For Quick Alerts
ALLOW NOTIFICATIONS  
For Daily Alerts

ಮಕ್ಕಳು ಕೆಟ್ಟ ಪದ ಬಳಸಿದಾಗ ಹೊಡೆಯಬೇಡಿ!

|

ಮೊನ್ನೆ ದಾರಿಯಲ್ಲಿ ಹೋಗುತ್ತಿದ್ದೆ. ಒಂದು ತಾಯಿ ತನ್ನ ಮಗುವಿಗೆ ದಾರಿಯಲ್ಲಿಯೇ ಪೆಟ್ಟು ಕೊಡುತ್ತಿರುವುದನ್ನು ನೋಡಿ, ಮಗುವಿಗೆ 4-5 ವರ್ಷ ಇರಬಹುದು, ಅದಂತೂ ಜೋರಾಗಿ ಅಳುತ್ತಾ ರಸ್ತೆಯಲ್ಲಿ ಕೂತು ಬಿಡ್ತು.

ಅವನ ಹಠ ನೋಡಿ ಆ ತಾಯಿಗೆ ಕೋಪ ಮತ್ತಷ್ಟು ಹೆಚ್ಚಾಗುತ್ತಿತ್ತು, ಆ ತಾಯಿ ಜೊತೆ ಇದ್ದ ಓರ್ವ ಮಹಿಳೆ "ಹೊಡಿಬೇಡ ಅವನ್ನ, ಮಕ್ಕಳಿಗೆ ಎಷ್ಟು ಹೊಡೆದರೂ ಪ್ರಯೋಜನವಿಲ್ಲ" ಎಂದಳು. ಅದಕ್ಕೆ ಆ ತಾಯಿ ಎಷ್ಟು ಕೆಟ್ಟ ಪದ ಬಳಸುತ್ತಾನೆ. ಎಲ್ಲಿಂದ ಕಲಿತನೋ, ಬೇರೆಯವರ ಮುಂದೆ ಇದೇ ರೀತಿ ಕೆಟ್ಟ ಪದ ಬಳಸಿದರೆ ನನ್ನ ಮಾನ ಮರ್ಯಾದೆ ಹೋಗುವುದಷ್ಟೇ, ಹೊಡೆದು ಹಲ್ಲು ಮುರಿಯಬೇಕು" ಎಂದಳು. ಆಗ ಆ ಮಗುವಿಗೆ ಪೆಟ್ಟು ಬೀಳಲು ಕಾರಣ ತಿಳಿಯಿತು.

Stop Toddler From Using Bad Words

ಮಕ್ಕಳ ಬುದ್ಧಿಯೇ ಹಾಗೆ, ಒಳ್ಳೆಯದಕ್ಕಿಂತಯ ಕೆಟ್ಟ ವಿಷಯವನ್ನು ಬೇಗನೆ ಗ್ರಹಿಸುತ್ತವೆ. ಯಾರ ಬಾಯಲ್ಲಾದರೂ ಅಥವಾ ತನ್ನ ಸ್ನೇಹಿತರು ಬೈಗಯಳ ಪದಗಳನ್ನು ಬಳಸುವುದನ್ನು ಕೇಳಿದರೆ ತಾವು ಅದನ್ನು ಬೇಗನೆ ಕಲಿತು ಬಿಡುತ್ತವೆ. ಮಗು ಕೆಟ್ಟ ಪದದಲ್ಲಿ ಬೈಯುತ್ತದೆ ಎಂದು ಹೊಡೆದರೆ ಮಕ್ಕಳು ತಮ್ಮ ಚಾಳಿಯನ್ನು ಮತ್ತಷ್ಟು ಹೆಚ್ಚು ಮಾಡುತ್ತಾರೆ ಹೊರತು ಕಮ್ಮಿ ಮಾಡುವುದಿಲ್ಲ. ಆದ್ದರಿಂದ ಮಕ್ಕಳು ಕೆಟ್ಟ ಪದಗಳನ್ನು ಉಪಯೋಗಿಸಬಾರದೆಂದರೆ ಪೋಷಕರು ಇದರಂತೆ ಮಾಡುವುದು ಒಳ್ಳೆಯದು:

ಮಕ್ಕಳ ಮುಂದೆ ಕೆಟ್ಟ ಪದ ಬಳಸಬೇಡಿ
ಹೆಚ್ಚಿನ ಬಾರಿ ಹಿರಿಯರು ಅದನ್ನು ಗಮನಿಸುವುದೇ ಇಲ್ಲ. ತಾವು ಕೆಟ್ಟ ಪದಗಳನ್ನು ಮಕ್ಕಳಿಗೆ ಬೈಯುವಾಗ ಬಳಸುತ್ತಾರೆ. ಮಕ್ಕಳು ಅವನ್ನೇ ಕಲಿಯುತ್ತವಷ್ಟೇ. ಮಕ್ಕಳಿಗೇ ಅಂತಲ್ಲ, ಬೇರೆಯವರಿಗೂ ಮಕ್ಕಳ ಮುಂದೆ ಬೈಯಬೇಡಿ.

ಅವರು ಏನು ನೋಡುತ್ತಿದ್ಧಾರೆ ಎಂದು ಗಮನಿಸಿ
ಮಕ್ಕಳು ಸಾಕಷ್ಟು ವಿಷಯಗಳನ್ನು ಟಿವಿ ನೋಡಿ ಕಲಿಯುತ್ತಾರೆ. ಆದ್ದರಿಂದ ಮಕ್ಕಳು ಯಾವ ರೀತಿಯ ಪ್ರೋಗ್ರಾಂ ನೋಡುತ್ತಿದ್ದಾರೆ ಗಮನಿಸಿ. ನೀವು ಅಷ್ಟೇ ಅವರನ್ನು ಕೂರಿಸಿಕೊಂಡು ಚಾನಲ್ ನೋಡುವುದಾದರೆ ಮಕ್ಳಳು ನೋಡಬಹುದಾದ ಸಿನಿಮಾ ಮಾತ್ರ ನೋಡಿ.

ಅವರ ಸ್ನೇಹಿತರ ಬಗ್ಗೆ ತಿಳಿಯಿರಿ
ಮಕ್ಕಳು ಸಾಕಷ್ಟು ಅಭ್ಯಾಸಗಳನ್ನು ಸ್ನೇಹಿತರಿಂದ ಕಲಿಯುತ್ತಾರೆ. ಆದ್ದರಿಂದ ಅವರ ಸ್ನೇಹಿತರ ಬಗ್ಗೆ ನಿಮಗೆ ತಿಳಿದಿರುವುದು ಒಳ್ಳೆಯದು.

ಪ್ರತಿಕ್ರಿಯಿಸಬೇಡಿ
ಅವರು ಏನಾದರೂ ಹೇಳಿದಾಗ ನೀವು ಪ್ರತಿಕ್ರಿಯಿಸಿದರೆ ಅವರು ಆ ಚಾಳಿಯನ್ನು ಮತ್ತಷ್ಟು ಮುಂದುವರೆಸಿಕೊಂಡು ಹೋಗುತ್ತಾರೆ. ಆದ್ದರಿಂದ ಆ ಸಮಯದಲ್ಲಿ ನಿರ್ಲಕ್ಷ್ಯ ಮಾಡಿ. ಆಗ ಅವರೂ ಆ ಪದಗಳ ಬಳಿಕೆ ಬಿಡುತ್ತಾರೆ.

English summary

Stop Toddler From Using Bad Words | Tips For Parents | ನಿಮ್ಮ ಮಕ್ಕಳು ಕೆಟ್ಟ ಪದ ಬಳಸುತ್ತಿದ್ದಾರೆಯೇ? | ಪೋಷಕರಿಗೆ ಕೆಲ ಸಲಹೆ

If you are one among those parents who are looking for some practical ideas to stop your toddler from using bad words, here are some. Try these parenting tips to deal with toddlers using abusive language.
X
Desktop Bottom Promotion