For Quick Alerts
ALLOW NOTIFICATIONS  
For Daily Alerts

ರಜಾದಿನಗಳಲ್ಲಿ ಮಕ್ಕಳಿಗೆ ಕಲಿಸಬೇಕಾದ ಪಾಠಗಳು

By Hemanth P
|

ರಜಾದಿನಗಳು ಪ್ರತೀ ಮಗುವಿನ ಜೀವನದಲ್ಲಿ ಅತ್ಯಂತ ಅದ್ಭುತ ಹಾಗೂ ನಿರೀಕ್ಷೆಯ ಸಮಯ. ದಿನನಿತ್ಯ ಶಾಲೆಗೆ ಹೋಗುವುದು, ಟ್ಯೂಷನ್, ಹೋಮ್ ವರ್ಕ್ ಮತ್ತು ಪರೀಕ್ಷೆ ಒತ್ತಡ ಸಾಮಾನ್ಯ. ರಜಾ ದಿನಗಳಲ್ಲಿ ಮಕ್ಕಳು ಆಟವಾಡಬಹುದು ಮತ್ತು ಯಾವುದೇ ಕಟ್ಟುಪಾಡುಗಳಿಲ್ಲದೆ ಮೋಜು ಮಾಡಬಹುದು. ರಜಾ ದಿನಗಳು ಕೇವಲ ಮನೋರಂಜನೆ ಮತ್ತು ತಮಾಷೆಯಲ್ಲೇ ಕಳೆದುಹೋಗಬಾರದು. ಪೋಷಕರು ಮಕ್ಕಳನ್ನು ತುಂಬಾ ಕ್ರಿಯಾಶೀಲರಾಗಿ, ಅವರ ಮೆದುಳು ಯಾವುದಾದರೂ ಕೆಲಸ ಮಾಡುವಂತೆ ನೋಡಿಕೊಳ್ಳಬೇಕು.

ರಜಾದಿನಗಳು ಕೇವಲ ಟಿವಿ ನೋಡುವುದು ಮತ್ತು ಕಂಪ್ಯೂಟರ್ ಮುಂದೆ ಕುಳಿತು ಗೇಮ್ ಆಡುವುದರಲ್ಲಿ ಕಳೆದುಹೋಗಬಾರದು. ಆದರೆ ಮಕ್ಕಳಿಗೆ ಟ್ಯೂಷನ್ ಮತ್ತು ಹವ್ಯಾಸ ಕ್ಲಾಸ್ ಗಳೆಂಬ ಒತ್ತಡ ಮತ್ತು ಹೊರೆ ನೀಡಬಾರದು. ರಜಾ ದಿನಗಳಲ್ಲಿ ಮಕ್ಕಳಿಗೆ ಕಲಿಸಬಹುದಾದ ಕೆಲವೊಂದು ವಿಷಯಗಳನ್ನು ಇಲ್ಲಿ ಚರ್ಚಿಸಲಾಗಿದೆ.

What to teach your kids for vacation

1. ಈಜು
ಮಕ್ಕಳಿಗೆ ಈಜುವುದು ಹೇಗೆಂದು ತಿಳಿದಿರಬೇಕು. ಮನೋರಂಜನೆಯೊಂದಿಗೆ ವ್ಯಾಯಾಮವಾಗುವುದು ಈಜಿನಲ್ಲಿ ಮಾತ್ರ. ರಜಾ ದಿನಗಳಲ್ಲಿ ಇದನ್ನು ನಿಮ್ಮ ಮಕ್ಕಳಿಗೆ ಕಲಿಸಬೇಕು. ರಜಾ ದಿನಗಳಲ್ಲಿ ಮಕ್ಕಳಿಗೆ ಈಜು ತರಬೇತಿ ಶಿಬಿರಗಳಿರುತ್ತದೆ. ಈಜು ತುಂಬಾ ಶ್ರಮದ ವ್ಯಾಯಾಮವಾಗಿರುವ ಕಾರಣ ರಜಾದಿನಗಳಲ್ಲಿ ಇದನ್ನು ಕಲಿಯುವ ಮೂಲಕ ಕಳೆಯಬಹುದು.

2. ಕಲೆ ಮತ್ತು ಕರಕುಶಲ
ಕಲೆ ಮತ್ತು ಕರಕುಶಲ ಕಲಿಸುವುದರಿಂದ ಮಕ್ಕಳ ಮೆದುಳು ಚುರುಕುಗೊಳ್ಳುತ್ತದೆ. ಈ ತರಗತಿಗಳು ಮಕ್ಕಳ ಕಲ್ಪನಾ ಲೋಕ ತೆರೆಯುತ್ತದೆ ಮತ್ತು ಅವರ ಯೋಚನಾ ಶಕ್ತಿ ಹೆಚ್ಚಿಸುತ್ತದೆ. ಇದರಲ್ಲಿ ಡ್ರಾಯಿಂಗ್, ಸ್ಕೆಚಿಂಗ್ ಮತ್ತು ವಿವಿಧ ರೀತಿಯ ಪೈಂಟಿಂಗ್ ಇತ್ಯಾದಿ ಒಳಗೊಂಡಿರುತ್ತದೆ.

3. ಡ್ಯಾನ್ಸ್
ನಿಮ್ಮ ಮಕ್ಕಳಲ್ಲಿ ಇದರ ಬಗ್ಗೆ ಆಸಕ್ತಿಯಿದ್ದರೆ ಅವರಿಗೆ ರಜಾ ದಿನಗಳಲ್ಲಿ ಡ್ಯಾನ್ಸ್ ಕಲಿಸಿ. ಡ್ಯಾನ್ಸ್ ನಿಂದ ಅವರು ತುಂಬಾ ಚುರುಕು ಮತ್ತು ಶಕ್ತಿಯಿಂದ ಇರುವರು. ಡ್ಯಾನ್ಸ್ ಶಿಸ್ತನ್ನು ಕಲಿಸುತ್ತದೆ ಮತ್ತು ಅವರಿಗೆ ಗಮನ ಕೇಂದ್ರೀಕರಿಸಲು ನೆರವಾಗುತ್ತದೆ.

4. ಸಂಗೀತ
ರಜಾ ದಿನಗಳಲ್ಲಿ ನಿಮ್ಮ ಮಕ್ಕಳಿಗೆ ಕಲಿಸಬಹುದಾದ ಒಳ್ಳೆಯ ವಿಷಯವೆಂದರೆ ಅದು ಸಂಗೀತ. ಸಂಗೀತವೆಂದರೆ ಗಾಯನ ಮತ್ತು ವಿವಿಧ ಸಂಗೀತ ಸಾಧನಗಳನ್ನು ನುಡಿಸುವುದು. ಸಂಗೀತವು ನಮ್ಮ ಮನಸ್ಸು ಮತ್ತು ಆತ್ಮ ಶಾಂತವಾಗಿಸುತ್ತದೆ. ಮಕ್ಕಳೂ ಇದರ ಲಾಭ ಪಡೆಯಬಹುದು. ಸಂಗೀತವು ತಾಳ್ಮೆಯ ಪಾಠ ಹೇಳಿಕೊಡುತ್ತದೆ. ಮಕ್ಕಳಿಗೆ ಸಂಗೀತ ಮತ್ತು ಗಾಯನದಲ್ಲಿ ಆಸಕ್ತಿಯಿದ್ದರೆ ಅವರನ್ನು ಪ್ರೋತ್ಸಾಹಿಸಿ.

5. ಶಿಬಿರ ಮತ್ತು ರಜಾ ದಿನಗಳು
ಕುಟುಂಬದದೊಂದಿಗೆ ರಜಾ ದಿನ ಅಥವಾ ಶಿಬಿರವಾಗಿರಲಿ, ನಿಮ್ಮ ಮಕ್ಕಳಿಗೆ ಆಡಳಿತದ ಬಗ್ಗೆ ಪಾಠ ಹೇಳಿಕೊಡಿ. ಮಕ್ಕಳನ್ನು ಶಿಬಿರಕ್ಕೆ ಕಳುಹಿಸುವುದಾದರೆ ಅವರು ಏಕಾಂಗಿಯಾಗಿ ಹೇಗೆ ಇರುವುದು, ಅವರ ವಸ್ತುಗಳನ್ನು ಹೇಗೆ ನೋಡಿಕೊಳ್ಳುವುದು ಮತ್ತು ಹಣವನ್ನು ಹೇಗೆ ವ್ಯಯಿಸಬೇಕು ಎಂದು ಹೇಳಿಕೊಡಿ. ಕುಟುಂಬದೊಂದಿಗೆ ಪ್ರವಾಸಕ್ಕೆ ಹೋದರೆ ಪ್ರವಾಸದ ಪ್ರಾಮುಖ್ಯತೆ, ಸ್ಥಳದ ವಿವರ ಮತ್ತು ಪ್ರವಾಸದಲ್ಲಿರುವಾಗ ಹೇಗೆ ವರ್ತಿಸಬೇಕು ಎನ್ನುವುದನ್ನು ಹೇಳಿಕೊಡಿ.
ಮಕ್ಕಳು ಬೇಗನೆ ಕಲಿತುಕೊಳ್ಳುತ್ತಾರೆ ಮತ್ತು ಒಳ್ಳೆಯ ವೀಕ್ಷಕರು. ಪ್ರವಾಸದ ವೇಳೆ ಕೆಲವೊಂದು ಕೆಲಸಗಳಲ್ಲಿ ನಿಮಗೆ ನೆರವಾಗುವಂತೆ ಅವರಿಗೆ ಹೇಳಿ. ಒಂದು ಸಣ್ಣ ಸ್ಟಾಲ್ ಹಾಕಿ ಅವರ ಪಾಕೆಟ್ ಹಣ ಹೆಚ್ಚಿಸಲು ಮತ್ತು ಹೊಸ ಗೆಳೆಯರ ಸಂಪಾದನೆಗೆ ನೆರವಾಗಿ. ರಜಾ ದಿನಗಳಲ್ಲಿ ನೀವು ಮಕ್ಕಳಿಗೆ ಜೀವನ, ಪ್ರೀತಿ ಮತ್ತು ಹಣದ ಬಗ್ಗೆ ಪಾಠ ಮಾಡಬಹುದು.

Read more about: kids ಮಕ್ಕಳು
English summary

What to teach your kids for vacation

Vacations are the most exciting and awaited time in every child’s life. The daily routine of children is filled with school and extra classes heaved up with the burden of homework and exams.
Story first published: Wednesday, December 4, 2013, 13:18 [IST]
X
Desktop Bottom Promotion