For Quick Alerts
ALLOW NOTIFICATIONS  
For Daily Alerts

ಪ್ರತಿಯೊಬ್ಬ ಮಗುವೂ ಕಲಿಯಬೇಕಾದ 7 ಮುಖ್ಯ ಕೌಶಲ್ಯಗಳು

By Arpitha Rao
|

ಈ ಜಗತ್ತಿನಲ್ಲಿ ಪ್ರತಿಯೊಬ್ಬ ಮಗುವೂ ಕೂಡ ಕೆಲವು ಮುಖ್ಯ ಕೌಶಲ್ಯ(ಸ್ಕಿಲ್) ಗಳನ್ನು ಕಲಿಯಲೇ ಬೇಕು.ಎಲ್ಲಾ ಶಾಲೆಗಳಲ್ಲೂ ಕೂಡ ನಿಮ್ಮ ಮಗುವಿಗೆ ಅವು ಒಂದು ಉತ್ತಮ ಯುವಕರಾಗಲು ಬೇಕಾಗುವ ಸಾಕಷ್ಟು ಸ್ಕಿಲ್ಸ್ ಕಲಿಸಲಾಗುತ್ತಿದೆ,

ಆದರೆ ಕೆಲವೊಮ್ಮೆ ಶಾಲೆಗಳಲ್ಲಿ ಶಿಕ್ಷಕರು ಮಾತ್ರ ಕಲಿಸುವ ಪಾಠಗಳು ಮಕ್ಕಳಿಗೆ ಸಾಕಾಗುವುದಿಲ್ಲ.ಒಬ್ಬ ಉತ್ತಮ ಪೋಷಕರಾಗಿ ಮಕ್ಕಳನ್ನು ಸಂತೋಷವಾಗಿ, ಒಳ್ಳೆಯ ಪ್ರಜೆಯಾಗಿ ಬೆಳೆಸುವುದು ನಿಮ್ಮ ಕರ್ತವ್ಯ.ಈ ನಿಗೂಢ ಜಗತ್ತನ್ನು ಎದುರಿಸಲು ಮಕ್ಕಳು ಕಲಿಯಬೇಕಾದ ಏಳು ಸ್ಕಿಲ್‌ಗಳ ಬಗ್ಗೆ ಈ ಕೆಳಗೆ ಮಾಹಿತಿ ನೀಡಲಾಗಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಮಕ್ಕಳ ನೆನಪಿನ ಶಕ್ತಿ ಮತ್ತು ಏಕಾಗ್ರತೆ ಹೆಚ್ಚಿಸಬೇಕೆ?

ಬದುಕಲು ಬೇಕಾಗುವ ನೈಪುಣ್ಯತೆಗಳು:

ಬದುಕಲು ಬೇಕಾಗುವ ನೈಪುಣ್ಯತೆಗಳು:

ಕೆಲವೊಮ್ಮೆ ಕ್ರೂರವಾಗಿ ವರ್ತಿಸುವ ಈ ಜಗತ್ತಿನಲ್ಲಿ ಹೇಗೆ ಬದುಕಬೇಕು ಎಂಬುದನ್ನು ಪ್ರತಿಯೊಬ್ಬ ಮಗುವೂ ಅರಿತಿರಬೇಕು.ಕೊನೆಪಕ್ಷ ಮಕ್ಕಳು ಹೇಗೆ ಬೆಂಕಿ,ನೀರು,ಆಹಾರವನ್ನು ಪಡೆದುಕೊಳ್ಳಬಹುದು ಎಂಬುದನ್ನು ತಿಳಿದುಕೊಂಡಿರಬೇಕು.ಸಾಕಷ್ಟು ಮಕ್ಕಳಿಗೆ ಕಾಡು ಎಂದರೆ ಗೊತ್ತಿರುವುದಿಲ್ಲ,ಏಕೆಂದರೆ ಅವುಗಳಿಗೆ ಅದನ್ನು ನೋಡುವ,ಅಲ್ಲಿ ಬದುಕುವ ಅವಕಾಶ ದೊರಕಿರುವುದಿಲ್ಲ.ಆದರೆ ಪೋಷಕರಾದ ನೀವು ಇದನ್ನು ಕಲಿಸಿಕೊಡಬೇಕು.ಆಗ ಮಾತ್ರ ಮಕ್ಕಳು ಎಂತಹ ಕಷ್ಟ ಪರಿಸ್ಥಿತಿ ಇದ್ದರೂ ದೃತಿಗೆಡದೆ ಬದುಕುತ್ತಾರೆ.ನಿಮಗೇ ಗೊತ್ತಿಲ್ಲದಂತೆ ಕೆಲವೊಮ್ಮೆ ಇಂತಹ ಪರಿಸ್ಥಿತಿಯಲ್ಲಿ ಬದುಕಬೇಕಾಗಿ ಬರಬಹುದು.

ಒಂದು ಸಣ್ಣ ಅಡುಗೆ ಮಾಡುವುದು:

ಒಂದು ಸಣ್ಣ ಅಡುಗೆ ಮಾಡುವುದು:

ಇಲ್ಲಿ ನಾವು ಹೇಳುತ್ತಿರುವುದು ಹತ್ತು ವರ್ಷದ ನಂತರದ ಮಕ್ಕಳಿಗೆ.ಹೆಚ್ಚು ಕಷ್ಟವಿಲ್ಲದ ಒಂದು ಸಿಂಪಲ್ ಅಡುಗೆಯನ್ನು ಮಾಡುವುದು ಹತ್ತು ವರ್ಷದ ನಂತರದ ಮಕ್ಕಳಿಗೆ ತಿಳಿದಿರಲಿ.ಇದನ್ನು ಹೇಳಿಕೊಟ್ಟಾಗ ಮಕ್ಕಳು ಬಲಿಷ್ಠ ಮತ್ತು ಹೆಚ್ಚು ಸ್ವತಂತ್ರರಾಗುತ್ತಾರೆ.ಹಾಗೆಯೇ ಆಗಾಗ ನಿಮನ್ನು ಆಶ್ಚರ್ಯಚಕಿತರನ್ನಾಗಿ ಕೂಡ ಮಾಡಬಹುದು.ನೀವು ಕೆಲಸದಿಂದ ತಡವಾಗಿ ಮನೆಗೆ ಬಂದಾಗ ನಿಮ್ಮ ಮಕ್ಕಳು ಏನೋ ಒಂದು ಸಣ್ಣ ಅಡುಗೆ(ಮ್ಯಾಗಿ)ಮಾಡಿ ನಿಮಗೆ ಕಾಯುತ್ತಿದ್ದರೆ ನಿಮಗೆ ಎಷ್ಟು ಸಂತೋಷ ಎನಿಸಬಹುದು ಅಲ್ಲವೇ? ಇದು ಮಕ್ಕಳು ನಿಮ್ಮನ್ನು ಎಷ್ಟು ಇಷ್ಟ ಪಡುತ್ತವೆ ಮತ್ತು ಎಷ್ಟು ಜವಾಬ್ದಾರಿಯುತವಾಗಿವೆ ಎಂಬುದನ್ನು ನಿಮಗೆ ತಿಳಿಸುತ್ತವೆ.

ಲೆಟರ್ ಬರೆಯುವುದು ರೂಡಿಸಿ:

ಲೆಟರ್ ಬರೆಯುವುದು ರೂಡಿಸಿ:

ಬಹುಷಃ ನೀವು ಇದೇನು ಅಷ್ಟು ಅವಶ್ಯಕವಾದುದಲ್ಲ ಎಲ್ಲವನ್ನೂ ಆನ್ಲೈನ್ ನಲ್ಲಿ ಮಾಡಬಹುದು ಎಂದು ಯೋಚಿಸುತ್ತಿರಬಹುದು.ಈ ಮೇಲ್ ಗಳು ಇರುವ ಈ ಕಾಲದಲ್ಲಿ ಕೂಡ ಲೆಟರ್ ಗೆ ತನ್ನದೇ ಆದ ಪ್ರಾಮುಖ್ಯತೆ ಇದ್ದೇ ಇದೆ.ಲೆಟರ್ ಬರೆಯಲು ಹೆಚ್ಚು ಔಪಚಾರಿಕ ಪದಗಳ ಅವಶ್ಯಕತೆ ಇದೆ.ಇದನ್ನು ಮಕ್ಕಳಿಗೆ ನೀವು ಹೇಳಿಕೊಡಿ.ಮಕ್ಕಳಿಂದ ಅವರ ಅಜ್ಜ,ಅಜ್ಜಿ ಅಥವಾ ಚಿಕ್ಕಮ್ಮ ಹೀಗೆ ಯಾರು ಅವರಿಗೆ ತಿರುಗಿ ಉತ್ತರ ಬರೆಯುತ್ತಾರೋ ಅಂತವರಿಗೆ ಬರೆಯಲು ಕಲಿಸಿಕೊಡಿ.

ಸರಳ ಮನೆಗೆಲಸ:

ಸರಳ ಮನೆಗೆಲಸ:

ಪ್ರತಿಯೊಬ್ಬ ಮಗುವಿಗೂ ಮನೆಯ ಸಣ್ಣಪುಟ್ಟ ಕೆಲಸಗಳು ತಿಳಿದಿರಲೇಬೇಕು.ಅವರ ಬಟ್ಟೆ ಸೇರಿಸುವುದು,ಮನೆ ಸ್ವಚ್ಚವಾಗಿ ಇಡುವುದು,ಅಡುಗೆಗೆ ಸಹಕರಿಸುವುದು ಈ ರೀತಿಯ ಕೆಲಸದಲ್ಲಿ ನಿಮಗೆ ಸಹಕರಿಸುವಂತೆ ಮಾಡಿ.ಇಂತಹ ಸಣ್ಣ ಪುಟ್ಟ ಕೆಲಸಗಳು ಕೆಲಸಗಳು ಎನಿಸಿಕೊಳ್ಳುವುದೇ ಇಲ್ಲ,ಬದಲಿಗೆ ಅವುಗಳಿಗೆ ಒಂದು ಆಟ ಎನಿಸಿಕೊಳ್ಳುವಂತೆ ಮಾಡಿ.ಈ ರೀತಿ ಮಾಡುವುದರಿಂದ ಮಕ್ಕಳಿಗೆ ನೀವು ಸ್ವಚ್ಛತೆ ಬಗ್ಗೆ ಕೂಡ ತಿಳಿಸಿದಂತಾಗುತ್ತದೆ ಮತ್ತು ಮನೆಕೆಲಸದ ಬಗ್ಗೆ ಕೂಡ ತಿಳಿಯುತ್ತದೆ.

ಸಮಸ್ಯೆ ಬಗೆಹರಿಸುವ ನಿಪುಣತೆ:

ಸಮಸ್ಯೆ ಬಗೆಹರಿಸುವ ನಿಪುಣತೆ:

ಪ್ರತಿಯೊಬ್ಬ ಮಗುವೂ ಕೂಡ ಕೆಲವೊಂದು ಸಮಸ್ಯೆಗಳನ್ನು ಬಗೆಹರಿಸುವ ನಿಪುಣತೆಯನ್ನು ಹೊಂದಿರಬೇಕು.ನಿಮ್ಮ ಮಕ್ಕಳಿಗೆ ಹೆಚ್ಚು ತಿಳಿಯುವಂತೆ ಮಾಡಿ.ಅವರು ಯಾವುದಾದರೂ ಸಣ್ಣ ಸಮಸ್ಯೆ ನಿಮ್ಮೆದುರಿಗಿಟ್ಟಾಗ ಅವರೇ ಅದಕ್ಕೆ ಪರಿಹಾರ ಕಂಡುಕೊಳ್ಳುವಂತೆ ಹೇಳಿ.ಅವರು ಮಾಡುವ ತಪ್ಪಿನಿಂದ ಹೊಸ ಪಾಠ ಕಲಿಯುವಂತೆ ಮತ್ತೆ ಹೆದರದಂತೆ ನೋಡಿಕೊಳ್ಳಿ.

ಸಂತೋಷವಾಗಿರುವಂತೆ ಮಾಡಿ:

ಸಂತೋಷವಾಗಿರುವಂತೆ ಮಾಡಿ:

ನಿಮ್ಮ ಮಕ್ಕಳಿಗೆ ಅವರಷ್ಟಕ್ಕೆ ಸಂತೋಷ ಕಂಡು ಕೊಳ್ಳಲು ಬಿಟ್ಟುಬಿಡಿ. ಸಣ್ಣ ಸಣ್ಣ ವಿಷಯದಲ್ಲೂ ಸಂತೋಷ ಅಡಗಿದೆ ಎಂಬುದನ್ನು ಅವೇ ಕಂಡುಕೊಳ್ಳಲಿ.ನಿಮ್ಮ ಮಕ್ಕಳ ಖಾಸಗಿತನಕ್ಕೆ ಬೆಲೆ ಕೊಡಿ,ಸ್ವಲ್ಪ ಸಮಯ ಏಕಾಂತದಲ್ಲಿ ಇರಲು ಅವಕಾಶ ಮಾಡಿಕೊಡಿ.ಹೀಗೆ ಮಾಡಿದಾಗ ಮಕ್ಕಳಿಗೆ ಕನಸು ಕಾಣಲು ಅವಕಾಶ ಸಿಗುತ್ತದೆ,ಅವರು ಮುಂದೆ ಏನಾಗಬೇಕು ಎಂಬುದರ ಬಗ್ಗೆ ಕನಸು ಕಾಣಲಿ.ಅವರು ಬೆಳೆದು ದೊಡ್ದವರಾಗುತ್ತಿದ್ದಂತೆ ಸುರಕ್ಷತಾ ಭಾವನೆ ಬೆಳೆಸಿಕೊಳ್ಳುತ್ತಾರೆ.

ಕರುಣೆ:

ಕರುಣೆ:

ಇದನ್ನು ಪ್ರತಿಯೊಬ್ಬ ಮಗುವೂ ತಿಳಿದಿರಬೇಕು.ಮಕ್ಕಳು ಚಿಕ್ಕವರಿರುವಾಗಲೇ ದೊಡ್ಡವರಿಗೆ ಗೌರವಿಸುವುದು,ಅವರ ಮೇಲೆ ಕರುಣೆ ಇಟ್ಟಿರುವುದು ಇದನ್ನೆಲ್ಲಾ ಕಲಿಸಿಕೊಟ್ಟಲ್ಲಿ ಬೇರೆಯವರನ್ನು ಖುಶಿಯಾಗಿ ಇಡುವುದರ ಮೂಲಕ ಮಕ್ಕಳು ತಾವೂ ಖುಶಿಯಾಗಿ ಇರುವುದು ಕಲಿಯುತ್ತವೆ.ನಿಮ್ಮ ಮಕ್ಕಳಿಗೆ ಬೇರೆಯವರಿಗೆ ಸಹಾಯ ಮಾಡುವುದು ಮತ್ತು ಬೇರೆಯವರೊಂದಿಗೆ ಸಹನೆಯಿಂದ ನಡೆದುಕೊಳ್ಳುವುದನ್ನು ಕಲಿಸಿಕೊಡಿ.

ನಿಮ್ಮ ಮಗುವಿಗೆ ಜೀವಿಸಲು ಬೇಕಾಗುವ ಎಲ್ಲಾ ಅವಶ್ಯಕತೆಗಳನ್ನು ಕಲಿಸಿಕೊಡಿ.ಏಕೆಂದರೆ ನಮಗೇ ತಿಳಿಯದಂತೆ ಈ ಜಗತ್ತಿನಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ.ನಿಮ್ಮ ಮಗುವಿಗೆ ಇವಲ್ಲದೆ ಬೇರಾವ ಕೌಶಲ್ಯತೆ ಇದೆ? ಇನ್ನೂ ಏನೇನನ್ನು ಮಕ್ಕಳಿಗೆ ಕಳಿಸುವುದು ಒಳ್ಳೆಯದು? ನಮಗೆ ನಿಮ್ಮ ಅಭಿಪ್ರಾಯ ಬರೆದು ತಿಳಿಸಿ.

English summary

7 Very Important Skills Every Child Should Learn ...

As parents, it’s basically your responsibility to help your children become the happy and accomplished adults you want them to be someday. Here are 7 of the most important skills every child should learn
Story first published: Wednesday, April 16, 2014, 15:04 [IST]
X
Desktop Bottom Promotion