For Quick Alerts
ALLOW NOTIFICATIONS  
For Daily Alerts

ಅತೀ ಕಾಳಜಿ ತೋರಿಸುವ ಪೋಷಕರು ನೀವಾಗಬೇಡಿ!

By reena
|

ಸ್ವತಂತ್ರವಾಗಿ ಬೆಳೆದ ಮಕ್ಕಳು ಪೋಷಕರು ಸ್ಪೂನ್ ಫೀಡ್ ಮಾಡಿ ಬೆಳೆಸಿದ ಮಕ್ಕಳಿಗಿಂತ ಬುದ್ಧಿವಂತಿಕೆಯಿಂದ ಸಮಸ್ಯೆಗಳನ್ನು ಎದುರಿಸುವ ಮನೋಬಲ ಹೊಂದಿರುತ್ತಾರೆ ಅನ್ನುವುದು ಸತ್ಯದ ಮಾತು. ಮಕ್ಕಳಿಗೆ ಪೋಷಕರು ರಕ್ಷಣೆ ಒದಗಿಸಬೇಕು, ಆದರೆ ಅದೇ ಮಿತಿಯಾಗಬಾರದು.

ಕೆಲವು ಪೋಷಕರು ಮಕ್ಕಳ ಬಗ್ಗೆ ಅತೀಯಾದ ಕೇರ್ ತೆಗೆದುಕೊಳ್ಳುತ್ತಾರೆ. ಅವರಿಗೆ ಒಂಟಿಯಾಗಿ ಎಲ್ಲಿಗೂ ಹೋಗಲು ಬಿಡುವುದಿಲ್ಲ, ಕೈಯಲ್ಲಿ ದುಡ್ಡು ಕೊಟ್ಟು ಅವರಿಗೆ ಬೇಕಾದ ವಸ್ತುಗಳನ್ನು ಕೊಳ್ಳಲು ಬಿಡುವುದಿಲ್ಲ. ಮಕ್ಕಳ ಬೇಕು-ಬೇಡಗಳನ್ನು ತಾವೇ ತಿರ್ಮಾನಿಸುತ್ತಾರೆ. ಮಕ್ಕಳಿಗೆ ಕೆಟ್ಟ ಪ್ರಪಂಚ ಗೊತ್ತಾಗಬಾರದು, ಯಾವುದೇ ಕಷ್ಟ ಗೊತ್ತಾಗಬಾರದು ಅಗತ್ಯಕ್ಕೆ ಮೀರಿದ ತುಂಬಾ ಮುತುವರ್ಜಿಯಿಂದ ಸಾಕುತ್ತಾರೆ.

Independent

ಆದರೆ ಮಕ್ಕಳನ್ನು ಆ ರೀತಿ ಸಾಕುವುದು ಅವರ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಎಲ್ಲಾ ಸಮಯದಲ್ಲಿ ನೀವು ಅವರ ಜೊತೆ ಇರುತ್ತೀರ ಎಂದು ಹೇಳಲು ಸಾಧ್ಯವಿಲ್ಲ. ಅವರಲ್ಲಿ ಸ್ವಾತಂತ್ರ್ಯ ಮನೋಭಾವ ಬೆಳೆಸಿ. ಎಲ್ಲವನ್ನು ನೀವು ಮಾಡಿ, ಈ ಕೆಳಗಿನಂತೆ ಮಾಡಿ ಅವರಲ್ಲಿ ಪರಿಸ್ಥಿತಿಯನ್ನು ಎದುರಿಸುವ ಮನೋಭಾವ ಬೆಳೆಸಿ.

ಬಾಡಿ ಗಾರ್ಡ್ ರೀತಿ ಸದಾ ಜೊತೆಯಲ್ಲಿ ಇರಬೇಡಿ
ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಿ ಬಿಡುವುದು, ಕರೆದುಕೊಂಡು ಬಿಡುವುದು, ಒಬ್ಬರೆ ಪ್ರಯಾಣ ಮಾಡಲು ಬಿಡಿದಿರುವುದು ಮಾಡಬೇಡಿ. ಮಕ್ಕಳು ನಾನು ಹೋಗುತ್ತೇನೆ ಎಂದಾಗ ಕಳುಹಿಸಿ. ಈಗೀನ ಮಕ್ಕಳು ನಮಗಿಂತ ಚುರುಕಾಗಿ ಇರುತ್ತಾರೆ. ಅವರಿಗೆ ನಿಮ್ಮ ಅತೀ ಪ್ರೀತಿ ಕಿರಿಕಿರಿಯಾಗದಿರಲಿ.

ನೈಜತೆಯಿಂದ ದೂರವಿಡಬೇಡಿ
ಮಕ್ಕಳಿಗೆ ಕೆಟ್ಟ ವಿಷಯಗಳು ತಿಳಿಯಬಾರದೆಂದು ಬಯಸುವುದು ತಪ್ಪು. ಸಮಾಜದಲ್ಲಿ ನಡೆಯುತ್ತಿರುವ ರೇಪ್, ದರೋಡೆ ಇವೆಲ್ಲಾ ಅವರ ಅರಿವಿಗೆ ತಂದು ಅವರ ರಕ್ಷಣೆಗೆ ಹೇಗೆ ಇರಬೇಕೆಂಬ ಮಾಹಿತಿ ನೀಡಿ.

ದುಡ್ಡಿನ ಬೆಲೆ ತಿಳಿದಿರಲಿ
ನಿಮ್ಮ ಹತ್ತಿರ ತುಂಬಾ ದುಡ್ಡು ಇದೆಯೆಂದು ತುಂಬಾ ಪಾಕೆಟ್ ಮನಿ ಕೊಟ್ಟು ಅವರನ್ನು ಹಾಳು ಮಾಡಬೇಡಿ, ಹಾಗಂತ ಕೊಡದೆ ಕೂಡ ಇರಬೇಡಿ. ಹಣದ ಬೆಲೆ ತಿಳಿಯುವಂತೆ ಅವರನ್ನು ಬೆಳೆಸಿ.

ಮಿಸ್ಟೇಕ್ ಮಾಡಲಿ ಪರ್ವಾಗಿಲ್ಲ
ತಪ್ಪು ಮಾಡಿದಾಗ ಮಾತ್ರ ಯಾವುದು ತಪ್ಪು? ಯಾವುದು ಸರಿ ಅನ್ನುವುದು ತಿಳಿಯುತ್ತದೆ.

ಅವರ ಅಭಿಪ್ರಾಯ ವ್ಯಕ್ತ ಪಡಿಸಲು ಬಿಡಿ
ಹೆಚ್ಚಿನ ಪೋಷಕರು ಮಕ್ಕಳ ಭಾವನೆಗಳನ್ನು ವ್ಯಕ್ತ ಪಡಿಸುವ ಸ್ವಾತಂತ್ರ್ಯ ಕೊಡದೆ ತಪ್ಪು ಮಾಡುತ್ತಾರೆ. ಎಲ್ಲಾ ಬಾರಿ ನಿಮ್ಮ ಯೋಚನೆ ಸರಿ ಅಂತ ಹೇಳಲು ಆಗುವುದಿಲ್ಲ. ಅವರ ಮನಸ್ಸಿನಲ್ಲಿ ಏನಿದೆಯೆಂದು ತಿಳಿಯಿರಿ. ಆದ್ದರಿಂದ ಅವರ ಭಾವನೆಗಳನ್ನು ವ್ಯಕ್ತ ಪಡಿಸಲು ಬಿಡಿ.

English summary

Why Allow Children To Be Independent | Tips For Parenting

You cannot protect your children from the harsh reality forever. That is why, it is better to allow your children to be independent.
X
Desktop Bottom Promotion