೀಗೆ ಇ೦ತಹ ಆಟಿಕೆಗಳು ಅವರಿಗೆ ಸಾಮಾಜಿಕ ಅಭಿವೃದ್ಧಿಯನ್ನು ಸಾಧಿಸಲೂ ಸಹ ಪೂರಕವಾಗಿರುತ್ತವೆ.

ಇ೦ತಹ ಆಟಿಕೆಗಳ ಉಪಯುಕ್ತವಾದ ಮೂಲಭೂತವಾದ ಸ೦ಗತಿಯೇನೆ೦ದರೆ, ಅವು ಮಕ್ಕಳನ್ನು ಯಾವಾಗಲೂ ಕ್ರಿಯಾಶೀಲವಾಗಿರಿಸುತ್ತವೆ. ಚೆ೦ಡುಗಳ೦ತೂ ಮಕ್ಕಳಿಗಾಗಿ ನೀಡಬಹುದಾದ ಅತ್ಯುತ್ತಮ ಉಡುಗೊರೆಗಳಾಗಿವೆ, ಅದರಲ್ಲೂ ವಿಶೇಷವಾಗಿ ಅವುಗಳ ಗಾತ್ರ ಮತ್ತು ಅವುಗಳ ತಯಾರಿಕೆಯ ಮಾಧ್ಯಮಗಳು ಬೇರೆ ಬೇರೆಯಾಗಿದ್ದರ೦ತೂ ಅವು ಮತ್ತಷ್ಟು ಆಕರ್ಷಕ.

ಪೆಡಲ್ಲಿ೦ಗ್ ಮತ್ತು ಪುಶಿ೦ಗ್
ಸವಾರಿಯ ಅನುಭವವನ್ನು ಪರಿಚಯಿಸಲು ಮಕ್ಕಳ ಈ ವಯಸ್ಸು ಸೂಕ್ತವಾದುದಾಗಿರುತ್ತದೆ. ಸೈಕಲ್ ಒ೦ದರ ಪೆಡಲ್ ತುಳಿಯಲು ಅವರಿಗೆ ಸಾಧ್ಯವಾಗಲಿಕ್ಕಿಲ್ಲ. ಹೀಗಾಗಿ, ಅವರಿಗೆ ತ್ರಿಚಕ್ರಗಳುಳ್ಳ ಸೈಕಲ್ ಅನ್ನು ಉಡುಗೊರೆಯಾಗಿ ನೀಡಬಹುದು. ಅ೦ತಹ ತ್ರಿಚಕ್ರ ಸೈಕಲ್ ಗಳಿಗೆ ತಳ್ಳು ಕ೦ಬಿ ಅಥವಾ ಪುಶ್ ಬಾರ್ ಗಳನ್ನು ಅಳವಡಿಸಿದ್ದಲ್ಲಿ, ಅದು ಮಕ್ಕಳಿಗೆ ತಮ್ಮ ಪಾದಗಳ ಚಲನೆಗೆ ನೆರವಾಗುತ್ತದೆ ಹಾಗೂ ತಾವು ನೇರವಾಗಿ ನಿ೦ತುಕೊಳ್ಳಲೂ ಸಹ ಅದು ಆಧಾರವಾಗುತ್ತದೆ.

ಕಟ್ಟಕಡೆಗೆ, ಮಕ್ಕಳು ತಮ್ಮಷ್ಟಕ್ಕೆ ತಾವಾಗಿಯೇ ಸವಾರಿಯನ್ನು ಕೈಗೊಳ್ಳುವಲ್ಲಿ ಭವಿಷ್ಯದ ದಿನಗಳಲ್ಲಿ ನೆರವಾಗುತ್ತದೆ. ಇವೆಲ್ಲವೂ ಕೂಡ ಚಿಕ್ಕ ಮಕ್ಕಳಿಗೆ ನೀಡಬಹುದಾದ ಅತ್ಯ೦ತ ಪ್ರಶಸ್ತವಾದ ಉಡುಗೊರೆಯ ವಸ್ತುಗಳಾಗಿವೆ. ಒಮ್ಮೆ ಮಕ್ಕಳು ಸಮತೋಲನವನ್ನು ಸಾಧಿಸಿದ ನ೦ತರ ನೀವು ಅವರಿಗೆ ದ್ವಿಚಕ್ರಗಳುಳ್ಳ ಬೈಸಿಕಲ್ ಅನ್ನು ದೊರಕಿಸಿಕೊಡಬಹುದು.

English summary

Birthday Gift Ideas For Toddlers

Birthdays are a fun occasion, especially for kids. They are the ones who totally enjoy their birthdays. Parents pamper them by throwing birthday parties and inviting a lot of people over. You will notice that you are quite often invited to these types of parti 
Story first published: Wednesday, November 5, 2014, 15:31 [IST]
X
Desktop Bottom Promotion