For Quick Alerts
ALLOW NOTIFICATIONS  
For Daily Alerts

ಮಲಮಕ್ಕಳನ್ನು ನೋಡಿಕೊಳ್ಳಲು ಏಳು ಟಿಪ್ಸ್

By Hemanth P
|

ಮಗುವಿನ ಲಾಲನೆ ಪಾಲನೆ ಮಾಡುವುದು ಈ ವಿಶ್ವದಲ್ಲಿ ತುಂಬಾ ಕಠಿಣ ಕೆಲಸ, ಅದರಲ್ಲೂ ಮಲಮಕ್ಕಳನ್ನು ನೋಡಿಕೊಳ್ಳುವುದು ಕಠಿಣ ಸವಾಲು. ಯಾರಾದರೂ ಸಂಯೋಜಿತ ಕುಟುಂಬವನ್ನು ಆರಂಭಿಸಲು ನಿರ್ಧರಿಸಿದರೆ ಆಗ ಮಲಪೋಷಕರ ಕಳಂಕ ತುಂಬಾ ಸಾಮಾನ್ಯ ವಿಷಯ. ಯಶಸ್ವಿಯಾಗಿ ಮಲಮಕ್ಕಳನ್ನು ನೋಡಿಕೊಳ್ಳುವುದು ತುಂಬಾ ಕಠಿಣವಾದರೂ ಒಂದು ಸವಾಲು. ಮಲಮಕ್ಕಳನ್ನು ನೋಡಿಕೊಳ್ಳುವಾಗ ನಿಮ್ಮ ಹೊಸ ಸಂಗಾತಿ ಜತೆಗಿನ ಬಂಧಕ್ಕಿಂತ ಮಲಮಕ್ಕಳೊಂದಿಗಿನ ಸಂಬಂಧ ತುಂಬಾ ಮಹತ್ವದ್ದಾಗಿರುತ್ತದೆ.

ಹೊಸ ಕುಟುಂಬದ ಸದಸ್ಯರೊಂದಿಗೆ ನಿಮ್ಮ ಧನಾತ್ಮಕ ಸಂಬಂಧವು ತುಂಬಾ ಮಹತ್ವದ್ದು, ಇದು ನಿಮ್ಮ ಕುಟುಂಬದ ಸಂತಸ ಹಾಗೂ ಬಾಳಿಕೆಯನ್ನು ನಿರ್ಧರಿಸುತ್ತದೆ. ಪರಿಸ್ಥಿತಿ ಹೇಗೆ ನಿಭಾಯಿಸುತ್ತೀರಿ ಎನ್ನುವುದು ನಿಮ್ಮ ಶ್ರಮದ ಯಶಸ್ಸನ್ನು ನಿರ್ಧರಿಸುತ್ತದೆ. ಆಶಾವಾದಿಯಾಗಿರಿ ಮತ್ತು ನಿಮ್ಮ ಮಲಮಕ್ಕಳ ಬಗ್ಗೆ ಧನಾತ್ಮಕ ನಡವಳಿಕೆ ತೋರಿಸಿ. ಅವರನ್ನು ಪ್ರೀತಿ ಹಾಗೂ ಕಾಳಜಿಯಿಂದ ನೋಡಿಕೊಳ್ಳಿ. ಸರಿಯಾದ ರೀತಿಯಲ್ಲಿ ಬೆಂಬಲ ನೀಡಿದರೆ ನಿಮ್ಮ ಮಲಮಕ್ಕಳು ನಿಮಗೆ ತುಂಬಾ ಹತ್ತಿರವಾಗುತ್ತಾರೆ.

Looking After Step Children: Top 7 Tips

ಸ್ವಲ್ಪ ಯೋಜನೆ ಹಾಗೂ ತಯಾರಿಯಿದ್ದರೆ ನಿಮ್ಮ ಹೊಸ ಕುಟುಂಬದ ಯಶಸ್ಸಿನ ಮಟ್ಟ ಉನ್ನತಿಗೇರಿಸಬಹುದು. ಮಲ ಮಕ್ಕಳನ್ನು ನೋಡಿಕೊಳ್ಳಲು ನೆರವಾಗುವಂತಹ ಕೆಲವೊಂದು ಉಪಯೋಗಿ ಟಿಪ್ಸ್ ಗಳು ಇಲ್ಲಿವೆ. ಇದನ್ನು ಪ್ರಯತ್ನಿಸಿ ಮತ್ತು ನಿಮ್ಮ ಬಗ್ಗೆ ಹೆಮ್ಮೆ ಪಡಿ.

ಹೆಚ್ಚಿನ ಸಮಯ ಕಳೆಯಿರಿ
ನಿಮ್ಮ ಮಕ್ಕಳು ಎಷ್ಟೇ ವರ್ಷದವರಾಗಿದ್ದರೂ ಅವರೊಂದಿಗೆ ಸಮಯ ಕಳೆಯುವುದು ತುಂಬಾ ಮುಖ್ಯ. ಇದು ನಿಮ್ಮ ಮಾತುಕತೆಗೆ ಹೆಚ್ಚಿನ ಸಮಯ ನೀಡುತ್ತದೆ ಹಾಗೂ ಸಂಬಂಧದ ಗುಣಮಟ್ಟ ಸುಧಾರಿಸಲು ಇದು ತುಂಬಾ ಮುಖ್ಯ. ನಿಮ್ಮ ಮಲ ಮಕ್ಕಳ ವಿಶ್ವದೊಳಗೆ ಹೋಗಲು ನಿಮ್ಮದೇ ಸಮಯ ತೆಗೆದುಕೊಳ್ಳಿ. ಅವರ ಆಸಕ್ತಿ, ಇಷ್ಟ ಮತ್ತು ಇಷ್ಟವಿಲ್ಲದಿರುವುದನ್ನು ಅರ್ಥ ಮಾಡಿಕೊಳ್ಳಿ.

ನಟನೆ ಬೇಡ
ನಟನೆ ನಿಮ್ಮ ಮಲ ಮಕ್ಕಳನ್ನು ನೋಡಿಕೊಳ್ಳುವುದಕ್ಕೆ ನೆರವಾಗದು. ನಿಮ್ಮತನದ ಆತ್ಮವಿಶ್ವಾಸವಿರಲಿ ಮತ್ತು ಇದರಿಂದ ನಿಮ್ಮ ಮಲ ಮಗು ನೀವು ಹೇಗಿದ್ದೀರೋ ಹಾಗೆ ಸ್ವೀಕರಿಸಿ, ಗೌರವಿಸಲು ನೆರವಾಗುತ್ತದೆ. ಅವರನ್ನು ಆಕರ್ಷಿಸಲು ಕಠಿಣ ಪ್ರಯತ್ನ ಮಾಡುವುದನ್ನು ಕಡೆಗಣಿಸಿ. ಮಲಮಕ್ಕಳನ್ನು ನೋಡಿಕೊಳ್ಳುವಾಗ ಭಿನ್ನ ವ್ಯಕ್ತಿತ್ವ ಬಿಟ್ಟುಬಿಡಬೇಕು.

ಸಂವಹನ
ಮಲಮಕ್ಕಳನ್ನು ನೋಡಿಕೊಳ್ಳುವ ಪ್ರಮುಖ ಟಿಪ್ಸ್ ಎಂದರೆ ಸಂವಹನ. ಇದರಿಂದಾಗಿ ನಿಮ್ಮ ಮಲಮಕ್ಕಳ ನಿರೀಕ್ಷೆ ಮತ್ತು ದೂರುಗಳನ್ನು ತಿಳಿದುಕೊಳ್ಳಬಹುದು ಮತ್ತು ಪರಿಸ್ಥಿತಿಯನ್ನು ಬದಲಾಯಿಸಲು ಬೇಕಾಗಿರುವ ಕ್ರಮ ತೆಗೆದುಕೊಳ್ಳಬಹುದು. ನಿಮ್ಮ ಮಲ ಮಕ್ಕಳನ್ನು ನೋಡಿಕೊಳ್ಳುವಾಗ ನಡವಳಿಕೆ ಮತ್ತು ಚಟುವಟಿಕೆಯಲ್ಲಿ ಪಾರದರ್ಶಕತೆ ಇರಲಿ.

ನಿಮ್ಮನ್ನು ನೀವು ವ್ಯಕ್ತಪಡಿಸಿ
ಕುಟುಂಬದ ಬೆಸುಗೆ ಬಲಿಷ್ಠವಾಗಿಸಲು ನೀವು ಮೊದಲ ಹೆಜ್ಜೆಯನ್ನಿಡಬೇಕೆನ್ನುವುದನ್ನು ನೀವು ಅರ್ಥಮಾಡಿಕೊಳ್ಳಿ. ನಿಮ್ಮ ಮಲಮಕ್ಕಳಿಗೆ ನಿಮ್ಮಿಂದ ಪ್ರೀತಿ ಹಾಗೂ ಕಾಳಜಿ ಬೇಕೆಂದು ತಿಳಿಯಿರಿ. ನಿಮ್ಮ ಪ್ರೀತಿ ತೋರಿಸಲು ಹಿಂದೇಟು ಹಾಕಬೇಡಿ. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದು ಮಲಮಕ್ಕಳನ್ನು ನೋಡಿಕೊಳ್ಳಲು ಮುಖ್ಯ ಟಿಪ್ಸ್.

ನಿರೀಕ್ಷೆಗಳಿಗೆ ಮಿತಿಯಿರಲಿ
ನೀವು ಮಲಪೋಷಕರಾಗಿದ್ದರೆ ನಿಮ್ಮ ಮಲಮಕ್ಕಳಿಗೆ ನಿಮ್ಮೊಂದಿಗೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ ಎನ್ನುವುದು ಸತ್ಯ. ನಿಮ್ಮ ಹೊಸ ಜೀವನ ಹೆಚ್ಚಿನ ನಿರೀಕ್ಷೆಯೊಂದಿಗೆ ಆರಂಭಿಸಿದ್ದರೆ, ಮಲಮಕ್ಕಳ ನಕಾರಾತ್ಮಕ ಭಾವನೆ ನಿಮ್ಮನ್ನು ನಿರಾಶೆಗೀಡು ಮಾಡಬಹುದು. ಮಲಮಕ್ಕಳನ್ನು ನೋಡಿಕೊಳ್ಳುವಾಗ ನಿಮ್ಮ ನಿರೀಕ್ಷೆಗಳನ್ನು ಮಿತಿಗೊಳಿಸಿ.

ಅವರ ವಯಸ್ಸನ್ನು ಪರಿಗಣಿಸಿ
ಮಲಮಕ್ಕಳ ವಯಸ್ಸನ್ನು ನೋಡಿಕೊಂಡು ನಿಮ್ಮ ಶೈಲಿ ಮತ್ತು ವರ್ತನೆ ಬದಲಾಯಿಸಿಕೊಳ್ಳಿ. ನಿಮ್ಮ ಮಕ್ಕಳಿಗಿಂತ ನಿಮ್ಮ ಮಲಮಕ್ಕಳ ವಯಸ್ಸು ಭಿನ್ನವಾಗಿರಬಹುದು. ಅವರ ವಯಸ್ಸಿಗೆ ತಕ್ಕಂತೆ ಹೊಂದಿಕೊಂಡು ಅವರೊಂದಿಗಿನ ನಡತೆ ಮತ್ತು ಸಂವಹನ ಸರಿಮಾಡಿಕೊಳ್ಳಿ. ಮಲಮಕ್ಕಳನ್ನು ನೋಡಿಕೊಳ್ಳಲು ಇದು ತುಂಬಾ ಮುಖ್ಯ ಟಿಪ್ಸ್.

ಕೌನ್ಸಿಲಿಂಗ್ ಪಡೆಯಿರಿ
ಅಪರಿಚಿತ ಮಕ್ಕಳಿಗೆ ಪೋಷಕರಾಗುವುದು ತುಂಬಾ ಕಠಿಣ ಮತ್ತು ಸವಾಲಿನ ಕೆಲಸ. ಮಲಮಕ್ಕಳನ್ನು ನೋಡಿಕೊಳ್ಳುವ ಮೊದಲು ನೀವು ಕೌನ್ಸಿಲಿಂಗ್ ಪಡೆದುಕೊಂಡರೆ ಒಳ್ಳೆಯದು. ಇದು ನಿಮ್ಮ ಪ್ರಯತ್ನದ ಗುಣಮಟ್ಟ ಹೆಚ್ಚಿಸುತ್ತದೆ. ಮಲಮಕ್ಕಳನ್ನು ನೋಡಿಕೊಳ್ಳಲು ಮೂರನೇ ವ್ಯಕ್ತಿಯ ಸಲಹೆ ಪಡೆಯುವುದು ಅತೀ ಮುಖ್ಯ ಟಿಪ್ಸ್.

English summary

Looking After Step Children: Top 7 Tips

If parenting is the hardest job in this world, then looking after step children will be more challenging. Step parent stigma is a common issue that anyone who starts a blended family has to face.
Story first published: Tuesday, December 10, 2013, 11:26 [IST]
X
Desktop Bottom Promotion