For Quick Alerts
ALLOW NOTIFICATIONS  
For Daily Alerts

ಮಗುವೊಂದು ಇರಲಿ ಅನ್ನಲು ಕಾರಣಗಳು

By Super
|

ಅದ್ಯಾಕೋ ಗೊತ್ತಿಲ್ಲ ಇತ್ತೀಚಿನ ದಿನಗಳಲ್ಲಿ ಕೆಲವು ದಂಪತಿಗಳು ತಂದೆ-ತಾಯಿ ಪಟ್ಟವನ್ನು ನಿರಾಕರಿಸುತ್ತಿದ್ದಾರೆ! ಅವರ ಬಿಡುವು ಇಲ್ಲದ ವೃತ್ತಿ ಜೀವನ, ಬಿಡುವಿಲ್ಲದ ಸಾಮಾಜಿಕ ಜೀವನ ಮತ್ತು ಅವರನ್ನು ಸದಾ ಕಾರ್ಯನಿರತರನ್ನಾಗಿಸಿಕೊಳ್ಳಲು ಅಂತ್ಯವಿಲ್ಲದ ಸಂಗತಿಗಳು ದಂಪತಿಗಳು ಮಕ್ಕಳನ್ನು ಪಡೆಯುವ ವಿಷಯದಲ್ಲಿ ಆಸಕ್ತಿ ಕಳೆದುಕೊಳ್ಳುವಂತೆ ಮಾಡಿದೆ.

ಆದರೆ ಮದುವೆಯಾದ ಮೇಲೆ ಒಂದು ಮುದ್ದಾದ ಮಗುವನ್ನು ಮಡಿಲಲ್ಲಿ ತುಂಬಿಕೊಳ್ಳುವುದರ ಆನಂದ, ಹೊಸ ಅನುಭವ ವಿಶ್ಲೇಷಣೆಗೂ ಮೀರಿದ್ದು. ವಿವರಣೆಗೆ ನಿಲುಕದ್ದು. ನೀವು ಮಕ್ಕಳನ್ನು ಹೊಂದಲೇಬೇಕು ಎನ್ನುವುದಕ್ಕೆ ಹಲವಾರು ಕಾರಣಗಳನ್ನು ಕೊಡಬಹುದು.

ಇಲ್ಲಿದೆ ಅಂತಹ ಕೆಲವು ಕಾರಣಗಳು:

1. ಜವಾಬ್ದಾರಿ

1. ಜವಾಬ್ದಾರಿ

ನಿಮಗೆ ಒಂದು ಮಗುವಾಗುವವರೆಗೆ ಹೇಗಿದ್ದೀರಿ ಎನ್ನುವುದು ಮಹತ್ವವಲ್ಲ ಆದರೆ ಮಗುವಾದ ನಂತರ ತಾಯಿಯಾದವಳಲ್ಲಿ ಮತ್ತು ತಂದೆಯಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ನೀವು ಹೆಚ್ಚು ಜವಾಬ್ದಾರಿಯುಳ್ಳ ವ್ಯಕ್ತಿಯಾಗುತ್ತೀರಿ. ನಿಮ್ಮ ಮಗುವನ್ನು ನಿಮ್ಮ ತೋಳಲ್ಲಿ ಮೊದಲ ಬಾರಿಗೆ ಹಿಡಿದಾಗಿನಿಂದ ನೀವು ಜೀವನದ ಪಾಠಗಳನ್ನು ಕಲಿಯುತ್ತಾ ಹೋಗುತ್ತೀರಿ. ಇದು ನಿಮ್ಮನ್ನು ಮಗುವನ್ನು ಸುರಕ್ಷೆ ಮಾಡುವತ್ತ ನಿಮ್ಮನ್ನು ಬದಲಾಯಿಸುತ್ತದೆ.

2. ಪರಿಶುದ್ಧ ಮುಗ್ಧತೆಗೆ ಸಾಕ್ಷಿಯಾಗುವಿರಿ

2. ಪರಿಶುದ್ಧ ಮುಗ್ಧತೆಗೆ ಸಾಕ್ಷಿಯಾಗುವಿರಿ

ನೀವು ನಿಮ್ಮ ಮಲಗಿರುವ ಮಗುವಿನ ಮುಗ್ಧವಾದ ಮುಖವನ್ನು ನೋಡುತ್ತಿದ್ದಂತೆ ಹಿಂದೆಂದೂ ಕಂಡರಿಯದಂತಹ ಮುಗ್ಧತೆಯೊಂದನ್ನು ನೀವು ಕಾಣುವಿರಿ. ಅಲ್ಲದೇ ನಿಮ್ಮ ಮಗುವಿನ ಮೃದುವಾದ ಸ್ಪರ್ಶ ಎದೆಗೊತ್ತಿ ಹಿಡಿದ ಮಗುವಿನ ಕಾಲು ನಿಮ್ಮಲ್ಲಿ ಧನಾತ್ಮಕ ಕಂಪನವನ್ನು ಉಂಟುಮಾಡುವುದರಲ್ಲಿ ಸಂಶಯವಿಲ್ಲ.

3. ಮತ್ತೆ ಬಾಲ್ಯವನ್ನು ಪಡೆಯುವತ್ತ ..

3. ಮತ್ತೆ ಬಾಲ್ಯವನ್ನು ಪಡೆಯುವತ್ತ ..

ನಿಮ್ಮ ಮಗುವನ್ನು ನೋಡುತ್ತಲೇ ನೀವು ನಿಮ್ಮ ಬಾಲ್ಯದ ಜೀವನವನ್ನು ಮರಳಿ ಪಡೆಯುವಿರಿ. ಅವಿವೇಕ ಎನಿಸುವ ಕೆಲಸವನ್ನೂ ಸಹ ನೀವು ಖುಷಿಯಿಂದಲೇ ಮಾಡುವಿರಿ. ದಿಂಬಿನಲ್ಲಿ ಆಟ, ಸಿಲ್ಲಿ ಅಲಂಕಾರ ಹೀಗೆ ಇಂತಹ ಸಣ್ಣ ಪುಟ್ಟ ವಿಷಯಗಳು ನಿಮ್ಮ ಮುಖದಲ್ಲಿ ಸದಾ ಕಿರುನಗೆಯನ್ನು ಉಳಿಸುತ್ತದೆ.

4. ಹೊಸ ಬಂಧ

4. ಹೊಸ ಬಂಧ

ಜಗತ್ತಿನ ಯಾವುದೇ ಇತರ ಸಂಬಂಧಗಳಿಗಿಂತ ಭಿನ್ನವಾದುದು ತಾಯಿ ಮಗುವಿನ ಸಂಬಂಧ. ನೀವು ತಾಯಿಯಾಗುವುದರ ಜೊತೆಗೆ ಎಲ್ಲಾ ಸಂತೋಷ, ಉದ್ವೇಗ, ಉತ್ಸಾಹಗಳೂ ನಿಮ್ಮಲ್ಲಿ ಕಂಡುಬರುತ್ತದೆ. ಒಂದು ವೇಳೆ ನೀವು ಮಗು ಬೇಡ ಎಂದು ಯೋಚಿಸಿದ್ದರೆ ಹೋಲಿಸಲಾಗದ ಇಂತಹ ಅದ್ಭುತ ಅನುಭವಗಳಿಂದ ಖಂಡಿತವಾಗಿ ದೂರವುಳಿಯುತ್ತೀರಿ !

5. ಜೀವನದ ಮೇಲೆ ಹೊಸ ದೃಷ್ಟಿಕೋನ

5. ಜೀವನದ ಮೇಲೆ ಹೊಸ ದೃಷ್ಟಿಕೋನ

ನಿಮ್ಮ ಮಗುವಿನ ವರ್ತನೆಯನ್ನು ನೋಡುತ್ತಿದ್ದಂತೆ ಅವುಗಳಿಂದಾಗಿ ನೀವು ಯಾವುದೇ ಪರಿಸ್ಥಿತಿಯನ್ನು ನೋಡುವ ದೃಷ್ಟಿ ಸಂಪೂರ್ಣವಾಗಿ ಬದಲಾಗುತ್ತದೆ. ಇದರಿಂದ ನಿಮಗೆ ಈ ಜಗತ್ತಿನಲ್ಲಿ ಯಾವುದು ಅತ್ಯಂತ ಮಹತ್ವದ್ದು ಯಾವುದು ಅಲ್ಲ ಎಂಬುದು ಸೂಕ್ಷ್ಮವಾಗಿ ಮನವರಿಕೆಯಾಗುತ್ತದೆ.

6. ಸ್ಟ್ರೆಸ್-ಬಸ್ಟರ್ (ಒತ್ತಡ ನಿಭಾಯಿಸಬಲ್ಲ)

6. ಸ್ಟ್ರೆಸ್-ಬಸ್ಟರ್ (ಒತ್ತಡ ನಿಭಾಯಿಸಬಲ್ಲ)

ಒಂದು ಮಗುವನ್ನು ಹೊಂದುತ್ತಿದ್ದಂತೆ ಎಲ್ಲಾ ತಾಯಂದಿರ ಒತ್ತಡದ ಮುಗಿಯದ ವಿಷಯಗಳೂ ಆಶ್ವರ್ಯವನ್ನುಂಟು ಮಾಡುವ ರೀತಿಯಲ್ಲಿ ಅವುಗಳನ್ನೇಲ್ಲ ಮರೆಯುತ್ತಾರೆ. ಯಾವುದೇ ಒಬ್ಬ ತಾಯಿಯನ್ನು ಕೇಳಿ, ಅತ್ಯಂತ ಒತ್ತಡದ ಕೆಲಸವನ್ನು ಮುಗಿಸಿ ಮನೆಗೆ ಬಂದ ಆಕೆ ತನ್ನ ಮಗುವಿನ ನಗುವನ್ನು ನೋಡುತ್ತಿದ್ದಂತೆ ಎಲ್ಲವನ್ನು ಮರೆಯುತ್ತಾಳೆ ಎಂಬುದನ್ನು ತಿಳಿಯಬಹುದು. ನೀವು ದಣಿದ, ಹತಾಶೆಗೊಂಡ ಅಥವಾ ಅಸಮಾಧಾನಗೊಂಡ ಎಲ್ಲಾ ವಿಷಯಗಳೂ ನಿಮ್ಮ ಮಗುವಿನ ಒಂದು ಪ್ರೀತಿಯ ಅಪ್ಪ್ಗೆಯಿಂದ ಕ್ಷಣಾರ್ಧದಲ್ಲಿ ಮರೆಯಾಗುತ್ತದೆ.

7. ನಿಮ್ಮ ಪತಿಯೊಂದಿಗಿನ ನಿಮ್ಮ ಸಂಬಂಧ ಬಲವಾಗುತ್ತದೆ

7. ನಿಮ್ಮ ಪತಿಯೊಂದಿಗಿನ ನಿಮ್ಮ ಸಂಬಂಧ ಬಲವಾಗುತ್ತದೆ

ಸಾಮಾನ್ಯವಾಗಿ ಒಂದು ಮಗುವನ್ನು ಹೊಂದುವುದರಿಂದ ಮದುವೆಯ ಬಂಧದಲ್ಲಿ ಸಾಕಷ್ಟು ಆಶ್ಚರ್ಯಗಳು ನಡೆಯಬಹುದು. ಹಲವಾರು ದಂಪತಿಗಳು ಮಗುವನ್ನು ಪಡೆದ ನಂತರ ಅವರ ಸಂಬಂಧದಲ್ಲಿ ಉತ್ತಮ ಬದಲಾವಣೆಗಳನ್ನು ಕಂಡಿದ್ದಾರೆ. ಇದು ನೀವು ಪರಸ್ಪರ ಹೆಚ್ಚು ಕೃತಜ್ಞರಾಗಿರುವಲ್ಲಿ, ಕಳೆದುಕೊಂಡ ಪ್ರೀತಿಯನ್ನು ಪಡೆಯುವಲ್ಲಿ ಸಹಾಯ ಮಾಡುತ್ತದೆ.

9. ನಿರಂತರ ಬದುಕಿಗೊಂದು ಕಾರಣ

9. ನಿರಂತರ ಬದುಕಿಗೊಂದು ಕಾರಣ

ಜೀವನದಲ್ಲಿ ಮುಂದೆ ಸಾಗುತ್ತ ನಾವು ಹಲವಾರು ಹಂತಗಳನ್ನು ನೋಡುತ್ತೇವೆ. ಹೀಗೆ ಜೀವನದಲ್ಲಿ ಸಾಗುವಾಗ ದಿನದಿಂದ ದಿನಕ್ಕೆ ಸಾಮರ್ಥ್ಯಗಳ ಅಗತ್ಯವಿರುತ್ತದೆ. ಆದರೆ ಜೀವನದ ಸವಾಲುಗಳನ್ನು ಎದುರಿಸುವಾಗ ನಿಮ್ಮ ಮಗು ನಿಮಗೆ ಪ್ರೇರಣೆ ನೀಡಬಲ್ಲದು.

ಈಗ ಹೇಳಿ, ಮುದ್ದಾದ ಮಗುವೊಂದನ್ನು ಪಡೆದು ಜೀವನದಲ್ಲಿ ಪರಿಪೂರ್ಣ ಎನಿಸಿಕೊಳ್ಳುವುದಕ್ಕೆ ತಯಾರಾಗಿದ್ದೀರಿ ತಾನೆ?

ವೃದ್ಧಾಪ್ಯದಲ್ಲಿ ನಿಮ್ಮ ಶಕ್ತಿ

ವೃದ್ಧಾಪ್ಯದಲ್ಲಿ ನಿಮ್ಮ ಶಕ್ತಿ

ಒಮ್ಮೆ ನಿಮಗೆ ಮಯಸ್ಸಾದರೆ, ನಿಮ್ಮ ಮಗ ಅಥವಾ ಮಗಳು ವಯಸ್ಸಾದ ಮೇಲೆ ನೆಮ್ಮದಿಯಿಂದ ಬದುಕಲು ಅಗತ್ಯವಿರುವ, ಮಾನಸಿಕ, ದೈಹಿಕ ಮತ್ತು ಭಾವನಾತ್ಮಕ ಶಕ್ತಿಯನ್ನು ಒದಗಿಸುತ್ತಾರೆ. ಅವರು ನಿಮಗೆ ಕೇಳುವ ಕಿವಿಯಾಗಬಲ್ಲರು, ದಣಿದ ನಿಮಗೆ ವಿಶ್ರಾಂತಿ ನೀಡುವ ಭುಜವಾಗಬಲ್ಲರು. ಸರಳ ಸಂತೋಷವೂ ಒಂದು ದೊಡ್ಡ ಅನುಭವ ನೀಡಬಲ್ಲದು.

English summary

Reasons Why Having Kids is a Blessing

There has been a recent surge in the number of couples choosing not to become parents. With demanding careers, a busy social life, and endless things to keep them busy, having a kid seems like something that might weigh you down.
X
Desktop Bottom Promotion