For Quick Alerts
ALLOW NOTIFICATIONS  
For Daily Alerts

ಮಕ್ಕಳ ಸ್ಥೂಲಕಾಯವನ್ನು ಕಡಿಮೆ ಮಾಡಬೇಕೆ?

By Super
|

ಆಧುನಿಕ ಪ್ರಪಂಚವು ಎಷ್ಟು ಸೌಕರ್ಯಗಳನ್ನು ನಮ್ಮ ದೈನಂದಿನ ಜೀವನಕ್ಕೆ ನೀಡಿದೆಯೋ, ಅಷ್ಟೇ ಸಮಸ್ಯೆಗಳನ್ನೂ ನಮಗೆ ನೀಡಿದೆ. ಬೊಜ್ಜು ಎಂಬ ಸಮಸ್ಯೆಯು ಮೊದಲು ಕೇವಲ ಹಿರಿಯರಿಗೆ, ಮಧ್ಯ ವಯಸ್ಕರಿಗೆ ಕಾಡುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ಮಕ್ಕಳನ್ನು ಸಹ ಇದು ಕಾಡುತ್ತಿರುವುದು ಚಿಂತೆಗೆ ಕಾರಣವಾಗಿದೆ.

ಅದರಲ್ಲಿಯೂ ಶಾಲೆಗೆ ಹೋಗುವ ಮಕ್ಕಳಿಗೆ ಈ ಸಮಸ್ಯೆ ಬಂದರೆ ನಿಜಕ್ಕು ಸಂಕೋಚವನ್ನುಂಟು ಮಾಡುತ್ತದೆ. ಆದರೆ ಸಮಸ್ಯೆಯ ಆಳವನ್ನು ನೋಡಲು ನೀವು ಯಾವುದಾದರು ಒಂದು ಶಾಲೆಗೆ ಭೇಟಿ ನೀಡಿ. ಅಲ್ಲಿ ಅಸಂಖ್ಯಾತ ಮಕ್ಕಳು ಬೊಜ್ಜಿ ಅಥವಾ ಅತಿಯಾದ ತೂಕದ ಸಮಸ್ಯೆಯಿಂದ ಬಳಲುತ್ತಿರುವುದನ್ನು ನೀವೇ ನೋಡಬಹುದು. ಕೆಲವು ಮಕ್ಕಳ ಪೋಷಕರು ತಮ್ಮ ಮಗುವಿನ ಏರುತ್ತಿರುವ ತೂಕದ ಬಗ್ಗೆ ತಲೆಕೆಡೆಸಿಕೊಂಡಿರುತ್ತಾರೆ. ಅವರಿಗೆ ಈ ಸಮಸ್ಯೆ ಏಕಾಗಿ ಬಂತು ಎಂಬ ಸಂಶಯಗಳು ಇರುತ್ತವೆ.

ಹಾಗಾದರೆ ಮಕ್ಕಳು ಸ್ಥೂಲಕಾಯರಾಗಿ ಬೆಳೆಯಲು ಕಾರಣಗಳೇನು? ಎಮದು ನೋಡೋಣ ಬನ್ನಿ.

 ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ

ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ

ಮಕ್ಕಳಲ್ಲಿ ಬೊಜ್ಜು ಬರುವಲ್ಲಿ ಅತಿಯಾದ ಕ್ಯಾಲೋರಿ ಇರುವ ಆಹಾರ ಮತ್ತು ವ್ಯಾಯಾಮದ ಕೊರತೆ ಪ್ರಮುಖ ಕಾರಣವಾಗಿದೆ. ನಿಜ ಮಕ್ಕಳು ಅಂತಹ ದೈಹಿಕ ಆಯಾಸವನ್ನುಂಟು ಮಾಡುವ ಕೆಲಸಗಳಲ್ಲಿ ಆಗಲಿ ಅಥವಾ ವ್ಯಾಯಾಮಗಳನ್ನಾಗಲಿ ಮಾಡುವುದಿಲ್ಲ. ಮಹಾ ಎಂದರೆ ಟಿ.ವಿ ನೋಡುವುದು ಅಥವಾ ವೀಡಿಯೊ ಗೇಮ್‍ಗಳನ್ನಾಗಲಿ ಆಡಿಕೊಂಡು ಕಾಲ ಕಳೆಯುತ್ತಿರುತ್ತಾರೆ. ಬೇರೆ ಇನ್ಯಾವುದು ಹೊರಾಂಗಣ ಆಟಗಳಲ್ಲಿ ಸಹ ಇವರು ಪಾಲ್ಗೊಳ್ಳುವುದಿಲ್ಲ. ಸೋಮಾರಿಯಂತೆ ಕೂತು ಕಾಲ ಕಳೆಯುವ ಮಕ್ಕಳು ತಮಗೆ ಗೊತ್ತಿಲ್ಲದೆ ಸುಮ್ಮನೆ ತಿನ್ನುವ ಚಾಳಿಯನ್ನು ಬೆಳೆಸಿಕೊಂಡು, ಅತಿಯಾದ ತೂಕವನ್ನು ಪಡೆದುಕೊಳ್ಳುತ್ತಾರೆ. ಹಾಗಾಗಿಯೇ ಈ ಬೊಜ್ಜಿನ ಸಮಸ್ಯೆ ತಲೆದೋರುತ್ತದೆ.

 ಔಷಧಿಗಳ ಪ್ರಭಾವದಿಂದ

ಔಷಧಿಗಳ ಪ್ರಭಾವದಿಂದ

ಬಹುತೇಕ ಮಕ್ಕಳು ತಾವು ಮಾನಸಿಕವಾಗಿ ತುಮುಲಕ್ಕೆ ಒಳಗಾದಾಗ ಅಥವಾ ಸ್ಟಿರಾಯ್ಡ್ ಹೊಂದಿರುವ ಔಷಧಿಗಳನ್ನು ಸೇವಿಸಿದಾಗ ಹೆಚ್ಚಾಗಿ ಆಹಾರ ಸೇವಿಸಲು ತುಡಿಯುತ್ತಾರೆ.

ತೂಕವನ್ನು ಹೆಚ್ಚಿಸುವ ಆಹಾರಗಳನ್ನು ಕೊಡಬೇಡಿ

ತೂಕವನ್ನು ಹೆಚ್ಚಿಸುವ ಆಹಾರಗಳನ್ನು ಕೊಡಬೇಡಿ

ಕಠಿಣವಾದ "ಪಥ್ಯ" ( ಡಯೆಟಿಂಗ್) ಅಥವಾ ಕಡಿಮೆ ಕ್ಯಾಲೊರಿಯ ಊಟವು ಅಪೌಷ್ಟಿಕತೆಗೆ ದಾರಿ ಮಾಡಿಕೊಟ್ಟು ಮಕ್ಕಳ ಬೆಳವಣಿಗೆಗೆ ಹಾನಿಯುಂಟು ಮಾಡುತ್ತದೆ. ತೂಕ ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದೇ ಆದರೆ ಅತಿಯಾಗಿ ಕಡಿಮೆಯಾಗುವುದು ಸಹ ಒಳ್ಳೆಯದಲ್ಲ. ತೂಕವನ್ನು ಹೆಚ್ಚಿಸುವ ಹಾನಿಕಾರಕ ಆಹಾರಗಳನ್ನು ಮೊದಲು ತಿಳಿದುಕೊಳ್ಳಿ.

ಈ ಆಹಾರಗಳಿಂದ ದೂರವಿಡಿ

ಈ ಆಹಾರಗಳಿಂದ ದೂರವಿಡಿ

ಸಾಮಾನ್ಯವಾಗಿ ಸಾಫ್ಟ್ ಡ್ರಿಂಕ್‍ಗಳು, ಹಣ್ಣಿನರಸಗಳು, ಗಟ್ಟಿಯಾದ ಶೇಕ್‍ಗಳು, ಸ್ಪೋರ್ಟ್ಸ್ ಡ್ರಿಂಕ್‍ಗಳು,ಚಿಪ್ಸ್,ಫ್ರೆಂಚ್ ಫ್ರೈಗಳಂತಹ ಕರಿದ ತಿಂಡಿಗಳು, ಬೆಣ್ಣೆ ಮತ್ತು ಚೀಸ್‍ನ ಅತಿಯಾದ ಬಳಕೆ, ಅತಿಯಾದ ಬ್ರೆಡ್, ಬಿಸ್ಕೆಟ್ ಮತ್ತು ಚಾಕಲೇಟ್ಗಳು, ಐಸ್ ಕ್ರೀಮ್‍ಗಳು, ಪಿಜ್ಜಾ, ಬರ್ಗರ್, ಪಾವ್ ಬಾಜಿ ಇತ್ಯಾದಿಗಳು ಹಾನಿಕಾರಕ ಆಹಾರಗಳ ಪಟ್ಟಿಯಲ್ಲಿ ಸೇರಿವೆ.

ಹಣ್ಣುಗಳು

ಹಣ್ಣುಗಳು

ಒಣ ಹಣ್ಣುಗಳು, ಸಲಾಡ್, ಹಣ್ಣುಗಳು, ಹಾಲು ಮತ್ತು ಹೈನು ಉತ್ಪನ್ನಗಳನ್ನು ತಿಂಡಿಯಾಗಿ ನೀಡಿ.

ಮಗಿವಿನ ಬೆಳಗ್ಗಿನ ಆಹಾರದ ಬಗ್ಗೆ ಜಾಗ್ರತೆ

ಮಗಿವಿನ ಬೆಳಗ್ಗಿನ ಆಹಾರದ ಬಗ್ಗೆ ಜಾಗ್ರತೆ

ತೂಕವಿಳಿಸಬೇಕೆಂದು ಬೆಳಗಿನ ಉಪಾಹಾರವನ್ನು ತ್ಯಜಿಸುವುದು ಖಂಡಿತವಾಗಿ ಒಳ್ಳೆಯದಲ್ಲ. ನಮ್ಮ ದೇಹಕ್ಕೆ ಬೆಳಗಿನ ಉಪಾಹಾರವು ಅತ್ಯಾವಶ್ಯಕ. ಪ್ರತಿದಿನ ಉಪಾಹಾರವನ್ನು ತಿನ್ನದಿದ್ದರೆ ನಮ್ಮ ದೇಹಕ್ಕೆ ಅಗತ್ಯವಿರುವ ಶಕ್ತಿ ದೊರೆಯುವುದಿಲ್ಲ. ಇದು ಮುಂದೆ ನಿಮ್ಮ ಮಗುವಿನ ಏಕಾಗ್ರತೆಯ ಮೇಲೆ ಪರಿಣಾಮ ಬೀರುವುದಲ್ಲದೆ, ಮಗುವಿನ ಶಕ್ತಿಯ ಪ್ರಮಾಣದಲ್ಲು ಇಳಿಕೆ ಕಂಡು ಬರುತ್ತದೆ.

ಆರೋಗ್ಯಕರ ಆಹಾರ ಕೊಡಿ

ಆರೋಗ್ಯಕರ ಆಹಾರ ಕೊಡಿ

ನಿಮ್ಮ ಮಗು ಪ್ರತಿದಿನ ಬೆಳಗಿನ ಉಪಾಹಾರ ಸೇವಿಸುತ್ತದೆಯೋ ಇಲ್ಲವೋ, ಎಂದು ಪರೀಕ್ಷಿಸಿ. ಇಡ್ಲಿ, ದೋಸೆ, ಪರೋಟ ಮುಂತಾದವು ನಿಮ್ಮ ಮಗುವಿನ ಉಪಾಹಾರದ ಪಟ್ಟಿಯಲ್ಲಿ ಇರಲಿ. ಕಾರ್ನ್ ಫ್ಲೇಕ್ಸ್,ಫೇಸ್ಟ್ರೀಸ್ ಮುಂತಾದ ಅಂಗಡಿಯಲ್ಲಿ ದೊರೆಯುವ ಉಪಾಹಾರಗಳನ್ನು ಮಗುವಿಗೆ ನೀಡಬೇಡಿ. ಇವುಗಳಲ್ಲಿ ಸಕ್ಕರೆಯ ಪ್ರಮಾಣ ಅಧಿಕವಾಗಿರುತ್ತದೆ.

ಪೋಷಕಾಂಶ ಭರಿತ ಆಹಾರ

ಪೋಷಕಾಂಶ ಭರಿತ ಆಹಾರ

ಅಧಿಕ ಕೊಬ್ಬಿನಂಶವಿರುವ ಅನಾರೋಗ್ಯಕಾರಿ ಆಹಾರಗಳನ್ನು ಸಂಪೂರ್ಣಾವಾಗಿ ತ್ಯಜಿಸಿ. ಅದರ ಬದಲಿಗೆ ಪ್ರತಿದಿನ ಪೋಷಕಾಂಶ ಭರಿತ ಮೂರು ಊಟವನ್ನು ಹಾಗು 3 ತಿಂಡಿಗಳನ್ನು ನೀಡಿ.

 ಕ್ಯಾಂಡಿ ದೂರವಿಡಿ

ಕ್ಯಾಂಡಿ ದೂರವಿಡಿ

ಇವುಗಳು ಕಡಿಮೆ ಪೋಷಕಾಂಶವನ್ನು ಹೊಂದಿರುವುದಲ್ಲದೆ, ನಿಮ್ಮ ದೇಹಕ್ಕೆ ಅನಾವಶ್ಯಕವಾಗಿ ಹೆಚ್ಚಿನ ಕ್ಯಾಲೊರಿಗಳನ್ನು ಸೇರಿಸುತ್ತವೆ. ಇಂತಹ ಆಹಾರಗಳನ್ನು ನಾವು ಖಡಾ ಖಂಡಿತವಾಗಿ ತ್ಯಜಿಸಲೇಬೇಕು.

ಬೇಕರಿ ಫುಡ್ ಗಳನ್ನು ಹೆಚ್ಚಾಗಿ ಕೊಡಬೇಡಿ

ಬೇಕರಿ ಫುಡ್ ಗಳನ್ನು ಹೆಚ್ಚಾಗಿ ಕೊಡಬೇಡಿ

ಬೇಕರಿ ಉತ್ಪನ್ನಗಳಿಂದ, ಕರಿದ ತಿಂಡಿಗಳಿಂದ ದೊರೆಯುವ ಕೊಬ್ಬನ್ನು ನಿಯಂತ್ರಣದಲ್ಲಿಡಿ ಮತ್ತು ಒಣ ಹಣ್ಣು, ಸಂಸ್ಕರಿಸದ ಎಣ್ಣೆಯನ್ನು ಬಳಸಿ ಇದರಿಂದ ಆರೋಗ್ಯಕಾರಿ ಕೊಬ್ಬುಗಳು ನಿಮ್ಮ ದೇಹಕ್ಕೆ ಲಭಿಸುತ್ತವೆ.

ಸ್ವೀಟ್ಸ್

ಸ್ವೀಟ್ಸ್

ಸಿಹಿ ತಿಂಡಿಗಳನ್ನು ಆದಷ್ಟು ಕಡಿಮೆ ತಿನ್ನಿ. ಯಾವುದೇ ಕಾರಣಕ್ಕು ನಿಮ್ಮ ಮಕ್ಕಳಿಗೆ ಊಟ- ತಿಂಡಿಗಳನ್ನು ಆಮಿಷವಾಗಿ ನೀಡಬೇಡಿ.

ಸಾಕಷ್ಟು ನೀರು ಕುಡಿಸಬೇಕು

ಸಾಕಷ್ಟು ನೀರು ಕುಡಿಸಬೇಕು

ನಿಮ್ಮ ಮಗು ಪ್ರತಿದಿನವು ಯಥೇಚ್ಛವಾಗಿ ನೀರನ್ನು ಸೇವಿಸುವಂತೆ ಪ್ರೋತ್ಸಾಹಿಸಿ. ನಿಮ್ಮ ಮಗು ಎಷ್ಟು ಬಾರಿ ಶೌಚಾಲಯಕ್ಕೆ ಹೋಗಿ ಬರುತ್ತದೆಯೆಂಬುದರ ಮೇಲೆ ನೀವು ಇದನ್ನು ಪರೀಕ್ಷಿಸಿಕೊಳ್ಳಬಹುದು.

ಮಕ್ಕಳಲ್ಲಿ ಕೀಳೆರಿಮೆ

ಮಕ್ಕಳಲ್ಲಿ ಕೀಳೆರಿಮೆ

ಇಡೀ ಕುಟುಂಬವನ್ನು ಬೊಜ್ಜಿಗೆ ಉದಾಹರಣೆಯಾಗಿ ತೆಗೆದುಕೊಳ್ಳಿ. ಆಗ ನಿಮ್ಮ ಮಗುವಿನಲ್ಲಿ ತಾನು ದಪ್ಪ ಎನ್ನುವ ಕೀಳರಿಮೆ ತಪ್ಪುತ್ತದೆ.

ವ್ಯಾಯಾಮ

ವ್ಯಾಯಾಮ

ನಿಮ್ಮ ಮಗುವಿಗೆ ವ್ಯಾಯಾಮ ಅಥವಾ ಹೊಸ ಆಟವಾಡುವ ಹವ್ಯಾಸ ರೂಢಿಯಾಗುವಂತೆ ಮಾಡಿ. ಶಾಲೆಯಲ್ಲಿ ಕ್ರೀಡೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿ.

ಟಿವಿ ನೋಡುವ ಅಭ್ಯಾಸ ಕಡಿಮೆ ಮಾಡಿಸಿ

ಟಿವಿ ನೋಡುವ ಅಭ್ಯಾಸ ಕಡಿಮೆ ಮಾಡಿಸಿ

ಟಿ.ವಿ ನೋಡುವ ಅಭ್ಯಾಸವನ್ನು ಕಡಿಮೆ ಮಾಡಿಸಿ. ಅಷ್ಟೂ ಬೇಕಾದರೆ ಟಿ.ವಿ ನೋಡಲು ಪ್ರತ್ಯೇಕ ಸಮಯ ನಿಗದಿ ಮಾಡಿ.

ಮನೆ ಅಡುಗೆಯನ್ನೇ ಕೊಡಿ

ಮನೆ ಅಡುಗೆಯನ್ನೇ ಕೊಡಿ

ಈ ಎಲ್ಲ ಸಲಹೆಗಳನ್ನು ಚಾಚೂ ತಪ್ಪದೆ ಜಾರಿಗೆ ತನ್ನಿ. ಯಾವುದೇ ಕಾರಣಕ್ಕು ನಿಮ್ಮ ಮಗುವಿನಲ್ಲಿ "ತಾನು ಭಿನ್ನ"ವೆಂಬ ಭಾವನೆ ಬೆಳೆಯಲು ಬಿಡಬೇಡಿ. ಇದು ಮಗುವಿನ ಭವಿಷ್ಯದಲ್ಲಿ ಸಮಸ್ಯೆ ಉಂಟು ಮಾಡಬಹುದು. ನಿಮ್ಮ ಮಗುವಿಗೆ ಆದಷ್ಟು ಒಳ್ಳೆಯ ಆರೋಗ್ಯಕಾರಿ ಊಟವನ್ನು ಮಾಡುವ ಪದ್ಧತಿಯನ್ನು ತಿಳಿಸಿ. ಅವರಿಗೆ ಮನೆಯಲ್ಲಿ ತಯಾರಿಸಿದ ಅಡುಗೆಯನ್ನೆ ನೀಡಿ. ಪ್ರತಿದಿನ ತಪ್ಪದೆ ವ್ಯಾಯಾಮ ಮಾಡುವ ಅಭ್ಯಾಸವನ್ನು ರೂಢಿಸಿ.

English summary

Why is your child growing fat?

Obesity in children is the main cause for worry now. When I go to address children in schools, it is unbelievable to see the large number of children who are obese or just overweight. Several parents are very concerned about their child growing fat.
X
Desktop Bottom Promotion