For Quick Alerts
ALLOW NOTIFICATIONS  
For Daily Alerts

ಮಗು ಸುಲಭವಾಗಿ ಹೊಸ ಆಹಾರಕ್ಕೆ ಒಗ್ಗಿಕೊಳ್ಳುವಂತೆ ಮಾಡುವ ವಿಧಾನ ಯಾವುದು?

|

ಮಗು ಹುಟ್ಟಿದ ನಂತರ ತನ್ನ ಪ್ರಥಮ ಆಹಾರವಾಗಿ ಅಮ್ಮನ ಎದೆಹಾಲನ್ನು ಸೇವಿಸುತ್ತದೆ. ಈ ಸಮಯದಲ್ಲಿ ಬೇರೆ ಯಾವ ಆಹಾರದ ಅಗತ್ಯತೆಯೂ ಆ ಕಂದಮ್ಮನಿಗೆ ಇರುವುದಿಲ್ಲ. ಆದರೆ ಮಗು ಕ್ರಮೇಣ ಬೆಳೆಯುತ್ತಿದ್ದಂತೆ ಅದಕ್ಕೆ ಅಮ್ಮನ ಎದೆಹಾಲಿನ ಜೊತೆಗೆ ಬೇರೆ ಆಹಾರಗಳನ್ನು ನೀಡಬೇಕಾಗುತ್ತದೆ.

ದ್ರವ ಆಹಾರದ ಜೊತೆಗೆ ಘನ ಆಹಾರವನ್ನೂ ಮಗುವಿನ ಪೋಷಣೆ ದೃಷ್ಟಿಯಲ್ಲಿ ನಾವು ಅದಕ್ಕೆ ನೀಡುತ್ತೇವೆ. ಮಗುವಿಗೆ ಎದೆಹಾಲನ್ನು ಬಿಟ್ಟು ಬೇರೆ ಆಹಾರಗಳನ್ನು ನೀಡುವಾಗ ತಾಯಂದಿರು ತುಂಬಾ ಕಾಳಜಿ ವಹಿಸಬೇಕಾಗುತ್ತದೆ. ಸರಿಯಾದ ಪ್ರೋಟೀನ್ ಹಾಗೂ ನ್ಯೂಟ್ರೀನ್‌ಗಳನ್ನು ಈ ಘನ ಆಹಾರ ಒಳಗೊಂಡಿದೆಯೇ ಎಂಬುದನ್ನು ನೀವು ಪರಿಶೀಲಿಸಬೇಕು.

Best Ways To Introduce Baby To New Foods

ಮಗುವಿಗೆ ಮೊದಲು ಆಹಾರಗಳನ್ನು ಪರಿಚಯಿಸುವಾಗ ಮಗುವಿಗೆ ಅದು ಇಷ್ಟವಾಗದೇ ಹೋಗಬಹುದು. ಮಗುವನ್ನು ರಮಿಸಿ ಈ ಆಹಾರಗಳನ್ನು ಅವಕ್ಕೆ ನೀಡವುದರಿಂದ ಅವು ಮುಂದಿನ ದಿನಗಳಲ್ಲಿ ಆಹಾರವನ್ನು ಇಷ್ಟಪಡುತ್ತವೆ. ಎಲ್ಲಾ ಆಹಾರಗಳೂ ನಿಮ್ಮ ಮಗುವಿಗೆ ಉತ್ತಮವಾಗಿರುವುದಿಲ್ಲ ಎಂಬುದನ್ನು ತಾಯಂದಿರು ಗಮನದಲ್ಲಿಟ್ಟುಕೊಳ್ಳಬೇಕು. ತಾಯಿ ಇದಕ್ಕಾಗಿ ಅನ್ವೇಷಣೆಗಳನ್ನು ಮಾಡುತ್ತಿರಬೇಕು.

ನಿಮ್ಮ ಮಗುವಿಗೆ ಯಾವೆಲ್ಲಾ ಆಹಾರಗಳು ಸೂಕ್ತ ಎಂಬುದನ್ನು ನಿಮಗೆ ತೋರಿಸಿಕೊಡಲೆಂದೇ ಕೆಳಗಿನ ಪಟ್ಟಿಯನ್ನು ನಾವು ಸಿದ್ಧಪಡಿಸಿದ್ದೇವೆ. ಇದು ನಿಮ್ಮ ಮಗುವಿನ ಆರೋಗ್ಯವನ್ನು ಚೆನ್ನಾಗಿ ಕಾಪಾಡುತ್ತದೆ

ಡೈಪರ್ ರಾಶಸ್ ಹೋಗಲಾಡಿಸಲು 12 ಮನೆಮದ್ದುಗಳು!

ನಿಮ್ಮ ಪೀಡಿಯಾಟ್ರಿಶೀಯನ್‌ನಿಂದ ಫುಡ್ ಲಿಸ್ಟ್ ತಯಾರಿಸಿಕೊಳ್ಳಿ
ಕೆಲವೊಂದು ಆಹಾರಗಳನ್ನು ನಿಮ್ಮ ಮಗು ಇಷ್ಟಪಡುವುದಿಲ್ಲ ಆ ಸಮಯದಲ್ಲಿ ವೈದ್ಯರ ಬಳಿಗೆ ಹೋಗಿ ಮಗುವಿಗೆ ಬೇಕಾದ ಅಹಾರಗಳ ಪಟ್ಟಿಯನ್ನು ತಯಾರಿಸಿ.

ಒಂದು ಸಮಯದಲ್ಲಿ ಒಂದನ್ನು ಮಾತ್ರ ನೀಡಿ
ಮೊದಲಿಗೆ ಸರಳ ಆಹಾರವನ್ನು ತೆಗೆದುಕೊಳ್ಳಿ. ಬೇಯಿಸಿದ ಆಪಲ್‌ನ ನಂತರವೇ ಬಾಳೆಹಣ್ಣು ಮತ್ತು ಚಿಕ್ಕುವನ್ನು ಮಗುವಿಗೆ ನೀಡಿ.

ಮಿಶ್ರ ಮಾಡಿ
ನಿಮ್ಮ ಮಗುವಿಗೆ ಬಾಳೆಹಣ್ಣು ತುಂಬಾ ಇಷ್ಟವಾಗಿದ್ದರೆ ಹಾಗೂ ಇದನ್ನೇ ಮಗು ಹೆಚ್ಚು ತಿನ್ನುತ್ತಿದ್ದರೆ ಕಾಯಿಲೆ ಬೀಳುವುದು ಖಂಡಿತ. ನಿಮ್ಮ ಮಗುವಿಗೆ ಬೇರೆ ಆಹಾರಗಳನ್ನು ಚೆನ್ನಾಗಿ ಮಿಶ್ರ ಮಾಡಿ ನೀಡಿ.

ನ್ಯೂಟ್ರಿಯಂಟಾಗಿರಲಿ
ನಿಮ್ಮ ಮಗು ನೀವು ಕೊಡುವ ಆಹಾರದಿಂದ ಅಧಿಕ ಪ್ರಮಾಣದಲ್ಲಿ ಸಿರೆಲ್, ಪ್ರೋಟೀನ್‌ಗಳನ್ನು ಪಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ.

ವಾರಾಂತ್ಯಗಳಲ್ಲಿ ಹೊಸ ಆಹಾರವನ್ನು ನೀಡಿ
ನೀವು ಉದ್ಯೋಗದಲ್ಲಿರುವ ದಂಪತಿಗಳಾದಲ್ಲಿ ನಿಮ್ಮ ಮಗುವಿಗೆ ಹೊಸ ಆಹಾರಗಳನ್ನು ವಾರಾಂತ್ಯದಲ್ಲಿ ನೀಡಿ. ನಿಮ್ಮ ಮಗುವಿರುವ ಬೇಬಿ ಸಿಟ್ಟಿಂಗ್ ಅಥವಾ ದಾದಿಯ ಬಳಿ ನಿಮ್ಮ ಮಗುವಿನ ಹೊಸ ಆಹಾರದ ಬಗೆಗೆ ಮಾಹಿತಿಯನ್ನು ನೀಡಿ.

ಮಗು ನಿಮ್ಮ ಮಾತು ಕೇಳುವಂತೆ ಮಾಡೋದು ಹೇಗೆ?

ಆಹಾರ ಅಲರ್ಜಿಗಳ ಬಗ್ಗೆ ಗಮನವಿರಲಿ
ಕೆಲವೊಂದು ಆಹಾರಗಳು ಮಗುವಿಗೆ ಅಲರ್ಜಿಯನ್ನು ಉಂಟುಮಾಡಬಹುದು. ಈ ಸಮಯದಲ್ಲಿ ಹೆಚ್ಚಿನ ಕಾಳಜಿಯನ್ನು ನೀವು ವಹಿಸಬೇಕಾಗುತ್ತದೆ. ನಿಮ್ಮ ಮಗುವಿಗೆ 8 ರಿಂದ 9 ತಿಂಗಳಾದಾಗ ಮಾಂಸಾಹಾರಿ ಆಹಾರವನ್ನು ನೀಡಿ.

ಈ ಕೆಲವೊಂದು ವಿಧಾನಗಳನ್ನು ಅನುಸರಿಸುವ ಮೂಲಕ ನಿಮ್ಮ ಮಗುವಿಗೆ ಹೊಸ ಆಹಾರದ ಬಗೆಗೆ ಪರಿಚಯ ಮಾಡಿಸಬಹುದು. ಈ ಎಲ್ಲಾ ವಿಧಾನಗಳನ್ನು ಅನುಸರಿಸಿ ಖಂಡಿತ ನಿಮಗಿದು ಹೊಸ ವಿಚಾರಗಳನ್ನು ನೀಡುತ್ತದೆ.

Story first published: Saturday, June 7, 2014, 11:43 [IST]
X
Desktop Bottom Promotion